Brahma Kamalam: ರಾತ್ರಿ ಅರಳುವ ಮೋಹಕ ಸುಂದರಿ ಬಗ್ಗೆ ನಿಮಗೆಷ್ಟು ಗೊತ್ತು..?
ಮುಂಗಾರು ಆರಂಭವಾಗುತ್ತಿದ್ದಂತೆಯೇ ಮನೆಗಳಲ್ಲಿ ನೆಟ್ಟು ಬೆಳೆಸಿದ ಬ್ರಹ್ಮಕಮಲಗಳು ಇರುಳಲ್ಲಿ ಅರಳಿ ಸುವಾಸನೆ ಬೀರುತ್ತಾ ಮನೆಮಂದಿಯಲ್ಲಿ ಸಂಭ್ರಮ ಮೂಡಿಸುತ್ತಿದೆ. ಈ ಸಂಭ್ರಮವನ್ನು ಕೆಲವರು ಹೂವಿನೊಂದಿಗೆ ಸೆಲ್ಪಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಖುಷಿಪಡುತ್ತಿದ್ದಾರೆ. ಗಿಡನೆಟ್ಟು ಪೋಷಿಸಿ ಹೂ ಬಿಡುವುದನ್ನೇ ಕಾಯುವ ಪುಷ್ಪಪ್ರೇಮಿಗಳಿಗೆ ಗಿಡದಲ್ಲಿ ಗೊಂಚಲು ಗೊಂಚಲಾಗಿ ಹೂ ಬಿಟ್ಟು ಘಮ್ಮೆನ್ನುವಾಗ ಖುಷಿಯಾಗದಿರದು. ಅಷ್ಟೇ ಅಲ್ಲದೆ, ಸಂಭ್ರಮದೊಂದಿಗೆ ಸಾರ್ಥಕ ಭಾವವೂ ಮನತುಂಬುತ್ತದೆ.
ಸದ್ಯ ಮಳೆಗಾಲದ ಆರಂಭದ ದಿನವಾಗಿರುವುದರಿಂದ ಹುಲುಸಾಗಿ ಬೆಳೆದ ಬ್ರಹ್ಮಕಮಲ ಗಿಡಗಳಲ್ಲಿ ಮೊಗ್ಗಾಗಿ ಹೂವಾಗಿ ಅರಳುವ ಸಮಯವೂ ಹೌದು. ಏನೇ ಹೇಳಿ ಗಿಡನೆಟ್ಟ ಪ್ರತಿ ಪುಷ್ಪಪ್ರೇಮಿಯಲ್ಲೂ ಹೂ ಅರಳುವುದನ್ನು ನೋಡುವ ತವಕ ಇದ್ದೇ ಇರುತ್ತದೆ. ಅದರಲ್ಲೂ ಬ್ರಹ್ಮಕಮಲ ಗಿಡವವಂತು ವಿಶೇಷ ಏಕೆಂದರೆ ಇದು ಇತರೆ ಹೂಗಿಡಗಳಂತೆ ಆಗಾಗ್ಗೆ ಹೂ ಬಿಡುವುದಿಲ್ಲ. ವರ್ಷಕ್ಕೋ... ಎರಡು ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಅದೂ ಕೂಡ ನಡು ರಾತ್ರಿಯಲ್ಲಿ. ಆದ್ದರಿಂದ ಪ್ರತಿಯೊಬ್ಬರಿಗೂ ಅದರ ಮೇಲೊಂದು ನಿಗಾ ಇದ್ದೇ ಇರುತ್ತದೆ.

ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಡಲಾರಂಭಿಸುತ್ತವೆ. ಆಷಾಡದಲ್ಲಂತೂ ಗಿಡಗಳು ಒಂದಕ್ಕಿಂತ ಮತ್ತೊಂದು, ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಹೂಗಳನ್ನು ಬಿಟ್ಟು ಮನೆಯಂಗಳದಲ್ಲಿ ಶೋಭಿಸುತ್ತವೆ. ಬ್ರಹ್ಮಕಮಲ ಎನ್ನುವುದು ಪುಷ್ಪಲೋಕದ ಅಚ್ಚರಿ ಎಂದರೆ ತಪ್ಪಾಗಲಾರದು. ಕ್ಯಾಕ್ಟಸ್ ಜಾತಿಗೆ ಸೇರಿದ ಬ್ರಹ್ಮಕಮಲದ ವೈಜ್ಞಾನಿಕ ಹೆಸರು ಎಪಿಫಿಲ್ಲಂ ಅಕ್ಸಿಪೆಟಲಂ. ಹಿಂದಿಯಲ್ಲಿ ನಿಶಾಗಂಧಿ, ಅಮೇರಿಕಾದಲ್ಲಿ ಮಿಡ್ನೈಟ್ ಲಿಲ್ಲಿ, ಅರ್ಚಿಡ್ ಕ್ಯಾಕ್ಟಸ್, ಪೋಡ್ ಲಿಲ್ಲಿ, ಕ್ಯಾಕ್ಟಸ್ ಬೆಥ್ಲೆಹೆಮ್ ಲಿಲ್ಲಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
17ನೇ ಶತಮಾನದಲ್ಲಿ ಭಾರತಕ್ಕೆ ಆಗಮನ
ದಕ್ಷಿಣ ಅಮೇರಿಕಾ ಇದರ ತವರೆಂದು ಅಲ್ಲಿಂದ ಸ್ಪೆಲಿಷರು ಪೋರ್ಚ್ಗೀಸ್ ನಾವಿಕರ ಮೂಲಕ ವಿಶ್ವದ ಇತರ ಕಡೆಗೆ ಹರಡಿತೆಂದು ಹೇಳಲಾಗಿದೆ. ಆದರೆ ಬ್ರಹ್ಮಕಮಲ ಭಾರತದತ್ತ ಹದಿನೇಳನೇ ಶತಮಾನದಲ್ಲಿ ಬಂದಿತೆಂದು ಹೇಳಲಾಗುತ್ತಿದೆ. ಹಿಮಾಚಲದ ಪ್ರದೇಶ, ಕಾಶ್ಮೀರ, ಹಿಮಾಚಲದ ಕೆಲವು ಪ್ರದೇಶಗಳಲ್ಲಿ ಭಾರತದ್ದೇ ಆದ ನೈಜ ಜಾತಿಯ ಗಿಡಗಳು ಇಂದಿಗೂ ಕಂಡುಬರುತ್ತವೆ ಎನ್ನಲಾಗಿದೆ. ಇತರೆ ಪುಷ್ಪಗಿಡಗಳಿಗೆ ವಿಭಿನ್ನವಾಗಿರುವ ಇದು ಸುಮಾರು ಹತ್ತರಿಂದ ಇಪ್ಪತ್ತು ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ. ಈ ಸಸ್ಯದಲ್ಲಿ ರೆಂಬೆ, ಕೊಂಬೆಗಳೇ ಇಡೀ ಸಸ್ಯದ ಜೀವಾಳವಾಗಿದೆ.
ಚಪ್ಪಟೆಯಾಗಿರುವ ಕಾಂಡ, ರೆಂಬೆಗಳು ಹಚ್ಚಹಸಿರಿನಿಂದ ಕೂಡಿದ್ದು, ಇವುಗಳೇ ಧ್ಯುತಿಸಂಶ್ಲೇಷಣಾ ಕ್ರಿಯೆ ನಡೆಸುತ್ತವೆ. ತುದಿಭಾಗ ನೀಳವಾಗಿ ಹಾಗೂ ಅಗಲವಾಗಿ ಹರಡಿಕೊಂಡಿರುವ ಎಲೆಯೇ ಕಾಂಡವಾಗಿದ್ದು, ಇದನ್ನು ಪರ್ಣಸ್ಥಂಭ ರಚನೆ ಎಂದು ಕರೆಯುತ್ತಾರೆ. ಇದರ ಸಸ್ಯಾಭಿವೃದ್ಧಿ ಅಷ್ಟೇನು ಕಷ್ಟವಲ್ಲ. ಬಲಿತ ಎಲೆಯನ್ನೇ ನೆಟ್ಟರೆ ಸಾಕು ಚಿಗುರು ಮೂಡಿ ಸಸ್ಯ ಬೆಳೆಯುತ್ತದೆ. ಹೆಚ್ಚಿನ ನೀರು, ಗೊಬ್ಬರವನ್ನೂ ಇದು ಅಪೇಕ್ಷಿಸುವುದಿಲ್ಲ. ಹೀಗಾಗಿ ಇದನ್ನು ಮನೆಯ ಅಂಗಳದಲ್ಲಿ ಅಥವಾ ಹೂಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ. ಮನೆಯ ಒಳಗೆ ಕುಂಡದಲ್ಲಿ ಬೆಳೆಸುವುದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ.

ರಾತ್ರಿ ಅರಳುವ ಮೋಹಕ ಸುಂದರಿ
ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ಬಲಿತ ಗಿಡಗಳ ಎಲೆಗಳ ರಚನೆಯ ಅಂಚಿನಲ್ಲಿ ಪುಟ್ಟದಾಗಿ ನಸುಕೆಂಪು ಬಣ್ಣದ ಮೊಗ್ಗುಗಳು ಹೊರಬಂದು ಸುಮಾರು ಎರಡು ವಾರಗಳಲ್ಲಿ ಬೊಗಸೆಗಿಂತಲೂ ದೊಡ್ಡದಾಗಿ ಬೆಳೆದು ನೆಲದತ್ತ ಮುಖಮಾಡಿ ತೂಗಾಡುತ್ತವೆ. ಆದರೆ ಮೊಗ್ಗುಗಳು ಪಕ್ವಗೊಂಡು ಅರಳುವ ಸಮಯ ಮಾತ್ರ ರಾತ್ರಿಯೇ... ಹೂಗಳು ರಾತ್ರಿ ಸುಮಾರು ಎಂಟು ಗಂಟೆಯಿಂದ ಅರಳಲು ಆರಂಭವಾಗಿ ಮಧ್ಯರಾತ್ರಿ ವೇಳೆಗೆಲ್ಲಾ ಪೂರ್ಣವಾಗಿ ಅರಳಿ ಸುವಾಸನೆಯನ್ನು ಬೀರಲಾರಂಭಿಸುತ್ತವೆ. ಕೆಂಪು ಪುಷ್ಪಪತ್ರೆಯಲ್ಲಿ ಅಚ್ಚ ಬಿಳಿಯ ದಳಗಳನ್ನೊಳಗೊಂಡ ಹೂಗಳು ಸುಂದರವಾಗಿಯೂ, ಮೋಹಕವಾಗಿಯೂ ನೋಡುಗರನ್ನು ತನ್ನತ್ತ ಸೆಳೆಯುತ್ತದೆ.
ವರ್ಷದಿಂದ ಕಾದು ಕುಳಿತ ಮನೆ ಮಂದಿಗೆ ಕೊನೆಗೂ ಮಧ್ಯರಾತ್ರಿಯಲ್ಲಿ ಅರಳಿ ತನ್ನ ಚೆಲುವನ್ನು ಪ್ರದರ್ಶಿಸುವ ಮೂಲಕ ತುಂಟ ನಗು ಬೀರುವ ಬ್ರಹ್ಮಕಮಲ ತನ್ನ ಸೌಂದರ್ಯವನ್ನು ಹೆಚ್ಚು ಸಮಯಗಳ ಕಾಲ ಸವಿಯಲು ಅವಕಾಶ ನೀಡುವುದಿಲ್ಲ. ರಾತ್ರಿ ಅರಳಿದ ಹೂ ಬೆಳಿಗ್ಗೆಯಾಗುತ್ತಿದ್ದಂತೆಯೇ ಮುದುಡಿ ಮೊಗ್ಗಿನಂತಾಗಿ ಕೊನೆಗೆ ಉದುರಿ ಬಿದ್ದು ಹೋಗಿ ಬಿಡುತ್ತದೆ. ಒಂದು ಗಿಡ ಇಷ್ಟೇ ಹೂ ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಗಿಡಗಳ ಬೆಳವಣಿಗೆ ಹಾಗೂ ಅವುಗಳ ಶಕ್ತಿಯಾನುಸಾರ ಹೂ ಬಿಡುತ್ತದೆ. ಗಿಡವೊಂದರಲ್ಲಿ ನಾಲ್ಕರಿಂದ ಪ್ರಾರಂಭವಾಗಿ ನೂರಾರು ಹೂಗಳನ್ನು ಬಿಡುತ್ತವೆ. ಗಿಡದ ತುಂಬಾ ಹೂವರಳಿದ ಸಂದರ್ಭ ಅದನ್ನು ನೋಡುವುದೇ ಮಜಾ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು












Click it and Unblock the Notifications