ನಮ್ಮೆಲ್ಲರ ಗುರಿ ಸದಾ ಗೆಲುವಿನ ಕಡೆಗೆ ಇರಲಿ: ಏಕೆ ಗೊತ್ತಾ?
ನಮ್ಮ ಬದುಕಿನಲ್ಲೊಂದು ಗುರಿಯಿಟ್ಟುಕೊಂಡು ಅದರಂತೆ ಬದುಕದೆ ಹೋದರೆ ಅದು ನಿಜಕ್ಕೂ ಒಂದೊಳ್ಳೆಯ ಬದುಕಾಗಲಾರದು. ಮಾಡುವ ಕೆಲಸ ಮತ್ತು ನಡೆಯುವ ಹಾದಿ ಎರಡರಲ್ಲೂ ಗುರಿ ಇರಲೇ ಬೇಕು. ಇಲ್ಲದೆ ಹೋದರೆ ಮುನ್ನಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಗುರಿಯಿಟ್ಟುಕೊಂಡು ಮುನ್ನಡೆಯುತ್ತಿರುವಾಗ ನಮ್ಮ ಬದುಕಿಗೊಂದು ಗುರಿ ಇಲ್ಲದೆ ಹೋದರೆ ಹೇಗೆ? ಹೀಗಾಗಿ ತಮ್ಮದೇ ಆದ ಗುರಿಯಿಟ್ಟುಕೊಂಡು ಅದನ್ನು ಮುಟ್ಟಲು ಪ್ರಯತ್ನ ಪಡಬೇಕು. ನಿರಂತರ ಪ್ರಯತ್ನದ ಫಲ ಇವತ್ತಲ್ಲ ನಾಳೆ ನಮ್ಮನ್ನು ನಾವಿಟ್ಟುಕೊಂಡ ಗುರಿಯೆಡೆಗೆ ಕರೆದೊಯ್ಯುತ್ತದೆ ಎಂಬ ವಿಶ್ವಾಸವನ್ನು ಬಿಡಬಾರದಷ್ಟೆ.
ನಮ್ಮ ಬದುಕಿನಲ್ಲಿ ನಾವಿಟ್ಟುಕೊಳ್ಳುವ ಗುರಿಗಳು ಕೂಡ ನೈತಿಕ, ಪ್ರಾಮಾಣಿಕ ಮತ್ತು ಒಳಿತನ್ನು ನೀಡುವಂತಿರಬೇಕು. ಆಗ ಮಾತ್ರ ಗುರಿಮುಟ್ಟಿದ ಸಾರ್ಥಕತೆ ನಮ್ಮ ಜೀವನದುದ್ದಕ್ಕೂ ಇರಲು ಸಾಧ್ಯವಾಗುತ್ತದೆ. ಇಷ್ಟಕ್ಕೂ ಏನೂ ಗುರಿಯಿಟ್ಟುಕೊಳ್ಳದೆ ಬದುಕುವವರು ನಮ್ಮ ನಡುವೆ ಇಲ್ಲದಿಲ್ಲ. ಅಯ್ಯೋ ಹೇಗೋ ಬದುಕಿದರಾಯಿತು ಎಂದು ಕೊಳ್ಳುವವರು ಬೇಕಾದಷ್ಟು ಮಂದಿಯಿದ್ದಾರೆ. ಆದರೆ ಸಮಾಜದಲ್ಲಿ ಹತ್ತರಲ್ಲಿ ಒಂದಾಗಿ ಬದುಕುವುದಕ್ಕಿಂತಲೂ ಹತ್ತರಲ್ಲಿ ಹನ್ನೊಂದು ಎಂಬಂತೆ ಪ್ರತ್ಯೇಕವಾಗಿ ಗೋಚರಿಸಿಕೊಂಡು ಬದುಕಬೇಕು ಅದು ಒಂಥರಾ ಮಜಾವಾಗಿರುತ್ತದೆ.

ನಮ್ಮ ಬದುಕಿಗೊಂದು ಗುರಿ ಅಗತ್ಯ. ಗುರಿಯಿಲ್ಲದ ಬದುಕು ಬದುಕೇ ಅಲ್ಲ. ಆದುದರಿಂದ ಬದುಕಿಗೊಂದು ಗುರಿಯಿಟ್ಟುಕೊಂಡು ಮುನ್ನಡೆಯಬೇಕು. ಗುರಿಯನ್ನು ತಲುಪಬೇಕಾದರೆ ಅವಿರತ ಶ್ರಮ ಅಗತ್ಯ. ಶ್ರಮ ಪಡದೆ ಗುರಿಯನ್ನು ತಲುಪಲಾಗದು. ನೆನಪಿರಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನ್ಯಾಯಯುತವಾಗಿರಲಿ. ಅದು ನಮ್ಮಲ್ಲಿ ಸದಾ ಸಂತೋಷ ನೆಮ್ಮದಿ ನೆಲೆಸಿರುವಂತೆ ನೋಡಿಕೊಳ್ಳುತ್ತದೆ. ನಮ್ಮ ಬದುಕಿನಲ್ಲಿ ಬಾಲ್ಯದಿಂದ ವೃದ್ಧರ ತನಕ ಗುರಿಯಿಟ್ಟುಕೊಂಡೇ ಎಲ್ಲರೂ ಬದುಕಿ ಬಂದಿರುತ್ತಾರೆ.
ನಾವು ಹುಟ್ಟಿದ್ದು ಜೀವಿಸಲು ಜೀವಿಸೋಣ
ನಾವೇನು ಆಗಬೇಕು ಎಂಬುದನ್ನು ನಾವು ಮೊದಲೇ ನಿರ್ಧರಿಸಿಕೊಳ್ಳಬೇಕು. ಏಕೆಂದರೆ ಗಾಂಧಿ ತತ್ವಗಳನ್ನು ಅನುಸರಿಸಿದ ತಕ್ಷಣ ಗಾಂಧಿಯಾಗುವುದಿಲ್ಲ. ಹಾಗಾಗಿ ನಾವು ಹಿರಿಯರ ತತ್ವ, ಆದರ್ಶಗಳನ್ನು ಪಾಲಿಸಬೇಕು. ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ಅವರಂತೆ ಬದುಕಲು ಸಾಧ್ಯವಾಗದೆ ಹೋಗಬಹುದು ಆದರೆ ಅವರಂತೆ ಬದುಕಲು ಪ್ರಯತ್ನ ಪಡಬಹುದಲ್ಲವೆ? ಭೂಮಿ ಮೇಲೆ ಹುಟ್ಟಿದ ಎಲ್ಲರ ಬದುಕು ಒಂದೇ ರೀತಿಯಲ್ಲಿರುವುದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಜೀವನ ಶೈಲಿಗಳನ್ನು ರೂಢಿಸಿಕೊಂಡಿರುತ್ತಾರೆ.

ಬಹಳಷ್ಟು ಜನರ ಜೀವನ ಶೈಲಿಗಳು ಅವರ ಹೊರತು ಬೇರೆಯವರಿಗೆ ಇಷ್ಟವಾಗದಿರಬಹುದು. ಹಾಗೆಂದು ಅವರೇನು ಅದನ್ನು ಬದಲಾಯಿಸಿಕೊಳ್ಳಲು ತಯಾರಿರುವುದಿಲ್ಲ. ಮತ್ತು ಅವರು ಬೇರೆಯವರಿಗಾಗಿಯೂ ಬದುಕುವುದಿಲ್ಲ. ಅವರಿಗಾಗಿಯೇ ಬದುಕಿರುತ್ತಾರೆ. ಇಂತಹವರ ನಡುವೆ ನಾವು ಬದುಕಬೇಕಾಗುತ್ತದೆ. ನಮಗೆ ಅವರು ಹೊಂದಿಕೊಳ್ಳಲ್ಲ ಎಂಬುದು ಗೊತ್ತಾದ ಮೇಲೆ ನಾವೇ ಅವರಿಗೆ ಹೊಂದಿಕೊಳ್ಳುವುದು ಅನಿವಾರ್ಯ. ಇಲ್ಲದೆ ಹೋದರೆ ಅವರ ನಡುವೆ ನಾವು ಬದುಕುವುದು ಕಷ್ಟವಾಗುತ್ತದೆ. ನಾವು ಹುಟ್ಟಿದ್ದು ಜೀವಿಸಲು ಎಂದ ಮೇಲೆ ಎಲ್ಲವನ್ನು ಮೀರಿ ಜೀವಿಸಲೇ ಬೇಕಾಗುತ್ತದೆ.
ಒಂದೊಳ್ಳೆಯ ದಿನಕ್ಕಾಗಿ ಕಾಯಲೇ ಬೇಕು
ಈ ಸಮಾಜದಲ್ಲಿ ಪ್ರತಿಯೊಬ್ಬರ ಬದುಕು ಒಂದೊಂದು ರೀತಿಯಲ್ಲಿರುತ್ತದೆ. ನಮ್ಮ ಮುಂದಿನ ಜೀವನ ಹೇಗೋ ಗೊತ್ತಿಲ್ಲ. ಅದು ನಮ್ಮ ಕೈಯ್ಯಲ್ಲಿಲ್ಲ. ಆದರೆ ನಾವು ಮಾಡುವ ಕೆಲಸಗಳು, ತೆಗೆದುಕೊಳ್ಳುವ ನಿರ್ಣಯಗಳು ನಮ್ಮ ಮುಂದಿನ ಜೀವನದ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ, ಅಷ್ಟೇ ಅಲ್ಲ ಇವತ್ತು ಮಾಡಿದ್ದಕ್ಕೆ ಇವತ್ತೇ ಫಲ ಸಿಗಬೇಕು ಎಂಬುದು ದುರಾಸೆಯಾಗಿ ಬಿಡುತ್ತದೆ. ಪ್ರತಿಯೊಂದಕ್ಕೂ ಒಂದು ಸಮಯ ಅಂಥ ಇರುತ್ತದೆ. ಅದು ಬರುವ ತನಕ ಕಾಯಲೇ ಬೇಕು.

ಬಾಯಾರಿಕೆ, ಸುಸ್ತು ಆದಾಗ ರಸ್ತೆ ಬದಿಯಲ್ಲಿ ಸಿಗುವ ಎಳನೀರು ಕುಡಿದು ನೆಮ್ಮದಿ ಪಡುತ್ತೇವೆ. ಆದರೆ ಆ ಎಳನೀರು ನಮಗೆ ಇವತ್ತು ಸಿಕ್ಕಿದೆ ಎನ್ನುವುದಾದರೆ ಗಿಡನೆಟ್ಟು ಬೆಳೆಸಿ ಅದು ಫಸಲು ಬರೋತನಕ ಹತ್ತಾರು ವರ್ಷ ಒಬ್ಬ ರೈತನೂ ಕಾದಿರುತ್ತಾನೆ ಅಲ್ಲವೆ? ಆದರೆ ಅದನ್ನು ನಾವು ಮರೆತು ಬಿಡುತ್ತೇವೆ. ಹಣ ಕೊಟ್ಟಿದ್ದೇವೆ. ತಕ್ಷಣ ಸಿಕ್ಕಿದೆ. ಆದರೆ ಅದರ ಹಿಂದೆ ಯಾರೋ ಒಬ್ಬರು ವರ್ಷಾನುಗಟ್ಟಲೆ ಕಾದಿದ್ದಾರೆ. ಇಲ್ಲಿ ಎಲ್ಲವೂ ತಕ್ಷಣಕ್ಕೆ ಸಿಗುವುದಿಲ್ಲ. ಕಾಯುವುದು ಅನಿವಾರ್ಯ. ಹಾಗೆಯೇ ನಮ್ಮ ಬದುಕು ಕೂಡ.
ಯಶಸ್ಸಿನ ಹಿಂದೆ ನೋವಿದೆ..ಹೋರಾಟವಿದೆ
ಬದುಕಿನಲ್ಲಿ ಯಶಸ್ಸು ಪಡೆದ ವ್ಯಕ್ತಿಯನ್ನು ನೋಡಿದಾಗಲೂ ಹಾಗೆಯೇ ಅಂದು ಕೊಳ್ಳುತ್ತೇವೆ. ಆತ ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ಧಿಗೆ ಬಂದಿರಬಹುದು ಆದರೆ ಅದಕ್ಕಾಗಿ ಆತ ಎಷ್ಟು ಅದೆಷ್ಟೋ ವರ್ಷ ಶ್ರಮಪಟ್ಟಿರುತ್ತಾನೆ. ಆ ಗುರಿ ತಲುಪಲು ಅವನೆಷ್ಟು ಹೋರಾಟ ಮಾಡಿದ್ದಾನೆ ಎಂಬುದು ಅವನಿಗಷ್ಟೇ ಗೊತ್ತಿರುತ್ತದೆ. ಮತ್ತೊಬ್ಬರ ಏಳಿಗೆ ನೋಡಿ ಅವನ ಅದೃಷ್ಟ ಚೆನ್ನಾಗಿದೆ.
ಹಾಗಾಗಿ ಆತ ಆ ರೀತಿಯಲ್ಲಿ ಏಳ್ಗೆಯಾದ ಎಂದು ಹಲಬುವ ಮುನ್ನ ಆ ಮಟ್ಟಕ್ಕೆ ಬೆಳೆಯಲು ಅವನೆಷ್ಟು ತ್ಯಾಗ ಮಾಡಿದ್ದಾನೆ? ಅದೆಷ್ಟು ದಿನ ನಿದ್ದೆಗೆಟ್ಟು ದುಡಿದಿದ್ದಾನೆ? ಎಷ್ಟೊಂದು ಅವಮಾನ, ನೋವುಗಳನ್ನು ಸಹಿಸಿಕೊಂಡಿದ್ದಾನೆ ಎಂಬುದರ ಬಗ್ಗೆಯೂ ಅರಿತಾಗ ಮಾತ್ರ ಯಶಸ್ಸಿನ ಹಿಂದಿನ ಗುಟ್ಟೇನು ಎಂಬುದು ಗೊತ್ತಾಗುತ್ತದೆ.
ಇಲ್ಲಿ ಗೆದ್ದವನಷ್ಟೆ ಸೋತವನೂ ಶ್ರಮಪಟ್ಟಿರುತ್ತಾನೆ. ಕೆಲವೇ ಕೆಲವು ಅಂತರದಲ್ಲಿ ಸೋಲು ಕಂಡಿರುತ್ತಾನೆ. ಸೋತವನು ಗೆಲುವಿಗೆ ಹಂಬಲಿಸಬೇಕು, ಗೆದ್ದವನು ಗೆಲುವನ್ನು ಉಳಿಸಿಕೊಳ್ಳಬೇಕು. ಇಲ್ಲಿ ಇಬ್ಬರೂ ಹೋರಾಡುತ್ತಲೇ ಬದುಕಬೇಕು. ಇಲ್ಲದೆ ಹೋದರೆ ಸೋಲು ಇಬ್ಬರಿಗೂ ತಪ್ಪಿದಲ್ಲ.
ಜೀವನದಲ್ಲಿ ಸೋಲು, ಕಷ್ಟ ಎಲ್ಲವೂ ಇದ್ದದ್ದೇ. ಒಮ್ಮೆ ಸೋಲು ಎದುರಾಯಿತೆಂದರೆ ಜೀವನವೇ ಮುಗಿಯಿತು ಎಂದುಕೊಳ್ಳುವುದು ದಡ್ಡತನ. ಮಳೆಬಿಟ್ಟ ನಂತರ ಬಿಸಿಲು ಬಂದೇ ಬರುತ್ತದೆ. ಹಾಗೆಯೇ ಕಷ್ಟಗಳು, ಯಶಸ್ಸು, ಗೆಲುವು ಎಲ್ಲವೂ ಅಷ್ಟೆ. ಸೋಲಿಗೆ ಭಯಪಡಬಾರದಷ್ಟೆ. ಸೋಲು ಎನ್ನುವುದು ನಮ್ಮ ಬದುಕಿನಲ್ಲಿ ಎದುರಾಗುವ ಅಡೆತಡೆಗಳಲ್ಲಿ ಒಂದು ಎಂಬಂತೆ ನಾವಿಟ್ಟುಕೊಂಡ ಗುರಿಯ ಕಡೆಗೆ ಮುನ್ನಡೆಯುತ್ತಿರಬೇಕು.. ಅದೇ ಜೀವನ.
-
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್












Click it and Unblock the Notifications