Batani Sambar Recipe: ಬಟಾಣಿ ದಾಲ್... ತಿಂದಾಗ ಕಮಾಲ್!
ಮನೆಯಲ್ಲಿ ನಿತ್ಯ ಸಾಂಬಾರ್, ರಸಂ, ಕರಿ ಮಾಡಿ ಬೇಜಾರಾಗಿದಿಯಾ? ಹಾಗಾದರೆ ನೀವು ಇವತ್ತು ಸಂಥಿಂಗ್ ಸ್ಪೆಷಲ್ ಆಗಿರುವ ಸಾಂಬರ್ ಅನ್ನು ಟ್ರೈ ಮಾಡಿ. ಇದು ರುಚಿಯಾಗಿರುವುದು ಮಾತ್ರವಲ್ಲದೆ ಮಾಡಲು ಕೂಡ ತುಂಬಾ ಸುಲಭ. ಇದನ್ನ ಮಾಡಿದರೆ ರೈಸ್ ಹಾಗೂ ಚಪಾತಿ ಮಾತ್ರವಲ್ಲದೆ ಪೂರಿ, ರೋಟಿ ಜೊತೆಗೂ ನೆಂಚಿಕೊಂಡು ತಿನ್ನಬಹುದು.
ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಬಟಾಣಿ ಇದ್ದೇ ಇರುತ್ತದೆ. ಇದರಿಂದ ಇಂದು ನಾವು ಸಾಂಬರ್ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ಬಟಾಣಿಯಿಂದ ಮನೆ ಮಂದಿಗೆಲ್ಲಾ ಇಷ್ಟವಾಗುವ ಸಾಂಬರ್ ಅನ್ನು ನೀವು ತಯಾರಿಸಬಹುದು. ಜೊತೆಗೆ ಕುಟುಂಬ ಸದಸ್ಯರ ಮೆಚ್ಚುಗೆಯನ್ನೂ ಪಡೆಯಬಹುದು.

ಹಾಗಾದರೆ ತಡ ಮಾಡುವುದು ಬೇಡ. ಬಟಾಣಿ ದಾಲ್ ಮನೆಯಲ್ಲಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಮ್ಮೆ ಟ್ಟೈ ಮಾಡಿ ರುಚಿ ನೋಡಿ ನಿಮ್ಮ ಅನುಭವವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿ.
ಬಟಾಣಿ ದಾಲ್ ತಯಾರಿಸಲು ಬೇಕಾದ ಪದಾರ್ಥಗಳು:
* ಹಸಿ ಬಟಾಣಿ ಒಂದು ಕಪ್
* ಟೊಮ್ಯಾಟೋ ಎರಡು
* ಹಸಿ ಮೆಣಸಿನಕಾಯಿ ಎರಡು
* ಶುಂಠಿ ಒಂದು ಇಂಚು
* ಎಣ್ಣೆ
* ಜೀರಿಗೆ ಒಂದು ಚಮಚ
* ಸಾಸಿವೆ ಒಂದು ಚಮಚ
* ದನಿಯಾ ಪುಡಿ ಒಂದು ಚಮಚ
* ಅರಿಶಿಣ ಪುಡಿ ಕಾಲ್ ಚಮಚ
* ಉಪ್ಪು
* ಖಾರದ ಪುಡಿ ಒಂದು ಚಮಚ
*ಆಲುಗಡ್ಡೆ ಎರಡು
*ಗರಂ ಮಸಾಲೆ ಪುಡಿ ಅರ್ಧ ಚಮಚ
*ಕೊಬ್ಬರಿ ಎಣ್ಣೆ ಎರಡು ಚಮಚ
*ಕರಿಬೇವಿನ ಸೊಪ್ಪು ಸ್ವಲ್ಪ

ತಯಾರಿಸುವ ವಿಧಾನ:
* ಹಸಿ ಬಟಾಣಿಯನ್ನು ತರಿತರಿಯಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.
* ಬಳಿಕ ಮಿಕ್ಸಿ ಜಾರ್‌ಗೆ ಟೊಮ್ಯಾಟೋ, ಹಸಿ ಮೆಣಸಿನಕಾಯಿ, ಶುಂಠಿ ಹಾಕಿ ರುಬ್ಬಿಕೊಳ್ಳಿ.
* ಮೊದಲಿಗೆ ಒಂದು ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಜೀರಿಗೆ ಹಾಕಿ. ಚಟಪಟ ಹುರಿದು ಗಮಗಮ ಪರಿಮಳ ಬರುವವರೆಗೂ ಬಿಡಿ. ಬಳಿಕ ಇದಕ್ಕೆ ಚಿಟಿಕೆ ಇಂಗು ಹಾಕಬೇಕು.
* ನಂತರ ಮಿಕ್ಸಿಗೆ ಹಾಕಿಕೊಂಡ ಟೊಮ್ಯಾಟೋವನ್ನು ಇದಕ್ಕೆ ಹಾಕಿ ಕುದಿಯಲು ಬಿಡಿ.
* ಇದಕ್ಕೆ ದನಿಯಾ ಪುಡಿ, ಅರಿಶಿಣ ಪುಡಿ, ಖಾರದ ಪುಡಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಎಣ್ಣೆ ಮೇಲೆ ತೇಲಬೇಕು.
* ಬಳಿಕ ಮಿಕ್ಸಿ ಮಾಡಿಕೊಂಡ ಬಟಾಣಿ ಹಾಕಿಕೊಳ್ಳಬೇಕು. ಎರಡು ನಿಮಿಷ ಹುರಿದುಕೊಳ್ಳಬೇಕು.
* ಬಳಿಕ ಇದಕ್ಕೆ ಕುದಿಸಿ ಸಣ್ಣದಾಗಿ ಕತ್ತರಿಸಿಟ್ಟುಕೊಂಡ ಆಲೂಗಟ್ಟೆಯನ್ನು ಹಾಕಿ.
* ಬಳಿಕ ಒಂದು ಲೋಟ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ.
* ನಂತರ ಗರಂ ಮಸಾಲೆ ಪುಡಿ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ವಿಸಿಲ್ ಬರುವವರೆಗೂ ಬಿಡಿ.
* ವಿಸಿಲ್ ಬಂದ ಬಳಿಕ ತಕ್ಷಣ ಒಲೆ ಆಫ್ ಮಾಡಿ. ಹಬೆ ಹೋಗುವವರೆಗೂ ಬಿಡಿ.
* ಈಗ ಇದಕ್ಕೆ ಒಗ್ಗರಣೆ ಹಾಕೋಣ. ಒಂದು ಚಿಕ್ಕ ಒಗ್ಗರಣೆ ಪಾತ್ರೆ ಇಡಿ. ಅದರಲ್ಲಿ ಕೊಬ್ಬರಿ ಎಣ್ಣೆ ಎರಡು ಚಮಚ, ಜೀರಿಗೆ ಅರ್ಧ ಚಮಚ ಹಾಕಿ. ಕರಿಬೇವಿನ ಸೊಪ್ಪು ಹಾಕಿದರೆ ಒಗ್ಗರಣೆ ರೆಡಿ.
* ಬಳಿಕ ಇದನ್ನು ಬಟಾಣಿ ದಾಲ್‌ಗೆ ಹಾಕಿದರೆ ಹಾಹಾ... ಬಿಸಿ ಬಿಸಿ ಬಟಾಣಿ ದಾಲ್ ಸವಿಯಲು ಸಿದ್ಧ.











Click it and Unblock the Notifications