Get Updates
Get notified of breaking news, exclusive insights, and must-see stories!

Different Dosa Recipe: ನಾಳೆ ಅಡುಗೆ ಏನ್ ಮಾಡ್ತೀರಾ? ಚಿಂತೆ ಬೇಡ ದೋಸೆ ಹಿಟ್ಟಲ್ಲಿ ದಿನಕ್ಕೊಂದು ಅಡುಗೆ ಮಾಡಿ......

ಸೋಮವಾರ ಕಳೆದು ಮಂಗಳವಾರ ಬಂತು. ಹೀಗೆ ವಾರದಲ್ಲಿ ಪ್ರತಿಯೊಂದು ದಿನ ಬರುತ್ತಲೇ ಇರುತ್ತವೆ. ಭಾನುವಾರದಂದು ಸೋಮವಾರ ಏನು ಅಡುಗೆ ಮಾಡೋದು ಅನ್ನೋ ಯೋಚನೆಯನ್ನು ನಾವೆಲ್ಲಾ ಮಾಡಿರುತ್ತೇವೆ. ಆದರೆ ಸೋಮವಾರ ಒಂದು ದಿನ ಕಳೆದು ಬಿಟ್ಟರೆ ಮತ್ತೆ ಪ್ರತಿದಿನ ಏನು ಅಡುಗೆ ಮಾಡೋದು ಅನ್ನೋದೇ ಚಿಂತೆ. ಹೀಗೆ ದಿನಕ್ಕೊಂದು ವಿಧ ವಿಧವಾದ ರುಚಿಕರ ಅಡುಗೆ ಮಾಡುವುದು ಒಂದು ಸವಾಲಿನ ಕೆಲಸ.

ನೀವೇನಾದ್ರೂ ಪ್ರತಿನಿತ್ಯ ಯಾವ ತಿಂಡಿ ಮಾಡುವುದು ಅನ್ನೋ ಗೊಂದಲದಲ್ಲಿ ಇದ್ದರೆ, ನಾವು ನಿಮಗೆ ಸುಲಭ ವಿಧಾನ ಹೇಳಿಕೊಡುತ್ತೇವೆ. ಸೋಮವಾರಕ್ಕೆ ದೋಸೆ ಹಿಟ್ಟನ್ನು ರುಬ್ಬಿಕೊಂಡರೆ ಸಾಕು ಇದರಲ್ಲೇ ನೀವು ವಾರವಿಡೀ ಬೆಳಗ್ಗೆ ತಿಂಡಿಯನ್ನು ಸುಲಭವಾಗಿ ವಿಧ ವಿಧವಾಗಿ ಮಾಡಬಹುದು. ಹಾಗಾದರೆ ದೋಸೆ ಹಿಟ್ಟಿನಲ್ಲಿ ವಾರವಿಡೀ ಬೆಳಗಿನ ತಿಂಡಿ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.

Learn how to make different types of dosa at home in Kannada

ಸೋಮವಾರದ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು:

* ಅಕ್ಕಿ ಒಂದು ಕಪ್

*ಉದ್ದಿನ ಬೇಳೆ ಒಂದು ಕಪ್

*ಮೆಂತೆ ಕಾಳು ಅರ್ಧ ಚಮಚ

*ಕಡಲೆಬೇಳೆ ಎರಡು ಟೇಬಲ್ ಸ್ಪೂನ್

*ರಾಗಿ ಹಿಟ್ಟು ಒಂದು ಟೀ ಗ್ಲಾಸ್

*ಉಪ್ಪು

ರಾಗಿ ದೋಸೆ ಮಾಡುವ ವಿಧಾನ:-

*ಅಕ್ಕಿ, ಉದ್ದಿನ ಬೇಳೆ, ಮೆಂತೆ ಕಾಳು, ಕಡಲೆಬೇಳೆ ಎಲ್ಲವನ್ನೂ ಭಾನುವಾರ ಬೆಳಗ್ಗೆ ನೆನಸಿಡಿ. ಸಂಜೆ ರುಬ್ಬಿಕೊಳ್ಳಿ. ಇದು ದೋಸೆ ಹಿಟ್ಟಿನ ಹದಕ್ಕಿರಲಿ. ರಾತ್ರಿಯೆಲ್ಲಾ ಹಿಟ್ಟು ನೆನೆಯಲು ಬಿಡಿ.

*ಬೆಳಿಗ್ಗೆ ದೋಸೆ ಹಾಕುವ ಎರಡು ಗಂಟೆಯ ಮುಂಚೆ ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಹಾಕಿ ಅದಕ್ಕೆ ನೀರು ಹಾಕಿ ನೆನೆಸಲು ಬಿಡಿ. ಇದು ಕೂಡ ದೋಸೆ ಹಿಟ್ಟಿನ ಹದದಲ್ಲಿ ಇರಲಿ.

* ಬಳಿಕ ನೀವು ರುಬ್ಬಿಕೊಂಡ ದೋಸೆ ಹಿಟ್ಟಿನಲ್ಲಿ ಕಲಸಿದ ರಾಗಿ ಹಿಟ್ಟನ್ನು ಹಾಕಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆಯನ್ನು ಹಾಕಿ.

* ಈ ದೋಸೆ ಚಟ್ನಿ ಹಾಗೂ ಆಲುಗಡ್ಡೆ ಪಲ್ಯದ ಜೊತೆಗೆ ಚೆನ್ನಾಗಿರುತ್ತದೆ.

* ಉಳಿದ ದೋಸೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡಿ.

ಮಂಗಳವಾರದ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು:

* ಸೋಮವಾರ ಮಿಕ್ಕ ದೋಸೆ ಹಿಟ್ಟು

* ಈರುಳ್ಳಿ ಒಂದು (ಸಣ್ಣಕೆ ಹೆಚ್ಚಿದ)

* ಟೊಮೆಟೊ ಒಂದು (ಸಣ್ಣಕೆ ಹೆಚ್ಚಿದ)

* ಹಸಿ ಮೆಣಸಿನಕಾಯಿ ಒಂದು (ಸಣ್ಣಕೆ ಹೆಚ್ಚಿದ)

* ಕೊತ್ತೊಂಬರಿ ಸ್ವಲ್ಪ

* ಉಪ್ಪು

Learn how to make different types of dosa at home in Kannada

ಈರುಳ್ಳಿ ದೋಸೆ ಮಾಡುವ ವಿಧಾನ:-

* ದೋಸೆ ಹಿಟ್ಟು ಒಂದು ಗ್ಲಾಸ್‌ನಷ್ಟು ತೆಗೆದುಕೊಂಡು, ಅದಕ್ಕೆ ಸಣ್ಣಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ, ಕೊತ್ತೊಂಬರಿ ಸ್ವಲ್ಪ, ಉಪ್ಪು ಹಾಕಿ ಚೆನ್ನಾಗಿ ಕಲಸಿ.

* ಸ್ವಲ್ಪ ಹೊತ್ತು ಬಿಟ್ಟು ದೋಸೆಯನ್ನು ಹಾಕಿ. ದೋಸೆ ಸ್ವಲ್ಪ ದಪ್ಪದಾಗಿ ಹಾಕಿ.(ತುಪ್ಪವನ್ನು ಸವರಿ)

* ಇದು ಚಟ್ನಿ ಜೊತೆ ಸೇವಿಸಲು ರುಚಿಕರವಾಗಿರುತ್ತದೆ.

* ಮಿಕ್ಕ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡಿ

ಬುಧವಾರದ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು:

* ದೋಸೆ ಹಿಟ್ಟು

* ಸಬ್ಬಸ್ಗೆ ಸೊಪ್ಪು (ಸ್ವಲ್ಪ)

* ಈರುಳ್ಳಿ ಒಂದು (ಸಣ್ಣಕೆ ಹೆಚ್ಚಿದ)

* ಟೊಮೆಟೊ ಒಂದು (ಸಣ್ಣಕೆ ಹೆಚ್ಚಿದ)

* ಹಸಿ ಮೆಣಸಿನಕಾಯಿ ಒಂದು (ಸಣ್ಣಕೆ ಹೆಚ್ಚಿದ)

* ಕೊತ್ತೊಂಬರಿ ಸ್ವಲ್ಪ

* ಉಪ್ಪು

ಸಬ್ಬಸ್ಗೆ ಸೊಪ್ಪು ದೋಸೆ ಮಾಡುವ ವಿಧಾನ:-

* ದೋಸೆ ಹಿಟ್ಟು ಒಂದು ಗ್ಲಾಸ್‌ನಷ್ಟು ತೆಗೆದುಕೊಂಡು, ಅದಕ್ಕೆ ಸಣ್ಣಕೆ ಹೆಚ್ಚಿದ ಸಬ್ಬಸ್ಗೆ ಸೊಪ್ಪು, ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ, ಕೊತ್ತೊಂಬರಿ ಸ್ವಲ್ಪ, ಉಪ್ಪು ಹಾಕಿ ಚೆನ್ನಾಗಿ ಕಲಸಿ.

* ಸ್ವಲ್ಪ ಹೊತ್ತು ಬಿಟ್ಟು ದೋಸೆಯನ್ನು ಹಾಕಿ. ದೋಸೆ ಸ್ವಲ್ಪ ದಪ್ಪದಾಗಿ ಹಾಕಿ.(ತುಪ್ಪವನ್ನು ಸವರಿ)

* ಇದು ಚಟ್ನಿ ಮತ್ತು ಆಲುಗಟ್ಟೆ ಪಲ್ಯದೊಂದಿಗೆ ಸೇವಿಸಲು ರುಚಿಕರವಾಗಿರುತ್ತದೆ.

* ಮಿಕ್ಕ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡಿ

ಗುರುವಾರದ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು:

* ದೋಸೆ ಹಿಟ್ಟು

* ಮೊಟ್ಟೆ ಎರಡು

* ಈರುಳ್ಳಿ ಒಂದು (ಸಣ್ಣಕೆ ಹೆಚ್ಚಿದ)

* ಕೆಂಪು ಕಾರದ ಪುಡಿ

* ಕೊತ್ತೊಂಬರಿ ಸ್ವಲ್ಪ

* ಉಪ್ಪು

ಮೊಟ್ಟೆ ದೋಸೆ ಮಾಡುವ ವಿಧಾನ:-

* ಎರಡು ಮೊಟ್ಟೆ ಒಡೆದು ಅದಕ್ಕೆ ಫ್ರೈ ಮಾಡಿದ ಈರುಳ್ಳಿ, ಕೊತ್ತೊಂಬರಿ ಸೊಪ್ಪು ಹಾಕಿ ಕಲಸಿಕೊಳ್ಳಿ.

* ದೋಸೆ ಹಿಟ್ಟು ಒಂದು ಗ್ಲಾಸ್‌ನಷ್ಟು ತೆಗೆದುಕೊಳ್ಳಿ. ದೋಸೆ ಹೆಂಚಿನ ಮೇಲೆ ಹಾಕಿ.

* ದೋಸೆ ಮೇಲೆ ಕಲಸಿದ ಮೊಟ್ಟೆಯನ್ನು ಹಾಕಿ ಒಂದು ಪಾತ್ರೆಯನ್ನು ಮುಚ್ಚಿ (ಉರಿ ತುಂಬಾ ಕಡಿಮೆ ಇರಬೇಕು)

* ಬಳಿಕ ಅದನ್ನು ಎರಡು ಬದಿ ಸುಡಿ. ಇದು ಹಾಗೇ ತಿನ್ನಲೂ ರುಚಿಯಾಗಿರುತ್ತದೆ.

* ಮಿಕ್ಕ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡಿ

ಶುಕ್ರವಾರದ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು:

* ದೋಸೆ ಹಿಟ್ಟು

* ಈರುಳ್ಳಿ ಒಂದು (ಸಣ್ಣಕೆ ಹೆಚ್ಚಿದ)

* ಹಸಿ ಮೆಣಸಿನಕಾಯಿ

* ಕೊತ್ತೊಂಬರಿ ಸೊಪ್ಪು ಸ್ವಲ್ಪ

* ಉಪ್ಪು

ಪಡ್ಡು ಮಾಡುವ ವಿಧಾನ:-

* ದೋಸೆ ಹಿಟ್ಟಿಗೆ ಸಣ್ಣಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

* ಬಳಿಕ ಪಡ್ಡು ಹೆಂಚಿನಲ್ಲಿ ಪಡ್ಡು ಹಾಕಿ. ಇದು ಚಟ್ನಿಯೊಂದಿಗೆ ಸೇವಿಸಲು ತುಂಬಾ ರುಚಿಯಾಗಿರುತ್ತದೆ.

* ಮಿಕ್ಕ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡಿ

ಶನಿವಾರದ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು:

* ದೋಸೆ ಹಿಟ್ಟು

* ಕಾರ್ನ್, ಬಿಟ್‌ರೋಟ್ ಸ್ವಲ್ಪ

* ಈರುಳ್ಳಿ ಒಂದು (ಸಣ್ಣಕೆ ಹೆಚ್ಚಿದ)

* ಹಸಿ ಮೆಣಸಿನಕಾಯಿ (ಸಣ್ಣಕೆ ಹೆಚ್ಚಿದ)

* ಕೊತ್ತೊಂಬರಿ ಸೊಪ್ಪು ಸ್ವಲ್ಪ

* ಉಪ್ಪು

ಕಾರ್ನ್, ಬಿಟ್‌ರೋಟ್ ದೋಸೆ ಮಾಡುವ ವಿಧಾನ:-

* ದೋಸೆ ಹಿಟ್ಟನ್ನು ಹೆಂಚಿನ ಮೇಲೆ ಹಾಕಿ ಅದರ ಮೇಲೆ ಈರುಳ್ಳಿ, ಹಸಿ ಮೆಣಸಿನಕಾಯಿ, ಕಾರ್ನ್, ಬಿಟ್‌ರೋಟ್, ಕೊತ್ತೊಂಬರಿ ಸೊಪ್ಪು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

* ಅದರ ಮೇಲೆ ಪಾತ್ರೆ ಮುಚ್ಚಿ ಬೇಯಲು ಬಿಡಿ. (ಉರಿಯನ್ನು ತುಂಬಾ ಕಡಿಮೆ ಇಡಿ)

* ನಂತರ ಪ್ಲೇಟ್‌ಗೆ ಸರ್ವ್ ಮಾಡಿ. ಇದು ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಬಿಟ್‌ರೋಟ್ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನೋಡಿದ್ರಾ ದೋಸೆ ಹಿಟ್ಟಿನಲ್ಲಿ ವಾರವಿಡೀ ತಿಂಡಿಯನ್ನು ಮಾಡುವುದು ಹೇಗೆ ಅಂತಾ? ಹಾಗಾಗಿ ನೀವು ಕೂಡ ಬೆಳಗಿನ ತಿಂಡಿ ಬಗ್ಗೆ ಚಿಂತೆ ಬಿಟ್ಟು ಇದನ್ನೆಲ್ಲಾ ಒಮ್ಮೆ ಟ್ರೈ ಮಾಡಿ. ನಿತ್ಯ ಹೊಸ ಹೊಸ ರುಚಿಯೊಂದಿಗೆ ಬಿಸಿ ಬಿಸಿ ದೋಸೆಯನ್ನು ನೀವು ಮನೆಯಲ್ಲಿ ಸವಿಯಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+