Rose Day 2024: ನಿಮ್ಮ ಸಂಗಾತಿಗೆ ಕ್ಷಮೆ ಹೇಳಲು ಈ ಬಣ್ಣದ ಗುಲಾಬಿ ಹೂವು ಕೊಡಿ...
ಪ್ರೇಮಿಗಳ ದಿನವನ್ನು ಪ್ರತೀ ವರ್ಷ ಫೆಬ್ರವರಿ 14ಕ್ಕೆ ಆಚರಿಸಲಾಗುತ್ತದೆ. ಫೆಬ್ರವರಿ 7ರಿಂದ ಫೆಬ್ರವರಿ 14ರವರೆಗೆ ಈ ದಿನವನ್ನು ಪ್ರೇಮಿಗಳು, ವಿವಾಹಿತರು ಹಾಗೂ ಸ್ನೇಹಿತರೂ ಕೂಡ ಆಚರಿಸುತ್ತಾರೆ. ತಮ್ಮ ಪ್ರೀತಿಪಾತ್ರರಿಗೆ ನೆಚ್ಚಿನ ಉಡುಗೊರೆಗಳನ್ನು ನೀಡಿ ಅವರೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.
ಆ ನಿಟ್ಟಿನಲ್ಲಿ ಗುಲಾಬಿ ದಿನವನ್ನು ಪ್ರತೀ ವರ್ಷ ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ಇದು ಪ್ರೇಮಿಗಳ ವಾರದ ಮೊದಲನೇಯ ದಿನವಾಗಿದೆ. ಈ ದಿನ ಜನರು ತಾವು ಇಷ್ಟಪಡುವವರಿಗೆ ಉಡುಗೊರೆಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೇಮಿಗಳು ಮಾತ್ರವಲ್ಲ, ದಂಪತಿಗಳು ಸಹ ಪರಸ್ಪರ ಪ್ರೀತಿ ಹಂಚಿಕೊಳ್ಳುವ ಮೂಲಕ ಈ ಪ್ರೇಮಿಗಳ ವಾರವನ್ನು ಆಚರಿಸುತ್ತಾರೆ. ಮಾತ್ರವಲ್ಲದೆ ಸ್ನೇಹಿತರೂ ಕೂಡ ಈ ದಿನದ ಆಚರಣೆಯಿಂದ ಹಿಂದೆ ಸರಿಯುವುದಿಲ್ಲ.

ನೀವೇನಾದರೂ ಯಾವುದೇ ಸ್ನೇಹಿತರ ವಿರುದ್ಧ ನಿಮ್ಮ ದ್ವೇಷವನ್ನು ಪರಿಹರಿಸಲು ಈ ರೋಸ್ ಡೇ ಅನ್ನು ಆಚರಿಸಬಹುದು. ಗುಲಾಬಿಯ ಪ್ರತಿಯೊಂದು ಬಣ್ಣವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗುಲಾಬಿಯ ಬಣ್ಣವು ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಹಾಗಾದರೆ ಯಾವ ಹೂವು ಯಾವ ಸಂದರ್ಭಕ್ಕೆ ಏನು ಹೇಳುತ್ತದೆ ಎಂದು ತಿಳಿಯೋಣ. ಇದರೊಂದಿಗೆ ಯಾರಿಗೆ ಯಾವ ರೀತಿಯ ಹೂವುಗಳನ್ನು ನೀಡಬೇಕೆಂದು ಸಹ ತಿಳಿಯೋಣ.
ಗುಲಾಬಿ ಪ್ರೀತಿಯ ಸಂಕೇತವೇ?
ಗುಲಾಬಿ ಹೂವನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಕೆಂಪು ಗುಲಾಬಿ ಪ್ರೀತಿಯ ಸಂಕೇತವಾಗಿದೆ. ಗುಲಾಬಿ ದಿನವನ್ನು ಆಚರಿಸಲು ಮತ್ತು ಗುಲಾಬಿಗಳನ್ನು ನೀಡಲು ಇದು ಕೂಡ ಒಂದು ಕಾರಣವಾಗಿದೆ. ಫೆಬ್ರವರಿ 7ರಂದು ನೆಚ್ಚಿನ ಸ್ನೇಹಿತರಿಗೆ ಹಾಗೂ ಪ್ರೀತಿಸುವವರಿಗೆ ಗುಲಾಬಿ ಹೂವುಗಳನ್ನು ನೀಡಲಾಗುತ್ತದೆ. ಹಾಗಾದರೆ ಯಾವ ಹೂವು ಯಾವ ಸಂದರ್ಭಕ್ಕೆ ಏನು ಹೇಳುತ್ತದೆ ಮತ್ತು ಯಾರಿಗೆ ಯಾವ ರೀತಿಯ ಹೂವುಗಳನ್ನು ನೀಡಬೇಕೆಂದು ಸಹ ತಿಳಿಯೋಣ.

1.ಕೆಂಪು ಗುಲಾಬಿ
ಕೆಂಪು ಗುಲಾಬಿ ನೀಡುವುದರ ಹಿಂದೆ ಒಂದು ವಿಶೇಷ ಅರ್ಥವಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಈ ಕೆಂಪು ಗುಲಾಬಿಯನ್ನು ನೀಡಲಾಗುತ್ತದೆ. ಇದನ್ನು ಸ್ವೀಕಾರ ಮಾಡಿದರೆ ಪ್ರೀತಿಸಲು ಸಮ್ಮತಿ ಸಿಕ್ಕಿದೆ ಎಂದರ್ಥ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದೇಳಲು ಕೆಂಪು ಗುಲಾಬಿಯನ್ನು ನೀಡಲಾಗುತ್ತದೆ. ಈ ಗುಲಾಬಿ ಪ್ರೀತಿ, ಸೌಂದರ್ಯ, ಗೌರವ ಮತ್ತು ಪ್ರಣಯವನ್ನು ಪ್ರತಿನಿಧಿಸುತ್ತದೆ. ಕೆಂಪು ಗುಲಾಬಿ ಪ್ರೀತಿಯ ಸಂಕೇತವಾಗಲು ಇದೇ ಕಾರಣ.

2.ಬಿಳಿ ಗುಲಾಬಿ
ಬಿಳಿ ಗುಲಾಬಿಗಳು ಶುದ್ಧ ಪ್ರೀತಿಯನ್ನು ಪ್ರತಿನಿಧಿಸುತ್ತವೆ. ನೀವು ಅವುಗಳನ್ನು ನಿಮಗಾಗಿ ಆರಿಸಿಕೊಂಡಿದ್ದೀರಿ ಎಂದು ಇತರ ವ್ಯಕ್ತಿಗೆ ಅನಿಸುತ್ತದೆ. ಇದಲ್ಲದೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಈ ಬಿಳಿ ಗುಲಾಬಿಯು ಸಂಬಂಧವನ್ನು ಸಮನ್ವಯಗೊಳಿಸಲು ಸಹ ಸಹಾಯ ಮಾಡುತ್ತದೆ.

3.ಹಳದಿ ಗುಲಾಬಿ
ಹಳದಿ ಗುಲಾಬಿಯನ್ನು ಸ್ನೇಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಸ್ನೇಹಿತರಿಗೆ ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಹೇಳಲು ನೀವು ಬಯಸಿದರೆ ನೀವು ಅವರಿಗೆ ಹಳದಿ ಗುಲಾಬಿಗಳನ್ನು ನೀಡಬಹುದು.

4.ಗುಲಾಬಿ ಬಣ್ಣದ ಗುಲಾಬಿ
ಗುಲಾಬಿ ಬಣ್ಣದ ಗುಲಾಬಿ ಕಾಳಜಿ ಮತ್ತು ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಈ ಗುಲಾಬಿ ಸಂತೋಷ, ಕೃತಜ್ಞತೆ ಮತ್ತು ಸಂಬಂಧದ ಸೌಂದರ್ಯವನ್ನು ತೋರಿಸುತ್ತದೆ.

5.ನೀಲಿ ಗುಲಾಬಿ
ನೀಲಿ ಗುಲಾಬಿಗಳು ಬಹಳ ಅಪರೂಪ, ಅದಕ್ಕಾಗಿಯೇ ಅವುಗಳನ್ನು ಯಾರಿಗಾದರೂ ನೀಡುವುದು ಆ ವ್ಯಕ್ತಿ ನಿಮಗೆ ಎಷ್ಟು ವಿಶೇಷ ಎಂಬುದನ್ನು ತೋರಿಸುತ್ತದೆ.

6.ಕಿತ್ತಳೆ ಗುಲಾಬಿ
ಗುಲಾಬಿಯ ಈ ಬಣ್ಣವು ಉತ್ಸಾಹದ ಸಂಕೇತವಾಗಿದೆ. ದಂಪತಿಗಳು ತಮ್ಮ ಪ್ರೀತಿಯಲ್ಲಿ ಉತ್ಸಾಹವನ್ನು ಸಂಕೇತಿಸಲು ಕಿತ್ತಳೆ ಗುಲಾಬಿಗಳನ್ನು ನೀಡಬಹುದು.

7.ಹಳದಿ-ಕೆಂಪು ಗುಲಾಬಿ
ನೀವು ಯಾರನ್ನಾದರೂ ಇಷ್ಟಪಟ್ಟರೆ, ಸ್ನೇಹದಿಂದ ಪ್ರೀತಿ ಜೀವನಕ್ಕೆ ಕಾಲಿಡಲು ಬಯಸಿದರೆ ಹಳದಿ-ಕೆಂಪು ಗುಲಾಬಿಗಳ ಸಂಯೋಜನೆಯೊಂದಿಗೆ ಪುಷ್ಪಗುಚ್ಛವನ್ನು ನೀಡಬಹುದು.

8.ನೇರಳೆ ಗುಲಾಬಿ
ನೇರಳೆ ಗುಲಾಬಿ ಎಂದರೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿದೆ ಎಂದರ್ಥ. ನೀವು ಯಾರಿಗಾದರೂ ಇದನ್ನು ಹೇಳಲು ಬಯಸಿದರೆ, ಅವನಿಗೆ ನೇರಳೆ ಗುಲಾಬಿ ನೀಡಿ. ನಿಮ್ಮನ್ನು ಯಾರನ್ನಾದರೂ ಆಕರ್ಷಿಸಿದರೆ ನೇರಳೆ ಗುಲಾಬಿಗಳನ್ನು ಖರೀದಿಸಿ ನೀಡಿ.

9. ಕಪ್ಪು ಗುಲಾಬಿ
ಸಂಬಂಧವನ್ನು ಕೊನೆಗೊಳಿಸಲು ಅಥವಾ ಇಷ್ಟಪಡದಿರುವಿಕೆಯನ್ನು ವ್ಯಕ್ತಪಡಿಸಲು ಕಪ್ಪು ಗುಲಾಬಿಯನ್ನು ನೀಡಬಹುದು. ಕಪ್ಪು ಬಣ್ಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನಿಮ್ಮ ಜೀವನದಲ್ಲಿ ಕಪ್ಪು ಬಣ್ಣವನ್ನು ತರಲು ಪ್ರಯತ್ನಿಸದಿರಿ. ಪ್ರೇಮಿಗಳ ದಿನದಂದು ಕಪ್ಪು ಹೂವುಗಳ ಅಗತ್ಯವಿಲ್ಲ.
ಯಾರು ಯಾವ ಗುಲಾಬಿ ನೀಡಬಹುದು?
1.ನವವಿವಾಹಿತ ದಂಪತಿಗಳು:
ಕೆಂಪು ಅಥವಾ ಗುಲಾಬಿ ಬಣ್ಣ ಗುಲಾಬಿಗಳನ್ನು ನಿಮ್ಮ ಸಂಗಾತಿಗೆ ನೀಡಬಹುದು. ಇದು ಪ್ರೀತಿಯ ಸಂಕೇತಗಳಾಗಿವೆ. .
2.ಪ್ರೀತಿಯ ಸ್ನೇಹಕ್ಕಾಗಿ
ಉದ್ದವಾದ ಕಾಂಡವನ್ನು ಹೊಂದಿರುವ ಕೆಂಪು, ಹಳದಿ, ಗುಲಾಬಿ ಬಣ್ಣದ ಗುಲಾಬಿಗಳನ್ನು ನೀಡಿ ಇದು ಪ್ರೀತಿಯ ಸಂಕೇತವಾಗಿದೆ.
3.ಅಜ್ಜ, ಅಜ್ಜಿ, ತಾಯಿ, ಶಿಕ್ಷಕರಿಗಾಗಿ ಹೂವುಗಳು
ಕಪ್ಪು ಗುಲಾಬಿಯನ್ನು ಹೊರತುಪಡಿಸಿ ಮೇಲಿರುವ ಎಲ್ಲಾ ಬಗೆಯ ಬಣ್ಣದ ಗುಲಾಬಿ ಹೂವುಗಳನ್ನು ನೀಡಬಹುದು. ಆದರೆ ಈ ಹೂವುಗಳನ್ನು ನೀಡಿದ ಬಳಿಕ ಅವರ ಆಶೀರ್ವಾದ ಪಡೆಯಿರಿ. ಅವರಿಗೆ ಶುಭಕೋರಿ ಅವರ ಉತ್ತಮ ಆರೋಗ್ಯಕ್ಕಾಗಿ ದೇವರನ್ನು ಪ್ರಾರ್ಥಿಸಿ.
4.ರೋಗಿಗೆ ಯಾವ ಹೂವನ್ನು ಕೊಡಬೇಕು
ಸೌಮ್ಯವಾದ ವಾಸನೆಯುಳ್ಳ ಯಾವುದೇ ಹೂವುಗಳನ್ನು ನೀವು ನೀಡಬಹುದು. ಕಪ್ಪು ಬಣ್ಣದ ಹೂವು ಕೊರತುಪಡಿಸಿ ಉಳಿದ ಎಲ್ಲಾ ಬಣ್ಣದ ಹೂವುಗಳ ಗುಚ್ಚವನ್ನು ನೀವು ನೀಡಬಹುದು.
5.ರಹಸ್ಯ ಪ್ರೀತಿ ವ್ಯಕ್ತಪಡಿಸಲು
ಗುಲಾಬಿ ಬಣ್ಣದ ಗುಲಾಬಿಗಳನ್ನು ರಹಸ್ಯ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರೀತಿಯ ಅಭಿವ್ಯಕ್ತಿಗೆ ನೀವು ನೀಡಬಹುದು.












Click it and Unblock the Notifications