ಮದ್ಯ ಸೇವಿಸುವವರು ಈ 5 ಆಹಾರಗಳನ್ನು ತಿನ್ನುವ ಮುನ್ನ ಎಚ್ಚರ
ಇತ್ತೀಚಿನ ದಿನಗಳಲ್ಲಿ ಹಬ್ಬ, ಸಂಭ್ರಮ ಹಾಗೂ ಸ್ನೇಹಿತರ ಜೊತೆಗಿನ ಪಾರ್ಟಿಗಳಲ್ಲಿ ಮದ್ಯ ಸೇವನೆ ಸಾಮಾನ್ಯ ಆಗಿದೆ. ಆದರೆ ಈ ತರಹದ ಪಾರ್ಟಿಗಳಲ್ಲಿ ಮದ್ಯ ಸೇವಿಸುವಾಗ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು, ಯಾವ ಆಹಾರ ಸೇವಿಸಬೇಕು, ಯಾವ ಆಹಾರ ಸೇವಿಸಬಾರದು ಎಂಬುದು ಯಾರು ಗಮನಿಸುವುದಿಲ್ಲ. ಮದ್ಯ ಸೇವಿಸುವಾಗ ಅದರ ಜೊತೆ ತಪ್ಪಾದ ಆಹಾರವನ್ನು ಸೇವಿಸಿದರೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮದ್ಯ ಸೇವಿಸುವಾಗ ತಿನ್ನಬಾರದ ಆಹಾರಗಳು ಈ ರೀತಿ ಇವೆ
ಚಾಕ್ಲೆಟ್ ತಿನ್ನಬೇಡಿ
ಮದ್ಯ ಸೇವನೆ ಮಾಡುವಾಗ ಜೊತೆಗೆ ಚಾಕ್ಲೆಟ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ಚಾಕ್ಲೆಟ್‌ನಲ್ಲಿ ಇರುವ ಕ್ಯಾಪಿನ್ ಸೇವಿಸುತ್ತಿರುವ ಮದ್ಯದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಚಾಕ್ಲೆಟ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಪಿಜ್ಜಾ ಜೊತೆ ಮದ್ಯ ಸೇವನೆ ಬೇಡ
ಹಲವರು ಮದ್ಯ ಸೇವನೆ ಮಾಡುತ್ತಾ ಪಿಜ್ಜಾ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪಿಜ್ಜಾದಲ್ಲಿರುವ ಉಪ್ಪು ಮತ್ತು ಕೊಬ್ಬು ದೇಹದಲ್ಲಿ ಡಿಹೈಡ್ರೇಷನ್ ಹೆಚ್ಚಿಸುತ್ತದೆ. ಇದರಿಂದ ವಾಂತಿ, ಅಸ್ವಸ್ಥತೆ ಉಂಟಾಗಬಹುದು. ಜೊತೆಗೆ ಅಜೀರ್ಣ ಮತ್ತು ಅಸಿಡಿಟಿ ಸಮಸ್ಯೆಯೂ ಹೆಚ್ಚಾಗುತ್ತದೆ.
ಮಸಾಲೆ ಪದಾರ್ಥದ ಹಾಗೂ ಕಾರವಾದ ತಿಂಡಿಗಳು
ಖಾರ ಸೇವ್, ಚಿಪ್ಸ್ ಅಥವಾ ಕಾರದ ತಿಂಡಿಗಳನ್ನು ಮದ್ಯದ ಜೊತೆ ಸೇವಿಸುವುದು ಸಾಮಾನ್ಯ. ಆದರೆ ಇವು ಹೊಟ್ಟೆಯ ಜೀರ್ಣಕ್ರಿಯೆಯನ್ನು ಹಾಳುಮಾಡುತ್ತವೆ. ಮದ್ಯವೇ ಈಗಾಗಲೇ ಹೊಟ್ಟೆಯಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತಿರುವಾಗ ಜೊತೆಗೆ ಇವುಗಳನ್ನು ಸೇವಿಸಿದರೆ ಹೊಟ್ಟೆ ಕೆಡುವ ಸಾಧ್ಯತೆ ಇರುತ್ತದೆ. ಇದರ ಜೊತೆ ಕಾರದ ಆಹಾರ ಸೇರಿಸಿದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ, ಇದರಿಂದ ಬೇಗ ಮದ್ಯದ ಪರಿಣಾಮ ಜಾಸ್ತಿ ಆಗುತ್ತದೆ.
ರಾಜ್ಮಾ ಜೊತೆ ರೆಡ್ ವೈನ್ ಬೇಡ
ಕೆಲವರು ರೆಡ್ ವೈನ್ ಜೊತೆ ಕಡಲೆಕಾಳು ಅಥವಾ ರಾಜ್ಮಾ ತಿನ್ನುತ್ತಾರೆ. ಆದರೆ ರೆಡ್ ವೈನ್‌ನಲ್ಲಿ ಇರುವ ಟ್ಯಾನಿನ್ ದೇಹದಲ್ಲಿ ಐರನ್ ಶೋಷಣೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು.
ಬ್ರೆಡ್ ಜೊತೆ ಬಿಯರ್ ಕುಡಿಯಬೇಡಿ
ಬ್ರೆಡ್ ಮತ್ತು ಬಿಯರ್ ಎರಡಲ್ಲಿಯೂ ಈಸ್ಟ್((Yeast) ) ಹೆಚ್ಚು ಇರುತ್ತದೆ. ಇವುಗಳನ್ನು ಒಂದೇ ಸಮಯದಲ್ಲಿ ಸೇವಿಸಿದರೆ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಗಳು ಉಂಟಾಗಬಹುದು. ಕೆಲವೊಮ್ಮೆ ಫಂಗಲ್ ಇನ್ಫೆಕ್ಷನ್ ಕೂಡ ಕಾಣಿಸಿಕೊಳ್ಳಬಹುದು.














Click it and Unblock the Notifications