ಮನೆಯ ಮುಖ್ಯ ದ್ವಾರದ ಬಳಿ ಈ 6 ಗಿಡಗಳಿದ್ದರೆ ಅದೃಷ್ಟ ಮತ್ತು ಐಶ್ವರ್ಯ ಹೆಚ್ಚುತ್ತದೆ ಎಂಬ ನಂಬಿಕೆ
ಮನೆಯ ಮುಖ್ಯ ದ್ವಾರವು ಕೇವಲ ಅತಿಥಿಗಳನ್ನು ಸ್ವಾಗತಿಸುವ ಸ್ಥಳ ಮಾತ್ರವಲ್ಲ, ಅನೇಕ ಸಂಸ್ಕೃತಿಗಳ ಪ್ರಕಾರ ಅದು ಮನೆಯೊಳಗಿನ ಸಕಾರಾತ್ಮಕ ಶಕ್ತಿ, ಸಮೃದ್ಧಿ ಮತ್ತು ನೆಮ್ಮದಿಯ ಪ್ರವೇಶ ದ್ವಾರವೂ ಆಗಿದೆ. ಅದಕ್ಕಾಗಿಯೇ ಜಗತ್ತಿನ ವಿವಿಧ ದೇಶಗಳಲ್ಲಿ ಮನೆ ಮುಖ್ಯ ದ್ವಾರವು ಬಳಿ ಕೆಲವು ವಿಶೇಷ ಸಸ್ಯಗಳನ್ನು ನೆಡುವ ಸಂಪ್ರದಾಯವಿದೆ. ಇವುಗಳು ಅದೃಷ್ಟ, ಐಶ್ವರ್ಯ ಮತ್ತು ಉತ್ತಮ ಶಕ್ತಿಯನ್ನು ಆಕರ್ಷಿಸುತ್ತವೆ ಎಂಬ ನಂಬಿಕೆ ಇದೆ. ಅಂತಹ 6 ಅದೃಷ್ಟದಾಯಕ ಸಸ್ಯಗಳ ವಿವರ ಇಲ್ಲಿದೆ.
ಆಲಿವ್ ಮರ
ಆಲಿವ್ ಮರವನ್ನು ಸಾವಿರಾರು ವರ್ಷಗಳಿಂದ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿ ಪರಿಗಣಿಸಲಾಗಿದೆ. ಗ್ರೀಸ್ ಮತ್ತು ಇಟಲಿಯಂತಹ ದೇಶಗಳಲ್ಲಿ ಮನೆಗಳ ಪ್ರವೇಶದ ಬಳಿ ಇದನ್ನು ನೆಡುವ ಸಂಪ್ರದಾಯವಿದೆ. ಸದಾ ಹಸಿರಾಗಿರುವ ಈ ಮರವು ದೀರ್ಘಾಯುಷ್ಯ, ಸ್ಥಿರತೆ ಮತ್ತು ಯಶಸ್ಸಿನ ಸಂಕೇತವಾಗಿದೆ. ಈ ಮರಗಳು ತಲೆತಲಾಂತರಗಳಿಂದಲೂ ಶಾಂತಿ ಮತ್ತು ಬುದ್ಧಿವಂತಿಕೆಯ ಪ್ರತೀಕವಾಗಿವೆ. ಮನೆಗೆ ಶಾಂತಿ ಹಾಗೂ ಆರ್ಥಿಕ ಸ್ಥಿರತೆಯನ್ನು ತರಲಿದೆ ಎಂಬ ನಂಬಿಕೆ ಇದೆ.

ದಾಸವಾಳ (ಹಿಬಿಸ್ಕಸ್)
ದಾಸವಾಳ ಹೂವು ಇದು ಉಷ್ಣವಲಯದಲ್ಲಿ ಬೆಳೆಯುವ ಸುಂದರವಾದ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಹೂವಾಗಿದೆ. ಹಿಂದೂ ಧರ್ಮದಲ್ಲಿ ದಾಸವಾಳದ ಹೂವನ್ನು ಪೂಜೆಗೆ, ವಿಶೇಷವಾಗಿ ಗಣಪತಿ ಮತ್ತು ದೇವಿಯ ಆರಾಧನೆಗೆ ಬಳಸಲಾಗುತ್ತದೆ. ಹವಾಯಿ ಹಾಗೂ ಆಗ್ನೇಯ ಏಷ್ಯಾದ ಹಲವು ಪ್ರದೇಶಗಳಲ್ಲಿ ಮನೆಗಳ ಬಳಿ ಇದನ್ನು ನೆಡುವುದು ಸಾಮಾನ್ಯ. ಇದರ ಬಣ್ಣಬಣ್ಣದ ಹೂವುಗಳು ಮನೆಯ ವಾತಾವರಣವನ್ನು ಆಕರ್ಷಕವಾಗಿಸುವುದರ ಜೊತೆಗೆ ಕುಟುಂಬ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.
ಲ್ಯಾವೆಂಡರ್ ಗಿಡ
ಯುರೋಪಿನ ಹಲವು ದೇಶಗಳಲ್ಲಿ ಲ್ಯಾವೆಂಡರ್ ಸಸ್ಯವನ್ನು ರಕ್ಷಣೆ ಮತ್ತು ಶುದ್ಧತೆಯ ಸಂಕೇತವಾಗಿ ನೋಡಲಾಗುತ್ತದೆ. ವಿಶೇಷವಾಗಿ ಫ್ರಾನ್ಸ್‌ನ ಪ್ರೊವಾನ್ಸ್ ಪ್ರದೇಶದಲ್ಲಿ ಮನೆಗಳ ಬಾಗಿಲುಗಳ ಬಳಿ ಇದನ್ನು ಬೆಳೆಯುತ್ತಾರೆ. ಇದರ ಸುಗಂಧ ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ನಕಾರಾತ್ಮಕ ಶಕ್ತಿಯನ್ನು ದೂರವಿರಿಸುತ್ತದೆ ಎಂದು ನಂಬಲಾಗಿದೆ. ಇದು ಸುಂದರವಾದ ನೀಲಿ ಅಥವಾ ನೇರಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ಮನೆಯೊಳಗೆ ಶಾಂತಿ ಮತ್ತು ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸಲು ಇದು ಸಹಾಯಕವೆಂದು ಹೇಳಲಾಗುತ್ತದೆ.
ಕುಮ್ಕ್ವಾಟ್ ಸಸ್ಯ
ಚೀನಾ ಮತ್ತು ಜಪಾನ್ ಸಂಸ್ಕೃತಿಯಲ್ಲಿ ಕುಮ್ಕ್ವಾಟ್ ಸಸ್ಯವು ಐಶ್ವರ್ಯ ಮತ್ತು ಅದೃಷ್ಟದ ಸಂಕೇತವಾಗಿದೆ. ಇದರ ಕಿತ್ತಳೆ ಬಣ್ಣದ ಹಣ್ಣುಗಳನ್ನು ಚಿನ್ನದ ಪ್ರತೀಕವಾಗಿ ಪರಿಗಣಿಸಲಾಗುತ್ತದೆ. ಮನೆ ಪ್ರವೇಶದ ಬಳಿ ಈ ಸಸ್ಯವನ್ನು ಇಟ್ಟರೆ ಆರ್ಥಿಕ ಸಮೃದ್ಧಿ ಹಾಗೂ ಸಂತೋಷದ ಶಕ್ತಿ ಮನೆಗೆ ಪ್ರವೇಶಿಸುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಹಬ್ಬಗಳ ಸಮಯದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ರೋಸ್ ಮೇರಿ
ರೋಸ್ ಮೇರಿ ಸಸ್ಯವು ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳಲ್ಲಿ ರಕ್ಷಣೆ ಮತ್ತು ಸ್ಮರಣೆಯ ಸಂಕೇತವಾಗಿತ್ತು. ಮನೆಗಳ ಬಳಿ ಇದನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮಾನಸಿಕ ಸ್ಪಷ್ಟತೆ ಹೆಚ್ಚುತ್ತದೆ ಎಂದು ನಂಬಲಾಗಿದೆ. ಪ್ರವೇಶ ದ್ವಾರದ ಬಳಿ ರೋಸ್ ಮೇರಿ ಬೆಳೆಸುವುದರಿಂದ ಮನೆಯ ಸುತ್ತ ರಕ್ಷಣಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತದೆ.
ಜೇಡ್ ಸಸ್ಯ
ಜೇಡ್ ಸಸ್ಯವನ್ನು ಅನೇಕ ದೇಶಗಳಲ್ಲಿ "ಮನಿ ಪ್ಲಾಂಟ್" ಎಂದೂ ಕರೆಯಲಾಗುತ್ತದೆ. ಫೆಂಗ್‌ಶುಯಿ ಪ್ರಕಾರ ಇದು ಸಂಪತ್ತು, ಅದೃಷ್ಟ ಮತ್ತು ಯಶಸ್ಸಿನ ಸಂಕೇತವಾಗಿದೆ. ಮನೆ ಮುಖ್ಯ ದ್ವಾರದ ಬಳಿ ಅಥವಾ ಬಾಗಿಲಿನ ಸಮೀಪ ಇದನ್ನು ಇಟ್ಟರೆ ಧನಸಂಪತ್ತು ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಕಡಿಮೆ ನಿರ್ವಹಣೆಯಲ್ಲಿಯೇ ಚೆನ್ನಾಗಿ ಬೆಳೆಯುವ ಈ ಸಸ್ಯ ಮನೆ ಅಲಂಕಾರಕ್ಕೂ ಉತ್ತಮ ಆಯ್ಕೆಯಾಗಿದೆ.














Click it and Unblock the Notifications