Grapes: ದ್ರಾಕ್ಷಿ ತಿನ್ನುವ ಮೊದಲು ಈ ತಪ್ಪು ಮಾಡಬೇಡಿ; ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ

Grapes: ಹಣ್ಣುಗಳನ್ನು ತಿನ್ನುವ ಮೊದಲು ಸರಿಯಾಗಿ ತೊಳೆಯುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ದ್ರಾಕ್ಷಿ ಹಣ್ಣುಗಳನ್ನು ಸ್ವಚ್ಛಗೊಳಿಸುವಾಗ ಹೆಚ್ಚು ಎಚ್ಚರಿಕೆ ಅಗತ್ಯವಹಿಸಬೇಕಾಗುತ್ತದೆ. ಮಾರುಕಟ್ಟೆಯಿಂದ ತಂದ ದ್ರಾಕ್ಷಿ ಹಣ್ಣುಗಳು ನೋಡುವುದಕ್ಕೆ ತಾಜಾ ಹಾಗೂ ಹೊಳೆಯುವಂತೆ ಕಾಣುತ್ತವೆ ನಿಜ. ಆದರೆ, ಅದರ ಮೇಲ್ಮೈಯಲ್ಲಿ ಕೀಟನಾಶಕಗಳ ಅಂಶಗಳು, ಮೇಣದಂತಹ ಲೇಪನ ಹಾಗೂ ಧೂಳು ಅಂಟಿಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ.

ದ್ರಾಕ್ಷಿ ಗೊಂಚಲು ರೂಪದಲ್ಲಿ ಬೆಳೆಯುವದರಿಂದ ಅದರ ಸಣ್ಣ ಸೀಳುಗಳಲ್ಲಿ ಮತ್ತು ತೆಳ್ಳನೆಯ ಸಿಪ್ಪೆಯ ಮೇಲೆ ರಾಸಾಯನಿಕಗಳು ಸುಲಭವಾಗಿ ಅಂಟಿಕೊಳ್ಳುತ್ತವೆ. ಕೇವಲ ನೀರಿನಿಂದ ತೊಳೆಯುವುದರಿಂದ ಈ ರಾಸಾಯನಿಕಗಳು ಸಂಪೂರ್ಣವಾಗಿ ಹೋಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

How to Clean Grapes Properly

ದ್ರಾಕ್ಷಿಯನ್ನು ಚೆನ್ನಾಗಿ ತೊಳೆಯುವುದು ಯಾಕೆ ಮುಖ್ಯ?

ಕೃಷಿ ಮತ್ತು ಪರಿಸರ ಸಂಬಂಧಿತ ಮಾಹಿತಿ ನೀಡುವ 'ಎನ್ವಿರಾನ್‌ಮೆಂಟಲ್ ವರ್ಕಿಂಗ್ ಗ್ರೂಪ್' (EWG) ಸಂಸ್ಥೆಯು 2025ರ 'ಡರ್ಟಿ ಡಜನ್' (Dirty Dozen) ಪಟ್ಟಿಯಲ್ಲಿ ದ್ರಾಕ್ಷಿಯನ್ನು ನಾಲ್ಕನೇ ಸ್ಥಾನದಲ್ಲಿ ಗುರುತಿಸಿದೆ. ದ್ರಾಕ್ಷಿ ಬೆಳೆಯನ್ನು ಕೀಟಗಳು, ಹುಳುಗಳು ಮತ್ತು ಶಿಲೀಂಧ್ರಗಳಿಂದ (Fungus) ರಕ್ಷಿಸಲು ಅತಿಯಾದ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.

ದ್ರಾಕ್ಷಿಯ ಸಿಪ್ಪೆ ರಂಧ್ರಯುಕ್ತವಾಗಿರುವುದರಿಂದ ರಾಸಾಯನಿಕಗಳು ಸುಲಭವಾಗಿ ಅಂಟಿಕೊಳ್ಳುತ್ತವೆ. ವಿಶೇಷವಾಗಿ ಮಕ್ಕಳಿಗೆ ಕೊಡುವ ಮೊದಲು ದ್ರಾಕ್ಷಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ.

ಉಪ್ಪಿನ ನೀರಿನಲ್ಲಿ ನೆನೆಸಿಡಬಹುದು

ದ್ರಾಕ್ಷಿಯನ್ನು ಸ್ವಚ್ಛಗೊಳಿಸಲು ಉಪ್ಪಿನ ನೀರನ್ನೂ ಬಳಸಬಹುದು. ಒಂದು ಪಾತ್ರೆ ನೀರಿಗೆ ಅರ್ಧ ಟೀ ಸ್ಪೂನ್ ಉಪ್ಪು ಹಾಕಿ ಅದರಲ್ಲಿ ದ್ರಾಕ್ಷಿಯನ್ನು 10 ನಿಮಿಷಗಳ ಕಾಲ ನೆನೆಸಿಡಿ. ಉಪ್ಪಿನ ನೀರು ಮೇಲ್ಮೈಯಲ್ಲಿರುವ ಧೂಳು, ಸಣ್ಣ ಕೀಟಗಳು ಹಾಗೂ ಕೆಲವು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಂತರ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.

ಅರಿಶಿನ ನೀರು ಬಳಸಿ ತೊಳೆಯಿರಿ

ಅರಿಶಿನದಲ್ಲಿ ಸಹಜ ಆಂಟಿಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ದ್ರಾಕ್ಷಿ ತೊಳೆಯಲು ಇದನ್ನೂ ಬಳಸಬಹುದು. ಒಂದು ಲೀಟರ್ ನೀರಿಗೆ ಚಿಟಿಕೆ ಅರಿಶಿನ ಹಾಕಿ ದ್ರಾಕ್ಷಿಯನ್ನು ಕೆಲವು ನಿಮಿಷ ನೆನೆಸಿಡಿ. ಬಳಿಕ ಸ್ವಚ್ಛ ನೀರಿನಲ್ಲಿ ತೊಳೆಯುವುದರಿಂದ ಹಣ್ಣಿನ ಮೇಲಿರುವ ಅಶುದ್ಧಿಗಳು ಕಡಿಮೆಯಾಗಲು ಸಹಾಯವಾಗುತ್ತದೆ.

ಬೇಕಿಂಗ್ ಸೋಡಾ ಬಳಕೆ ಪರಿಣಾಮಕಾರಿ

ಒಂದು ಲೀಟರ್ ನೀರಿಗೆ ಒಂದು ಟೀ ಸ್ಪೂನ್ ಬೇಕಿಂಗ್ ಸೋಡಾ ಬೆರೆಸಿ ದ್ರಾಕ್ಷಿಯನ್ನು 10ರಿಂದ 15 ನಿಮಿಷಗಳ ಕಾಲ ನೆನೆಸಿಡಬೇಕು. ಬೇಕಿಂಗ್ ಸೋಡಾದ ಕ್ಷಾರೀಯ ಗುಣವು ಕೀಟನಾಶಕಗಳನ್ನು ಹಣ್ಣಿನಿಂದ ಬಿಡುವಂತೆ ಸಹಾಯ ಮಾಡುತ್ತದೆ. ಬಳಿಕ ಶುದ್ಧ ನೀರಿನಲ್ಲಿ ಮತ್ತೆ ಚೆನ್ನಾಗಿ ತೊಳೆಯಬೇಕು.

ವಿನೆಗರ್ ಕೂಡ ಉತ್ತಮ ಆಯ್ಕೆ

ವೈಟ್ ವಿನೆಗರ್ ಬಳಸಿ ದ್ರಾಕ್ಷಿಯನ್ನು ಸ್ವಚ್ಛಗೊಳಿಸುವುದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಒಂದು ಭಾಗ ವಿನೆಗರ್‌ಗೆ ಮೂರು ಭಾಗ ನೀರನ್ನು ಬೆರೆಸಿ, ಆ ಮಿಶ್ರಣದಲ್ಲಿ ದ್ರಾಕ್ಷಿಯನ್ನು 5 ರಿಂದ 10 ನಿಮಿಷಗಳ ಕಾಲ ನೆನೆಸಿಡಬೇಕು. ನಂತರ, ಹಣ್ಣುಗಳನ್ನು ಶುದ್ಧ ನೀರಿನಲ್ಲಿ ಮತ್ತೊಮ್ಮೆ ಚೆನ್ನಾಗಿ ತೊಳೆಯಬೇಕು. ಈ ಪ್ರಕ್ರಿಯೆಯಿಂದ ದ್ರಾಕ್ಷಿಯಲ್ಲಿರುವ ಬ್ಯಾಕ್ಟೀರಿಯಾ, ಶಿಲೀಂಧ್ರ (Fungus) ಮತ್ತು ಕೀಟನಾಶಕಗಳ ಅಂಶವು ಗಣನೀಯವಾಗಿ ಕಡಿಮೆಯಾಗುತ್ತದೆ.

ದ್ರಾಕ್ಷಿ ಸ್ವಚ್ಛಗೊಳಿಸುವ ಸರಿಯಾದ ವಿಧಾನ

ಮೊದಲು ದ್ರಾಕ್ಷಿಯನ್ನು ದೊಡ್ಡ ಪಾತ್ರೆ ಅಥವಾ ಜಾಲರಿಯಲ್ಲಿ ಹಾಕಿ ತಣ್ಣೀರು ಹರಿಯುವ ನೀರಿನಲ್ಲಿ 20ರಿಂದ 30 ಸೆಕೆಂಡುಗಳ ಕಾಲ ಚೆನ್ನಾಗಿ ತೊಳೆಯಬೇಕು. ಕೈಯಿಂದ ಸೌಮ್ಯವಾಗಿ ಒರೆಸುವುದರಿಂದ ಧೂಳು ಮತ್ತು ಮೇಲ್ಮೈಯಲ್ಲಿರುವ ಕೆಲವು ರಾಸಾಯನಿಕಗಳು ಹೋಗುತ್ತದೆ.

ಸೂಚನೆ: ಈ ಮಾಹಿತಿ ಸಂಶೋಧನೆ ಹಾಗೂ ತಜ್ಞರ ಅಭಿಪ್ರಾಯದ ಆಧಾರಿತವಾಗಿದೆ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+