Get Updates
Get notified of breaking news, exclusive insights, and must-see stories!

Benefits of Guava Fruit: ಗರ್ಭಿಣಿಯರಿಗೆ ಪೇರಲ ಹಣ್ಣಿನಿಂದ ಸಿಗುವ ಅದ್ಭುತ ಪ್ರಯೋಜನಗಳಿವು...

ಎಲ್ಲಾ ಕಾಲಕ್ಕೂ ಹೇರಳವಾಗಿ ಲಭ್ಯವಿರುವ ಹಣ್ಣು ಪೇರಲ. ಇದನ್ನು ಹೆಚ್ಚು ಇಷ್ಟಪಟ್ಟು ತಿನ್ನುವ ಜನ ನಮ್ಮ ನಡುವೆ ಇದ್ದಾರೆ. ಈ ಹಣ್ಣು ಸಿಹಿ ಹಾಗೂ ಹುಳಿ ರುಚಿ ನೀಡುತ್ತದೆ. ಹೀಗಾಗಿ ಮಕ್ಕಳಿಂದ ಹಿರಿಯರವರೆಗೆ ಈ ಹಣ್ಣು ಅಂದರೆ ಬೇಡ ಎನ್ನುವವರಿಗಿಂತ ಬೇಕು ಎನ್ನುವವರೇ ಹೆಚ್ಚು. ತಿನ್ನಲು ವಿಶೇಷ ರುಚಿ ನೀಡುವ ಈ ಹಣ್ಣು ಆರೋಗ್ಯಕ್ಕೂ ಒಳ್ಳೆಯದು.

ವಿಶೇಷವಾಗಿ ಗರ್ಭಿಣಿಯರು ಪೇರಲ ಹಣ್ಣನ್ನು ತಿನ್ನುವುದರಿಂದ ಹಲವಾರು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಪೌಷ್ಟಿಕತಜ್ಞರು. ಅದರಲ್ಲೂ ಪೇರಲದಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಎ ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

Amazing health benefits of guava fruit for pregnant womens

ಆದರೆ ಗರ್ಭಿಣಿಯರು ಯಾವ ಹಣ್ಣುಗಳನ್ನು ತಿನ್ನಬೇಕು ಎಂದು ಎರಡು ಬಾರಿ ಯೋಚಿಸಬೇಕು. ಏಕೆಂದರೆ ಹೆಚ್ಚಿನ ಹಣ್ಣುಗಳು ಗರ್ಭಿಣಿಯರಿಗೆ ಹಾನಿಕಾರಕ ಹಣ್ಣುಗಳಾಗಿರುತ್ತವೆ. ವಿಶೇಷವಾಗಿ ನಿಂಬೆಹಣ್ಣುಗಳು ಗರ್ಭಿಣಿಯರಿಗೆ ಯೋಗ್ಯವಲ್ಲ. ಪಪ್ಪಾಯಿ ಮತ್ತು ಅನಾನಸ್ ಸೇವನೆಯಿಂದ ಗರ್ಭಿಣಿಯರು ದೂರವಿರಬೇಕು. ಆದರೆ ಪೇರಲವನ್ನು ಮಿತವಾಗಿ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಗರ್ಭಾವಸ್ಥೆಯಲ್ಲಿ ಪೇರಲವನ್ನು ಸೇವಿಸುವುದರಿಂದ ಗರ್ಭಿಣಿಯರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಹಾಗಾದರೆ ಗರ್ಭಿಣಿಯರಿಗೆ ಪೇರಲ ತಿನ್ನುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು ಯಾವುವು? ಎಂದು ತಿಳಿಯೋಣ.

Amazing health benefits of guava fruit for pregnant womens

ಗರ್ಭಿಣಿಯರಿಗೆ ಪೇರಲ ಹಣ್ಣಿನಿಂದ ಸಿಗುವ ಅದ್ಭುತ ಪ್ರಯೋಜನಗಳಿವು...

1. ರೋಗನಿರೋಧಕ ಶಕ್ತಿ ಹೆಚ್ಚಳ: ಗರ್ಭಿಣಿಯರು ಪೇರಲವನ್ನು ತಿನ್ನುವುದು ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ರೋಗಗಳು ಹರಡುವುದನ್ನು ತಡೆಯುತ್ತದೆ.

2. ರಕ್ತದೊತ್ತಡದ ಮಟ್ಟ ಸಮತೋಲನ: ಗರ್ಭಿಣಿಯರು ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಾರೆ. ಗರ್ಭಾವಸ್ಥೆಯಲ್ಲಿ ಇದು ತುಂಬಾ ಅಪಾಯಕಾರಿ. ಮಾಗಿದ ಪೇರಲವನ್ನು ತಿನ್ನುವುದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಅಕಾಲಿಕ ಜನನ ಮತ್ತು ಗರ್ಭಪಾತವನ್ನು ತಡೆಯುತ್ತದೆ.

3. ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶ: ಗರ್ಭಿಣಿಯರು ತಮಗೆ ಮತ್ತು ಬೆಳೆಯುತ್ತಿರುವ ಮಗುವಿಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಭ್ರೂಣದ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ ಸೇವನೆ ಮುಖ್ಯವಾಗಿರುತ್ತದೆ. ಈ ಪೋಷಕಾಂಶ ಪೇರಲ ಹಣ್ಣಿನಿಂದ ತಾಯಿಗೆ ಸಿಗುತ್ತದೆ.

4. ಮಲಬದ್ಧತೆ, ಮೂಲವ್ಯಾಧಿ ತಡೆ: ಪೇರಲದಲ್ಲಿರುವ ಫೈಬರ್ ಮಲಬದ್ಧತೆ ಮತ್ತು ಮೂಲವ್ಯಾಧಿಯನ್ನು ತಡೆಯುತ್ತದೆ. ಹೀಗಾಗಿ ಈ ಹಣ್ಣು ಆರೋಗ್ಯಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.

5. ಜೀರ್ಣಕ್ರಿಯೆ ಸುಧಾರಣೆ: ಗರ್ಭಿಣಿಯರು ಅಜೀರ್ಣ ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುವುದು ತುಂಬಾ ಸಾಮಾನ್ಯವಾಗಿದೆ. ಆದರೆ ಪೇರಲದ ನಿಯಮಿತ ಸೇವನೆಯು ಜೀರ್ಣಾಂಗವನ್ನು ಆರೋಗ್ಯಕರವಾಗಿಡುತ್ತದೆ. ಇದು ಎದೆಯುರಿ, ವಾಕರಿಕೆ ಮತ್ತು ಇತರ ಸಮಸ್ಯೆಗಳನ್ನು ತಡೆಯುತ್ತದೆ.

6. ಕ್ಯಾನ್ಸರ್ ಅಪಾಯ ಕಡಿಮೆ: ಗರ್ಭಿಣಿಯರು ಸ್ತನ ಕ್ಯಾನ್ಸರ್ಗೆ ಹೆಚ್ಚು ಒಳಗಾಗುತ್ತಾರೆ. ಆದರೆ ಪೇರಲದಲ್ಲಿರುವ ರೋಗ ನಿರೋಧಕಗಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ. ಇದರ ಜೊತೆಗೆ ಇದರಲ್ಲಿರುವ ಲೈಕೋಪೀನ್ ಮತ್ತು ವಿಟಮಿನ್ ಸಿ ದೇಹದಿಂದ ಕ್ಯಾನ್ಸರ್ ಉಂಟುಮಾಡುವ ವಿಷವನ್ನು ತೆಗೆದುಹಾಕುತ್ತದೆ.

Amazing health benefits of guava fruit for pregnant womens

7. ದೃಷ್ಟಿ ಸುಧಾರಣೆ: ಪೇರಲದಲ್ಲಿರುವ ವಿಟಮಿನ್ ಎ ತಾಯಿ ಮತ್ತು ಮಗುವಿನ ಕುರುಡುತನವನ್ನು ತಡೆಯುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ.

8. ಮಗುವಿನ ನರಮಂಡಲದಲ್ಲಿ ಬಲ: ಪೇರಲದಲ್ಲಿ ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ9 ಸಮೃದ್ಧವಾಗಿದೆ. ಇದನ್ನು ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕು. ಇದು ಮಗುವಿನ ನರಮಂಡಲ ಮತ್ತು ಮೆದುಳನ್ನು ಆರೋಗ್ಯವಾಗಿರಿಸುತ್ತದೆ.

9. ಸೋಂಕುಗಳ ವಿರುದ್ಧ ಹೋರಾಟ: ಪೇರಲದಲ್ಲಿ ವಿಟಮಿನ್ ಸಿ, ಇ, ಕ್ಯಾರೊಟಿನಾಯ್ಡ್‌ಗಳು, ಐಸೊಫ್ಲೇವೊನೈಡ್‌ಗಳು ಮತ್ತು ಫಾಲಿಫಿನಾಲ್‌ಗಳು ಸಮೃದ್ಧವಾಗಿವೆ. ಇವುಗಳನ್ನು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಎಂದು ಕರೆಯಲಾಗುತ್ತದೆ. ಇದು ಸೂಕ್ಷ್ಮಜೀವಿಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ. ದೇಹವನ್ನು ರೋಗದಿಂದ ರಕ್ಷಿಸುತ್ತದೆ.

10. ಮನಸ್ಸನ್ನು ಶಾಂತಗೊಳಿಸುತ್ತದೆ: ಗರ್ಭಾವಸ್ಥೆಯಲ್ಲಿ ಕಾರ್ಟಿಸೋಲ್ ಎಂಬ ವಸ್ತುವು ಉತ್ಪತ್ತಿಯಾಗುತ್ತದೆ. ಇದು ಗರ್ಭಧಾರಣೆಗೆ ತುಂಬಾ ಹಾನಿಕಾರಕವಾಗಿದೆ. ಆದ್ದರಿಂದ, ಪೇರಲವನ್ನು ಪ್ರತಿದಿನ ಸೇವಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬಹುದು.

11. ರಕ್ತಹೀನತೆ ಕಡಿಮೆ: ಗರ್ಭಿಣಿಯರಿಗೆ ಕಬ್ಬಿಣಾಂಶ ಅತ್ಯಗತ್ಯ. ಏಕೆಂದರೆ ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಕಬ್ಬಿಣಾಂಶದ ಅಗತ್ಯವಿರುತ್ತದೆ. ಪೇರಲವನ್ನು ಸೇವಿಸುವುದರಿಂದ ಅಗತ್ಯ ಪೋಷಕಾಂಶವನ್ನು ಪಡೆಯಬಹುದು.

12. ಹೆಚ್ಚು ಕ್ಯಾಲ್ಸಿಯಂ: ಗರ್ಭಾವಸ್ಥೆಯಲ್ಲಿ ಕಬ್ಬಿಣದ ಜೊತೆಗೆ ಕ್ಯಾಲ್ಸಿಯಂ ಅತ್ಯಗತ್ಯ. ಪೇರಲವು ಕ್ಯಾಲ್ಸಿಯಂನ ನೈಸರ್ಗಿಕ ಮೂಲವಾಗಿದೆ, ಇದು ಗರ್ಭಾವಸ್ಥೆಯ ಆಹಾರದಲ್ಲಿ ಸೇರಿಸುವುದು ಅವಶ್ಯಕ.

13. ವಾಕರಿಕೆ ಕಡಿಮೆ ಮಾಡುತ್ತದೆ: ಪೇರಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ವಾಕರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಾಕರಿಕೆ ಬಂದರೆ ತಕ್ಷಣ ಪೇರಲವನ್ನು ತಿನ್ನಲು ಪ್ರಾರಂಭಿಸಿ. ಇದಕ್ಕೂ ಮುನ್ನ ಗರ್ಭಿಣಿಯರು ವೈದ್ಯರ ಸಲಹೆಯನ್ನು ಪಡೆದು ಹಣ್ಣು ಸೇವನೆ ಮಾಡುವುದು ಸೂಕ್ತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+