ಹೊಟ್ಟೆ ಬೊಜ್ಜು ಕರಗಿಸಲು 6 ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಬದಲಾದ ಜೀವನ ಶೈಲಿಯಲ್ಲಿ ಈಗ ಎಲ್ಲರಿಗೂ ಎದುರಾಗುತ್ತಿರುವ ಸಮಸ್ಯೆ ಎಂದರೆ ಹೊಟ್ಟೆ ಬೊಜ್ಜು. ಹೆಚ್ಚಾಗುತ್ತಿರುವ ಕೆಲಸದ ಒತ್ತಡ ಹಾಗೂ ಬದಲಾದ ಜೀವನ ಶೈಲಿಯಲ್ಲಿ ಹೊಟ್ಟೆ ಬೊಜ್ಜು ಕರಗಿಸುವುದು ಹಲವರಿಗೆ ಸವಾಲು. ಆದರೆ ಹೊಟ್ಟೆ ಬೊಜ್ಜು ಕರಗಿಸುವುದಕ್ಕೆ ಇಲ್ಲೊಂದಿಷ್ಟು ಸಿಂಪಲ್ ಟಿಪ್ಸ್ ಇವೆ. ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ. ನೀವು ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.
ಇದಕ್ಕೆ ನೀವು ಹೆಚ್ಚು ಪರಿಶ್ರಮ ಹಾಕುವ ಅವಶ್ಯಕತೆಯೂ ಇಲ್ಲ. ಹೊಟ್ಟೆ ಬೊಜ್ಜು ತುಂಬಾ ದಿನ ದೇಹದಲ್ಲಿ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳುವುದು ಒಳ್ಳೆಯದು. ಅಲ್ಲದೆ ಬೊಜ್ಜಿನಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ.

ಸರಿಯಾಗಿ ನಿದ್ದೆ ಮಾಡಿ: ಮನುಷ್ಯ ಪ್ರತಿದಿನ ಸರಿಯಾದ ಸಮಯದ ನಿದ್ದೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ. ನೀವು ಪ್ರತಿ ದಿನ 7ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೇ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು ಅದರಲ್ಲಿ ಬೊಜ್ಜಿನ ಸಮಸ್ಯೆಯೂ ಒಂದಾಗಿದೆ. ನೀವು ನಿಮ್ಮ ದೇಹಕ್ಕೆ ವಿಶ್ರಾಂತಿ ಕೊಟ್ಟಾಗ ದೇಹದ ಒಳಗೆ ಸ್ವಚ್ಛತಾ ಕೆಲಸವೂ ನಡೆಯುತ್ತದೆ. ಹೀಗಾಗಿ ರಾತ್ರಿ ವೇಳೆ ಬೇಗ ತಿಂದು, ಬೇಗ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಮಲಗುವ ಸಮಯಕ್ಕೂ 2 ಗಂಟೆ ಮೊದಲು ಊಟ ಮಾಡುವುದು ಅತ್ಯಂತ ಮುಖ್ಯ.
ಒತ್ತಡ ಕಡಿಮೆ ಮಾಡಿಕೊಳ್ಳಿ: ಹೌದು ಇದು ಅಚ್ಚರಿ ಎನಿಸಿದರೂ ನಿಜ. ಹೆಚ್ಚು ಒತ್ತಡ ಮಾಡಿಕೊಳ್ಳುವುದರಿಂದ ದೇಹದಲ್ಲಿ ಅನವಶ್ಯಕವಾಗಿ ಕೊಬ್ಬಿನ ಅಂಶ ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾಗುವುದರಿಂದ ಹೊಟ್ಟೆಯ ಸುತ್ತಲಿನ ಭಾಗದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವ ಸಾಧ್ಯತೆ ಇದೆ.
ಮದ್ಯ ಸೇವಿಸುವುದನ್ನು ತಪ್ಪಿಸಿ: ದೇಹದಲ್ಲಿ ಅನವಶ್ಯಕ ಕೊಬ್ಬಿನ ಅಂಶ ಸೇರುವುದಕ್ಕೆ ಮುಖ್ಯ ಕಾರಣಗಳಲ್ಲಿ ಮದ್ಯ ಸೇವನೆಯೂ ಒಂದಾಗಿದೆ. ಹೀಗಾಗಿ ನಿಮಗೆ ಮದ್ಯ ಸೇವಿಸುವ ಅಭ್ಯಾಸವಿದ್ದರೆ, ಸಾಧ್ಯವಾದಷ್ಟು ಮದ್ಯ ಸೇವಿಸುವುದರಿಂದ ದೂರವಿರಿ. ಮದ್ಯದಲ್ಲಿ ಇರುವ ಕೆಲವು ಅಂಶಗಳು ಹಸಿವನ್ನು ಕಡಿಮೆ ಮಾಡುತ್ತದೆ. ಇದು ಪರೋಕ್ಷವಾಗಿ ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.
ಎಳೆ ನೀರು ಕುಡಿಯಿರಿ: ನಿಯಮಿತವಾಗಿ ದೇಹದ ತೂಕ ಅಥವಾ ಕೊಬ್ಬಿನ ಅಂಶವನ್ನು ಕರಗಿಸುವುದಕ್ಕೆ ಎಳನೀರು ಕುಡಿಯಿರಿ. ಇದರಿಂದ ದೇಹದ ಉಷ್ಣಾಂಶ ಇಳಿಕೆಯಾಗುವುದರೊಂದಿಗೆ ಹೊಟ್ಟೆ ಸ್ವಚ್ಛವಾಗಿರಲು ಸಹಕಾರಿಯಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ.
ನಿಯಮಿತ ವ್ಯಾಯಾಮ ಅಥವಾ ಜಾಗಿಂಗ್: ದೇಹದಲ್ಲಿ ಅನವಶ್ಯಕವಾಗಿರುವ ಕೊಬ್ಬನ್ನು ಕರಗಿಸುವುದಕ್ಕೆ ಕೇವಲ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದರೆ ಸಾಲದು. ನೀವು ಇದಕ್ಕಾಗಿ ವ್ಯಾಯಾಮ ಅಥವಾ ಜಾಗಿಂಗ್‌ಗಳನ್ನು ಸಹ ರೂಢಿ ಮಾಡಿಕೊಳ್ಳಬೇಕು. ದಿನಕ್ಕೆ ಕನಿಷ್ಠ 30 ನಿಮಿಷಗಳಾದರೂ ನೀವು ವ್ಯಾಯಾಮ ಮಾಡುವುದರಿಂದ ಫಿಟ್ ಅಂಡ್ ಹೆಲ್ತಿ ಆಗಿರಲು ಸಾಧ್ಯವಿದೆ.
ಸಿಟ್ರಸ್ ಹಣ್ಣುಗಳನ್ನು ಸೇವಿಸಿ: ದೇಹದಲ್ಲಿ ಜೀರ್ಣಕ್ರಿಯೆ ಹಾಗೂ ಚಯಾಪಚಯ ಹೆಚ್ಚಾಗುವುದಕ್ಕೆ ಈ ಹಣ್ಣು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಸಹ ಇದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕವನ್ನು ಹಾಗೂ ಕೊಬ್ಬಿನ ಅಂಶಗಳನ್ನು ಇಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.












Click it and Unblock the Notifications