Benefits of Jaggery Eating: ಚರ್ಮ ಕಾಂತಿಗೆ, ಜೀರ್ಣಕ್ರಿಯೆ ಸರಿಪಡಿಸುವ 'ಬೆಲ್ಲ' ಸೇವೆನೆಯ ಪ್ರಯೋಜನಗಳು, ಮಾಹಿತಿ
ಬೆಂಗಳೂರು, ಜನವರಿ 10: ರೈತರಿಗೆ ಹೆಚ್ಚು ಆದಾಯ ತಂದು ಕೊಡುವ ಕಬ್ಬಿನಿಂದ ಸಕ್ಕರೆ ಹಾಗೂ ಬೆಲ್ಲ ಉತ್ಪಾದಿಸಲಾಗುತ್ತದೆ. ಇವೆರಡು ಕಬ್ಬಿನಿಂದಲೇ ತಯಾರಾದರೂ ಸಹಿತ ಮನುಷ್ಯನ ದೇಹಕ್ಕೆ ಹಿತವಾಗುವುದು ಬೆಲ್ಲ (Jaggery). ಸಕ್ಕರೆ ದೇಹದಾರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತಾಗಿದೆ. ಬೆಲ್ಲವು ನಿತ್ಯ ರಾತ್ರಿ ಒಂದಿಂಚಿನ ತುಂಡು ಬೆಲ್ಲ ತಿನ್ನುತ್ತಾ ಹೋದರೆ ಏನೆಲ್ಲ ಪ್ರಯೋಜಗಳು ಇವೆ ನಿಮಗೆ ಗೊತ್ತೆ?.
ಹೌದು, ಪ್ರತಿನಿತ್ಯ ಒಬ್ಬ ಮನುಷ್ಯ ನಿಯಮಿತವಾಗಿ ಬೆಲ್ಲ ತಿನ್ನುವುದು ಒಳ್ಳೆಯದು. ಅದರಲ್ಲೂ ನಿತ್ಯ ರಾತ್ರಿ ಊಟ ಮುಗಿದ ಬಳಿಕ ಒಂದು ತುಂಡು ಬೆಲ್ಲ ತಿನ್ನವುದನ್ನು ನೀವು ರೂಢಿಯಲ್ಲಿಟ್ಟುಕೊಂಡರೆ ಅನೇಕ ಕಾಯಿಲೆಗಳು ನಿಮ್ಮ ಹತ್ತಿರ ಸಹ ಸುಳಿಯವುದಿಲ್ಲ. ಹೇಗೆ ಅಂತಿರಾ? ಇಲ್ಲಿದೆ ನೋಡಿ ಬೆಲ್ಲ ತಿನ್ನುವುದರ ಪ್ರಯೋಜನಗಳ ಮಾಹಿತಿ.

ಮೊದಲು ಬೆಲ್ಲದಲ್ಲಿ ಯಾವ ಅಂಶಗಳಿವೆ ಎಂಬುದನ್ನು ನೋಡುವದಾದರೆ, ಬೆಲ್ಲದಲ್ಲಿ ಮಾನವನ ಆರೋಗ್ಯಕ್ಕೆ ಬೇಕಾದ ಪ್ರೋಟಿನ್, ಕ್ಯಾಲ್ಸಿಯಂ, ವಿಟಮಿನ್ ಬಿ-12 ಹಾಗೂ ಕಬ್ಬಿಣದಂತಹ ಪೋಷಕಾಂಶಗಳು ಇವೆ. ಹೀಗಾಗಿಯೇ ಸರ್ವ ರೋಗಗಳನ್ನು ಗುಣ ಮಾಡಬಲ್ಲ ಆಯುರ್ವೇದ ಔಷಧಿಯಲ್ಲಿ ಈ ಬೆಲ್ಲವನ್ನು ಬಳಸುತ್ತಾರೆ.
ಹೊಟ್ಟೆಯ ಸರ್ವ ಸಮಸ್ಯೆಗಳಿಗೆ ರಾಮಬಾಣ
ನಿತ್ಯ ರಾತ್ರಿ ಊಟವಾದ ನಂತರ ಒಂದು ತುಂಡು ಬೆಲ್ಲ ತಿನ್ನುತ್ತಾ ಬಂದರೆ ಅನೇಕ ಪ್ರಯೋಜನಗಳನ್ನು ನೀವು ಪಡೆಯಬಹುದು. ಬೆಲ್ಲ ತಿಂದರೆ ಅಜೀರ್ಣ ದೂರವಾಗುತ್ತದೆ. ಉತ್ತಮ ಜೀರ್ಣಕ್ರಿಯೆ ಬೆಲ್ಲ ಸಹಾಯ ಮಾಡುತ್ತದೆ. ಅಜೀರ್ಣದ ಜೊತೆಗೆ ಅಸಿಡಿಟಿಯಂತಹ ಸಮಸ್ಯೆಗಳು ಬರದಂತೆ ತಡೆಯಬಹುದಾಗಿದೆ. ಶೀತ ವಾತಾವರಣದಲ್ಲಿ ಬೆಲ್ಲ ತಿಂದರೆ ದೇಹವನ್ನು ಹೊರಗಿನ ವಾತಾವರಣದಿಂದ ದೇಹದ ಆರೋಗ್ಯ ರಕ್ಷಿಸುವ ಕೆಲಸ ಮಾಡುತ್ತದೆ.
ಶೀತ, ನೆಗಡಿ ಕೆಮ್ಮಿಗೂ ಮದ್ದು
ಚಳಿಗಾಲದಂತಹ ಸಂದರ್ಭದಲ್ಲಿ ಪದೇ ಪದೇ ಶೀತ, ಕೆಮ್ಮು, ನೆಗಡಿ, ಕಫ್ ದಂತಹ ಸಾಮಾನ್ಯ ಕಾಯಿಲೆಗಳಿಗೆ ಆಗಾಗ ತುತ್ತಾಗುತ್ತಿರುತ್ತೇವೆ. ಇಂತಹವರು ನಿತ್ಯ ರಾತ್ರಿ ಬೆಲ್ಲ ತಿನ್ನುವುದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ದುರ್ಬಲ ದೇಹ ಕ್ರಮೇಣ ಗಟ್ಟಿಯಾಗುತ್ತಾ ಹೋಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಚರ್ಮದ ಕಾಂತಿಗೂ ಸಹಾಯಕಾರಿ ಈ ಬೆಲ್ಲ
ಮನುಷ್ಯ ಪ್ರತಿದಿನವೂ ನಿಯಮಿತವಾಗಿ ಬೆಲ್ಲವನ್ನು ತಿನ್ನುತ್ತಾ ಹೋದರೆ ನಿಮ್ಮ ಚರ್ಮಕ್ಕೂ ಪ್ರಯೋಜನ ದೊರೆಯುತ್ತದೆ. ಮೊಡವೆಗಳು ದೂರವಾಗುತ್ತವೆ. ಅಲ್ಲದೇ ಬೆಲ್ಲದೊಳಗಿನ ಆರೋಗ್ಯಕರ ಅಂಶಗಳು ಚರ್ಮದ ಒಳಗಿನಿಂದ ತ್ವಚೆ ಸರಿಪಡಿಯುವ ಕೆಲಸ ಮಾಡುತ್ತಿದೆ. ಇದರಿಂದ ನಿಮ್ಮನ್ನು ನೋಡುವವರಿಗೆ ನಿಮ್ಮ ಚರ್ಮ ಹೊಳೆಯುವಂತೆ ಕಾಣುತ್ತದೆ.
ಹೃದಯ ಕಾಯಿಲೆಗಳ ನಿಯಂತ್ರಣ
ಪೋಟ್ಯಾಸಿಯಂ ಅಂಶ ಹೊಂದಿರುವ ಈ ಬೆಲ್ಲವು ಹೃದಯ ಸಂಬಂಧಿ ಯಾವುದಾದರೂ ಅನಾರೋಗ್ಯ ಬರುವುದಿದ್ದರೆ ಅದನ್ನು ತಡೆಯುವ, ತಕ್ಕ ಮಟ್ಟಿಗೆ ಅನಾರೋಗ್ಯ ಎದುರಾಗದಂತೆ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಈ ಕಾರಣಕ್ಕೆ ಹೃದ್ರೋಗಿಗಳಿಗೆ ಸಕ್ಕರೆ ಬದಲಾಗಿ ಬೆಲ್ಲವನ್ನು ಬಳಸಿದ ಆಹಾರ ಸೇವಿಸುವಂತೆ ಸಲಹೆ ನೀಡುತ್ತಾರೆ.
ಆದಷ್ಟು ಕಪ್ಪು 'ಬೆಲ್ಲ' ಬಳಸಿ
ಗಮನಿಸಬೇಕಾದ ಅಂಶವೆಂದರೆ ಸಕ್ಕರೆ ಬದಲಾಗಿ ಬೆಲ್ಲ ಬಳೆಸಬೇಕು. ಅದರಲ್ಲೂ ಕಪ್ಪು ಬಣ್ಣದ ಬೆಲ್ಲ ಹೆಚ್ಚು ಪ್ರಯೋಜನಕಾರಿ. ಗ್ರಾಹಕರನ್ನು ಆಕರ್ಷಿಸಲು ಮಾರಾಟದ ದೃಷ್ಟಿಯಿಂದ ರಸಾಯನಿಕ ಬಳಸಿ ಕೆಂಪು ಮತ್ತು ಬಿಳಿ ಬಣ್ಣದ ಬೆಲ್ಲ ಮಾರಾಟ ಮಾಡಲಾಗುತ್ತದೆ.












Click it and Unblock the Notifications