10 Best cheap market: ಬೆಂಗಳೂರಿನ 10 ಬೆಸ್ಟ್ ಶಾಪಿಂಗ್ ಪ್ಲೇಸ್ ಡೀಟೆಲ್ಸ್ ಇಲ್ಲಿದೆ!
ಬೆಂಗಳೂರಿನಲ್ಲಿ ಕಡಿಮೆ ಬೆಲೆಯಲ್ಲಿ ಶಾಪಿಂಗ್ ಮಾಡುವುದಕ್ಕೆ ಈ ಟಾಪ್ 10 ಪ್ಲೇಸ್ ಗಳು ಬೆಸ್ಟ್. ಈ ಸ್ಥಳಗಳಲ್ಲಿ ಮಧ್ಯಮ ವರ್ಗದವರಿಗೆ ಶಾಪಿಂಗ್ ಮಾಡಲು ತುಂಬಾ ಸುಲಭ ಹಾಗೂ ಜೇಬಿಜೆಗೆ ಹೆಚ್ಚು ಹೊರೆಯಾಗದೆ ಇಲ್ಲಿ ಶಾಪಿಂಗ್ ಮಾಡಬಹುದು. ಈ ಭಾಗದಲ್ಲಿ ಕಡಿಮೆ ಬೆಲೆಗೆ ಸಿಗುವ ಸಾಧನಗಳು ಬಾಳಿಕೆ ಬರುತ್ತವೆ. ಇನ್ನು ಒಂದು ಗುಡ್ ಪಾಯಿಂಟ್ ಎಂದರೆ, ಈ ಸ್ಥಳಗಳಲ್ಲಿ ಬಟ್ಟೆ, ಚಪ್ಪಲಿ ಹಾಗೂ ದಿನ ಬಳಕೆಯ ಸಾಧನ ಸೇರಿದಂತೆ ಹಲವು ಸಾಧನಗಳು ಸಿಗುವುದರಿಂದ ನೀವು ಒಂದೇ ಜಾಗದಲ್ಲಿ ಹಲವು ವಸ್ತುಗಳನ್ನು ಏಕಕಾಲಕ್ಕೆ ಖರೀದಿ ಮಾಡಬಹುದು.
ಬೆಂಗಳೂರಿನ ಬೆಸ್ಟ್ 10 ಶಾಪಿಂಗ್ ಪಾಯಿಂಟ್‌ಗಳ ವಿವರ ಈ ರೀತಿ ಇದೆ.
ಚಿಕ್ಕಪೇಟೆ
ಚಿಕ್ಕಪೇಟೆ ಬೆಂಗಳೂರು, ಕರ್ನಾಟಕದಲ್ಲಿ ಮಾತ್ರ ಫೇಮಸ್ ಇಲ್ಲ. ಹೊರ ರಾಜ್ಯದವರೂ ಸಹ ಬೆಂಗಳೂರಿನ ಚಿಕ್ಕಪೇಟೆಗೆ ಬಂದು ಸೀರೆ ಹಾಗೂ ಹೋಲ್‌ಸೆಲ್ ಸಾಧನಗಳನ್ನು ಖರೀದಿ ಮಾಡುತ್ತಾರೆ. ಚಿಕ್ಕಪೇಟೆಯ ಶಾಪಿಂಗ್ ಸೆಂಟರ್‌ಗೆ 400 ವರ್ಷಗಳ ಇತಿಹಾಸವಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನ ಭೇಟಿ ನೀಡುವ ಮಾರುಕಟ್ಟೆಗಳಲ್ಲಿ ಚಿಕ್ಕಪೇಟೆಯೂ ಒಂದು. ಇಲ್ಲಿ ವಿವಿಧ ಮಾದರಿಯ (ಬಳೆಪೇಟೆಯಲ್ಲಿ) ಬಳೆಗಳು, ಗಾಜಿನ ಬಳೆಗಳು ಹಾಗೂ ಹೋಲ್ ಸೆಲ್ ಬಟ್ಟೆಗಳು ಇಲ್ಲಿ ಸಿಗುತ್ತವೆ. ಇಲ್ಲಿನ ನಗರ್ತ್‌ಪೇಟೆಯಲ್ಲಿ ಸ್ಥಳೀಯವಾಗಿ ತಯಾರಿಸುವ ಸಂಗೀತ ವಾದ್ಯಗಳು ಸಿಗುತ್ತವೆ. ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಸಹ ಇಲ್ಲಿ ಸಿಗುತ್ತವೆ. ಅಲ್ಲದೇ ದಿನ ನಿತ್ಯ ಬಳಸುವ ಸಾಧನಗಳು ಸಹ ಇಲ್ಲಿ ಸಿಗುತ್ತವೆ.

ಕಮರ್ಷಿಯಲ್ ಸ್ಟ್ರೀಟ್
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಬಜೆಟ್‌ಗೆ ತಕ್ಕಂತೆ ಬಟ್ಟೆ, ಜ್ಯೂವಲರಿ ಹಾಗೂ ಆರ್ಟಿಫಿಶಿಯಲ್ ಜ್ಯೂವಲರಿಗಳನ್ನು ಖರೀದಿ ಮಾಡಬಹುದು. ಇಲ್ಲಿ ಮಹಿಳೆಯರು ಬಳಸುವ ಅತ್ಯಾಕರ್ಷಕ ಉಡುಪುಗಳು, ರೆಡಿಮೆಡ್ ಸಾಧನಗಳು, ಚಪ್ಪಲಿ, ಶೂ ಹಾಗೂ ಕ್ರೀಡಾ ಸಾಮಾಗ್ರಿಗಳು ಸಿಗುತ್ತವೆ. ಅಲ್ಲದೇ ಬೀದಿ ಬದಿಯಲ್ಲೂ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಕಡಿಮೆ ಬೆಲೆಗೆ ನಿಮಗೆ ಇಷ್ಟವಾದ ಬಟ್ಟೆಗಳನ್ನು ಇಲ್ಲಿ ಖರೀದಿ ಮಾಡಬಹುದು. ಇನ್ನು ಇಲ್ಲಿ ಸಣ್ಣ ಅಂಗಡಿಗಳಿಂದ ದೊಡ್ಡ ಅಂಗಡಿಗಳ ವರೆಗೆ ವಿವಿಧ ಅಂಗಡಿಗಳಿದ್ದು, ಶಾಪಿಂಗ್ ಮಾಡುತ್ತಲ್ಲೇ ಊಟವನ್ನೂ ಮಾಡಬಹುದು.
ಜಯನಗರ 4 ಬ್ಲಾಕ್
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಇಲ್ಲಿನ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲೇ ಇದ್ದು, ಕಾಲೇಜು ಹುಡುಗ - ಹುಡುಗಿಯರಿಂದ ಕಡಿಮೆ ಬಜೆಟ್‌ನಲ್ಲಿ ಶಾಪಿಂಗ್ ಮಾಡುವವರಿಗೆ ಬೆಸ್ಟ್ ಪ್ಲೇಸ್ ಎಂದೇ ಹೇಳಬಹುದು. ಇಲ್ಲಿ ಸಹ ಚಪ್ಪಲಿ , ಮನೆ ಅಲಂಕಾರ ಮಾಡುವ ವಸ್ತುಗಳ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಮಣ್ಣಿನಿಂದ ಹಾಗೂ ಪಿಂಗಾಣಿಯಿಂದ ಮಾಡಿದ ವಸ್ತುಗಳನ್ನು ನೀವು ಇಲ್ಲಿ ಖರೀದಿ ಮಾಡಬಹುದು. ಫಾಸ್ಟ್ ಫುಡ್‌ಗಳು ಸಹ ಇಲ್ಲಿ ಸಿಗುತ್ತವೆ.
ದುಬೈ ಪ್ಲಾಜಾ
ದುಬೈ ಪ್ಲಾಜಾ ವಿವಿಧ ಬಗೆಯ ಉಡುಪುಗಳು, ಸೆಂಟ್, ಚಪ್ಪಲಿ, ಶೂ ಹಾಗೂ ಸೌಂದರ್ಯವರ್ಧಕಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಈ ಪ್ಲಾಜಾದ ನೆಲ ಮಹಡಿಯು ಬಟ್ಟೆಗಳ ಮಾರಾಟಕ್ಕೆ ಮನ್ನಣೆ ಗಳಿಸಿದೆ. ಹುಡುಗರು ಹಾಗೂ ಹುಡುಗಿಯರು ಇಬ್ಬರಿಗೂ ಇಲ್ಲಿ ಎಲ್ಲಾ ಮಾದರಿಯ ಸಾಧನಗಳು ಸಿಗುತ್ತವೆ. ಅಲ್ಲದೇ ಎಲೆಕ್ಟ್ರಿಕ್ ಗ್ಯಾಜೆಟ್, ಪರ್ಸ್, ಸೆಂಟ್ ಬಾಟಲ್‌ಗಳು ಸಹ ಇಲ್ಲಿ ಸಿಗುತ್ತವೆ.
ಬ್ರಿಗೇಡ್ ರೋಡ್
ಈ ಸ್ಥಳ ಎಂ.ಜಿ ರಸ್ತೆಯ ಸಮೀಪದಲ್ಲಿ ಇದೆ. ಇದು ಸ್ವಲ್ಪ ದುಬಾರಿ ದುನಿಯಾ ಎನ್ನುವಂತ ಪ್ಲೇಸ್‌ನ ಜಾಗ. ಇಲ್ಲಿ ವಿವಿಧ ದುಬಾರಿ ಹಾಗೂ ಗುಣಮಟ್ಟದ ಬಟ್ಟೆಗಳು, ಅಲಂಕಾರಿಕ ಸಾಧನಗಳು ಸಿಗುತ್ತವೆ. ಒಳ ರಸ್ತೆಗಳಲ್ಲಿ ಬ್ರ್ಯಾಂಡೆಡ್ ಸಾಧನಗಳು, ಪುಸ್ತಕದ ಅಂಗಡಿಗಳು ಸಹ ಇವೆ. ಅಲ್ಲದೇ ಬಾರ್ ಆಯಂಡ್ ಪಬ್‌ಗೂ ಈ ಪ್ಲೇಸ್ ಫೇಮಸ್ ಆಗಿದೆ.
ಮಲ್ಲೇಶ್ವರಂ
ಮಲ್ಲೇಶ್ವರಂ ಬೆಂಗಳೂರಿನ ಪ್ರಸಿದ್ಧ ಹಳೆಯ ಹಾಗೂ ಹೊಸ ಫ್ಯಾಷನ್‌ಗೆ ಮಾದರಿಯಾಗಿದೆ. ಇಲ್ಲಿ ಹೂ, ಗಿಡ ಮೂಲಿಕೆ ಹಾಗೂ ಬೆಂಗಳೂರಿನ ಫೇಮಸ್ ಬೆಣ್ಣೆ ಗುಲ್ಕನ್ ಸಿಗುತ್ತದೆ. ಅಲ್ಲದೇ ಸಾಂಪ್ರದಾಯಿ ಉಡುಗೆಗಳು, ಬಟ್ಟೆ ಹಾಗೂ ಪುಸ್ತಕಕ್ಕೂ ಈ ಜಾಗ ಫೇಮಸ್ ಆಗಿದೆ.
ಅವಿನ್ಯೂ ರಸ್ತೆ
ಅವಿನ್ಯೂ ರಸ್ತೆ ವಿದ್ಯಾರ್ಥಿಗಳ ಹಾಗೂ ಕಾಲೇಜು ಹುಡುಗ, ಹುಡುಗಿಯರ ಅಚ್ಚು ಮೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಎಲ್ಲಾ ಮಾದರಿಯ ಪುಸ್ತಕಗಳು ಸಿಗುತ್ತವೆ. ಅಲ್ಲದೇ ಎಲೆಕ್ಟ್ರಾನಿಕ್ ಸಾಧನಗಳು, ಬಟ್ಟೆ ಹಾಗೂ ದಿನ ನಿತ್ಯದ ವಸ್ತುಗಳು ಸೇರಿದಂತೆ ಎಲ್ಲಾ ಮಾದರಿಯ ವಸ್ತುಗಳು ಸಹ ಇಲ್ಲಿ ಸಿಗುತ್ತವೆ.
ಕೆ.ಆರ್ ಮಾರುಕಟ್ಟೆ
ಕೃಷ್ಣರಾಜೇಂದ್ರ ಮಾರುಕಟ್ಟೆ ಹೂವುಗಳಿಗೆ ಪ್ರಸಿದ್ಧಿಗಳಿಸಿದೆ. ಅಲ್ಲದೇ ಇಲ್ಲಿ ವಿವಿಧ ಮಾದರಿಯ ತರಕಾರಿಗಳು, ಮಸಾಲೆ ಪದಾರ್ಥಗಳು ಹಾಗೂ ಹಣ್ಣುಗಳು ಸಿಗುತ್ತವೆ. ಅದು ಸಹ ಅತ್ಯಂತ ಕಡಿಮೆ ಬೆಲೆಗೆ. ಇನ್ನು ಮಕ್ಕಳಿಗೆ ಬೇಕಾದ ಗ್ರಂಥಿಗೆ ಸಾಧನಗಳು, ಬಟ್ಟೆ ಹಾಗೂ ದಿನಸಿ ಪದಾರ್ಥಗಳು ಸಹ ಇಲ್ಲಿ ಸಿಗುತ್ತವೆ.
ಗಾಂಧಿ ಬಜಾರ್
ಬಸವನಗುಡಿ ವ್ಯಾಪ್ತಿಯ ಈ ಬಜಾರ್ ಸಹ ಹೂವುಗಳಿಗೆ ಪ್ರಸಿದ್ಧ ಗಳಿಸಿದೆ. ಅಲ್ಲದೇ ಇಲ್ಲಿ ದೇವರ ಪೋಟೋ, ದೇವರ ಪೂಜೆಗೆ ಬೇಕಾದ ಸಾಮಗ್ರಿಗಳು ಸಿಗುತ್ತವೆ. ಅಲ್ಲದೇ ಬಟ್ಟೆ ಹಾಗೂ ಸೀರೆಗಳು ಅತ್ಯಂತ ಕಡಿಮೆ ಬೆಲೆಗೆ ಹಾಗೂ ಗುಣಮಟ್ಟದಿಂದ ಕೂಡಿರುವ ಸಾಧನಗಳು ಸಿಗುತ್ತವೆ. ಗಾರ್ಮೆಂಟ್ಸ್ ಮಾದರಿಯ ಬಟ್ಟೆಗಳು ಸಹ ಇಲ್ಲಿ ಸಿಗುತ್ತವೆ.
ನ್ಯಾಷನಲ್ ಮಾರ್ಕೆಟ್
ನ್ಯಾಷನಲ್ ಮಾರ್ಕೆಟ್ ಸಹ ಬೆಂಗಳೂರಿನ ಪ್ರಸಿದ್ಧ ಮಾರ್ಕೆಟ್‌ಗಳಲ್ಲಿ ಒಂದಾಗಿದೆ. ಈ ಮಾರ್ಕೆಟ್‌ನಲ್ಲಿ ಕಡಿಮೆ ಬೆಲೆಗೆ ಬಟ್ಟೆ ಸಿಗುತ್ತವೆ. ಫೋನ್‌ಗಳು, ಕ್ಯಾಮೆರಾಗಳು ಹಾಗೂ ಟ್ಯಾಬ್ಲೆಟ್‌ಗಳನ್ನು ಸಹ ನೀವು ನಿಮ್ಮ ಬಜೆಟ್‌ಗೆ ತಕ್ಕಂತೆ ಖರೀದಿ ಮಾಡಲು ಸಾಧ್ಯವಿದೆ. ದಿನ ನಿತ್ಯ ಬಳಸುವ ಸಾಧನಗಳನ್ನು ಸಹ ಇಲ್ಲಿ ಖರೀದಿ ಮಾಡಬಹುದಾಗಿದೆ.












Click it and Unblock the Notifications