ಮಂಡಿ ಹಾಗೂ ಕೀಲು ನೋವಾ? ಮನೆಯಲ್ಲೇ ಇದೆ ಮದ್ದು, ಔಷಧಿಗೆ ಖರ್ಚು ಮಾಡಬೇಡಿ ದುಡ್ಡು
ವಯಸ್ಸಾದಂತೆ ವಯೋಸ ಸಹಜ ನೋವುಗಳು ಕಾಣಿಸಿಕೊಳ್ಳುವುದು ಸಹಜ. ಇತ್ತೀಚಿನ ದಿನಮಾನಗಳಲ್ಲಿ ಮಂಡಿ ನೋವು, ಬೆನ್ನು ನೋವು, ಸಂದು ಹಾಗೂ ಕೀಲು ನೋವುಗಳು ಎಲ್ಲಾ ವಯೋಮಾನದವರಲ್ಲೂ ಸಾಮಾನ್ಯವಾಗಿಬಿಟ್ಟಿವೆ. ಇದಕ್ಕಾಗಿ ಪದೇ ಪದೇ ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದರೆ ಅದನ್ನು ನಿಲ್ಲಿಸಿ. ಯಾಕೆಂದರೆ ನಾವು ನಿಮಗೆ ಕೆಲ ಮನೆ ಮದ್ದನ್ನು ಹೇಳಿಕೊಡುತ್ತವೆ. ಅದನ್ನು ತಯಾರಿಸಿ ಬಳಸಿ. ತಕ್ಷಣ ನಿಮ್ಮ ಮಂಡಿ ನೋವು ಕೀಲು ನೋವು ತಕ್ಷಣ ಕಡಿಮೆಯಾಗುತ್ತದೆ.
ಹಾಗಾದರೆ ತಡ ಮಾಡುವುದು ಬೇಡ ಮಂಡಿ ನೋವು, ಬೆನ್ನು ನೋವು, ಸಂದು ಹಾಗೂ ಕೀಲು ನೋವುಗಳ ನಿವಾರಣೆಗೆ ಮನೆಯಲ್ಲಿ ತೈಲವನ್ನು ಹೇಗೆ ಸಿದ್ಧಮಾಡಿಕೊಳ್ಳಬಹುದು ಎಂದು ತಿಳಿಯೋಣ. ಇದನ್ನು ಮನೆಯಲ್ಲಿ ತಯಾರಿಸಿ ಬಳಸಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನೋವುಗಳನ್ನು ನಿವಾರಿಸಿಕೊಳ್ಳಿ.

ಮಂಡಿ, ಕೀಲು ನೋವು ನಿವಾರಣೆಗೆ ಎಣ್ಣೆ ತಯಾರಿಕೆ:-
* ಕೊಬ್ಬರಿ ಎಣ್ಣೆ 150 ಗ್ರಾಂ
* ಓಂಕಾಳು/ಅಜಿವಾನ 1 ಕಾಲ್ ಚಮಚ
*ಬೆಳುಳ್ಳಿ 7-8 ಎಸಳು
*ಕರ್ಪೂರ 5-6
ತಯಾರಿಸುವ ವಿಧಾನ:
*ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಸ್ವಲ್ಪ ಕಾಯಲುಬಿಡಿ
* ಇದಕ್ಕೆ ಓಂಕಾಳು ಹಾಕಿ ಒಂದೆರೆಡು ನಿಮಿಷ ಕುದಿಯಲು ಬಿಡಿ.
* ಕುದಿಯುವಾಗ ಇದಕ್ಕೆ 7-8 ಬೆಳ್ಳುಳ್ಳಿ ಎಸಳಗಳನ್ನು ಹಾಕಿ ಹುರಿಯಿರಿ. ಸಣ್ಣ ಹುರಿಯಲ್ಲಿ ಬೆಳ್ಳುಳ್ಳಿ ಬ್ರೌನ್ ಕಲರ್ ಬರುವವರೆಗೆ ಹುರಿಯಬೇಕು.
* ಬಳಿಕ ಒಲೆ ಆಫ್ ಮಾಡಿ ಎಣ್ಣೆ ತಣ್ಣಗಾಗಲು ಬಿಡಿ.
*ಇದು ತಣ್ಣಗಾದ ಮೇಲೆ ಪುಡಿಮಾಡಿದ 5-6 ಕರ್ಪೂರವನ್ನು ಇದಕ್ಕೆ ಹಾಕಿ.
* ಕರ್ಪೂರ ಎಣ್ಣೆಯಲ್ಲಿ ಕರಗುವವರೆಗೂ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು.
* ಕರ್ಪೂರ ಕರಗಿದ ಬಳಿಕ ಈ ಎಣ್ಣೆಯನ್ನು ಸೋಸಿ ಗಾಜಿನ ಬಾಟಲಿಗೆ ಹಾಕಿ ಇಟ್ಟುಕೊಂಡು ಬೆನ್ನು ನೋವು, ಮಂಡಿ, ಕೈ-ಕಾಲು ನೋವು ಬಂದಾಗ ಹಚ್ಚಿಕೊಳ್ಳಬಹುದು. ಇದರಿಂದ ನೋವು ಕೊಂಚ ನಿವಾರಣೆಯಾಗುತ್ತದೆ.
ಮನೆಯಲ್ಲಿ ತಯಾರಿಸಬಹುದಾದ ಮತ್ತೊಂದು ನೋವು ನಿವಾರಕ ಎಣ್ಣೆ:
ಬೇಕಾಗುವ ಪದಾರ್ಥಗಳು:-
* ಸಾಸಿವೆ ಎಣ್ಣೆ 100 ಗ್ರಾಂ
* ಪುಡಿ ಉಪ್ಪು ಅರ್ಧ ಚಮಚ
* ಲವಂಗಾ 4
*ಚೆಕ್ಕೆ 1 ತುಂಡು
* ಓಂಕಾಳು ಅರ್ಧ ಚಮಚ
ತಯಾರಿಸುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಲು ಇಡಿ.
* ಇದಕ್ಕೆ ಪುಡಿ ಉಪ್ಪು ಅರ್ಧ ಚಮಚ ಹಾಕಿ ಚೆನ್ನಾಘಿ ಮಿಕ್ಸ್ ಮಾಡಿ. ಉಪ್ಪು ಎಣ್ಣೆಯಲ್ಲಿ ಕರಗಬೇಕು.
* ಇದಕ್ಕೆ ಲವಂಗ, ಚೆಕ್ಕೆ ಹಾಗೂ ಓಂಕಾಳು ಹಾಕಿ ಒಂದೆರೆಡು ನಿಮಿಷ ಹುರಿಯಿರಿ.
* ತಣ್ಣಗಾಗಲು ಬಿಟ್ಟಿ ಒಂದು ಪಾತ್ರೆ ಅಥವಾ ಬಾಟಲಿಯಲ್ಲಿ ಸೋಸಿಕೊಳ್ಳಿ.
* ತಣ್ಣಗಾದ ಈ ಎಣ್ಣೆಯನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿಟ್ಟುಕೊಂಡು ನೋವಿರುವ ಜಾಗದಲ್ಲಿ ಹಂಚಿಕೊಂಡರೆ ನೋವು ತಕ್ಷಣ ನಿವಾರಣೆಯಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications