ಮನೆಯಲ್ಲಿ ನೈಸರ್ಗಿಕ ತಂಪು ಬೇಕೇ, ಈ ಸಸ್ಯಗಳನ್ನು ನಿಮ್ಮ ಮನೆಯಲ್ಲಿ ಬೆಳಸಿ

ಈ ಬಾರಿ ಭಾರತದಲ್ಲಿ ಬೇಸಿಗೆ ತಾಪಮಾನ ಹೆಚ್ಚಾಗುತ್ತಲೆ ಇದೆ. ಹಲವಾರು ಮನೆಗಳಲ್ಲಿ ಎಸಿ, ಫ್ಯಾನ್‌ಗಳಂತಹ ಬಳಕೆ ಮಾಡುವುದೆ ಮುಖ್ಯ ಆಸರೆಯಾಗಿವೆ. ಆದರೆ, ಮನೆಯೊಳಗಿನ ಕೆಲವು ಸಣ್ಣ ಸಸ್ಯಗಳು ಸಹ ನೈಸರ್ಗಿಕವಾಗಿ ವಾತಾವರಣವನ್ನು ಸುಧಾರಿಸಿ ತಂಪಿನ ಅನುಭವ ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ, ಮನೆಯ ಒಳಗಡೆ ಬೆಳೆಯುವ ಸಸ್ಯಗಳು ನೇರವಾಗಿ ತಾಪಮಾನವನ್ನು ಕಡಿಮೆ ಮಾಡುವುದಿಲ್ಲ. ಆದರೆ, ಅವು "ಟ್ರಾನ್ಸ್‌ಪಿರೇಶನ್" (Transpiration) ಎಂಬ ಪ್ರಕ್ರಿಯೆಯ ಮೂಲಕ ಗಾಳಿಯಲ್ಲಿ ತೇವಾಂಶವನ್ನು ಹೆಚ್ಚಿಸಿ, ಕೋಣೆಯನ್ನು ಹೆಚ್ಚು ಆರಾಮದಾಯಕವಾಗಿ ಅಗುವಂತೆ ಮಾಡುತ್ತವೆ. ಸಸ್ಯಗಳು ಬೇರುಗಳ ಮೂಲಕ ನೀರನ್ನು ಹೀರಿಕೊಂಡು, ಎಲೆಗಳ ಮೂಲಕ ಆವಿಯಾಗಿ ಹೊರಬಿಡುತ್ತವೆ. ಇದರಿಂದ ಗಾಳಿಯ ತೇವಾಂಶ ಹೆಚ್ಚಾಗಿ ಮನೆಯಲ್ಲಿ ತಂಪಿನ ಅನುಭವ ನೀಡುತ್ತವೆ.

6 Best Indoor Plants

ತಜ್ಞರ ಪ್ರಕಾರ, ಸರಿಯಾದ ಸಸ್ಯಗಳನ್ನು ಸರಿಯಾಗಿ ಒಂದು ಜಾಗದಲ್ಲಿ ಇಟ್ಟರೆ 'ಮೈಕ್ರೋ ಕ್ಲೈಮೇಟ್ ಕ್ಲಸ್ಟರ್' ರೂಪುಗೊಳ್ಳುತ್ತದೆ. ಇದರಿಂದ ಮನೆ ಒಳಗಿನ ವಾತಾವರಣ ಇನ್ನಷ್ಟು ತಂಪಾಗಿರಲು ಸಹಾಯ ಮಾಡುತ್ತದೆ.

ಮನೆಯನ್ನು ತಂಪಾಗಿಡಲು ಈ 6 ಸಸ್ಯಗಳು ತುಂಬಾ ಸಹಾಯಮಾಡುತ್ತವೆ.

1. ಅರೇಕಾ ಪಾಮ್

ದೊಡ್ಡ ಎಲೆಗಳಿಂದ ಕೊಡಿರುವ ಈ ಸಸ್ಯವು ಉತ್ತಮವಾದ ನೈಸರ್ಗಿಕವಾಗಿ ಗಾಳಿಯಲ್ಲಿ ತೇವಾಂಶವನ್ನು ಹೆಚ್ಚಿಸುತ್ತದೆ. ಈ ಸಸ್ಯಕ್ಕೆ ಬೇಸಿಗೆಕಾಲದಲ್ಲಿ ವಾರಕ್ಕೆ 2 ರಿಂದ 3 ಬಾರಿ ನೀರನ್ನು ಹಾಕಬೇಕು.

ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ ಗಿಡಗಳಿಗೆ ನೀರುಣಿಸಿದರೆ ಸಸಿಗಳು ಸದಾ ಹಸಿರಾಗಿರುವುದು! ಕೈತೋಟ ನಳನಳಿಸುವುದು
ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ ಗಿಡಗಳಿಗೆ ನೀರುಣಿಸಿದರೆ ಸಸಿಗಳು ಸದಾ ಹಸಿರಾಗಿರುವುದು! ಕೈತೋಟ ನಳನಳಿಸುವುದು

2. ಬೋಸ್ಟನ್ ಫರ್ನ

ಗಾಳಿಯಲ್ಲಿ ತೇವಾಂಶವನ್ನು ಹೆಚ್ಚಿಸುವಲ್ಲಿ ಈ ಸಸ್ಯವು ಅತ್ಯುತ್ತಮ ಎಂದೆ ಹೇಳಲಾಗುತ್ತದೆ. ಇದನ್ನು ಮನೆಯ ಒಳಗೆ ಹ್ಯಾಂಗಿಂಗ್ ಪಾಟ್‌ನಲ್ಲಿ ಇಟ್ಟರೆ ಸುಂದರವಾಗಿ ಕಾಣುತ್ತದೆ. ಬಿಸಿಲಿನಲ್ಲಿ ನಿಯಮಿತವಾಗಿ ನೀರು ಹಾಕುವುದು ಅಗತ್ಯವಾಗಿದೆ.

6 Best Indoor Plants

3. ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್ ಇದು ಅತ್ಯಂತ ಜನಪ್ರಿಯ ಸಸ್ಯವಾಗಿದೆ ಮತ್ತು ನಿರ್ವಹಣೆ ಕೂಡ ಸುಲಭವಾಗಿದೆ. ಇದು ರಾತ್ರಿಯಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತದೆ ಮತ್ತು ಗಾಳಿಯನ್ನು ಶುದ್ದಿಕರಿಸುತ್ತದೆ. ಇದಕ್ಕೆ10 ರಿಂದ 15 ದಿನಕ್ಕೊಮ್ಮೆ ನೀರು ಹಾಕಿದರೆ ಸಾಕು.

4. ಲೋಳೆ ಸರ

ಚಿಕ್ಕ ಗಾತ್ರದ ಈ ಗಿಡ ಆರೋಗ್ಯಕ್ಕೂ ಸಹಾಯಕ. ಇದು ಒಂದು ರಸಭರಿತ ಜಾತಿಯ ಗಿಡವಾಗಿದೆ, ಮತ್ತು ಮನೆಯಲ್ಲಿನ ಗಾಳಿಯನ್ನು ಶುದ್ದಿಕರಿಸುತ್ತದೆ. ಇದಕ್ಕೆ ನೀರು ಕಡಿಮೆ ಇದ್ದರೆ ಸಾಕು.

ಮರೆತು ಹೋಗಿರುವ 7 ಭಾರತೀಯ ಬೇಸಿಗೆ ಹಣ್ಣುಗಳು: ಆರೋಗ್ಯ ಲಾಭಗಳು ಮತ್ತು ಸಂಪೂರ್ಣ ಮಾಹಿತಿ
ಮರೆತು ಹೋಗಿರುವ 7 ಭಾರತೀಯ ಬೇಸಿಗೆ ಹಣ್ಣುಗಳು: ಆರೋಗ್ಯ ಲಾಭಗಳು ಮತ್ತು ಸಂಪೂರ್ಣ ಮಾಹಿತಿ

5. ಮನಿ ಪ್ಲಾಂಟ್

ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಸಸ್ಯವು ಮಣ್ಣು ಅಥವಾ ನೀರಿನಲ್ಲಿ ಬೆಳೆಯಬಹುದು. ಮನೆಯ ಸೌಂದರ್ಯ ಹೆಚ್ಚಿಸುವಲ್ಲಿ ಈ ಸಸ್ಯವು ಪ್ರಮುಖ ಪಾತ್ರವಹಿಸುತ್ತದೆ. ಈ ಸಸ್ಯವು ತೇವಾಂಶವನ್ನು ಗಾಳಿಯಲ್ಲಿ ಬಿಡುತ್ತದೆ, ಇದಕ್ಕೆ ನಿಯಮಿತವಾಗಿ ನೀರು ಸಿಂಪಡಿಸುವುದು ಒಳ್ಳೆಯದು.

6. ರಬ್ಬರ್ ಪ್ಲಾಂಟ್

ದಪ್ಪನೆಯ ಮತ್ತು ಹೊಳೆಯುವ ಎಲೆಗಳನ್ನು ಹೊಂದಿರುವ ಜನಪ್ರಿಯವಾದ ಒಳಾಂಗಣ ಸಸ್ಯವಾಗಿದೆ. ಇದು ಗಾಳಿಯನ್ನು ಶುದ್ದ ಮಾಡುತ್ತದೆ ಮತ್ತು ತೇವಾಂಶವನ್ನು ಬಿಡುಗಡೆ ಮಾಡುತ್ತದೆ. ಇದು ಕೋಣೆಗೆ ನೈಸರ್ಗಿಕ ತಂಪು ನೀಡುತ್ತದೆ.

ಸಸ್ಯಗಳನ್ನು ಹೇಗೆ ಬೆಳೆಸಬೇಕು

ಗಿಡಗಳನ್ನು ಒಂದೇ ಜಾಗದಲ್ಲಿ 3ಮತ್ತು 5ರಂತೆ ಗುಂಪು ಮಾಡಿ ಇಟ್ಟರೆ ಅವುಗಳ ಪರಿಣಾಮ ಹೆಚ್ಚಾಗುತ್ತದೆ. ಕಿಟಕಿಯ ಹತ್ತಿರ ಇಡಬಹುದು ಆದರೆ ನೇರವಾಗಿ ಬಿಸಿಲು ಬಾರದಂತೆ ಇಡುವುದು ಉತ್ತಮ. ಇವುಗಳಿಂದ ಮನೆಗೆ ನೈಸರ್ಗಿಕ ತಂಪು, ತಾಜಾತನ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ. ಈ ಸಸ್ಯಗಳು ಮನೆಯಲ್ಲಿ ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕರ ವಾತಾವರಣ ನಿರ್ಮಾಣಮಾಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+