Ice Apple: ಮಧುಮೇಹಿಗಳಿಗೂ ಸೇಫ್! ತಾಳೆ ಹಣ್ಣಿನ ಅಚ್ಚರಿಯ ಆರೋಗ್ಯ ಪ್ರಯೋಜನಗಳು

ಬೇಸಿಗೆಯ ಬಿಸಿಲು ಹೆಚ್ಚುತ್ತಿರುವ ಸಮಯದಲ್ಲಿ ನಮ್ಮ ದೇಹವನ್ನು ತಂಪಾಗಿಡಲು ನೈಸರ್ಗಿಕ ಮಾರ್ಗಗಳನ್ನು ಹುಡುಕುವುದು ಒಳ್ಳೆಯದು. ಇಂತಹ ಸಂದರ್ಭಗಳಲ್ಲಿ ಪ್ರಕೃತಿ ನೀಡಿರುವ ಅತ್ಯುತ್ತಮ ಕೊಡುಗೆಯೆಂದರೆ ತಾಳೆ ಹಣ್ಣು (ಐಸ್ ಆಪಲ್). ಇದು ಕೇವಲ ಬಾಯಾರಿಕೆ ನೀಗಿಸುವ ಹಣ್ಣಲ್ಲ, ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾದ ಹಣ್ಣು ಎಂದು ತಜ್ಞರು ಹೇಳುತ್ತಾರೆ.

ದೇಹದ ತಾಪಮಾನ ಕಡಿಮೆ ಮಾಡುವ ಶಕ್ತಿ

ತಾಳೆ ಹಣ್ಣಿನಲ್ಲಿ ಶೇ. 90ಕ್ಕೂ ಹೆಚ್ಚು ನೀರಿನಾಂಶ ಇರುತ್ತದೆ. ಇದು ನಮ್ಮ ದೇಹದಲ್ಲಿಯ ಉಷ್ಣತೆಯನ್ನು ಕಡಿಮೆ ಮಾಡಿ ಆರೋಗ್ಯವನ್ನು ಸುಧಾರಿಸಲು ತುಂಬಾ ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ನಮಗೆ ಕಾಡುವ ಆಯಾಸ, ಚರ್ಮದ ಕಿರಿಕಿರಿ ಮತ್ತು ಹೀಟ್ ಸ್ಟ್ರೋಕ್ ಸಮಸ್ಯೆಯಿಂದ ರಕ್ಷಿಸುವಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

Ice Apple Benefits

ಮಧುಮೇಹಿಗಳಿಗೆ ಸುರಕ್ಷಿತ ಆಯ್ಕೆ

ಸಿಹಿಯಿಂದ ಕೂಡಿರುವ ಹಣ್ಣುಗಳನ್ನು ಮಧುಮೇಹಿಗಳು ತಿನ್ನಲು ಹೆದುರುತ್ತಾರೆ. ಆದರೆ ತಾಳೆ ಹಣ್ಣು ಇವರಿಗೆ ಉತ್ತಮ ಆಯ್ಕೆ ಆಗಿದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಏರಿಸುವುದಿಲ್ಲ. ದಿನಕ್ಕೆ 2-3 ತಾಳೆ ಹಣ್ಣು ಸೇವಿಸುವುದು ಸುರಕ್ಷಿತ ಎಂದು ತಜ್ಞರು ಸಲಹೆ ನೀಡುತ್ತಾರೆ.

ತೂಕ ಇಳಿಕೆಗೆ ಸಹಕಾರಿ

ದೇಹದ ತೂಕವನ್ನು ಇಳಿಸಲು ಬಯಸುವವರಿಗೆ ತಾಳೆ ಹಣ್ಣು ತುಂಬಾ ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಹಾಗೂ ಕೊಬ್ಬಿನಾಂಶ ಇಲ್ಲದಿರುವದರಿಂದ ಇದು ಹೊಟ್ಟೆಯನ್ನು ತುಂಬಿದಂತೆ ಅನಿಸುತ್ತದೆ ಮತ್ತು ಅತಿಯಾಗಿ ತಿನ್ನುವ ಅಭ್ಯಾಸ ಇದ್ದವರಿಗೆ ಇದು ಕಡಿಮೆ ಮಾಡುತ್ತದೆ.

ಆರೋಗ್ಯ ಲಾಭಗಳು

ತಾಳೆ ಹಣ್ಣು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ಲಿವರ್ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಹೊಟ್ಟೆ ಉರಿ, ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರಿಗೆ ವಾಕರಿಕೆ ಕಡಿಮೆ ಮಾಡಲು ಸಹಾಯಕವಾಗುತ್ತದೆ.

ನೈಸರ್ಗಿಕ ಆರೈಕೆ

ತಾಳೆ ಹಣ್ಣಿನ ನೀರನ್ನು ಮುಖಕ್ಕೆ ಹಚ್ಚುವುದರಿಂದ ಬಿಸಿಲಿನಿಂದ ಉಂಟಾಗುವ ಕಪ್ಪು ಕಲೆಗಳು ಮತ್ತು ಗುಳ್ಳೆಗಳು ಕಡಿಮೆಯಾಗುತ್ತವೆ. ಇದರಿಂದ ತ್ವಚೆಯು ನೈಸರ್ಗಿಕವಾಗಿ ಹೊಳೆಯುತ್ತದೆ. ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಾಳೆ ಹಣ್ಣು ಸರಳ, ಸುರಕ್ಷಿತ ಮತ್ತು ಪರಿಣಾಮಕಾರಿ ಆಯ್ಕೆಯಾಗಿದೆ ಎಂದು ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+