Happy Kiss Day 2026: ಪ್ರೀತಿ ಹೇಳಲು ಕೆಲವೊಮ್ಮೆ ಪದಗಳಿಗಿಂತ ಮುತ್ತೇ ಸಾಕು, ಮುತ್ತುಗಳಿಗೂ ಅರ್ಥವಿದೆ
Happy Kiss Day 2026: ಪ್ರೇಮಿಗಳ ದಿನಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಪ್ರೇಮಿಗಳಿಗೆ ಹಾಗೂ ಪ್ರೇಮಾಂಕುರದ ನಿರೀಕ್ಷೆಯಲ್ಲಿ ಇರುವವರಿಗೆ ಈ ವಾರ ವಿಶೇಷ. ಪ್ರೀತಿಯ ಅಪ್ಪುಗೆ, ಪ್ರೀತಿಯ ಸಂಭಾಷಣೆಗಳು ಮತ್ತು ಹೃದಯಸ್ಪರ್ಶಿ ಕ್ಷಣಗಳಿಗಾಗಿ ಪ್ರೇಮಿಗಳು ಕಾಯುತ್ತಿದ್ದಾರೆ. ಈ ವಿಶೇಷ ವಾರದ ಕೊನೆಯ ದಿನವೇ ಅತ್ಯಂತ ರೋಮಾಂಚನವಾದ ದಿನ. ಪ್ರತಿ ವರ್ಷ ಫೆಬ್ರವರಿ 13ರಂದು ಕಿಸ್ ಡೇ ಎಂದು ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲು ಬಂದು ಪೀತಿಯ ಅತ್ಯಂತ ಸರಳ ಆದರೆ ಮುತ್ತಿನ ಮೂಲಕ ಭವಾನೆಗಳನ್ನು ವ್ಯಕ್ತಪಡಿಸುವ ದಿನವಾಗಿದೆ.
ಕಿಸ್ ಡೇ ಇತಿಹಾಸ
ಕಿಸ್ ಡೇಗೆ ನಿಖರವಾದ ಹಿನ್ನೆಲೆ ಎನ್ನುವುದು ಇಲ್ಲ. ಚುಂಬನ ಎನ್ನುವುದು ಪ್ರೇಮದ ಸೂಚಕವಾಗಿ ಪ್ರೇಮಿಗಳ ನಡುವೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. 6ನೇ ಶತಮಾನದಲ್ಲಿ ಫ್ರಾನ್ಸ್‌ನಲ್ಲಿ ದಂಪತಿಗಳು ಒಟ್ಟಿಗೆ ನೃತ್ಯ ಮಾಡಿ ಕೊನೆಯಲ್ಲಿ ಮುತ್ತಿನ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು ಎನ್ನಲಾಗುತ್ತದೆ.

ರಷ್ಯಾದಲ್ಲಿ ವಿವಾಹ ಸಂಪ್ರದಾಯಗಳಲ್ಲಿ ಚುಂಬನ ಪ್ರಮುಖ ಭಾಗವಾಗಿದ್ದು, ಪ್ರತಿಜ್ಞೆ ವಿನಿಮಯದ ವೇಳೆ ಮುತ್ತಿನ ಮೂಲಕ ಸಂಬಂಧವನ್ನು ದೃಢಪಡಿಸಲಾಗುತ್ತಿತ್ತು. ರೋಮ್‌ನಲ್ಲಿ ಚುಂಬನವನ್ನು ಸ್ವಾಗತಿಸುವ ಸಾಂಸ್ಕೃತಿಕ ಸಂಕೇತವಾಗಿ ಸಂಭ್ರಮಿಸಲಾಗುತಿತ್ತು. ಈ ಸಂಪ್ರದಾಯ ಕಾಲಕ್ರಮೇಣ ಪ್ರಪಂಚದಾದ್ಯಂತ ಪರಿಚಿತವಾಗಿದ್ದು, ಇಂದು ಚುಂಬನವು ಪ್ರೀತಿ ಮತ್ತು ಭಾವನಾತ್ಮಕ ಸಂಪರ್ಕದ ಪೀತಿಯ ಸಂಕೇತವಾಗಿದೆ.
2026ರ ಕಿಸ್ ಡೇ ಯಾವಾಗ ಆಚರಿಸಲಾಗುತ್ತದೆ ?
2026ರಲ್ಲಿ ಕೂಡ ಕಿಸ್ ಡೇ ಅನ್ನು ಎಂದಿನಂತೆ ಫೆಬ್ರವರಿ 13ರ ಶುಕ್ರವಾರ ಆಚರಿಸಲಾಗುತ್ತದೆ. ಫೆಬ್ರವರಿ 7ರಂದು ರೋಸ್ ಡೇಯಿಂದ ಆರಂಭವಾಗುವ ಪ್ರೇಮಿಗಳ ವಾರವು ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ ಮತ್ತು ಹಗ್ ಡೇಗಳ ನಂತರ ಕಿಸ್ ಡೇಗೆ ತಲುಪುತ್ತದೆ.
ಕಿಸ್ ಡೇ ಮಹತ್ವ
ಕಿಸ್ ಡೇ ಸರಳ ಪ್ರಣಯ ಕ್ರಿಯೆಯಷ್ಟೇ ಅಲ್ಲ; ಇದು ಭಾವನಾತ್ಮಕ ಬಾಂಧವ್ಯ. ನಂಬಿಕೆ ಮತ್ತು ಆಳವಾದ ಸಂಬಂಧದ ಪ್ರತೀಕ. ಇದು ಸಂತೋಷ, ಭದ್ರತೆ ಮತ್ತು ನಿಕಟತೆಯ ಭಾವನೆಯನ್ನು ಹೆಚ್ಚಿಸುತ್ತದೆ. ಪದಗಳಿಂದ ಹೇಳಲಾಗದ ಭಾವನೆಗಳನ್ನು ಕಾಳಜಿ, ಪ್ರೀತಿ, ಸಾಂತ್ವನ, ಭರವಸೆ ಮತ್ತು ಉತ್ಸಾಹ, ಮುತ್ತು ಸುಲಭವಾಗಿ ವ್ಯಕ್ತಪಡಿಸಬಹುದು. ಪ್ರೀತಿಯು ದೊಡ್ಡ ಉಡುಗೊರೆಗಳಲ್ಲಿ ಮಾತ್ರವಲ್ಲ, ಇಂತಹ ಸಣ್ಣ ಮತ್ತು ಅರ್ಥಪೂರ್ಣ ಕ್ಷಣಗಳು ಬೆಳೆಯುತ್ತದೆ ಎಂಬುದನ್ನು ಕಿಸ್ ಡೇ ನೆನಪಿಸುತ್ತದೆ.
ಕಿಸ್ ಡೇ ಕೇವಲ ದಂಪತಿಗಳಿಗೆ ಮಾತ್ರವಲ್ಲ
ಕಿಸ್ ಡೇ ಕೇವಲ ದಂಪತಿಗಳಿಗೆ ಮಾತ್ರವಲ್ಲ ಕಿಸ್ ಡೇ ಪ್ರಣಯ ಸಂಬಂಧಗಳಿಗೆ ಮಾತ್ರ ಸೀಮಿತವಲ್ಲ. ಪೋಷಕರಿಂದ ಮಗುವಿಗೆ ಹಣೆಯ ಮೇಲೆ ಮುತ್ತು, ಕುಟುಂಬದವರ ಮೇಲಿನ ವಾತ್ಸಲ್ಯ - ಇವೆಲ್ಲವೂ ಪ್ರೀತಿಯ ಬೇರೆ ಬೇರೆ ರೂಪಗಳು. ಹೀಗಾಗಿ, ಕಿಸ್ ಡೇ ಅಂತಿಮವಾಗಿ ಪ್ರೀತಿಯನ್ನು ಅದರ ಎಲ್ಲಾ ರೂಪಗಳಲ್ಲಿ ಆಚರಿಸುವ ದಿನವಾಗಿದೆ.
ಕಿಸ್‌ಗಳಲ್ಲಿ ವಿಭಿನ್ನ ಭಾವನೆಗಳನ್ನು ವ್ಯಕ್ತಪಡಿಸುವಿಕೆ:
ಕೆನ್ನೆಯ ಮೇಲೆ ಕಿಸ್ - ಸ್ನೇಹ ಮತ್ತು ಆತ್ಮೀಯತೆ
ಹಣೆಯ ಮೇಲೆ ಕಿಸ್ - ಕಾಳಜಿ ಮತ್ತು ರಕ್ಷಣೆ
ಕೈ ಮೇಲೆ ಕಿಸ್ - ಗೌರವ ಮತ್ತು ಮೆಚ್ಚುಗೆ
ನೆತ್ತಿಯ ಮೇಲೆ ಕಿಸ್ - ಭರವಸೆ ಮತ್ತು ಭದ್ರತೆ
ಕಿಸ್ ಡೇ ಆಚರಿಸುವುದು ಹೇಗೆ
ಪ್ರೇಮಿಗಳು, ದಂಪತಿ ಪ್ರೀತಿ ಪ್ರಣಯ ಡೇಟ್ ಪ್ಲ್ಯಾನ್ ಮಾಡಬಹುದು. ತಮ್ಮ ಮೊದಲ ಕಿಸ್ ನೆನಪನ್ನು ಮರುಸೃಷ್ಟಿಸಬಹುದು ಅಥವಾ ಹೃದಯಸ್ಪರ್ಶಿ ಸಂದೇಶಗಳನ್ನು ಹಂಚಿಕೊಳ್ಳಬಹುದು. ಸಿಹಿ ಮೆಸೇಜ್ ಅಥವಾ ಅಚ್ಚರಿಯ ಉಡುಗೊರೆಯ ಮೂಲಕ ದಿನವನ್ನು ವಿಶೇಷವಾಗಿಸಬಹುದು. ಅಂತಿಮವಾಗಿ, ದೊಡ್ಡ ಸಂಭ್ರಮಕ್ಕಿಂತಲೂ ಪ್ರಾಮಾಣಿಕ ಪ್ರೀತಿ ಮತ್ತು ಸಣ್ಣ ಆತ್ಮೀಯ ಗೆಸ್ಚರ್‌ಗಳೇ ಕಿಸ್ ಡೇಯ ನಿಜವಾದ ಅರ್ಥ. ಈ ದಿನ ನಮಗೆ ನೆನಪಿಸುವುದು ಒಂದೇ - ಪ್ರೀತಿ ಹೇಳಲು ಕೆಲವೊಮ್ಮೆ ಪದಗಳಿಗಿಂತ ಒಂದು ಮುತ್ತೇ ಸಾಕು. ಹ್ಯಾಪಿ ಕಿಸ್ ಡೇ
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications