LPG ಗ್ಯಾಸ್ ಇಲ್ಲವೇ? ಈ ಬ್ರೇಕ್‌ಫಾಸ್ಟ್ ಐಡಿಯಾಗಳು ನಿಮಗಾಗಿ

ಪ್ರಸ್ತುತ ಗ್ಯಾಸ್‌ನ ಕೊರತೆ ಸದ್ಯದ ಪರಿಸ್ಥಿತಿಯಲ್ಲಿ ಸರಿ ಹೋಗುವ ಹಾಗೆ ಕಾಣಿಸುತ್ತಿಲ್ಲ. ಆದ್ದರಿಂದ ನಮ್ಮ ಮನೆಗಳಲ್ಲಿ ಅಡುಗೆ ಮಾಡುವ ಕ್ರಮವನ್ನು ನಾವು ಬದಲಿಸುವುದು ಒಳ್ಳೆಯದು. ಗ್ಯಾಸ್ ಬಳಸದೆ ನಾವು ಬೆಳಗಿನ ಉಪಹಾರವನ್ನು ತಯಾರಿಸಬಹುದು, ಮತ್ತು ಇದು ಕೇವಲ ಸಮಯ ಅಥವಾ ಗ್ಯಾಸ್ ಉಳಿತಾಯಕ್ಕೆ ಮಾಡುವ ಉಪಹಾರ ಅಲ್ಲ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರ ಅಬಿಪ್ರಾಯ ಆಗಿದೆ.

ಮೊಸರಿನಿಂದ ಮಾಡುವ ಉಪಹಾರ

ಮೊಸರಿನಿಂದ ನಮಗೆ ಹೇರಳವಾಗಿ ಪೌಷ್ಟಿಕಾಂಶಗಳು ಸಿಗುತ್ತವೆ. ಮೊಸರಿನಲ್ಲಿ ಸ್ವಲ್ಪ ಬಾಳೆಹಣ್ಣನ್ನು ಸೇರಿಸಿ ಮತ್ತು ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಬಹುದು. ಈ ಉಪಹಾರ ದೇಹಕ್ಕೆ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಶಕ್ತಿ ನೀಡುತ್ತದೆ.

Healthy Breakfast

ಮೊಳಕೆ ಕಾಳುಗಳ ಉಪಹಾರ

ಮೊಳಕೆ ಕಾಳುಗಳ ಆಹಾರವು ಅತಿ ಹೆಚ್ಚು ಪ್ರೋಟೀನ್ ಹೊಂದಿದ್ದು ಮತ್ತು ನಮ್ಮ ಜೀರ್ಣಕ್ರಿಯೆಗೆ ಇದು ತುಂಬಾ ಸಹಕಾರಿ ಆಗಿದೆ. ಹೆಸರುಬೇಳೆ ಮತ್ತು ಕಡಲೆಗಳನ್ನು ನೀರಿನಲ್ಲಿ ನೆನೆಸಿ ನಂತರ ಒದ್ದೆಯಾದ ಬಟ್ಟೆಯಲ್ಲಿ ಸುತ್ತಿ ಮೊಳಕೆಯೊಡೆಯಲು ಬಿಡಬೇಕು. ಮೊಳಕೆ ಬಂದ ನಂತರ ಅವುಗಳನ್ನು ತೊಳೆಯಿರಿ ಮತ್ತು ಕತ್ತರಿಸಿದ ಸೌತೆಕಾಯಿ, ಟೊಮ್ಯಾಟೊ, ಈರುಳ್ಳಿ, ಕ್ಯಾರೆಟ್ ಸೇರಿಸಿ ಮಿಶ್ರಣ ಮಾಡಿ.

ಆರೋಗ್ಯಕರ ಮಿಶ್ರಣ

ಈ ಮಿಶ್ರಣಕ್ಕೆ ನಿಂಬೆ ಹಣ್ಣಿನ ರಸ, ಉಪ್ಪು, ಜೀರಿಗೆ ಪುಡಿ ಮತ್ತು ಸ್ವಲ್ಪ ಆಲಿವ್ ಎಣ್ಣೆ ಸೇರಿಸಿದರೆ ರುಚಿ ಹೆಚ್ಚುತ್ತದೆ. ಈ ಉಪಹಾರ ಹೊಟ್ಟೆ ತುಂಬಿಸುವುದಲ್ಲದೆ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ದಿನದ ಪ್ರಾರಂಭಕ್ಕೆ ಉತ್ತಮ ಶಕ್ತಿ ನೀಡುವ ಆಯ್ಕೆಯಾಗಿದ್ದು, ದೀರ್ಘಕಾಲ ಹಸಿವು ತಡೆಯಲು ಸಹಕಾರಿಯಾಗುತ್ತದೆ.

ಸರಳ ಮತ್ತು ಉಪಯುಕ್ತ ಆಯ್ಕೆ

ಅನಿಲದ ಕೊರತೆಯ ಸಂದರ್ಭಗಳಲ್ಲಿ, ಅಡುಗೆ ಮಾಡದೇ ತಯಾರಿಸಬಹುದಾದ ಈ ರೀತಿಯ ಉಪಹಾರಗಳು ಉತ್ತಮ. ಕಡಿಮೆ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಪಡೆಯಲು ಇದು ಸಹಾಯ ಆಗುತ್ತದೆ. ಇಂತಹ ಉಪಹಾರಗಳು ಜೀವನಶೈಲಿಯಲ್ಲಿ ಸರಳತೆ ಮತ್ತು ಆರೋಗ್ಯ ಎರಡನ್ನೂ ಒದಗಿಸುತ್ತವೆ. ನಿಯಮಿತವಾಗಿ ಇವನ್ನು ಸೇವಿಸುವುದರಿಂದ ದೇಹದ ಸಾಮರ್ಥ್ಯ ಮತ್ತು ಉತ್ಸಾಹವೂ ಹೆಚ್ಚುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+