Mental Health: ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಯಾಕೆ ಬೇಕು..?
ಕೊರೊನಾ ಕಾಡಿದ ಬಳಿಕ ನಾವ್ಯಾರು ಜ್ವರ, ಶೀತ, ನೆಗಡಿ ಯಾವುದನ್ನೂ ಹಗುರವಾಗಿ ಪರಿಗಣಿಸಲಾಗದ ಸ್ಥಿತಿಗೆ ಬಂದು ತಲುಪಿದ್ದೇವೆ. ಹೀಗಾಗಿ ಜ್ವರ ಎಂದಾಕ್ಷಣ ಭಯಪಡುವಂತಾಗಿದೆ. ಈಗ ಮೊದಲಿನಂತೆ ಯಾವುದೋ ಮಾತ್ರೆ ಸೇವಿಸಿ ಜ್ವರವನ್ನು ಓಡಿಸಲಾಗುತ್ತಿಲ್ಲ ಜೊತೆಗೆ ಅಂತಹ ಸಾಹಸವನ್ನು ಮಾಡುವುದು ಕೂಡ ಮಾರಕವೇ.. ಆದ್ದರಿಂದ ನಾವೆಲ್ಲರೂ ಜ್ವರ ಕಾಣಿಸಿಕೊಂಡಾಗ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಹಾಗೆಂದು ಜ್ವರ ಬಂದ ತಕ್ಷಣವೇ ಅದು ಡೆಂಗ್ಯೂ ಎಂದೋ ಅಥವಾ ಹೆಚ್1ಎನ್1 ಎಂದು ಭಾವಿಸುವುದು ತಪ್ಪಾಗುತ್ತದೆ. ಬದಲಿಗೆ ವೈದ್ಯರ ಸಲಹೆಯಂತೆ ರಕ್ತಪರೀಕ್ಷೆ ಮಾಡಿಸಿ ಜ್ವರದ ಮೂಲವನ್ನು ಹುಡುಕಿ ಚಿಕಿತ್ಸೆ ಪಡೆಯುವುದು ಜಾಣತನವಾಗಿದೆ.
ಕೊರೊನಾ ಸಂದರ್ಭದಲ್ಲಿ ಎಂತಹ ಸಂಕಷ್ಟಗಳನ್ನು ನಾವೆಲ್ಲರೂ ಅನುಭವಿಸಿದ್ದೇವೆ ಎನ್ನುವುದು ನಮಗೆಲ್ಲರಿಗೂ ಗೊತ್ತು. ಅದರಲ್ಲೂ ಕೊರೊನಾದಿಂದ ಪಾರಾಗಿ ಬಂದವರಿಗೆ ಆ ಸಂದರ್ಭದಲ್ಲಿ ಅನುಭವಿಸಿದ ಸಂಕಟ ಸಾಯುವ ತನಕ ಮರೆಯಲಾರದ ಪಾಠವಾಗಿದೆ. ಆದರೆ ಅವತ್ತಿನ ಆ ಸಂಕಷ್ಟದ ದಿನಗಳು ನಮ್ಮನ್ನು ಆರೋಗ್ಯದ ಕುರಿತಂತೆ ಎಚ್ಚರಿಕೆಯಿಂದ ಇರುವಂತೆ ಮಾಡಿದೆ. ಜತೆಗೆ ಜ್ವರವೆಂದರೆ ಲಘುವಾಗಿ ಪರಿಗಣಿಸಬೇಡಿ ಎಂಬುದನ್ನು ತೋರಿಸಿಕೊಟ್ಟಿದೆ.

ಬಹಳಷ್ಟು ಜನರು ಕಾಯಿಲೆ ಬಂದಿದೆ ಎಂದಾಕ್ಷಣವೇ ದೈಹಿಕ ಮಾತ್ರವಲ್ಲ ಮಾನಸಿಕವಾಗಿಯೂ ಕುಗ್ಗಿ ಹೋಗಿಬಿಡುತ್ತಾರೆ. ಜತೆಗೆ ಅಯ್ಯೋ ಹಾಗೆ ಆಗಬಹುದು ಹೀಗೆ ಆಗಬಹುದು ಎಂದು ಮನಸ್ಸಿನಲ್ಲಿಯೇ ಇನ್ನಿಲ್ಲದ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಇದು ನಿಜಕ್ಕೂ ಒಳ್ಳೆಯದಲ್ಲ. ಮೊದಲೇ ದೈಹಿಕವಾಗಿ ಸೊರಗಿ ಹೋಗಿರುತ್ತೇವೆ. ಅದರ ಜತೆಗೆ ಮಾನಸಿಕವಾಗಿಯೂ ಕುಗ್ಗಿದರೆ ಸಾವನ್ನು ನಾವೇ ಎಳೆದುಕೊಂಡಂತಾಗುತ್ತದೆ. ಆದ್ದರಿಂದ ಎಲ್ಲವನ್ನು ಎದುರಿಸುತ್ತೇನೆ ಎಂಬ ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ತಮ್ಮ ರೋಗವನ್ನು ವಾಸಿ ಮಾಡಿಕೊಳ್ಳುವುದಕ್ಕೆ ವೈದ್ಯಕೀಯ ಚಿಕಿತ್ಸೆ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ.
ಕಾಯಿಲೆಗಳು ಮನುಷ್ಯನಿಗೆ ಬಂದೇ ಬರುತ್ತದೆ
ಕಾಯಿಲೆಗಳು ಮನುಷ್ಯನಿಗೆ ಬಂದೇ ಬರುತ್ತದೆ. ಇದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಕಾಯಿಲೆ ಬಂದಾಗ ನಾವೆಲ್ಲರೂ ಹೆದರುತ್ತೇವೆ. ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ, ಕಾಯಿಲೆ ಬಂತೆಂದು ತಲೆಕೆಡಿಸಿಕೊಳ್ಳದೆ ಅದಕ್ಕೆ ಚಿಕಿತ್ಸೆ ಪಡೆಯುತ್ತಾ ಕಾಯಿಲೆಯನ್ನು ಮರೆತು ಖುಷಿಯಾಗಿ ಬದುಕೋದನ್ನು ರೂಢಿಸಿಕೊಳ್ಳಬೇಕು. ಆಗ ಸ್ವಲ್ಪ ಮಟ್ಟಿಗೆ ರೋಗದ ನೋವನ್ನು ಮರೆಯಲು ಸಾಧ್ಯವಿದೆ.
ನಮ್ಮಲ್ಲಿ ಹೆಚ್ಚು ಜನ ದೇಹಕ್ಕೆ ಅನಾರೋಗ್ಯ ಬಾಧಿಸಿದರೆ ಮಾನಸಿಕವಾಗಿ ಜರ್ಜರಿತರಾಗಿ ಬಿಡುತ್ತಾರೆ. ಕಾಯಿಲೆಗಳು ವಾಸಿಯಾಗಬೇಕಾದರೆ ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ಮರೆಯುತ್ತಾರೆ. ಅನಗತ್ಯ ಆಲೋಚನೆ ಮಾಡುತ್ತಾ ಇನ್ನಷ್ಟು ನೋವುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ಕಾಯಿಲೆ ಯಾವುದೇ ಇರಲಿ ಅದರ ಬಗ್ಗೆ ಯೋಚಿಸುತ್ತಾ ಕುಳಿತುಕೊಂಡರೆ ಮಾನಸಿಕ ಖಿನ್ನತೆವುಂಟಾಗಿ ನಮ್ಮ ಮೇಲೆ ನಮಗೆ ಜಿಗುಪ್ಸೆ ಬಂದು ಅದರಿಂದ ಅನಾಹುತವೇ ಜಾಸ್ತಿ. ಆದ್ದರಿಂದ ಎಂತಹ ಪರಿಸ್ಥಿತಿಯಲ್ಲೂ ನಮ್ಮಲ್ಲಿ ಖಿನ್ನತೆ ಆವರಿಸಲು ಬಿಡಬಾರದು.
ಸದಾ ನಮ್ಮಲ್ಲೊಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಇದು ನಮ್ಮಿಂದ ನಾವೇ ಮಾಡಿಕೊಳ್ಳಬೇಕಾದ ಕ್ರಿಯೆ ಆಗಿರುವುದರಿಂದ ಏನೇ ಆಗಲಿ ನಾನು ಖುಷಿಯಾಗಿಯೇ ಇರುತ್ತೇನೆ ಎಂಬ ಸಂಕಲ್ಪ ಮಾಡಬೇಕು. ನಾನು ಅನುಭವಿಸುತ್ತಿರುವ ಸಮಸ್ಯೆ ನನ್ನದೊಬ್ಬನದಲ್ಲ. ಇದಕ್ಕಿಂತ ದೊಡ್ಡ ಸಮಸ್ಯೆಯನ್ನು ಇನ್ನೆಷ್ಟೋ ಮಂದಿ ಎದುರಿಸುತ್ತಿಲ್ಲವೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಸಮಾಧಾನವನ್ನು ನಮಗೆ ನಾವೇ ಮಾಡಿಕೊಂಡರೆ ನಮ್ಮದು ಸಮಸ್ಯೆ ಎನಿಸುವುದೇ ಇಲ್ಲ.
ನಮಗೆ ಮಾನಸಿಕ ಆರೋಗ್ಯ ಇಲ್ಲವಾಗಿದೆ
ಇವತ್ತಿನ ಪರಿಸ್ಥಿತಿಯಲ್ಲಿ ಕೆಲವರು ತುತ್ತು ಅನ್ನಕ್ಕೂ ಯೋಚಿಸುವ ಪರಿಸ್ಥಿತಿಯಲ್ಲಿದ್ದರೆ, ಮತ್ತೆ ಕೆಲವರಿಗೆ ಐಷಾರಾಮಿ ಜೀವನವಿದ್ದರೂ ಅದನ್ನು ನೆಮ್ಮದಿಯಾಗಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಅವರಲ್ಲಿ ಮಾನಸಿಕ ನೆಮ್ಮದಿಯೇ ಇಲ್ಲದಾಗಿದೆ. ಹೀಗಾಗಿ ಒಂದಷ್ಟು ಸಮಯವನ್ನು ಖುಷಿಯಾಗಿ ಕಳೆಯಲು ಕೂಡ ಸಾಧ್ಯವಾಗುತ್ತಿಲ್ಲ. ರೋಗದ ಭಯದಿಂದಾಗಿ ಇವತ್ತು ನಮ್ಮಲ್ಲಿ, ನಮ್ಮ ಕುಟುಂಬಗಳಲ್ಲಿ ಆಹ್ಲಾದಕರ ವಾತಾವರಣವೇ ನಿರ್ಮಾಣವಾಗದಂತಾಗಿದೆ. ಯಾರೂ ಕೂಡ ಎಲ್ಲವನ್ನು ನೆಮ್ಮದಿಯಾಗಿ ತಿನ್ನಲಾಗದ ಸ್ಥಿತಿಗೆ ಬಂದು ತಲುಪಿದ್ದೇವೆ.
ಸಂಪಾದನೆಯತ್ತಲೇ ನಿಗಾವಹಿಸಿ ಅದರಿಂದ ನಮ್ಮ ಸುತ್ತಲೂ ನಾನು, ನನ್ನದು, ಆಸ್ತಿ, ಅಂತಸ್ತು, ಅಧಿಕಾರ ಎಂಬ ಗೋಡೆಗಳನ್ನು ನಿರ್ಮಿಸಿಕೊಂಡು ಎಲ್ಲರೊಂದಿಗೆ ಬೆರೆತು ಬದುಕುವುದನ್ನು ಮರೆತು ಆರೋಗ್ಯದ ಕಡೆಗೂ ನಿಗಾವಹಿಸದೆ ಬದುಕುವ ನಾವು ಬಳಿಕ ಕಾಯಿಲೆಗಲು ಅಡರಿಕೊಂಡು ಅದರಲ್ಲಿ ಬಂಧಿಯಾಗಿ ಭಯದಲ್ಲಿ ಕಾಲ ಕಳೆಯುವಾಗ ಆರೋಗ್ಯದ ಮತ್ತು ನಮ್ಮ ಸುತ್ತಮುತ್ತಲಿನ ಸಂಬಂಧದ ಮೌಲ್ಯ ಅರ್ಥವಾಗುತ್ತದೆ.
ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಬೇಕು
ನಿಜ ಹೇಳಬೇಕೆಂದರೆ ನಮ್ಮ ದೇಹಕ್ಕೆ ಆವರಿಸುವ ಕಾಯಿಲೆಗೆ ವೈದ್ಯರು ಚಿಕಿತ್ಸೆ ನೀಡಬಹುದು. ಆದರೆ ಮಾನಸಿಕ ಆರೋಗ್ಯಕ್ಕೆ ಕೆಲವೊಮ್ಮೆ ನಮಗೆ ನಾವೇ ಚಿಕಿತ್ಸೆ ಮಾಡಿಕೊಳ್ಳಬೇಕಾಗುತ್ತದೆ. ಕೆಟ್ಟ ಆಲೋಚನೆಗಳಿಂದ ದೂರವಾಗ ಬೇಕಾದರೆ ಮೊದಲಿಗೆ ಒಳ್ಳೆಯ ವಿಚಾರಗಳತ್ತ ಮನಸ್ಸನ್ನು ಕೊಂಡೊಯ್ಯಬೇಕು. ಆಧ್ಯಾತ್ಮಿಕ ವಿಚಾರಗಳತ್ತ ಮನಸ್ಸು ಹರಿಸುವುದು, ಓದುವುದು, ಸಂಗೀತ ಕೇಳುವುದು ಹೀಗೆ ತಮಗೆ ಹಿತವೆನಿಸುವುದನ್ನು ಮಾಡುತ್ತಾ ನಮ್ಮ ಸುತ್ತಲೂ ಒಂದು ಆಹ್ಲಾದಕರ ವಾತಾವರಣವನ್ನು ಬೆಳೆಸಿಕೊಳ್ಳಬೇಕು. ಇದು ನಮಗೆ ನಮ್ಮಲ್ಲಿ ಮಾನಸಿಕ ಶಕ್ತಿಯನ್ನು ತುಂಬುವುದರೊಂದಿಗೆ ಎಲ್ಲವನ್ನೂ ಸಂತಸದಿಂದ ಎದುರಿಸುವ ಧೈರ್ಯ ತುಂಬುತ್ತದೆ ಎಂಬುದನ್ನು ಮರೆಯಬಾರದು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications