ಕಾಲ್ತುಳಿತದಿಂದ ತಪ್ಪಿಸಿಕೊಳ್ಳುವುದು ಹೇಗೆ, ಇಷ್ಟು ಮಾಡಿ ಸಾಕು!
Bengaluru Stampede: ಬೆಂಗಳೂರಿನ ಇತಿಹಾಸದಲ್ಲೇ ಸಂಭವಿಸದ ದುರಂತವೊಂದು ಸಂಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದಾರೆ. ಹೆಚ್ಚು ಜನ ಸೇರಿದ ಸಂದರ್ಭಗಳಲ್ಲಿ ಗೊಂದಲಗಳು ಸೃಷ್ಟಿಯಾದಾಗ ಹಾಗೂ ಅನಿಯಂತ್ರಿತವಾಗಿ ಜನ ಸೇರುವಾಗೆಲ್ಲವೂ ಕಾಲ್ತುಳಿತ ಸಂಭವಿಸಿದ ಉದಾಹರಣೆಗಳು ಇವೆ. ಹಾಗಾದರೆ ಕಾಲ್ತುಳಿತದಿಂದ ತಪ್ಪಿಸಿಕೊಳ್ಳುವುದು ಹೇಗೆ, ಕಾಲ್ತುಳಿತ ಸಂಭವಿಸುವಾಗ ನಾವು ಏನು ಮಾಡಬೇಕು ಎನ್ನುವ ಡೀಟೆಲ್ಸ್ ಇಲ್ಲಿದೆ.
11 ಜನ ಅಮಾಯಕರು ಬೆಂಗಳೂರಿನ ಕರಾಳ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. 11 ಜನ ಸಾವನ್ನಪ್ಪಿದ್ದ ಬೆನ್ನಲ್ಲೇ ಕಾಲ್ತುಳಿತದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹೆಚ್ಚು ಜನಸಂದಣೆ ಸೇರುವ ಜಾಗಗಳಲ್ಲಿ ಜನ ಹೇಗೆ ನಡೆದುಕೊಳ್ಳಬೇಕು ಹಾಗೂ ಜನರ ವರ್ತನೆ ಹೇಗಿರಬೇಕು ಎನ್ನುವುದು ಸಹ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದ ಮೇಲೆ ಜನ ಎರಡು ದಿನ ಯಾವ ರೀತಿ ಸಂಭ್ರಮಾಚರಣೆ ಮಾಡಿದರು & ನಡೆದುಕೊಂಡಿದ್ದಾರೆ ಎನ್ನುವುದನ್ನು ಜಗತ್ತೇ ನೋಡಿದೆ. ಕೆಲವರಿಂದ ಇಡೀ ಕರ್ನಾಟಕಕ್ಕೆ ಈ ವಿಷಯದಲ್ಲಿ ಮುಜುಗರವೂ ಆಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಶಿಕ್ಷಣದಲ್ಲಿ ಇಲ್ಲದೆ ಇರುವುದು ಅಥವಾ ಶಿಕ್ಷಣದಲ್ಲಿ ತಿಳಿಸದೆ ಇರುವುದು ಸಹ ಇದಕ್ಕೆ ಕಾರಣ. ಸರ್ಕಾರ ಹಾಗೂ ಕೆಲವರ ತಪ್ಪಿನಿಂದ ಭೀಕರ ಕಾಲ್ತುಳಿತ ಸಂಭವಿಸಿತ್ತು.

ಇನ್ನು ಈ ರೀತಿಯ ಕಾಲ್ತುಳಿತದ ಪರಿಸ್ಥಿತಿಯಲ್ಲಿ ಕೆಲವೊಂದು ಸರಳಸೂತ್ರಗಳನ್ನು ಅನುಸರಿಸಿದರೆ ಕಾಲ್ತುಳಿತದಿಂದ ತಪ್ಪಿಸಿಕೊಳ್ಳಬಹುದು.
* ತಪ್ಪಿಸಿಕೊಳ್ಳುವ ಮಾರ್ಗ ಹುಡುಕಿ: ಕಾಲ್ತುಳಿತ ಆಗುತ್ತಿದೆ ಅಥವಾ ಕಾಲ್ತುಳಿತ ಸಂಭವಿಸಬಹುದು ಎನ್ನುವ ಸಂದರ್ಭ ಎದುರಾದರೆ ಕೂಡಲೇ ಅಲ್ಲಿಂದ ಹೊರಗೆ ಬರಲು ಸಾಧ್ಯವೇ ಅಂತ ನೋಡುವುದು ಮೊದಲ ಆಯ್ಕೆ. ಹೌದು ಇದು ತುಸು ವಿಚಿತ್ರವೆನಿಸಿದರೂ ಕಾಲ್ತುಳಿತದಿಂದ ತಪ್ಪಿಸಿಕೊಳ್ಳಬೇಕಾದರೆ ಇದೊಂದು ಉತ್ತಮ ಆಯ್ಕೆ. ಕಾಲ್ತುಳಿತ ಸಂಭವಿಸುತ್ತಿರುವ ಜಾಗದಿಂದ ಪಕ್ಕದ ಕಾಲುದಾರಿ, ದ್ವಾರ ಅಥವಾ ಜನಸಂದಣಿಯಿಂದ ಹೊರಬರಲು ಸಾಧ್ಯವಿರುವ ಜಾಗಗಳನ್ನು ಹುಡುಕಿ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ರೀತಿ ಹೊರ ಬರುವಾಗ ಕಾಲ್ತುಳಿತಕ್ಕೆ ಅಥವಾ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸಿ.
* ಭದ್ರವಾಗಿ ನಿಲ್ಲಲು ಪ್ರಯತ್ನಿಸಿ: ಕಾಲ್ತುಳಿತದಂತಹ ದುರಂತ ಸಂಭವಿಸುವಾಗ ಭದ್ರವಾಗಿ ನಿಲ್ಲುವುದಕ್ಕೆ ಪ್ರಯತ್ನಿಸಿ. ಈ ರೀತಿ ಒಬ್ಬರೇ ಮಾಡಿದರೆ ಖಂಡಿತವಾಗಿಯೂ ಕಾಲ್ತುಳಿತ ತಪ್ಪಿಸಲು ಸಾಧ್ಯವಿಲ್ಲ. ಎಲ್ಲರೂ ಈ ರೀತಿ ಮಾಡುವಂತೆ ಹೇಳಬೇಕು ಭದ್ರವಾಗಿ ಅಥವಾ ಒಂದೇ ಜಾಗದಲ್ಲಿ ನಿಲ್ಲಿ ಎಂದು ಕಿರುಚಿದರೂ ಅಡ್ಡಿ ಇಲ್ಲ. ಈ ರೀತಿ ಭದ್ರವಾಗಿ ನಿಲ್ಲುವುದರಿಂದ ನೀವು ಕಾಲ್ತುಳಿತ ತಪ್ಪಿಸಬಹುದು. ನೀವು ಈ ರೀತಿಯ ಗುಂಪಿನಲ್ಲಿ ಬಿದ್ದರೆ ಎದ್ದೇಳುವುದು ತುಂಬಾ ಕಷ್ಟ, ನೀವು ತುಳಿತಕ್ಕೆ ಒಳಗಾಗುವ ಅಪಾಯವೇ ಹೆಚ್ಚು. ನೇರವಾಗಿ ನಿಲ್ಲಲು ಗೋಡೆ ಅಥವಾ ಬೀಳದಂತೆ ನಿಲ್ಲಲು ಸಾಧ್ಯವಿರುವ ಯಾವುದಾದರೂ ಸಾಧನವನ್ನು ಬಳಸಿ. ಉದಾ: ಕಂಬಿಗಳು, ಗೇಟ್ ಅಥವಾ ಯಾವುದಾದರೂ ಭದ್ರವಾದ ವಸ್ತುಗಳು.
ಬಾಕ್ಸರ್ ರೀತಿ ನಿಂತುಕೊಳ್ಳಿ: ಕಾಲ್ತುಳಿತದಂತಹ ಸಂದರ್ಭದಲ್ಲಿ ಬಾಕ್ಸರ್ ರೀತಿ ನಿಂತುಕೊಳ್ಳಿ. ಈ ರೀತಿಯ ಸಂದರ್ಭದಲ್ಲಿ ಹೆಚ್ಚು ಸಾವುಗಳು ಸಂಭವಿಸುವುದು ಎದೆಯ ಭಾಗಕ್ಕೆ ಹಾಗೂ ಕಿಡ್ನಿ ಸೇರಿದಂತೆ ಸೂಕ್ಷ್ಮ ಅಂಗಾಂಗಗಳಿಗೆ ಹಾನಿಯಾದಾಗ. ಹೀಗಾಗಿ, ಹೃದಯ ಹಾಗೂ ಕಿಡ್ನಿಯ ಭಾಗ, ಲಿವರ್ ಸೇರಿದಂತೆ ದೇಹದ ಪ್ರಮುಖ ಭಾಗಗಳನ್ನು ರಕ್ಷಿಸಿಕೊಳ್ಳುವ ಮಾದರಿಯಲ್ಲಿ ನಿಲ್ಲಿ.
ಕಾಲ್ತುಳಿತದ ಸಂದರ್ಭದಲ್ಲಿ ಎದೆಯ ಭಾಗಕ್ಕೆ ಹಾನಿಯಾದರೆ ಉಸಿರುಗಟ್ಟುವಿಕೆ ಹಾಗೂ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಹೆಚ್ಚು ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ.
ಭಯ ಬೀಳಬೇಡಿ: ಮುಖ್ಯವಾಗಿ ಕಾಲ್ತುಳಿತ ಅಥವಾ ಯಾವುದೇ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಮೊದಲು ಗಾಬರಿಯಾಗಬೇಡಿ ಶಾಂತವಾಗಿರಿ. ಭಯಗೊಂಡರೆ ನೀವು ಮುಂದೆ ಏನು ಮಾಡಬೇಕು ಎನ್ನುವುದು ತೋಚುವುದಿಲ್ಲ. ನಿಮ್ಮ ಆಲೋಚನೆಯ ಮೇಲೆ ಪರಿಣಾಮ ಬೀರುತ್ತದೆ. ಜನರ ಗುಂಪನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ತಳ್ಳುವ ಪ್ರಯತ್ನ ಮಾಡಬೇಡಿ ಇದರಿಂದ ನೀವು ಕಾಲ್ತುಳಿತಕ್ಕೆ ಸಿಲುಕುವ ಅಥವಾ ಗಾಯಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದರ ಬದಲಾಗಿ ಜನರೊಂದಿಗೆ ಆ ಸ್ಥಳದಿಂದ ಹೊರ ಬರುವ ಉಪಾಯಗಳನ್ನು ನೋಡಿ.
How to survive a stampede. pic.twitter.com/KANNG9IZ9M
— Learn Something (@cooltechtipz) June 6, 2025
ಜನ ಸಂದಣೆಯಿಂದ ದೂರವಿರಿ: ಇನ್ನು ಅಂತಿಮವಾಗಿ ಹಾಗೂ ಮುಖ್ಯವಾಗಿ ಕಾಲ್ತುಳಿತದಿಂದ ತಪ್ಪಿಸಿಕೊಳ್ಳಬೇಕಾದರೆ ಜನಸಂದಣೆ ಇರುವ ಜಾಗದಿಂದ ದೂರವಿರಿ. ಜನ ಹೆಚ್ಚು ಸೇರುವ ಜಾಗಗಳಿಗೆ ಹೋಗದೆ ಸುರಕ್ಷಿತವಾಗಿರಿ. ಈ ಸಂದರ್ಭದಲ್ಲಿ ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಿ. ಇತರರಿಗೂ ಅಪಾಯದ ಮುನ್ಸೂಚನೆ ಕೊಡಿ.
-
Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್‌ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್‌ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications