Green Chilli Halwa: ಹಸಿ ಮೆಣಸಿನಕಾಯಿ ಹಲ್ವಾ ಮಾಡುವುದು ಹೇಗೆ ಗೊತ್ತಾ..?: ವಿಡಿಯೋ ವೈರಲ್
ಹಲ್ವಾ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಸರು ಕೇಳಿದರೆ ಬಾಯಲ್ಲಿ ನೀರು ಬರುವ ಹಲ್ವಾ ಅಪ್ಪಟ ಭಾರತೀಯ ಸಿಹಿ ತಿಂಡಿಗಳಲ್ಲಿ ಒಂದು. ಹಲ್ವಾ ಎಂದರೆ ಸಿಹಿಯಾದ ಒಂದು ಖಾದ್ಯ. ಯಾವುದೇ ವಿಶೇಷ ಸಂದರ್ಭದ ಖುಷಿಯನ್ನು ದುಪ್ಪಟ್ಟು ಮಾಡುವ ಸಿಹಿ. ಹೀಗಾಗಿ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಂಡರೂ ನಾಲಿಗೆಗೆ ಅತಿಯಾಗಿ ರುಚಿ ನೀಡುವ ಈ ಹಲ್ವಾ ಬಹುತೇಕರಿಗೆ ಅಚ್ಚುಮೆಚ್ಚು.
ಹಲ್ವಾಗಳಲ್ಲಿ ನಾನಾ ರೀತಿಯ ಹಲ್ವಾಗಳಿವೆ. ಸಾಮಾನ್ಯವಾಗಿ ನೀವು ಕ್ಯಾರೇಟ್ ಹಲ್ವಾ, ಬಾದಾಮ್ ಹಲ್ವಾ, ಕುಂಬಳ ಕಾಯಿ ಹಲ್ವಾ, ಬೀಟ್‌ರೂಟ್ ಹಲ್ವಾ, ಸೂಜಿ ಹಲ್ವಾ, ಸೇಬು ಹಲ್ವಾ, ಅನಾನಸ್ ಹಲ್ವಾ ಹೀಗೆ ವಿವಿಧ ರೀತಿಯ ಹಲ್ವಾಗಳು ಹೆಸರನ್ನು ಕೇಳಿರುತ್ತೀರಾ..ಕೆಲವೊಂದನ್ನು ಸವಿದಿರುತ್ತೀರಾ..? ಆದರೆ ಎಂದಾದರೂ ಮೆಣಸಿನಕಾಯಿ ಹಲ್ವಾ ತಿಂದಿದ್ದೀರಾ..? ನೋಡಿದ್ದೀರಾ..?

ಖಾರ..ಖಾರ..ಮೆಣಸಿನಕಾಯಿಗೂ ಸಿಹಿ..ಸಿಹಿ ಹಲ್ವಾಕ್ಕೂ ಏನು ಸಂಬಂಧ ಅಂತಿರಾ..? ಈ ಪ್ರಶ್ನೆಗೆ ಉತ್ತರವಿದ್ದು, ಮೆಣಸಿನಕಾಯಿ ಹಲ್ವಾ ಕೂಡ ಸದ್ಯ ಟ್ರೆಂಡ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಮೆಣಸಿನಕಾಯಿ ಹಲ್ವಾ ತಯಾರಿಸುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
@indian_street_food_5 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೆಣಸಿನಕಾಯಿ ಹಲ್ವಾ ತಯಾರಿಸುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಫ್ಯಾಕ್ಟರಿಯೊಂದರಲ್ಲಿ ಹಲ್ವಾ ತಯಾರಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋದ ಪ್ರಕಾರ ಮೆಣಸಿನಕಾಯಿ ಹಲ್ವಾ ತಯಾರಿಸಲು ಮೊದಲು ಹಸಿರು ಮೆಣಸಿನಕಾಯಿಯನ್ನು ನುಣ್ಣಗೆ ಕತ್ತರಿಸಲಾಗುತ್ತದೆ.
ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, 10ಲಕ್ಷಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ವಿಡಿಯೋಗೆ 14 ಸಾವಿರಕ್ಕೂ ಹೆಚ್ಚಿನ ಜನರು ಲೈಕ್ ಮಾಡಿದ್ದಾರೆ. ಇನ್ನು ಇದು ಯಾವ ರೀತಿಯ ಹಲ್ವಾ ಎಂದು ಹಲ್ವಾ ಪ್ರಿಯರು ಕಾಮೆಂಟ್ ಹಾಕಿದ್ದಾರೆ. ನೋಡಲೇನೋ ಹಲ್ವಾದ ರೀತಿ ಕಾಣುವ ಈ ಖಾದ್ಯದ ರುಚಿ ಹೇಗಿರುತ್ತದೋ ತಿಂದವರಷ್ಟೆ ಬಲ್ಲರು.












Click it and Unblock the Notifications