ಖಾಲಿ ಹೊಟ್ಟೆಯಲ್ಲಿ ರಕ್ತ ಪರೀಕ್ಷೆ Vs ಊಟದ ನಂತರದ ರಕ್ತ ಪರೀಕ್ಷೆ: ಮಧುಮೇಹಕ್ಕೆ ಯಾವುದು ಬೆಸ್ಟ್?

ಶುಗರ್ ಬಂದಿರೋ ಲಕ್ಷಣಗಳು ಕಾಣಿಸುತ್ತಿದೆ ಎಂದ ಕೂಡಲೇ ಮೊದಲು ಖಾಲಿ ಹೊಟ್ಟೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಎಂಬ ಸಲಹೆ ಬರುತ್ತೆ. ಜೊತೆಗೆ ಊಟದ ನಂತರವೂ ಪರೀಕ್ಷೆ ಮಾಡಿಸಬೇಕು. ಶುಗರ್ ಬಂದಿದ್ಯಾ? ಬಂದಿದ್ದರೆ ಯಾವ ಸ್ಟೇಜಲ್ಲಿದೆ ಎಂದು ಕಂಡು ಹಿಡಿಯಲು ಯಾವ ಪರೀಕ್ಷೆಯ ಫಲಿತಾಂಶವನ್ನು ಕನ್ಸಿಡರ್ ಮಾಡಬೇಕು ಅನ್ನೋದು ಶ್ರೀ ಸಾಮಾನ್ಯನಿಗೆ ಗೊಂದಲ ಇರುತ್ತೆ.

Fasting Blood Sugar vs Post-Meal Blood Sugar Which One Matters More for Diabetic patints

ಇದಕ್ಕೆ ಉತ್ತರ ಸಿಂಪಲ್, ಎರಡೂ ಪರೀಕ್ಷೆಗಳು ಮಧುಮೇಹ ಕಂಡು ಹಿಡಿಯಲು ಅತ್ಯಗತ್ಯ. ಪ್ರತಿಯೊಬ್ಬರ ದೇಹವೂ ಗ್ಲೋಕೋಸ್ ಅನ್ನು ಹೇಗೆ ನಿರ್ವಹಿಸುತ್ತಿದೆ ಎನ್ನೋದನ್ನು ಅರಿಯುವುದು ಮುಖ್ಯ. ಈ ಎರಡು ರೀತಿಯ ಪರೀಕ್ಷೆಗಳಿಂದ ಅದನ್ನು ಅರ್ಥ ಮಾಡಿಕೊಳ್ಳೋದು ಸುಲಭ. ಈ ಪರೀಕ್ಷೆಗಳಿಂದಲೇ ವೈದ್ಯರಿಗೆ ಶುಗರ್ ಕಂಟ್ರೋಲ್ ಬಗ್ಗೆ ಸ್ಪಷ್ಟ ನಿಲುವು ತಾಳಲು ಸಾಧ್ಯ. ಅಗತ್ಯ ಚಿಕಿತ್ಸೆ, ದೀರ್ಘಕಾಲಿನ ಪರಿಣಾಮಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲು ಈ ಎರಡೂ ಪರೀಕ್ಷೆಗಳು ಅತ್ಯಗತ್ಯ.

'ಜ್ಞಾನ್ ಬೈ ಗಣೇಶ್ - ಮೇಕಿಂಗ್ ಇಂಡಿಯಾ ವಿನ್ ಓವರ್ ಡಯಾಬಿಟಿಸ್' ಎಂಬುದು ಸನ್ ಫಾರ್ಮಾ ಸಂಸ್ಥೆ ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಜೊತೆಗೂಡಿ ನಡೆಸುತ್ತಿರುವ ಒಂದು ಜಾಗೃತಿ ಅಭಿಯಾನ. ತಜ್ಞರ ಆಧಾರಿತ ಮಾಹಿತಿ ಮೇರೆಗೆ ಮಧುಮೇಹವನ್ನು ಭಾರತೀಯರು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು, ತಡೆಗಟ್ಟಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಖಾಲಿ ಹೊಟ್ಟೆಯಲ್ಲಿ ರಕ್ತ ಪರೀಕ್ಷೆ ಮಾಡೋದು ಹೇಗೆ? (Fasting Blood Sugar)

ಸುಮಾರು 8-10 ಗಂಟೆಗಳ ಕಾಲ ಏನನ್ನೂ ತಿನ್ನದೇ, ಸಾಮಾನ್ಯವಾಗಿ ಬೆಳಗ್ಗೆ ತಿಂಡಿ ತಿನ್ನುವ ಮೊದಲು ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಅಳೆಯಲು ರಕ್ತ ಮಾದರಿಯನ್ನು ಪರೀಕ್ಷೆಗೆ ಕೊಡಬೇಕು. ಖಾಲಿ ಹೊಟ್ಟೆಯಲ್ಲಿರುವಾಗ ಯಕೃತ್ (Liver), ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಹೇಗೆ ನಿಯಂತ್ರಿಸಬಲ್ಲದು ಎಂಬುದನ್ನು ಕಂಡು ಹಿಡಿಯಲು ಖಾಲಿ ಹೊಟ್ಟೇಲಿ ಶುಗರ್ ಲೆವೆಲ್ ಪರೀಕ್ಷೆ ಮಾಡಿಸೋದು ಅತ್ಯಗತ್ಯ.

Fasting Blood Sugar ಲೆವೆಲ್ ಎಷ್ಟಿದ್ದರೆ ಓಕೆ?:

100 mg/dL ಗಿಂತ ಕಡಿಮೆ - ಸಾಮಾನ್ಯ (Normal)
100-125 mg/dL - ಪ್ರಿಡಯಾಬಿಟಿಸ್ (Prediabetes)
126 mg/dL ಅಥವಾ ಅದಕ್ಕಿಂತ ಹೆಚ್ಚು (ಎರಡು ಪ್ರತ್ಯೇಕ ಪರೀಕ್ಷೆಗಳಲ್ಲಿ) - ಮಧುಮೇಹ (Diabetes) ಇರುವುದು ದೃಢ.
ಖಾಲಿ ಹೊಟ್ಟೆಯಲ್ಲಿರುವ ಸಕ್ಕರೆ ಪ್ರಮಾಣ ನಿರಂತರವಾಗಿ ಹೆಚ್ಚಿದ್ದರೆ, ಅದು ಇನ್ಸುಲಿನ್ ನಿರೋಧಕತೆ (insulin resistance) ಅಥವಾ ರಾತ್ರಿ ವೇಳೆ ಗ್ಲುಕೋಸ್ ನಿಯಂತ್ರಣದಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ.

Post-Meal Blood Sugar ಎಂದರೇನು?

ಊಟದ ನಂತರದ ರಕ್ತದ ಸಕ್ಕರೆಯನ್ನು (PPBS) ಊಟವಾದ 2 ಗಂಟೆಗಳ ಬಳಿಕ ಪರೀಕ್ಷಿಸಿಕೊಳ್ಳಬೇಕು. ಆಹಾರ ತಿಂದ ನಂತರ ರಕ್ತದಲ್ಲಿ ಹೆಚ್ಚುವ ಸಕ್ಕರೆ ಮಟ್ಟವನ್ನು ನಿಮ್ಮ ದೇಹವು ಎಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ ಎಂಬುದನ್ನು ಈ ಪರೀಕ್ಷೆ ದೃಢಪಡಿಸುತ್ತದೆ.
ಮಧುಮೇಹವಿರುವ ಹೆಚ್ಚಿನ ವಯಸ್ಕರಿಗೆ, ಆಹಾರ ಸೇವಿಸಿದ ನಂತರ 2 ಗಂಟೆ ನಂತರದ ರಕ್ತದ ಸಕ್ಕರೆ ಪ್ರಮಾಣ 180 mg/dL ಗಿಂತ ಕಡಿಮೆ ಇದ್ದರೆ ಒಳ್ಳೇದು, ಎನ್ನುತ್ತಾರೆ ತಜ್ಞರು. ಆದರೂ ನಿಮ್ಮ ವೈದ್ಯರು ನಿಮಗೆ ಸೂಕ್ತವಾಗುವಂತೆ ರಕ್ತದಲ್ಲಿ ಸಕ್ಕರೆ ಅಂಶ ಎಷ್ಟಿರಬೇಕೆಂಬುದನ್ನು ತಿಳಿಸುತ್ತಾರೆ. ಊಟದ ನಂತರದ ಸಕ್ಕರೆ ಪ್ರಮಾಣ ಹೆಚ್ಚಿದ್ದರೆ, ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಿ, ಇನ್ಸುಲಿನ್‌ ಅಥವಾ ಔಷಧಿಗಳನ್ನು ಬದಲಾಯಿಸಬೇಕಾಗಬಹುದು.

ಯಾವ ಪರೀಕ್ಷೆ ಹೆಚ್ಚು ಮುಖ್ಯ?

ಈ ಎರಡು ಪರೀಕ್ಷೆಗಳಲ್ಲೂ ಯಾವುದೂ ಒಂದಕ್ಕಿಂತ ಇನ್ನೊಂದು ಹೆಚ್ಚಲ್ಲ. ಕಮ್ಮಿಯೂ ಅಲ್ಲ. ಒಂದಕ್ಕೊಂದು ಪೂರಕ. ಉಪವಾಸದ ರಕ್ತದ ಸಕ್ಕರೆ ನಿಮ್ಮ ದೇಹದ ಮೂಲ ಗ್ಲುಕೋಸ್ ನಿಯಂತ್ರಣವನ್ನು ತೋರಿಸಿದರೆ, ಊಟದ ನಂತರದ ರಕ್ತದ ಸಕ್ಕರೆ ನಿಮ್ಮ ದೇಹವು ಆಹಾರಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಕೆಲವರಿಗೆ ಉಪವಾಸದ ಸಕ್ಕರೆ ಮಟ್ಟ ನಾರ್ಮಲ್ ಆಗಿದ್ದರೂ, ಊಟದ ನಂತರದ ಮಟ್ಟ ಹೆಚ್ಚೇ ಇರಬಹುದು. ಇದು ಹೃದಯ ಕಾಯಿಲೆ, ನರಗಳ ಹಾನಿ, ಮೂತ್ರಪಿಂಡದ ಕಾಯಿಲೆ ಮತ್ತು ಕಣ್ಣಿನ ತೊಂದರೆಗಳ ಅಪಾಯ ಹೆಚ್ಚಿಸುತ್ತದೆ. ಅದೇ ರೀತಿ, ಊಟದ ನಂತರ ರಕ್ತ ರೀಕ್ಷೆಯಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದ್ದರೂ, ಉಪವಾಸದಲ್ಲಿ ಮಾಡಿಸಿದ ರಕ್ತ ಪರೀಕ್ಷೆಯಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ, ಚಿಕಿತ್ಸೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡೋದು ಅನಿವಾರ್ಯ.

"ಉಪವಾಸ ಮತ್ತು ಊಟದ ನಂತರದ ರಕ್ತದ ಸಕ್ಕರೆ ಪರೀಕ್ಷೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಫಾಸ್ಟಿಂಗ್ ಗ್ಲುಕೋಸ್ ನಮಗೆ ದೇಹದ ಮೂಲ ಸಕ್ಕರೆಯ ನಿಯಂತ್ರಣದ ಬಗ್ಗೆ ತಿಳಿಸಿದರೆ, ಊಟದ ನಂತರದ ಗ್ಲುಕೋಸ್ ಆಹಾರ ತಿಂದ ನಂತರ ಹೆಚ್ಚಾಗುವ ರಕ್ತದ ಸಕ್ಕರೆಯನ್ನು ಇನ್ಸುಲಿನ್ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕೇವಲ ಒಂದು ರೀಡಿಂಗ್ ಮೇಲೆ ಮಾತ್ರ ಗಮನ ಹರಿಸುವುದರಿಂದ ಪ್ರಮುಖ ಏರಿಳಿತಗಳನ್ನು ತಪ್ಪಿಸಬಹುದು. ಮಧುಮೇಹವನ್ನು ಸಮರ್ಥವಾಗಿ ನಿಯಂತ್ರಿಸಿ, ನಿರ್ವಹಿಸಲು ರೋಗಿಗಳು ತಮ್ಮ ವೈದ್ಯರ ಸಲಹೆಯಂತೆ ಎರಡನ್ನೂ ಮೇಲ್ವಿಚಾರಣೆ ಮಾಡುತ್ತಿರಬೇಕು. ಅಲ್ಲದೇ ಎರಡರಿಂದ ಮೂರು ತಿಂಗಳ ಹಿಂದಿನ ರಕ್ತದ ಸಕ್ಕರೆ ಪ್ರಮಾಣದ ಸರಾಸರಿ ಚಿತ್ರಣ ನೀಡುವ HbA1c ಪರೀಕ್ಷೆಯನ್ನೂ ಆಗಾಗ ಮಾಡಿಸುತ್ತಿದ್ದರೆ ಸೇಫ್.
Dr. Samarth Somnath, Consultant Diabetologist and Physician, Hassan, Karnataka

Fasting Blood Sugar vs Post-Meal Blood Sugar Which One Matters More for Diabetic patints

ಶುಗರ್ ಲೆವೆಲ್ ನಾರ್ಮಲ್ ಆಗಿರುವಂತೆ ನೋಡಿಕೊಳ್ಳೋದು ಹೇಗೆ?:

- ಪೋಷಕಾಂಶಯುಕ್ತ ಪ್ರೋಟೀನ್ ಮತ್ತು ನಾರಿನಂಶವಿರುವ (fibre) ಸಮತೋಲಿತ ಆಹಾರ ಸೇವಿಸಿ.
- ಹೊಟ್ಟೆ ತುಂಬಾ ತಿನ್ನಬೇಡಿ, ಸಕ್ಕರೆಯುಕ್ತ ಪಾನೀಯ ತ್ಯಜಿಸಿ.
- ದೈಹಿಕವಾಗಿ ಸಕ್ರಿಯವಾಗಿರಿ, ಅದರಲ್ಲಿಯೂ ಊಟದ ನಂತರ ನಡೆಯುವುದು ತಪ್ಪಿಸಬೇಡಿ.
- ಮಧುಮೇಹದ ಔಷಧಿಗಳನ್ನು ವೈದ್ಯರ ಸಲಹೆಯಂತೆಯೇ ತಪ್ಪದೇ ತೆಗೆದುಕೊಳ್ಳಿ.
- ರಕ್ತದ ಸಕ್ಕರೆಯನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ನಿಮ್ಮ ವೈದ್ಯರ ಸಲಹೆ ಪಡೆಯುತ್ತಿರಿ.
ದೀರ್ಘಕಾಲೀನ ಗ್ಲುಕೋಸ್ ನಿಯಂತ್ರಣವನ್ನು ಮೌಲ್ಯಮಾಪನ ಮಾಡಲು ಪ್ರತಿ 3-6 ತಿಂಗಳಿಗೊಮ್ಮೆ ನಿಮ್ಮ HbA1c ಪರೀಕ್ಷೆ ಮಾಡಿಸಿಕೊಳ್ಳಿ.

ಮಧುಮೇಹವನ್ನು ನಿರ್ವಹಿಸುವುದು ಎಂದರೆ ಉಪವಾಸದ ಮತ್ತು ಊಟದ ನಂತರದ ರಕ್ತದ ಸಕ್ಕರೆ ನಡುವೆ ಒಂದನ್ನು ಆಯ್ಕೆ ಮಾಡುವುದಲ್ಲ-ಎರಡೂ ನಿಮ್ಮ ಆರೋಗ್ಯ ಒಳನೋಟವನ್ನು ನೀಡುತ್ತದೆ. ನಿಯಮಿತ ತಪಾಸಣೆ, ಆರೋಗ್ಯಕರ ಜೀವನಶೈಲಿ ಮತ್ತು ಸಮಯಕ್ಕೆ ಸರಿಯಾದ ವೈದ್ಯಕೀಯ ನೆರವು ಅನಾರೋಗ್ಯ ತೊಂದರೆಗಳನ್ನು ತಡೆಗಟ್ಟಲು ಮತ್ತು ರಕ್ತದ ಸಕ್ಕರೆ ಪ್ರಮಾಣ ಉತ್ತಮವಾಗಿ ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ.

SPI-IN-CVD-ZT---08-20260331

Disclaimer: ಈ ಮಾಹಿತಿ ಕೇವಲ ರೋಗಿಗಳ ಶಿಕ್ಷಣ/ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯರ ಅಥವಾ ವೈದ್ಯಕೀಯ ವೃತ್ತಿಪರರ ಸಲಹೆಗೆ ಪರ್ಯಾಯವಲ್ಲ. ಸನ್ ಫಾರ್ಮಾಸಿಟಿಕಲ್ಸ್ ಲ್ಯಾಬೊರೇಟರೀಸ್ ಲಿಮಿಟೆಡ್ (SPLL) ನಿಖರ ಮತ್ತು ಸಮಯೋಚಿತ ಮಾಹಿತಿ ಒದಗಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತದೆ. ಆದರೆ ಈ ವಿಷಯದಲ್ಲಿ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ನೀವು ನಿಮ್ಮ ವೈದ್ಯರು ಅಥವಾ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಮಾತ್ರ ನಂಬಬೇಕು. ಸನ್ ಫಾರ್ಮಾಸಿಟಿಕಲ್ಸ್ ಲ್ಯಾಬೊರೇಟರೀಸ್ ಲಿಮಿಟೆಡ್ (SPLL) ಪೂರ್ವ ಅನುಮತಿಯಿಲ್ಲದೆ ಇದರ ಯಾವುದೇ ಭಾಗವನ್ನು ಯಾಂತ್ರಿಕವಾಗಿ ಅಥವಾ ಎಲೆಕ್ಟ್ರಾನಿಕ್ ಆಗಿ ಪುನರುತ್ಪಾದಿಸಲು, ರವಾನಿಸಲು ಅಥವಾ ಸಂಗ್ರಹಿಸಲು ಅವಕಾಶ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+