ಒಂದು, ಮೂರು, ಮೈತುಂಬಾ ಸ್ತನಗಳಿರುವ ಹೆಣ್ಣು ದೇವತೆ: ಈ ದೇವರನ್ನು ಎಲ್ಲಿ ಪೂಜಿಸಲಾಗುತ್ತದೆ?
ಭಾರತದಲ್ಲಿ ಹೆಣ್ಣು ದೇವರನ್ನು ತುಂಬಾ ಶ್ರದ್ಧಾ ಭಕ್ತಯಿಂದ ಪೂಜಿಸಲಾಗುತ್ತದೆ. ಇದಕ್ಕೆ ಕಾರಣ ಹೆಣ್ಣು ದೇವರು ಅತ್ಯಂತ ಶಕ್ತಿಶಾಲಿ ಎಂಬ ನಂಬಿಕೆ. ಅಲ್ಲದೆ ಭಾರತದಲ್ಲಿ ಕೆಲ ವಿಶಿಷ್ಟವಾದ ಹೆಣ್ಣು ದೇವತೆಗಳನ್ನು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಹೆಣ್ಣು ದೇವತೆಗೆ ಎರಡು ಸ್ತನಗಳು ಇರುತ್ತವೆ. ಆದರೆ ನಾವು ನಿಮಗೆ ಈಗ ಹೇಳುವ ದೇವತೆಗಳು ಕೊಂಚ ವಿಭಿನ್ನ. ಹೌದು.. ಭಾರತದಲ್ಲಿ ಒಂದು, ಮೂರು, ಮೈತುಂಬಾ ಸ್ತನಗಳಿರುವ ಹೆಣ್ಣು ದೇವತೆಗಳನ್ನು ಆರಾಧಿಸಲಾಗುತ್ತದೆ. ಹಾಗಾದರೆ ಈ ದೇವತೆಗಳು ಯಾರು? ಎಂದು ತಿಳಿಯೋಣ.
ಮಧುರೈ ಮೀನಾಕ್ಷಿ ದೇವಸ್ಥಾನ:
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಸ್ಥಾನಗಳಲ್ಲಿ ಮಧುರೈ ಮೀನಾಕ್ಷಿ ದೇವಸ್ಥಾನ ಒಂದು. ಐತಿಹಾಸಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದಲೂ ಇದು ಅತ್ಯಂತ ಮಹತ್ವದ ದೇವ ಸನ್ನಿಧಿ. ಇಲ್ಲಿನ ಭವ್ಯತೆ, ವಾಸ್ತು ವೈಭವ ಎಲ್ಲರನ್ನೂ ಆಕರ್ಷಿಸುತ್ತದೆ. ಅಲ್ಲದೆ ಭಾರತದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಮಹತ್ವಪೂರ್ಣ ದೇಗುಲದ ಬಗೆಗಿನ ಒಂದಷ್ಟು ಕುತೂಹಲಕಾರಿ ಸಂಗತಿ ಇಲ್ಲಿದೆ.

ಮೂರು ಸ್ತನಗಳು ಇರುವ ದೇವತೆ
ಮೂರು ಸ್ತನಗಳು ಇರುವ ಹೆಣ್ಣು ದೇವತೆ ನಮ್ಮ ಭಾರತದಲ್ಲಿ ಇದೆ. ಅದುವೇ ಮಧುರೈ ಮೀನಾಕ್ಷಿ. ಇಲ್ಲಿನ ಮೀನಾಕ್ಷಿ ದೇವಸ್ಥಾನದಲ್ಲಿನ ಮೀನಾಕ್ಷಿಗೆ ಮೂರು ಸ್ತನಗಳಿವೆ. ಮಲಯಧ್ವಜ ಪಾಂಡ್ಯ ಹಾಗೂ ಆತನ ಹೆಂಡತಿ ಕಾಂಚನ ಮಲೈಗೆ ಒಬ್ಬ ಗಂಡು ಮಗು ಬೇಕಾಗಿತ್ತು. ಅದಕ್ಕಾಗಿ ಈ ದಂಪತಿ ಹೋಮ ಮಾಡಲು ಮುಂದಾದರು. ಈ ಸಮಯದಲ್ಲಿ ಹೋಮ ಕುಂಡದಿಂದ ಮೂರು ಪುಟ್ಟ ಪಟ್ಟ ಸ್ತನಗಳಿದ್ದ ಒಬ್ಬ ಬಾಲಕಿ ಆಚೆ ಬರುತ್ತಾಳೆ.
ಆಗ ಶಿವ ಮಧ್ಯಪ್ರವೇಶ ಮಾಡಿ ಹೇಳ್ತಾನೆ, ಇವಳನ್ನೇ ಗಂಡು ಮಗುವಿನಂತೆ ಬೆಳಸಿ. ಈಕೆ ಈಕೆಯ ಪತಿಯನ್ನು ಭೇಟಿ ಮಾಡಿದ ತಕ್ಷಣ ಆಕೆಗೆ ಇರುವ ಮೂರನೇ ಸ್ತನ ಬಿದ್ದು ಹೋಗುತ್ತದೆ ಎಂದು ಹೇಳುತ್ತಾನೆ. ನಂತರ ಈಕೆ ಬೆಳೆದು ದೊಡ್ಡವಳಾಗುತ್ತಾಳೆ. ಮಧುರೈನ ರಾಜಕುಮಾರಿಯಾಗಿ ಪ್ರಜೆಗಳನ್ನು ಕಾಪಾಡುತ್ತಾ, ಧೈರ್ಯಕ್ಕೆ ಮತ್ತೊಂದು ಹೆಸರಾಗಿ ಬೆಳೆಯುತ್ತಾಳೆ. ಹೀಗೆ ಈಕೆ ಒಮ್ಮೆ ಶಿವನ ಸೈನ್ಯವನ್ನೇ ಸೋಲಿಸಿಬಿಡುತ್ತಾಳೆ. ನಂತರ ಶಿವನನ್ನು ನೇರವಾಗಿ ಭೇಟಿ ಮಾಡುತ್ತಾಳೆ. ಆತನೇ ಈಕೆಯನ್ನು ವರಿಸುತ್ತಾನೆ.

ಶಿವನೇ ಮೀನಾಕ್ಷಿಯನ್ನು ಮದುವೆಯಾಗುತ್ತಾನೆ. ಮೀನಾಕ್ಷಿಯ ಸಹೋದರನಾಗಿ ಸಾಕ್ಷಾತ್ ವಿಷ್ಣು ಇದ್ದು ಕನ್ಯಾದಾನ ಮಾಡಿ ಕೊಡುತ್ತಾನೆ. ಮೂರು ಸ್ತನಗಳು ಇರುವ ಮಧುರೈ ಮೀನಾಕ್ಷಿಯ ಕಥೆ ಇದಾದರೆ, ಮೈತುಂಬಾ ಸ್ತನಗಳು ಇರುವ ಮತ್ತೊಬ್ಬ ದೇವತೆ ಹಾಗೂ ಒಂದೇ ಒಂದು ಸ್ತನ ಇರುವ ದೇವತೆ ಈ ಇಬ್ಬರ ಬಗ್ಗೆ ತಿಳಿಯೋಣ.
ಮೈತುಂಬಾ ಸ್ತನಗಳು ಇರುವ ದೇವತೆ
ಮೂರು ಸ್ತನವಿರುವ ಮಧುರೈ ಮೀನಾಕ್ಷಿ ಆದರೆ, ಮೈತುಂಬಾ ಸ್ತನಗಳು ಇರುವ ದೇವತೆ ಅಂದರೆ ರೋಮನ್ ಗಾರ್ಡ್. ಈಕೆಯ ಹೆಸರು ಡಯಾನಾ ಆಫ್ ಎಫೆಸಸ್ (Diana Of Ephesus). ಈಕೆಗೆ ಮೈತುಂಬ ಸ್ತನಗಳು ಇವೆ. ಈಕೆಯ ಕೈಯಲ್ಲಿ ಒಂದು ಬಿಲ್ಲು ಬಾಣ ಕೂಡ ಇರುತ್ತದೆ.
ಈಕೆಯನ್ನು ಮಗುವಿನ ಜನ್ಮ ಕೊಡುವ ತಾಯಂದಿರನ್ನು ಕಾಪಾಡುವ ಸಲುವಾಗಿ ಪೂಜಿಸಲಾಗುತ್ತದೆ. ಇನ್ನೂ ಈಕೆಯ ಮೈತುಂಬಾ ಸ್ತನಗಳು ಇರುವುದು ಫಲವತ್ತತೆಯನ್ನು ಸೂಚಿಸುತ್ತದೆ. ಮಕ್ಕಳು ಬೇಕು ಅನ್ನೋರು ಈಕೆಯನ್ನು ಆರಾಧನೆ ಮಾಡುತ್ತಾರೆ. ಫಲವತ್ತತೆ, ಗರ್ಭಾವಸ್ಥೆ, ಈ ಸಮಯದಲ್ಲಿನ ಸಮಸ್ಯೆಗಳನ್ನು ದೂರ ಮಾಡಲು ಸಹ ಈ ದೇವಿಯನ್ನು ಪೂಜೆ ಮಾಡುತ್ತಾರೆ.
ಒಂದೇ ಸ್ತನವಿರುವ ದೇವತೆ
ಇನ್ನೂ ಒಂದೇ ಸ್ತನವಿರುವ ದೇವತೆ ಯಾರು ಅಂತ ಗೊತ್ತಾ? ಅದುವೇ ಏಕಜಟಿ (Ekajati). ಈಕೆಯನ್ನು ಮಂತ್ರಗಳ ರಕ್ಷಕ (protector of Mantras) ಎಂದು ಕೂಡ ಕರೆಯಲಾಗುತ್ತದೆ. ಭೌದ್ಧ ಮತದ ಅತೀ ಶಕ್ತಿ ಶಾಲಿ ದೇವತೆ ಈಕೆ. ಒಂದೇ ಒಂದು ಗಂಟು ಅಂದರೆ ಜಟಿ ಅಂದರೆ ಜಡೆಯನ್ನು ಹಾಕಿರುವವಳು ಏಕಜಟಿ ಎಂದು ಕರೆಯಲಾಗುತ್ತದೆ.
ಈಕೆಗೆ ಇರುವುದು ಕೂಡ ಒಂದೇ ಕಣ್ಣು. ಅದು ಕೂಡ ಹಣೆಯ ಮೇಲೆ. ಈಕೆಯ ಮತ್ತೊಂದು ಕಣ್ಣನ್ನು ಈಕೆಯ ಗುರುವಾಗಿದ್ದ ಪದ್ಮಸಾಂಭವ (padmasambhava) ಇತ್ತಿದ್ದರು ಎಂಬ ನಂಬಿಕೆ ಇದೆ. ಉಗ್ರ ಸ್ವರೂಪಿ ಈಕೆ, ಉಗ್ರ ತಾರಾ ಎಂದು ಕೂಡ ಈಕೆಯನ್ನು ಕರೆಯಲಾಗುತ್ತದೆ. ಹೀಗಾಗಿ ಹುಲಿಯ ಚರ್ಮವನ್ನು ಧರಿಸಿರುತ್ತಾಳೆ ಏಕಜಟಿ. ಹೀಗೆ ಒಂದು, ಮೂರು, ಮೈತುಂಬಾ ಸ್ತನಗಳಿರುವ ಹೆಣ್ಣು ದೇವತೆಗಳನ್ನು ವಿವಿಧ ಬೇಡಿಕೆಗಳನ್ನು ಈಡೇರಿಸಲು ಪೂಜಿಸಲಾಗುತ್ತದೆ.











Click it and Unblock the Notifications