Get Updates
Get notified of breaking news, exclusive insights, and must-see stories!

ಅಪ್ಪಿ ತಪ್ಪಿಯೋ ಮನೆಯಲ್ಲಿರುವ ಈ ಐದು ವಸ್ತು ಕೊಡಬೇಡಿ... ಕೊಟ್ಟರೆ ಭಯಂಕರ ಬಡತನ ಬರುತ್ತೆ!

ಮನೆಯಲ್ಲಿ ಇರುವ ಈ ಐದು ವಸ್ತುಗಳನ್ನು ಯಾವತ್ತಿಗೂ ಕೊಡಬಾರದು. ಈ ಐದು ವಸ್ತುಗಳಲ್ಲಿ ಒಂದು ವಸ್ತುವನ್ನು ನೀಡಿದರೆ ಭಯಂಕರ ಬಡತನ ಬರುತ್ತದೆ. ಹೌದು.. ಲಕ್ಷ್ಮೀ ದೇವಿಯ ಪ್ರಾಚೀನ ಕಥೆಯ ಪ್ರಕಾರ, ಮನೆಯಲ್ಲಿರುವ ಸ್ತ್ರೀ ಮನೆಯಲ್ಲಿರುವ ಈ ಒಂದು ವಸ್ತುವನ್ನು ಆಚಾರವಂತರಿಗೆ ಕೊಡಬಾರದು.

ಹೆಣ್ಣುಮಕ್ಕಳು ಈ ವಸ್ತುಗಳನ್ನು ನೀಡಿದರೆ ತಾಯಿ ಲಕ್ಷ್ಮೀ ದೇವಿ ಅವರ ಮನೆಯನ್ನು ಬಿಟ್ಟು ಹೋಗುತ್ತಾಳೆ. ಹಾಗಾದರೆ ಹೆಣ್ಣುಮಕ್ಕಳು ನೀಡಬಾರದ ಮನೆಯಲ್ಲಿರುವ ಆ ವಸ್ತುಗಳು ಯಾವುವು? ಆ ವಸ್ತುಗಳನ್ನು ಯಾಕೆ ಬೇರೆಯವರಿಗೆ ಕೊಡಬಾರದು ಎಂದು ಒಂದು ಸಣ್ಣ ಕಥೆಯ ಮೂಲಕ ತಿಳಿಯೋಣ.

Don t give these five things in the house to anyone If you give you will get terrible

ರೊಟ್ಟಿ ಮಾಡುವ ಮಣೆ ಹಾಗೂ ತವೆ

ರೊಟ್ಟಿ ಮಾಡುವ ಮಣೆ ಹಾಗೂ ತವೆಯನ್ನು ಹೆಣ್ಣುಮಕ್ಕಳು ಬೇರೆಯವರಿಗೆ ನೀಡಬಾರದು. ಈ ವಸ್ತುಗಳನ್ನು ನೀಡುವುದರಿಂದ ಲಕ್ಷ್ಮೀ ದೇವಿ ಮನೆಯನ್ನು ತೊರೆಯುತ್ತಾಳೆ. ಇದರಿಂದ ಮನೆಯಲ್ಲಿನ ಸಂಪತ್ತು ನಾಶವಾಗುತ್ತದೆ. ಹಣ ಕಳೆದುಹೋಗಿ ಬಡತನ ಮನೆ ಮಾಡುತ್ತದೆ. ಹೀಗಾಗಿ ಮನೆಯಲ್ಲಿನ ಈ ವಸ್ತುವನ್ನು ಅಪ್ಪಿ ತಪ್ಪಿಯೂ ದಾನ ಮಾಡಬಾರದು.

ಅಡುಗೆ ಮನೆಯಲ್ಲಿ ಈ ವಸ್ತುಗಳ ಪಾವಿತ್ರತೆ ಇರಬೇಕು. ಇದೇ ವಸ್ತುಗಳ ಮೂಲಕ ಭಗವಂತನಾದ ವಿಷ್ಣುವಿಗೆ ಪ್ರಸಾದವನ್ನು ತಯಾರಿಸಲಾಗುತ್ತದೆ. ಜೊತೆಗೆ ಮನೆಯಲ್ಲಿ ಸಿದ್ಧವಾದ ಮೊದಲ ರೊಟ್ಟಿಯನ್ನು ಹಸುವಿಗೆ ನೀಡಲಾಗುತ್ತದೆ. ಹಾಗಾಗಿ ಯಾವತ್ತಿಗೂ ಬೇರೆಯವರಿಗೆ ಈ ವಸ್ತುವನ್ನು ನೀಡಬಾರದು. ಇವುಗಳನ್ನು ಶುದ್ಧವಾಗಿಡಬೇಕು. ಇವುಗಳನ್ನು ಬೇರೆಯವರಿಗೆ ಕೊಟ್ಟಾಗ ಇವು ಅಪವಿತ್ರವಾಗಬಹುದು. ನಂತರ ಇವುಗಳ ಬಳಕೆಯಿಂದ ಅಶುಭ ಫಲಗಳು ಸಿಗುತ್ತವೆ.

Don t give these five things in the house to anyone If you give you will get terrible

ಪೊರಕೆ

ಪೊರಕೆ ಲಕ್ಷ್ಮೀದೇವಿಯ ವಾಸಸ್ಥಾನ ಎಂದು ಹೇಳಲಾಗುತ್ತದೆ. ಅಲ್ಲದೆ ಇದನ್ನು ಲಕ್ಷ್ಮೀದೇವಿಗೆ ಪ್ರಿಯವಾದ ವಸ್ತು ಎನ್ನಲಾಗುತ್ತದೆ. ಇದನ್ನು ಮನೆಯಲ್ಲಿ ಸ್ವಚ್ಚವಾಗಿ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಇದನ್ನು ಬೇರೆಯವರಿಗೆ ನೀಡಿದರೆ ಲಕ್ಷ್ಮೀದೇವಿ ಮನೆ ಬಿಟ್ಟು ಹೋಗುತ್ತಾಳೆ. ಅಲ್ಲದೆ ಇದಕ್ಕೆ ಹೊರಗಿನವರ ದೃಷ್ಟಿ ಬೀಳಬಾರದು, ಕಾಲುಗಳ ಸ್ಪರ್ಶ ಕೂಡ ಆಗಬಾರದು. ಜೊತೆಗೆ ಪೊರಕೆಯಿಂದ ಹೊಲಸಾಗಿರುವ ವಸ್ತುಗಳನ್ನು ಸ್ವಚ್ಚಗೊಳಿಸಬಾರದು.

Don t give these five things in the house to anyone If you give you will get terrible

ಆಭರಣಗಳು

ಒಬ್ಬ ಸ್ತ್ರೀ ಮನೆಯಲ್ಲಿರುವ ಆಭರಣಗಳನ್ನು ಯಾರಿಗೂ ಕೂಡ ಕೊಡಬಾರದು. ಯಾಕೆಂದರೆ ಲಕ್ಷ್ಮೀದೇವಿ ಆಭರಣಗಳಲ್ಲೂ ವಾಸವಾಗಿದ್ದಾಳೆ. ಒಬ್ಬ ಮಹಿಳೆಯ 16 ಶೃಂಗಾರಗಳಲ್ಲಿ ಒಡವೆಗಳಿಗೆ ತುಂಬಾ ಮಹತ್ವವಿದೆ. ಹೀಗಾಗಿ ಒಬ್ಬ ಮದುವೆಯಾದ ಸ್ತ್ರೀ ತನ್ನ ಒಡವೆಗಳನ್ನು ದಾನವಾಗಿ ಕೊಡಬಾರದು. ಹೀಗೆ ಕೊಡುವುದರಿಂದ ಅವರ ಜೀವನದಲ್ಲಿ ಬಡತನ ಬರುತ್ತದೆ.

Don t give these five things in the house to anyone If you give you will get terrible

ಶುದ್ಧ ಬಣ್ಣದ ವಸ್ತು

ಸಂಜೆ ವೇಳೆ ಶುದ್ಧ ಬಣ್ಣದ ವಸ್ತುಗಳನ್ನು ದಾನ ಮಾಡಬಾರದು. ಅಂದರೆ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಬಾರದು. ಹಾಲು, ಅಕ್ಕಿ, ಉಪ್ಪು, ಸಕ್ಕರೆ ಹೀಗೆ ಬಿಳಿ ಬಣ್ಣದ ವಸ್ತುಗಳನ್ನು ಸಂಜೆ ಹೊತ್ತು ದಾನ ಮಾಡುವುದು ಶುಭವಲ್ಲ. ಇದರಿಂದ ಲಕ್ಷ್ಮೀ ದೇವಿ ಕೋಪಕ್ಕೆ ಗುರಿಯಾಗುವಿರಿ. ಹೀಗಾಗಿ ಇವುಗಳನ್ನು ಸಂಜೆ ವೇಳೆ ದಾನ ಮಾಡುವುದನ್ನು ತಪ್ಪಿಸಿ.

ಲಕ್ಷ್ಮೀ ದೇವಿಯ ಪ್ರಾಚೀನ ಕಥೆ:-

ಒಂದು ಸುಂದರ ನಗರದಲ್ಲಿ ಸುಖನ್ಯಾ ಎನ್ನುವ ಒಬ್ಬ ಮಹಿಳೆ ಇದ್ದಳು. ಗಂಡ, ಅತ್ತೆ, ಮಾವಾ ಎಲ್ಲರೊಂದಿಗೆ ತುಂಬು ಕುಟುಂಬದಲ್ಲಿ ಸುಖನ್ಯಾ ವಾಸವಾಗಿದ್ದಳು. ಈಕೆ ಸತ್ಯ ಧರ್ಮವನ್ನು ಪಾಲಿಸುವ ಗೃಹಿಣಿಯಾಗಿದ್ದಳು. ಈಕೆಯ ಸ್ವಾಭಾವ ಇನ್ನೊಬ್ಬರಿಗೆ ಸಹಾಯ ಮಾಡುವುದಾಗಿತ್ತು. ಮನಸ್ಸಿನಿಂದ ಸಹಾಯ ಮಾಡುತ್ತಿದ್ದಳು. ಸುಖನ್ಯಳ ಗಂಡ ಒಬ್ಬ ವ್ಯಾಪಾರಿಯಾಗಿದ್ದ. ದವಸ ಧಾನ್ಯದ ಅಂಗಡಿಯನ್ನು ಆತ ನಡೆಸುತ್ತಿದ್ದ. ತನ್ನ ಗಂಡನನ್ನು ಹೆಚ್ಚು ಪ್ರೀತಿ ಮಾಡುತ್ತಿದ್ದ್ ಸುಖನ್ಯ ಪ್ರತಿ ದಿನ ಬೆಳಗ್ಗೆ ಬೇಗ ಎದ್ದು ಮನೆ ಅಂಗಳವನ್ನು ಸ್ವಚ್ಚಗೊಳಿಸಿ, ರಂಗೋಲಿ ಹಾಕಿ ಅಂಗಳವನ್ನು ಶೃಂಗರಿಸುತ್ತಿದ್ದಳು.

ನಂತರ ಮನೆ ಸ್ವಚ್ಚಗೊಳಿಸಿ, ಸ್ನಾನ ಮಾಡಿ ತುಳಿಸಿ ಹಾಗೂ ದೇವ ದೇವತೆಗಳ ಪೂಜಿಯನ್ನು ಮಾಡಿ, ಬಳಿಕ ಅಡುಗೆ ಇತ್ಯಾದಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸುಖನ್ಯಾಳ ದಿನನಿತ್ಯದ ಕೆಲಸವಾಗಿತ್ತು. ಸುಖನ್ಯಾ ಯಾವುತ್ತೂ ಬೇರೆವರಿಗೆ ಕೆಟ್ಟದ್ದನ್ನು ಬಯಸಿದವಳಲ್ಲ. ಅವಮಾನ ಮಾಡಿದವಳಲ್ಲ. ಮನೆಯ ಮುಂದೆ ಏನಾದರು ಬೇಡ ಬಂದವರನ್ನು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಮನೆಯ ನೆರೆಹೊರೆಯವರೊಂದಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದಳು. ಎಲ್ಲರೂ ಈಕೆ ಸಾಕ್ಷಾತ್ ಲಕ್ಷ್ಮೀ ದೇವಿ ಗುಣಗಳನ್ನು ಹೊಂದಿರುವ ಮಹಿಳೆ ಎನ್ನುತ್ತಿದ್ದರು.

ಸುಖನ್ಯಾ ದಾನ ಧರ್ಮದ ವಿಚಾರ ಬಂದಾಗ ಯಾವತ್ತೂ ಕೂಡ ಹಿಂಜರಿಯುತ್ತಿರಲ್ಲಿಲ್ಲ. ಹೊಟ್ಟೆ ಹಸಿವಿನಿಂದ ಯಾರಾದರು ಬಂದರೆ ಅಂಥವರಿಗೆ ಸುಖನ್ಯ ಹೊಟ್ಟೆ ತುಂಬಾ ಊಟ ನೀಡಿ ಕಳುಹಿಸುತ್ತಿದ್ದಳು. ಮನೆಯ ನೆರೆಹೊರೆಯವರಿಗೂ ಸುಖನ್ಯಾ ಹಿಂಜರಿಕೆ ಇಲ್ಲದೆ ಸಹಾಯ ಮಾಡುತ್ತಿದ್ದಳು. ಹೀಗಾಗಿ ಅಕ್ಕಪಕ್ಕದವರೂ ಕೂಡ ಆಕೆಗೆ ಹೆಚ್ಚಿನ ಗೌರವ ನೀಡುತ್ತಿದ್ದರು.

ಹೀಗೆ ಒಂದು ದಿನ ಪಕ್ಕದ ಮನೆ ಮಹಿಳೆ ಸುಖನ್ಯಾ ಮನೆಗೆ ಬಂದು ರೊಟ್ಟಿಯ ಮಣೆ ಹಾಗೂ ತವೆಯನ್ನು ಕೇಳುತ್ತಾಳೆ. ಇದನ್ನು ಸುಖನ್ಯಾ ಆ ಮಹಿಳೆಗೆ ನೀಡುತ್ತಾಳೆ. ಮತ್ತೊಂದು ದಿನ ಪಕ್ಕದ ಮನೆ ಹೆಣ್ಣುಮಗಳು ಬಂದು ಪೊರಕೆಯನ್ನ ಬೇಡುತ್ತಾಳೆ. ಸುಖನ್ಯಾ ಅದನ್ನೂ ಕೂಡ ಸಂತೋಷದಿಂದ ನೀಡುತ್ತಾಳೆ.

ಇನ್ನೊಂದು ದಿನ ಇನ್ನೊಬ್ಬ ಮಹಿಳೆ ಬಂದು ಹಾಲನ್ನು ಬೇಡುತ್ತಾಳೆ. ದಾನದೇವಿ ಸುಖನ್ಯ ಇದನ್ನೂ ಕೂಡ ಇಲ್ಲ ಎನ್ನದೆ ನೀಡುತ್ತಾಳೆ. ಇದಾದ ನಂತರ ಮತ್ತೊಬ್ಬ ಮಹಿಳೆ ಬಂದು ಸುಖನ್ಯ ಬಳಿ ಒಳ್ಳೆಯ ಬಟ್ಟೆ ಹಾಗೂ ಆಭರಣಗಳನ್ನು ಕೆಲ ಹೊತ್ತು ನೀಡಲು ಸಹಾಯ ಮಾಡು ಎಂದು ಕೇಳಿಕೊಳ್ಳುತ್ತಾಳೆ. ಇದಕ್ಕೂ ಸುಖನ್ಯ ಒಪ್ಪಿ ತನ್ನ ಬಳಿ ಇದ್ದ ಆಭರಣ ಹಾಗೂ ಬಟ್ಟೆಯನ್ನು ನೀಡುತ್ತಾಳೆ.

ಇದಾದ ನಂತರ ಸುಖನ್ಯಾ ಹಾಗೂ ಆಕೆಯ ಗಂಡನಿಗೆ ಒಂದು ಕೆಟ್ಟದಾಗಿರುವ ಸುದ್ದಿ ಬರುತ್ತದೆ. ರಾತ್ರಿಹೊತ್ತು ಅವರ ಅಂಗಡಿ ಕಳ್ಳತನವಾಗಿ ಅಂಗಡಿಯಲ್ಲಿ ಇದ್ದ ದವಸಧಾನ್ಯಗಳು ಕಳ್ಳತನವಾಗಿರುತ್ತವೆ. ಇದರಿಂದ ಗಂಡ ಹೆಚ್ಚು ಚಿಂತಿತನಾಗುತ್ತಾನೆ. ಆದರೆ ಸುಖನ್ಯ ಗಂಡನಿಗೆ ಧೈರ್ಯ ಹೇಳಿ ಮನೆಯಲ್ಲಿರುವ ದವಸಧಾನ್ಯ ಸಂಪತ್ತಿನಿಂದ ಮತ್ತೊಂದು ಅಂಗಡಿ ತೆರೆಯಲು ಗಂಡನಿಗೆ ಧೈರ್ಯ ಹೇಳುತ್ತಾಳೆ. ಆದರೆ ಸುಖನ್ಯ ಬಳಿ ಇದ್ದ ಧನ ಸಂಪತ್ತು ಕೂಡ ಖಾಲಿಯಾಗಿರುತ್ತದೆ. ಇದರಿಂದ ಪತಿಯಿಂದ ನಿಂದನೆಗೆ ಸುಖನ್ಯ ಒಳಗಾಗುತ್ತಾಳೆ.

ಇದರಿಂದ ಬೇಸರಗೊಂಡು ಲಕ್ಷ್ಮೀದೇವಿಯ ಆರಾಧನೆಗೆ ಮುಂದಾದಾಗ ಸುಖನ್ಯಾಳ ಮುಂದೆ ಸಾಕ್ಷಾತ್ ಲಕ್ಷ್ಮೀ ದೇವಿ ಪ್ರತ್ಯಕ್ಷಳಾಗಿ ಸುಖನ್ಯಾಳ ಈ ಸ್ಥಿತಿಗೆ ಕಾರಣವೇನು ಎಂದು ವಿವರಿಸುತ್ತಾಳೆ. ಆಗ ಸುಖನ್ಯಳಿಗೆ ತಾನು ನೀಡಿದ ರೊಟ್ಟಿ ಮಣಿ, ಪೊರಕೆ, ಹಾಲು, ಆಭರಣದಿಂದಲೇ ಬಡತನ ಬಂದಿರುವುದು ಅರಿವಾಗುತ್ತದೆ. ಇದರಿಂದಾಗಿ ಮನೆಯ ಹೆಣ್ಣುಮಕ್ಕಳು ಮನೆಯಲ್ಲಿ ಇರುವ ಈ ಎಲ್ಲಾ ವಸ್ತುಗಳನ್ನು ನೀಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+