• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Krishna Raja Sagar (KRS) Dam Water Level Today | ಕೃಷ್ಣರಾಜಸಾಗರ ಅಣೆಕಟ್ಟು ಇಂದಿನ ನೀರಿನ ಮಟ್ಟ

|

Newest First Oldest First
12:37 PM, 30 Jun
ಜೂನ್ 30ರ ಲೈವ್‌ ಸ್ಟೋರೇಜ್: ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿಯಷ್ಟಿದ್ದು, ಇಂದು 16.04 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 6.33 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 1894ಕ್ಯೂಸೆಕ್‌ನಷ್ಟಿದ್ದು, 440 ಕ್ಯೂಸೆಕ್‌ನಷ್ಟು ಹೊರಹರಿವಿದೆ.
11:09 AM, 24 Jun
ಜೂನ್ 24ರ ಲೈವ್‌ ಸ್ಟೋರೇಜ್ :ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿಯಷ್ಟಿದ್ದು, ಇಂದು 14.86 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 6.32ಟಿಎಂಸಿಯಷ್ಟು ನೀರು ಸಂಗ್ರಹವಿತ್ತು.
9:07 AM, 23 Jun
ಜೂನ್ 23ರ ಲೈವ್‌ ಸ್ಟೋರೇಜ್ :ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿಯಷ್ಟಿದ್ದು, ಇಂದು 14.86 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 6.32ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 3181ಕ್ಯೂಸೆಕ್‌ನಷ್ಟಿದ್ದು, 431ಯೂಸೆಕ್‌ನಷ್ಟು ಹೊರಹರಿವಿದೆ.
9:54 AM, 21 Jun
ಜೂನ್ 21ರ ಲೈವ್‌ ಸ್ಟೋರೇಜ್ :ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿಯಷ್ಟಿದ್ದು, ಇಂದು 14.22 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 6.36ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 6005ಕ್ಯೂಸೆಕ್‌ನಷ್ಟಿದ್ದು, 423ಯೂಸೆಕ್‌ನಷ್ಟು ಹೊರಹರಿವಿದೆ.
12:58 PM, 20 Jun
ಜೂನ್ 20ರ ಲೈವ್‌ ಸ್ಟೋರೇಜ್ :ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿಯಷ್ಟಿದ್ದು, ಇಂದು 13.75 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 6.38ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 2980 ಕ್ಯೂಸೆಕ್‌ನಷ್ಟಿದ್ದು, 421ಕ್ಯೂಸೆಕ್‌ನಷ್ಟು ಹೊರಹರಿವಿದೆ.
8:04 AM, 19 Jun
ಜೂನ್ 19ರ ಲೈವ್‌ ಸ್ಟೋರೇಜ್ :ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿಯಷ್ಟಿದ್ದು, ಇಂದು 13.54 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 6.40 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 3026 ಕ್ಯೂಸೆಕ್‌ನಷ್ಟಿದ್ದು, 419ಕ್ಯೂಸೆಕ್‌ನಷ್ಟು ಹೊರಹರಿವಿದೆ.
10:42 AM, 18 Jun
ಜೂನ್ 18ರ ಲೈವ್‌ ಸ್ಟೋರೇಜ್ :ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿಯಷ್ಟಿದ್ದು, ಇಂದು 13.32 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 6.42 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 1877ಕ್ಯೂಸೆಕ್‌ನಷ್ಟಿದ್ದು, 418ಕ್ಯೂಸೆಕ್‌ನಷ್ಟು ಹೊರಹರಿವಿದೆ.
12:00 PM, 17 Jun
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಕೆಆರ್‌ಎಸ್‌ನಲ್ಲಿ 92.69 ಅಡಿ ನೀರಿನ ಸಂಗ್ರಹವಿದೆ. 1284 ಕ್ಯುಸೆಕ್ ಒಳ ಹರಿವು ಇದ್ದು, 1085 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ.
11:59 AM, 16 Jun
ಕೆಆರ್‌ಎಸ್ ಜಲಾಶಯದಲ್ಲಿ 92.68 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 80.20 ಅಡಿ ನೀರಿತ್ತು. ಪ್ರಸ್ತುತ 1358 ಕ್ಯುಸೆಕ್ ಒಳ ಹರಿವು ಇದೆ, ಹೊರ ಹರಿವು 1085 ಕ್ಯುಸೆಕ್ ಆಗಿದೆ.
10:07 AM, 12 Jun
ಕೆಆರ್‌ಎಸ್ ಜಲಾಶಯದಲ್ಲಿ 92.55 ಅಡಿ ನೀರಿನ ಸಂಗ್ರಹವಿದೆ. 1943 ಕ್ಯುಸೆಕ್ ಒಳ ಹರಿವು ದಾಖಲಾಗಿದ್ದು, 1077 ಕ್ಯುಸೆಕ್ ಹೊರ ಹರಿವು ಇದೆ.
9:53 AM, 8 Jun
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 92.16 ಅಡಿಗಳು. 689 ಕ್ಯುಸೆಕ್ ಒಳ ಹರಿವು ದಾಖಲಾಗಿದ್ದು, 415 ಕ್ಯುಸೆಕ್ ಹೊರ ಹರಿವು ಇದೆ.
10:06 AM, 4 Jun
ಕೆ. ಆರ್. ಎಸ್ ಜಲಾಶಯದ ನೀರಿನ ಮಟ್ಟ 92.09 ಅಡಿಗಳು. 837 ಕ್ಯೂಸೆಕ್ ಒಳ ಹರಿವು ಇದ್ದು, 415 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ.ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳು. ಕಳೆದ ವರ್ಷ ಇದೇ ಸಮಯದಲ್ಲಿ 80.91 ಅಡಿ ನೀರಿನ ಸಂಗ್ರಹವಿತ್ತು.
10:17 AM, 3 Jun
637 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಹೊರ ಹರಿವು 414 ಕ್ಯುಸೆಕ್ ಆಗಿದೆ.
10:16 AM, 3 Jun
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 91.95 ಅಡಿಗಳು
9:53 AM, 2 Jun
ಜಲಾಶಯದ ಒಳ ಹರಿವು 637 ಕ್ಯುಸೆಕ್, ಹೊರ ಹರಿವು 414 ಕ್ಯುಸೆಕ್ ಆಗಿದೆ.
9:52 AM, 2 Jun
ಕೆ.ಆರ್. ಎಸ್ ಜಲಾಶಯದ ನೀರಿನ ಮಟ್ಟ 91.95 ಅಡಿ. ಕಳೆದ ವರ್ಷ ಇದೇ ದಿನ 81.08 ಅಡಿ ನೀರಿನ ಸಂಗ್ರಹ ವಿತ್ತು.
10:03 AM, 30 May
ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 45.05 ಟಿಎಂಸಿಯಷ್ಟಿದ್ದು, ಇಂದು 12.71 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ6.92 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು.ಒಳಹರಿವು 735 ಕ್ಯೂಸೆಕ್‌ನಷ್ಟಿದ್ದು 800 ಕ್ಯೂಸೆಕ್‌ನಷ್ಟು ಹೊರಹರಿವಿದೆ.
9:31 AM, 29 May
ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 119.26 ಟಿಎಂಸಿಯಷ್ಟಿದ್ದು, ಇಂದು 25.51 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 463 ಟಿಎಂಸಿಯಷ್ಟು ನೀರು ಸಂಗ್ರಹವಿತ್ತು. ಒಳಹರಿವು 463ರಷ್ಟಿದ್ದು , 1188 ಕ್ಯೂಸೆಕ್‌ನಷ್ಟು ಹೊರಹರಿವಿದೆ.
5:14 PM, 28 May
ಒಳ ಹರಿವು 463 ಕ್ಯುಸೆಕ್ ಹೊರ ಹರಿವು 1188 ಕ್ಯುಸೆಕ್
5:13 PM, 28 May
ಜಲಾಶಯದ ಪೂರ್ಣ ಮಟ್ಟ 124.80 ಅಡಿ ಇಂದಿನ ಮಟ್ಟ 91.95 ಅಡಿ

ಕೆಆರ್‌ಎಸ್ ಜಲಾಶಯದ ಇತಿಹಾಸ:

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಕೆಆರ್‌ಎಸ್ ಎಂದೇ ಖ್ಯಾತಿ ಪಡೆದಿರುವ ಕೃಷ್ಣರಾಜಸಾಗರ. ಕೆಆರ್‌ಎಸ್ ಜಲಾಶಯ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಕನಸು. 1911ರಲ್ಲಿ ಕೆಆರ್‌ಎಸ್ ಜಲಾಶಯ ನಿರ್ಮಾಣ ಕಾರ್ಯ ಆರಂಭವಾಯಿತು. ಭಾರತಕ್ಕೆ ಸ್ವಾತಂತ್ರ ದೊರೆಯುವ ಮೊದಲೇ ನಿರ್ಮಾಣವಾದ ಈ ಜಲಾಶಯ ಅಂದಿನ ಕಾಲದ ತಂತ್ರಜ್ಞಾನದ ಚಿತ್ರಣವನ್ನು ಹೊಸ ತಲೆಮಾರಿಗೆ ಪರಿಚಯಿಸುತ್ತದೆ.

ಕೆಆರ್‌ಎಸ್ ಜಲಾಶಯ ಎಲ್ಲಿದೆ?

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ.

Krishna Raja Sagar (KRS) Dam Water Level Today

ಕೆಆರ್‌ಎಸ್ ಜಲಾಶಯದ ಉಪಯೋಗ:

ಕರ್ನಾಟಕದ ಮತ್ತು ತಮಿಳುನಾಡು ನಡುವೆ 'ಕಾವೇರಿ' ಜಲವಿವಾದದ ಕಾವು ಏರಿದಾಗ ಕೆಆರ್‌ಎಸ್ ಜಲಾಶಯದಲ್ಲಿ ಎಷ್ಟು ನೀರಿದೆ ಎಂಬ ಚರ್ಚೆ ಆರಂಭವಾಗುತ್ತದೆ. 1938ರಲ್ಲಿ ಕುಡಿಯುವ ನೀರು ಪೂರೈಕೆ, ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಯ ಗುರಿಯೊಂದಿಗೆ ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಲಾಯಿತು. ಮಂಡ್ಯ ಜಿಲ್ಲೆಯಲ್ಲಿ ಕಬ್ಬು, ಭತ್ತ ಮುಂತಾದ ಬೆಳೆಗಳಿಗೆ ಜಲಾಶಯದ ನೀರು ಆಧಾರ. ಜಲಾಶಯಕ್ಕೆ ಮೂರು ಪ್ರಮುಖ ನಾಲೆಗಳಿವೆ.

ಮೈಸೂರು, ಮಂಡ್ಯ, ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಕೆಆರ್‌ಎಸ್ ಜಲಾಶಯದ ಮೂಲಕ ಪೂರೈಕೆ ಮಾಡಲಾಗುತ್ತದೆ. ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಕೊಡುವ ಜಲಾಶಯ ಭರ್ತಿ ಆಗಲಿ ಎಂದು ಬೆಂಗಳೂರು ನಗರದ ಜನರು ಮಳೆಗಾಲದಲ್ಲಿ ಪ್ರಾರ್ಥನೆ ಮಾಡುತ್ತಾರೆ.

ಕೆಆರ್‌ಎಸ್ ಜಲಾಶಯದ ಸಾಮರ್ಥ್ಯ:

ಕೆಎಆರ್‌ಎಸ್ ಜಲಾಶಯ 42.67 ಮೀಟರ್ ಎತ್ತರವಿದೆ, ಉದ್ದ 2,620 ಮೀಟರ್. ಜಲಾಶಯದಲ್ಲಿ 124.80 ಅಡಿ ನೀರನ್ನು ಸಂಗ್ರಹ ಮಾಡಬಹುದಾಗಿದೆ.

ಕೆಆರ್‌ಎಸ್ ಜಲಾಶಯದ ಪ್ರೇಕ್ಷಣೀಯ ಸ್ಥಳಗಳು:

ಕೆಆರ್‌ಎಸ್ ಜಲಾಶಯಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಬೃಂದಾವನ ಗಾರ್ಡನ್ ಪ್ರವಾಸಿಗರ ಮೆಚ್ಚಿನ ಸ್ಥಳವಾಗಿದೆ. ಹಲವಾರು ಕನ್ನಡ ಸಿನಿಮಾಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ರಜೆ ದಿನಗಳಲ್ಲಿ ಬೃಂದಾವನ ಗಾರ್ಡನ್‌ ಪ್ರವಾಸಿಗರಿಂದ ತುಂಬಿ ಹೋಗಿರುತ್ತದೆ. ಅಂದವಾದ ಹುಲ್ಲಿನ ಹಾಸು, ಸಂಗೀತ ಕಾರಂಜಿ, ವಿಶಾಲವಾ ಹಸಿರು ಹುಲ್ಲಿನ ಹೊದಿಕೆ, ಬಗೆಬಗೆಯ ಹೂ ಮತ್ತು ಗಿಡಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಮಂಡ್ಯ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಕೆಆರ್‌ಎಸ್ ಜಲಾಶಯ ನೋಡಲು ಬಂದರೆ ಬೃಂದಾವನ ಗಾರ್ಡನ್, ರಂಗನತಿಟ್ಟು, ಮೇಲುಕೋಟೆ, ಟಿಪ್ಪು ಸುಲ್ತಾನನ ಕೋಟೆ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡಬಹುದು. ಇದರ ಜೊತೆಗೆ ಸಾಂಸ್ಕೃತಿಕ ನಗರ ಮೈಸೂರು ಕೇವಲ 12 ಕಿ. ಮೀ. ದೂರದಲ್ಲಿದೆ.

ಕೆಆರ್‌ಎಸ್ ಜಲಾಶಯದ ಸಂದರ್ಶನ ಸಮಯ:

ಬೃಂದಾವನ ಗಾರ್ಡನ್‌ಗೆ ಸೋಮವಾರದಿಂದ ಶನಿವಾರದ ತನಕ ಪ್ರವಾಸಿಗರು ಭೇಟಿ ನೀಡಬಹುದು. ವಯಸ್ಕರಿಗೆ 20 ರೂ. ಮಕ್ಕಳಿಗೆ 5 ರೂ. ಪ್ರವೇಶದರವನ್ನು ನಿಗದಿ ಮಾಡಲಾಗಿದೆ. ಒಂದು ವೇಳೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಬಿಡುಗಡೆ ವಿಚಾರ ದೊಡ್ಡ ವಿವಾದವಾದರೆ ಜಲಾಶಯಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗುತ್ತದೆ. ಬೃಂದಾವನ ಗಾರ್ಡನ್ ಮುಚ್ಚಲಾಗುತ್ತದೆ

English summary
Krishna Raja Sagar (KRS) Dam Water Level Today: Check complete details on KRS dam water level, history, weather, visit timings, nearby places to visit and more interesting facts on Krishna Raja Sagar dam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more