Carrot Lemon Rice Recipe: ಲಂಚ್ ಬಾಕ್ಸ್‌ಗೆ ಕ್ಯಾರೆಟ್ ಲೆಮನ್ ರೈಸ್ ಮಾಡುವುದು ಹೇಗೆ?
ನಾಳೆ ಬೆಳಿಗ್ಗೆ ಶಾಲೆಗೆ ಹೋಗುವ ಮಕ್ಕಳಿಗೆ ಊಟಕ್ಕೆ ಏನು ಮಾಡಬೇಕೆಂದು ನೀವು ಯೋಚನೆ ಮಾಡ್ತಾಯಿದಿರಾ? ಅವರಿಗಾಗಿ ಪೌಷ್ಟಿಕ ಮತ್ತು ರುಚಿಕರವಾದ ಊಟವನ್ನು ತಯಾರಿಸಲು ನೀವು ಬಯಸಿದ್ದರೆ ಇಲ್ಲಿದೆ ಕ್ಯಾರೆಟ್ ಲೆಮನ್ ರೈಸ್ ತಯಾರಿಸುವ ವಿಧಾನ.
ಇದನ್ನು ನಿಮ್ಮ ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನುವುದು ಖಚಿತ. ಹಾಗಾದರೆ ತಡ ಮಾಡುವುದು ಬೇಡ ಕ್ಯಾರೆಟ್ ಲೆಮನ್ ರೈಸ್ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ, ರುಚಿ ನೋಡಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಅಗತ್ಯವಿರುವ ವಸ್ತುಗಳು:
* ಬಾಸ್ಮತಿ ಅಕ್ಕಿ - 1 ಕಪ್
* ನಿಂಬೆ ರಸ - 1/4 ಕಪ್
* ಹಸಿರು ಮೆಣಸಿನಕಾಯಿ - 5 (ಸಣ್ಣಕೆ ಹೆಚ್ಚಿದ)
* ಕ್ಯಾರೆಟ್ - 1 (ತುರಿದ)
* ಕೆಂಪು ಮೆಣಸಿನಕಾಯಿ - 2
* ಕೊತ್ತಂಬರಿ - ಸ್ವಲ್ಪ
* ಆಲಿವ್ ಎಣ್ಣೆ - 2 ಚಮಚ
* ಅರಿಶಿನ ಪುಡಿ - ಚಿಟಿಕೆ
* ಉಪ್ಪು - ರುಚಿಗೆ
ಮಸಾಲೆಗಾಗಿ...
* ಎಣ್ಣೆ - 1 ಟೇಬಲ್ ಚಮಚ
* ಸಾಸಿವೆ - 1 ಟೇಬಲ್ಸ್ಪೂನ್
* ಕಡಲೆಬೇಲೆ - 1 1/2 ಟೇಬಲ್ಸ್ಪೂನ್
* ಶೇಂಗಾ - 1 1/2 ಟೇಬಲ್ಸ್ಪೂನ್
* ಇಂಗು ಪುಡಿ - 1 ಚಿಟಿಕೆ
* ಉದ್ದಿನ ಬೇಳೆ - 1 ಟೇಬಲ್ಸ್ಪೂನ್
* ಗೋಡಂಬಿ - 1 ಟೇಬಲ್ಸ್ಪೂನ್

ಪಾಕವಿಧಾನ:
* ಮೊದಲು ಬಾಸ್ಮತಿ ಅಕ್ಕಿಯನ್ನು ತೊಳೆದು ಕುಕ್ಕರ್‌ನಲ್ಲಿ ಹಾಕಿ 1 ಕಪ್ ನೀರು, 1 ಚಿಟಿಕೆ ಉಪ್ಪು ಮತ್ತು ಸ್ವಲ್ಪ ತುಪ್ಪ ಹಾಕಿ ಕುಕ್ಕರ್ ಅನ್ನು ಮುಚ್ಚಿ 2 ಸೀಟಿ ಬರಲು ಬಿಡಿ. ಸೀಟಿ ಹೋದಾಗ ಕುಕ್ಕರ್ ತೆರೆದು ಅನ್ನವನ್ನು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ.
* ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಗೋಡಂಬಿ, ಶೇಂಗಾ, ಇಂಗು ಪುಡಿ ಹಾಕಿ ಒಗ್ಗರಣೆ ಮಾಡಿ.
* ನಂತರ ಹಸಿರು ಮೆಣಸಿನಕಾಯಿ, ಬಿರಿಯಾನಿ ಎಲೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ 1 ನಿಮಿಷ ಹುರಿಯಿರಿ.
* ನಂತರ ಅದಕ್ಕೆ ತುರಿದ ಕ್ಯಾರೆಟ್ ಅನ್ನು ಹಾಕಿ 1 ನಿಮಿಷ ಹುರಿದು, ನಂತರ ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ, ನಿಂಬೆ ರಸವನ್ನು ಸೇರಿಸಿ ಮತ್ತು ಬೆರೆಸಿ.
* ಆ ನಂತರ ಹುರಿದ ಪದಾರ್ಥಗಳನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಕಲಕಿ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಕ್ಯಾರೆಟ್ ಲೆಮನ್ ರೈಸ್ ರೆಡಿ.












Click it and Unblock the Notifications