Obesity: ಈ ಅಭ್ಯಾಸಗಳಿಂದ ದೂರ ಇದ್ದರೆ ಬೊಜ್ಜು ನಿಮ್ಮ ಸನಿಹಕ್ಕೂ ಬಾರದು!
ವಿಶ್ವದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡುತ್ತಿರುವ ಬೊಜ್ಜು, ಜನರ ನಿದ್ದೆ ಗೆಡಿಸಿದೆ. ಹದಗೆಡುತ್ತಿರುವ ಜೀವನ ಶೈಲಿ ಸ್ಥೂಲಕಾಯ ಹೆಚ್ಚಾಗಲು ಕಾರಣವಾಗುತ್ತಿದೆ. ಇದರಿಂದ ಪರಿಹಾರ ಪಡೆದುಕೊಳ್ಳಲು ಜನ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಇದರಿಂದ ಬಚಾವ್ ಆಗದೇ ಒದ್ದಾಡುತ್ತಿದ್ದಾರೆ. ನೀವು ಈ ಸ್ಥೂಲಕಾಯವನ್ನು ಹಗುರವಾಗಿ ಪರಿಗಣಿಸಿದರೆ, ಮುಂದೆ ದೊಡ್ಡ ಅನಾಹುತ ಕಾದಿರೋದು ಗ್ಯಾರಂಟಿ.
ನೀವು ನಿಮ್ಮ ಜೀವನದಲ್ಲಿ ಮಾಡುವ ಸಣ್ಣ ಸಣ್ಣ ತಪ್ಪುಗಳು ನಿಮಗೆ ಅರಿವಿಲ್ಲದಂತೆ ನಿಮ್ಮ ತೂಕ ವೇಗವಾಗಿ ಹೆಚ್ಚಲು ಕಾರಣವಾಗುತ್ತದೆ. ಈ ತಪ್ಪುಗಳನ್ನು ನೀವು ಆಗಿಂದಾಗಲೇ ಸರಿ ಪಡಿಸದೇ ಇದ್ದರೆ, ಬೊಜ್ಜು ನಿಮ್ಮನ್ನು ಎರಡೂ ಕೈಗಳಿಂದ ಅಪ್ಪಿಕೊಳ್ಳುತ್ತದೆ. ನಿಮ್ಮ ತೂಕ ಹೆಚ್ಚಾಗುತ್ತಿದೆ ಎಂದು ನಿಮಗೆ ತಿಳಿದರೆ ಈ ಕೆಳಗಿನ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು.

ಹೀಗೆ ಮಾಡಿದರೆ ಬೊಜ್ಜು ಹೆಚ್ಚುತ್ತದೆ
ವ್ಯಕ್ತಿ ಬರೀ ತಿನ್ನುವುದರಿಂದಲೂ ವೇಗವಾಗಿ ತೂಕ ಹೆಚ್ಚಿಸಿಕೊಳ್ಳಲು ಕಾರಣ. ಆಹಾರವನ್ನು ಸೇವಿಸುವಾಗ ಹೊಟ್ಟೆ ಸಂಪೂರ್ಣ ತುಂಬುವವರೆಗೂ ತಿನ್ನುವುದು ತಪ್ಪು. ನಿಮ್ಮ ಹೊಟ್ಟಗೆ ಎಷ್ಟು ಅಗತ್ಯವೋ ಅದಕ್ಕಿಂತ ಕೊಂಚ ಕಡಿಮೆ ತಿನ್ನಿ. ಇಲ್ಲದಿದ್ದರೆ, ಬೊಜ್ಜು ನಿಮ್ಮ ದೇಹದಲ್ಲಿ ಸ್ಥಾನ ಪಡೆಯಬಹುದು. ಇದರಿಂದ ಅಪಾಯಕಾರಿ ಖಾಯಿಯಲೆಗಳಿಗೆ ನೀವು ಗುರಿಯಾಗಬಹುದು. ಇದನ್ನೆಲ್ಲಾ ತಪ್ಪಿಸಲು ನಿಮ್ಮ ಆರೋಗ್ಯಕ್ಕೆ ಬೇಕಿದ್ದಷ್ಟೇ ಆಹಾರವನ್ನು ಸೇವಿಸುವುದು ಒಳ್ಳೆಯದು.
ಅತಿಯಾಗಿ ತಿನ್ನುವುದು ಎಷ್ಟು ಮಾರಕವೋ, ಅಷ್ಟೇ ಊಟವನ್ನು ಬಿಡುವುದು ಸಹ ಮಾರಕ. ಬೆಳಗ್ಗೆ ಉಪಹಾರವನ್ನು ಸ್ಕಿಪ್ ಮಾಡುವ ಗೋಜಿಗೆ ಹೋಗಲೇ ಬೇಡಿ. ಊಟ ಬಿಟ್ಟು ಉಪವಾಸ ಮಾಡಿದರೆ, ಅತಿಯಾಗಿ ಹಸಿವು ಆಗುತ್ತದೆ. ಒಮ್ಮೆ ತಿನ್ನಲು ಆರಂಭಿಸಿದರೆ, ನೀವು ಹೆಚ್ಚು ಆಹಾರವನ್ನು ಸೇವಿಸುತ್ತಿರಿ ಇದರಿಂದಲೂ ದೇಹದ ತೂಕ ಹೆಚ್ಚಾಗುತ್ತದೆ.
ವ್ಯಾಯಮ ಅವಶ್ಯಕ
ತಡ ರಾತ್ರಿ ಆಹಾರ ಸೇವಿಸುವುದರಿಂದ ಚಯಪಚಯ ಕ್ರಿಯೆ ನಿಧಾನವಾಗುತ್ತದೆ. ಇದರಿಂದ ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಕ್ರಮೇಣ ಕೊಬ್ಬು ನಿಮ್ಮ ದೇಹದಲ್ಲಿ ಸಂಗ್ರಹವಾಗಲು ಇದು ಕಾರಣವಾಗಿದೆ.

ಬೊಜ್ಜು ಹೊಂದಿರುವ ವ್ಯಕ್ತಿ ಒಳ್ಳೆಯ ಡಯಟ್ ಪ್ಲ್ಯಾನ್ ಅನುಸರಿಸುತ್ತಿದ್ದು, ದೇಹ ದಂಡನೇ ಮಾಡದೇ ಇದ್ದರೂ, ತೂಕ ವೃದ್ಧಿಸತ್ತದೆ. ಹೀಗಾಗಿ ದಿನ ನಿತ್ಯ ವ್ಯಾಯಾಮ ಅವಶ್ಯಕ.
ನೀವು ಸಹ ಬೊಜ್ಜಿನಿಂದ ಪರಿಹಾರ ಪಡೆಯಬೇಕಾದಲ್ಲಿ ನೀವು ಈ ಮೇಲಿನ ಕಟ್ಟು ಪಾಡುಗಳನ್ನು ಸರಿಯಾಗಿ ಪಾಲಿಸಬೇಕು. ಹೀಗೆ ಮಾಡುವುದರಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು. ಹೀಗಾಗಿ ಉತ್ತಮ ಆರೋಗ್ಯಕರ ಆಹಾರ ಪದ್ಥತಿಯನ್ನು ಅಳವಡಿಸಿಕೊಳ್ಳುವುದು ಉತ್ತಮ.
ಏನು ಮಾಡಬೇಕು?
ನಿಮ್ಮ ಬ್ಯೂಸಿ ಶೆಡ್ಯೂಲ್‌ನಲ್ಲಿ ನಿಮ್ಮ ಆರೋಗ್ಯಕ್ಕೆ ಕೊಂಚ್ ಟೈಮ್ ನೀಡಬೇಕು. ಇದರಿಂದ ಆರೋಗ್ಯ ಸುಧಾರಿಸಿಕೊಳ್ಳ ಬಹುದು. ದಿನದ 24 ಗಂಟೆಯಲ್ಲಿ ಕನಿಷ್ಠ 40 ನಿಮಿಷ ನಿಮ್ಮ ಆರೋಗ್ಯಕ್ಕಾಗಿ ಮೀಸಲಿಟ್ಟರೆ ಒಳ್ಳೆಯದು. ಈ ಸಮಯದಲ್ಲಿ ನೀವು ವಾಕಿಂಗ್ ಮಾಡಬಹುದು. ಇಲ್ಲದಿದ್ದರೆ ವ್ಯಾಯಾಮ, ಯೋಗಾಸನ, ಜಾಗಿಂಗ್ ಮಾಡಬಹುದು. ನೀವು ಕಷ್ಟ ಪಟ್ಟು ಬೆವರು ಹರಿಸಿದರೆ, ಕ್ಯಾಲರಿ ಬರ್ನ್ ಆಗುತ್ತದೆ. ಅಲ್ಲದೆ ಇದೇ ವೇಳೆ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಒಮ್ಮೆ ರೂಡಿಸಿಕೊಂಡ ಅಭ್ಯಾಸವನ್ನು ಮುಂದುವರೆಸಿ, ಅಲ್ಲದೆ ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಿ. ಹೀಗೆ ಮಾಡುವುದರಿಂದ ನಿಮ್ಮ ಬೊಜ್ಜು ಕ್ರಮೇಣ ಕಡಿಮೆ ಆಗುತ್ತದೆ.











Click it and Unblock the Notifications