Time for Friends: ನಿಮ್ಮ ಸ್ನೇಹಿತರಿಗೆ ಸಮಯ ಕೊಡುವುದು ಹೇಗೆ?
ಈಗಿನ ಕಾಲದಲ್ಲಿ ಎಲ್ಲರೂ ಬ್ಯೂಸಿ. ಯಾರಿಗೂ ಕೂಡ ಸಮಯವೇ ಇಲ್ಲ. ಸೋಮವಾರದಿಂದ ಶುಕ್ರವಾರದವರೆಗೂ ಬಿಡುವಿಲ್ಲದಂತೆ ಕೆಲಸ ಮಾಡಬೇಕು. ವೀಕೆಂಡ್ ಬಂದ್ರ ಮನೆಯಲ್ಲಿ ಆ ಕೆಲಸ ಈ ಕೆಲಸ ಅಂತ ವಾರವಿಡೀ ಕೆಲಸದಲ್ಲೇ ದಿನಗಳು ಮುಗಿದು ಹೋಗುತ್ತವೆ. ಹೀಗಾಗಿ ಈ ಬ್ಯೂಸಿ ಲೈಫ್‌ನಲ್ಲಿ ಸ್ನೇಹಿತರಿಗೆ ಸಮಯ ಕೊಡುವುದು ಕಷ್ಟ ಸಾಧ್ಯವಾಗಿದೆ.
ಹಾಗಂತ ಸ್ನೇಹಿತರಿಲ್ಲದೆ ಜೀವನ ಮಾಡುವುದು ಆಗದ ಮಾತು. ಸ್ನೇಹಿತರು ನಮ್ಮ ಜೀವನದಲ್ಲಿ ಮುಖ್ಯವಾದ ಪಾತ್ರ ವಹಿಸುತ್ತಾರೆ. ಕಷ್ಟದಲ್ಲಿ ಇಲ್ಲದ ಸಂಬಂಧಕರಿಗಿಂತ ಎಲ್ಲಾ ಸಮಸ್ಯೆಗಳಿಗೆ ಹೆಗಲಾಗಿ ನಿಲ್ಲುವ ಒಬ್ಬ ಸ್ನೇಹಿತ ಎಲ್ಲರಿಗಿಂತಲೂ ಮಿಗಿಲಾಗಿರುತ್ತಾರೆ. ಹೀಗಾಗಿ ಎಲ್ಲಾ ಸಂಬಂಧಗಳಿಗಿಂತ ಮಿಗಿಲಾದ ಸಂಬಂಧ ಅಂದರೆ ಅದು ಸ್ನೇಹ ಸಂಬಂಧ.

ಸದಾ ನಮ್ಮಿಂದ ಏನಾದರೂ ಬಯಸುವ ನೂರು ಜನ ಸಂಬಂಧಿಕರು ಇರುವುದಕ್ಕಿಂತ ಯಾವುದೇ ನಿರೀಕ್ಷೆ ಇಲ್ಲದೆ ನಮ್ಮೊಂದಿಗೆ ಇರುವ ಒಬ್ಬ ಸ್ನೇಹಿತ ಆ ನೂರು ಜನಕ್ಕೂ ಮಿಗಿಲಾದವನು. ನಮಗೆ ದಣಿವಾದಾಗ, ನಮ್ಮೊಂದಿಗೆ ಬೆರೆಯಲು, ನಮ್ಮ ಕಷ್ಟಗಳನ್ನು ಹಂಚಿಕೊಳ್ಳಲು, ನಮ್ಮ ಸುಖ:-ದು:ಖದಲ್ಲಿ ಪಾಲುದಾರರಾಗಲು ನಮಗೆ ಸ್ನೇಹಿತರು ಬೇಕೇ ಬೇಕು.
ಆದರೆ ಇಂತಹ ಸ್ನೇಹಿತರನ್ನು ನಾವು ಉಳಿಸಿಕೊಳ್ಳಲು ಸದಾ ಕಷ್ಟಪಡಬೇಕಾಗುತ್ತದೆ. ಅವರನ್ನು ಭೇಟಿ ಮಾಡಲು ವಾರಗಳು, ತಿಂಗಳುಗಳು, ಕೆಲವೊಮ್ಮೆ ವರ್ಷಗಳು ಕಳೆದರೂ ನಮ್ಮೊಂದಿಗೆ ತೋರುವ ಅವರ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ. ಜೊತೆಗೆ ಅವರೊಂದಿಗೆ ಕಳೆಯುವ ಸಮಯ ನಮ್ಮನ್ನು ನಾವು ಮರೆತು, ಕೆಲಸದ ಒತ್ತಡದಿಂದ ನಮ್ಮನ್ನು ದೂರ ಮಾಡಿರುತ್ತದೆ. ಹೀಗಾಗಿ ನಮ್ಮ ಜೀವನದಲ್ಲಿ ಸ್ನೇಹಿತರು ಅತ್ಯಾವಶ್ಯಕ.
ಆದರೆ ಶಾಲೆಯಿಂದ ವೃತ್ತಿ ಜೀವನ ಆರಂಭಿಸುವವರೆಗೂ ಎಲ್ಲಾ ಸ್ನೇಹಿತರು ನಮ್ಮೊಂದಿಗೆ ಸಂಪರ್ಕದಲ್ಲಿ ಇರುವುದಿಲ್ಲ. ಹಾಗೊಂದು ವೇಳೆ ಇದ್ದರೂ ಎಲ್ಲಾ ಸ್ನೇಹಿತರಿಗೆ ನಾವು ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಉಳಿದ ಕೆಲ ಸ್ನೇಹಿತರಿಗೂ ನಾವು ಸಮಯ ಕೊಡುವುದು ಅಷ್ಟವಾಗುತ್ತಿದೆ. ಹೀಗಾಗಿ ಅವರನ್ನು ಕಳೆದುಕೊಂಡು ಬಿಡುತ್ತೇವೆ ಎನ್ನುವ ಆತಂಕ ಸದಾ ನಮ್ಮನ್ನು ಕಾಡುತ್ತದೆ.

ಹಾಗಾದರೆ ಈ ಬ್ಯೂಸಿ ಲೈಫ್‌ನಲ್ಲಿ ನೀವು ನಿಮ್ಮ ಸ್ನೇಹಿತರನ್ನು ಕಳೆದುಕೊಳ್ಳುವ ಭೀತಿ ನಿಮ್ಮನ್ನು ಕಾಡುತ್ತಿದೆಯೇ? ಸ್ನೇಹಿತರನ್ನು ಉಳಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ಕೆಲ ಸಲಹೆಗಳನ್ನು ನಾವು ನಿಮಗೆ ಕೊಡುತ್ತೇವೆ.
ನಿಮ್ಮ ಸ್ನೇಹಿತರಿಗೆ ಸಮಯ ಕೊಡುವುದು ಹೇಗೆ?
* ನಿಮ್ಮ ಮಾತು ಕೆಲವರನ್ನು ಭೇಟಿ ಮಾಡದೇ ಇದ್ದರೂ ಅದು ಭೇಟಿ ಮಾಡದಷ್ಟೇ ಖುಷಿಯನ್ನು ನೀಡುತ್ತದೆ. ಹೀಗಾಗಿ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಭೇಟಿ ಮಾಡದೇ ಇರುವ ಸಮಯದಲ್ಲಿ ಅವರೊಂದಿಗೆ ಫೋನ್ ಮೂಲಕ ಮಾತನಾಡಿ.
* ಎಲ್ಲರಿಗೂ ನೀವು ಒಂದೇ ಸಮಯದಲ್ಲಿ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಒಬ್ಬರಿಗೆ ಅರ್ಧಗಂಟೆಯಾದರೂ ಸಮಯ ಕೊಡುವಷ್ಟು ಸಮಯ ನಿಮಗೆ ಯಾವಾಗ ಇರುತ್ತದೆ ಎಂದು ಯೋಚನೆ ಮಾಡಿ. ಆ ಸಮಯದಲ್ಲಿ ನಿಮ್ಮ ಸ್ನೇಹಿತರನ್ನು ಭೇಟಿ ಮಾಡಿ.

* ತಿಂಗಳಿಗೊಂದು ಬಾರಿ ಆಗದೇ ಇದ್ದರೂ ಎರಡು ತಿಂಗಳಿಗೊಂದು ಬಾರಿ ಫೋನ್ ಕರೆಯಲ್ಲಾದರೂ ಮಾತನಾಡುವಂತೆ ಬಿಡುವು ಮಾಡಿಕೊಳ್ಳಿ. ಮಾತನಾಡುವಞ್ಟು ಅಷ್ಟು ಸಮಯವೂ ನಿಮ್ಮ ಮಾತು ಅವರಿಗೆ ಖುಷಿ ನೀಡುವಂತೆ ಇರಬೇಕು ಎನ್ನುವುದನ್ನು ಗಮನದಲ್ಲಿ ಇಡಿ.
* ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ನಿಮಗೆ ಕಿಂಚಿತ್ತು ಸಮಯ ಇಲ್ಲ ಅಂತಾದರೆ ಚಿಂತಿಸಬೇಡಿ. ಈ ಸಮಯದಲ್ಲಿ ನೀವು ಸಂದೇಶಗಳನ್ನು ಬಳಕೆ ಮಾಡಬಹುದು. ಸಂದೇಶಗಳನ್ನು ಕಳುಹಿಸುವ ಮೂಲಕ ನೀವು ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿ ಇರಬಹುದು.
* ನಿಮ್ಮ ಕೆಲಸದ ನಡುವೆ ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವುದು ತುಂಬಾ ಒಳ್ಳೆಯದು. ಹೌದು... ನೀವೇನಾದರೂ ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸದಲ್ಲಿ ನಿರತರಾಗಿದ್ದರೆ ಬಿಡು ಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಕೆಲಸದ ನಡುವೆ ಬಿಡು ಮಾಡಿಕೊಳ್ಳುವುದು ನಿಮಗೂ ವಿರಾಮ ಸಿಕ್ಕಂತಾಗುತ್ತದೆ. ಜೊತೆಗೆ ನಿಮ್ಮ ಸ್ನೇಹಿತರಿಗೂ ಸಮಯ ನೀಡಿದಂತಾಗುತ್ತದೆ.
* ಆಗಾಗ ನಿಮ್ಮ ಸಹೋದ್ಯೋಗಿಗಳೊಂದಿಗೆ ಟೀ-ಕಾಫಿಗೂ ಹೋಗುವುದನ್ನು ರೂಢಿಸಿಕೊಳ್ಳಿ. ಅದರಿಂದ ನಿಮ್ಮ ಮೈಂಡ್ ಫ್ರೀ ಆಗುತ್ತದೆ. ಕೆಲಸದ ಕಡೆಗೆ ಹೆಚ್ಚಿನ ಗಮನ ಕೊಡಬಹುದು. ಹಬ್ಬ ಅಥವಾ ವಿಶೇಷ ದಿನಗಳಿಗೆ ನಿಮ್ಮ ಮನೆಗೆ ಸ್ನೇಹಿತರನ್ನು ಆಹ್ವಾನಿಸಿ. ಅಥವಾ ಬೇರೆ ಯಾವುದೇ ಕಾರ್ಯಕ್ರಮಗಳು ಇದ್ದರೂ ಕೂಡ ನೀವು ಭಾಗವಹಿಸಲು ಪ್ರಯತ್ನಿಸಿ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications