ನಿಮ್ಮ ಸ್ಕಿನ್ ಟೋನ್ ಗೆ ಮ್ಯಾಚ್ ಆಗುವ ಲಿಪ್ಸ್ಟಿಕ್ ಶೇಡ್ ಕಂಡುಹಿಡಿಯಲು 7 ಟಿಪ್ಸ್
ನಮ್ಮ ಸ್ಕಿನ್ ಟೋನ್ ಗೆ ಸೂಕ್ತವಾದ ಲಿಪ್ಸ್ಟಿಕ್ ಶೇಡ್ ಆಯ್ಕೆ ಮಾಡುವುದು ಹೇಗೆ ಎಂದು ಅರಿತುಕೊಳ್ಳುವುದು ಬಹಳ ಮುಖ್ಯ. ಹಾಗಿದ್ದರೆ ಮೀಡಿಯಂ ಸ್ಕಿನ್ ಟೋನ್ ನವರು ಯಾವ ರೀತಿಯ ಶೇಡ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕಂಡುಕೊಳ್ಳುವ ಸುಲಭ ವಿಧಾನ ಇಲ್ಲಿದೆ.
ಮುಖದ ಸೌಂದರ್ಯ ಹೆಚ್ಚಿಸುವ ಸಲುವಾಗಿ ಬಳಸುವ ಸೌಂದರ್ಯ ವರ್ಧಕಗಳಲ್ಲಿ ಲಿಪ್ಸ್ಟಿಕ್ ಕೂಡಾ ಒಂದು. ಆದರೆ, ನಮ್ಮ ಮುಖದ ಬಣ್ಣ ಅಂದರೆ ಸ್ಕಿನ್ ಟೋನ್ ಗೆ ಅನುಗುಣವಾಗಿ ಸರಿಯಾದ ಲಿಪ್ಸ್ಟಿಕ್ ಶೇಡ್ ಆಯ್ಕೆ ಮಾಡಿಕೊಂಡಾಗ ಮಾತ್ರ ತುಟಿಯ ಮೆರಗು ಹೆಚ್ಚುವುದು. ಜೊತೆಗೆ ಮುಖದ ಹೊಳಪು ಕೂಡಾ ಹೆಚ್ಚುವುದು. ಹಾಗಾಗಿ ನಮ್ಮ ಸ್ಕಿನ್ ಟೋನ್ ಗೆ ಸೂಕ್ತವಾದ ಲಿಪ್ಸ್ಟಿಕ್ ಶೇಡ್ ಆಯ್ಕೆ ಮಾಡುವುದು ಹೇಗೆ ಎಂದು ಅರಿತುಕೊಳ್ಳುವುದು ಬಹಳ ಮುಖ್ಯ. ಹಾಗಿದ್ದರೆ ಮೀಡಿಯಂ ಸ್ಕಿನ್ ಟೋನ್ ನವರು ಯಾವ ರೀತಿಯ ಶೇಡ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕಂಡುಕೊಳ್ಳುವ ಸುಲಭ ವಿಧಾನ ಇಲ್ಲಿದೆ.

ಮೀಡಿಯಂ ಸ್ಕಿನ್ ಟೋನ್ ನವರು ಸರಿಯಾದ ಲಿಪ್ಸ್ಟಿಕ್ ಶೇಡ್ ಗಳನ್ನು ಸುಲಭವಾಗಿ ಕಂಡುಹಿಡಿಯಲು ಇರುವ 7 ಸಲಹೆಗಳು :
1. ನಿಮ್ಮ ಅಂಡರ್ಟೋನ್ ಅನ್ನು ತಿಳಿದುಕೊಳ್ಳಿ:
ಲಿಪ್ಸ್ಟಿಕ್ ಶೇಡ್ ಆಯ್ಕೆ ಮಾಡಿಕೊಳ್ಳುವ ಮೊದಲು ನಿಮ್ಮ ಅಂಡರ್ಟೋನ್ ಅನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಮೀಡಿಯಂ ಸ್ಕಿನ್ ಟೋನ್ ವಾರ್ಮ್, ಕೂಲ್ ಮತ್ತು ನ್ಯುಟರಲ್ ಅಂಡರ್ಟೋನ್ಗಳನ್ನು ಹೊಂದಿರುತ್ತವೆ.ವಾರ್ಮ್ ಅಂಡರ್ಟೋನ್ ನವರು ಪೀಚಿ ನ್ಯೂಡ್ಸ್ ಮತ್ತು ಕೋರಲ್ ಶೇಡ್ ಗಳನ್ನು ಬಳಸಬಹುದು. ಆದರೆ, ಕೂಲ್ ಅಂಡರ್ಟೋನ್ ನವರು ಬೆರ್ರಿ, ಮಾವ್ ಮತ್ತು ಗುಲಾಬಿ ಶೇಡ್ ಅನ್ನು ಬಳಸಿದರೆ ಅವರ ಮುಖದ ಹೊಳಪು ಹೆಚ್ಚುವುದು. ಇನ್ನು ನ್ಯೂಟ್ರಲ್ ಅಂಡರ್ಟೋನ್ ಇದ್ದರೆ ಮೇಲೆ ತಿಳಿಸಿದ ಎಲ್ಲಾ ಶೇಡ್ ಗಳನ್ನು ಅಂದರೆ ವಾರ್ಮ್ ಮಾತ್ತು ಕೂಲ್ ಅಂಡರ್ಟೋನ್ ನವರು ಬಳಸುವ ಎಲ್ಲಾ ಶೇಡ್ ಗಳನ್ನು ಬಳಸಬಹುದು.
2. ನ್ಯೂಡ್ ಲಿಪ್ಸ್ಟಿಕ್ ಶೇಡ್ ಆಯ್ಕೆ ವೇಳೆ ಇರಲಿ ಎಚ್ಚರ:
ಎಲ್ಲಾ ನ್ಯೂಡ್ ಲಿಪ್ಸ್ಟಿಕ್ ಶೇಡ್ ಗಳು ಮೀಡಿಯಂ ಸ್ಕಿನ್ ಟೋನ್ ಗಳಿಗೆ ಸೂಕ್ತವಲ್ಲ. ತುಂಬಾ ತಿಳಿ ಶೇಡ್ ಗಳ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ಅವು ತ್ವಚೆಯನ್ನು ಮಸುಕಾಗಿ ಕಾಣುವಂತೆ ಮಾಡಬಹುದು. ಬದಲಾಗಿ, ನ್ಯಾಚ್ಯುರಲ್ ಲುಕ್ ಗಾಗಿ ಪಿಂಕ್, ಕ್ಯಾರಮೆಲ್ ಅಥವಾ ಕಂದು ಬಣ್ಣದ ಅಂಡರ್ಟೋನ್ ಹೊಂದಿರುವ ಶೇಡ್ ಗಳನ್ನು ಪ್ರಯತ್ನಿಸಿ.
3.ಕಡು ಕೆಂಪು ಮತ್ತು ಕೋರಲ್ ಶೇಡ್:
ಕಡು ಕೆಂಪು, ಇಟ್ಟಿಗೆ ಕೆಂಪು ಮತ್ತು ಹವಳದ ಬಣ್ಣ ಮೀಡಿಯಂ ಸ್ಕಿನ್ ಟೋನ್ ನವರಿಗೆ ಅದ್ಭುತವಾಗಿ ಕಾಣುತ್ತವೆ. ಈ ಬಣ್ಣಗಳು ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುತ್ತದೆ.
4. ಬ್ರೈಟ್ ಕಲರ್ ಗಳ ಆಯ್ಕೆಗೆ ಹೆದರದಿರಿ:
ಮೀಡಿಯಂ ಸ್ಕಿನ್ ಟೋನ್ ಇದ್ದರೆ ಬ್ರೈಟ್ ಕಲರ್ ಅಥವಾ ಡಾರ್ಕ್ ಕಲರ್ ಗಳ ಆಯ್ಕೆ ಮಾಡಿಕೊಳ್ಳಬಹುದು. ಡಾರ್ಕ್ ಬೆರ್ರಿ, ವೈನ್, ಪ್ಲಮ್ ಮತ್ತು ಬರ್ನ್ಟ್ ಆರೆಂಜ್ ಮೀಡಿಯಂ ಸ್ಕಿನ್ ಟೋನ್ ನವರಿಗೆ ಉತ್ತಮವಾಗಿ ಕಾಣುತ್ತವೆ.
5. ಫಿನಿಶಿಂಗ್ ಬಹಳ ಮುಖ್ಯ:
ಲಿಪ್ಸ್ಟಿಕ್ ಹಾಕುವಾಗ ನೀಡುವ ಫಿನಿಶಿಂಗ್ ಲಿಪ್ಸ್ಟಿಕ್ ಕಲರ್ ನಷ್ಟೇ ಮುಖ್ಯವಾಗಿರುತ್ತದೆ. ಕೆನೆ ಅಥವಾ ಸ್ಯಾಟಿನ್ ಫಿನಿಶಿಂಗ್ ನ್ಯಾಚ್ಯುರಲ್ ಲುಕ್ ಗೆ ಉತ್ತಮವಾಗಿದೆ. ಆದರೆ ಮ್ಯಾಟ್ ಫಿನಿಶಿಂಗ್ ಬೋಲ್ಡ್ ಲುಕ್ ನೀಡುತ್ತದೆ.
6. ನಿಮ್ಮ ಮೇಕಪ್ ಲುಕ್ ಅನ್ನು ಪರಿಗಣಿಸಿ:
ನಿಮ್ಮ ಮೇಕಪ್ ನ ಒಟ್ಟಾರೆ ನೋಟವು ಲಿಪ್ಸ್ಟಿಕ್ ಬಣ್ಣ ಹೇಗೆ ಕಾಣುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.ನಿಮ್ಮ ಕಣ್ಣುಗಳ ಮೇಲೆ ನೀಡುವ ಮೃದುವಾದ ಮೇಕಪ್ ಬ್ರೈಟ್ ಲಿಪ್ಸ್ಟಿಕ್ ಬಣ್ಣಗಳೊಂದಿಗೆ ಉತ್ತಮವಾಗಿರುತ್ತದೆ.ಆದರೆ, ಡ್ರಮ್ಯಾಟಿಕ್ ಐ ಲುಕ್ ನ್ಯೂಟ್ರಲ್ ಲಿಪ್ಸ್ಟಿಕ್ ಶೇಡ್ ನೊಂದಿಗೆ ಉತ್ತಮವಾಗಿ ಕಾಣಿಸುತ್ತದೆ.
7. ಲಿಪ್ಸ್ಟಿಕ್ ಖರೀದಿಗೆ ಮುನ್ನ ಅವುಗಳನ್ನು ಪರೀಕ್ಷಿಸಿಕೊಳ್ಳಿ:
ಲಿಪ್ಸ್ಟಿಕ್ ಬಣ್ಣಗಳನ್ನು ಖರೀದಿಸುವ ಮೊದಲು ಅವುಗಳನ್ನು ಪರೀಕ್ಷಿಸುವುದು ಒಳ್ಳೆಯದು. ನಿಮ್ಮ ತುಟಿಗಳಿಗೆ ಅಥವಾ ನಿಮ್ಮ ಕೈಯ ಹಿಂಭಾಗಕ್ಕೆ ಬಣ್ಣವನ್ನು ಹಚ್ಚುವ ಮೂಲಕ ಮತ್ತು ನೈಸರ್ಗಿಕ ಬೆಳಕಿನಲ್ಲಿ ಅದು ಹೇಗೆ ಕಾಣುತ್ತದೆ ಎಂಬುದನ್ನು ನೋಡುವ ಮೂಲಕ ಈ ಪರೀಕ್ಷೆ ಮಾಡಬಹುದು.ಈ ರೀತಿಯಾಗಿ, ನೀವು ಆಯ್ಕೆ ಮಾಡಿಕೊಂಡಿರುವ ಬಣ್ಣವು ನಿಮ್ಮ ಟೋನ್‌ಗೆ ಪೂರಕವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.












Click it and Unblock the Notifications