ಯತೀಶ್ ಲೈಂಗಿಕ ಕ್ರಿಯೆ ನಡೆಸಿದ್ದು ಯಾರ ಜೊತೆ?
ಅಂತಾರಾಷ್ಟ್ರೀಯ ಖ್ಯಾತಿ ಪ್ರಾಧ್ಯಾಪಕರೊಬ್ಬರು ವಿಶ್ವವಿದ್ಯಾಲಯವೊಂದರಲ್ಲಿ ಅತೀಂದ್ರೀಯ ಮತ್ತು ಅಲೌಕಿಕ ವಸ್ತುಗಳ ಬಗ್ಗೆ ಪ್ರಬಂಧ ಮಂಡಿಸುತ್ತಿದ್ದರು. ಅವರಿಗೆ ಈ ವಸ್ತುವಿನ ಬಗ್ಗೆ ಸಭಿಕರಲ್ಲಿ ಏನು ಅಭಿಪ್ರಾಯವಿದೆ ಎಂದು ತಿಳಿಯುವ ಹಂಬಲ.
"ನಿಮ್ಮಲ್ಲಿ ಎಷ್ಟು ಜನರಿಗೆ ಘೋಸ್ಟ್ ನಲ್ಲಿ ನಂಬಿಕೆಯಿದೆ?" ಅವರು ಕೇಳಿದ ಪ್ರಶ್ನೆಗೆ ಶೇ.90ರಷ್ಟು ವಿದ್ಯಾರ್ಥಿಗಳು ಕೈ ಎತ್ತಿದ್ದರು. ಅವರಿಗೆ ತುಂಬಾ ಖುಷಿಯಾಯಿತು. ಮುಂದುವರಿದು...
"ವಾವ್ ವಾವ್, ವೆಲ್... ನಂಬಿಕೆ ಇರುವವರಲ್ಲಿ ಎಷ್ಟು ಜನರು ಅದನ್ನು ನೋಡಿದ್ದೀರಿ?" ಮತ್ತೊಂದಿಷ್ಟು ಕೈಗಳು ಮೇಲೆದ್ದವು. ಈ ಪ್ರತಿಕ್ರಿಯಿಯಿಂದ ಪ್ರಾಧ್ಯಾಪಕರಿಗೆ ರೋಮಾಂಚನವಾಯಿತು.
"ದಟ್ಸ್ ಗುಡ್, ನಿಮ್ಮಲ್ಲಿ ಯಾರಾದರೂ ಅದರೊಂದಿಗೆ ಮಾತನಾಡಿದ್ದೀರಾ?" ಎಂದು ಅವರೇ ಪ್ರಶ್ನಾರ್ಥಕ ಚಿಹ್ನೆಯಾದರು. ಈ ಪ್ರಶ್ನೆಗೂ ಕೈ ಎತ್ತುವವರಿದ್ದರು. ಸುಮಾರು 15 ವಿದ್ಯಾರ್ಥಿಗಳು ನಾವು ಮಾತನಾಡಿದ್ದೇವೆ ಎಂದರು.
"ಅದನ್ನು ಯಾರಾದರೂ ಮುಟ್ಟಿದ್ದೀರಾ?" ಎಂದು ಮತ್ತಷ್ಟು ರೋಮಾಂಚಿತರಾಗಿ ಪ್ರಾಧ್ಯಾಪಕರು ಕೇಳಿದರು. ಸಭೆಯಲ್ಲಿದ್ದ ನೂರು ಜನರಲ್ಲಿ ಮೂರು ಜನರು ಕೈ ಎತ್ತಿದ್ದರು. ಅಷ್ಟೊತ್ತಿದೆ ಪ್ರಾಧ್ಯಾಪಕ ಮೈಮೇಲೆ ಚಳಿಯ ಮುಳ್ಳುಗಳೆದ್ದಿದ್ದವು.
"ಅದ್ಭುತ, ಅತ್ಯದ್ಭುತ. ಇನ್ನೊಂದೇ ಒಂದು ಪ್ರಶ್ನೆಯಿದೆ. ನೋಡೋಣ ಯಾರಾದ್ರೂ ಕೈ ಎತ್ತೀರಾ ಅಂತ. ನಿಮ್ಮಲ್ಲಿ ಯಾರಾದರೂ ಅದರೊಂದಿಗೆ..." ಎಲ್ಲರೂ ಅವರು ಏನು ಪ್ರಶ್ನೆ ಕೇಳುತ್ತಾರೋ ಎಂದು ಕುತೂಹಲದಿಂದ ಕೇಳುತ್ತಿದ್ದರು. ಸಭೆಯಲ್ಲಿ ಪಿನ್ ಡ್ರಾಪ್ ಸೈಲೆನ್ಸ್!
"ನಿಮ್ಮ ಮೂವರಲ್ಲಿ ಯಾರಾದರೂ ಅದರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದೀರಾ?" ಈ ತುಂಟ ಪ್ರಶ್ನೆ ಕೇಳಿ ಎಲ್ಲರಲ್ಲಿಯೂ ರೋಮಾಂಚನವಾದರೂ ಯಾರೊಬ್ಬನೂ ಕೈ ಎತ್ತಿರಲಿಲ್ಲ. ಕಣ್ಣಿನ ಮೇಲಿದ್ದ ಕನ್ನಡಕವನ್ನು ತಲೆಯ ಮೇಲೆ ಇಟ್ಟುಕೊಂಡು ಇಡೀ ಸಭೆಯತ್ತ ಪ್ರಾಧ್ಯಾಪಕರು ಕಣ್ಣಾಡಿಸಿದ್ದರು. ಇನ್ನೇನು ಕುರ್ಚಿಯ ಮೇಲೆ ಕೂಡಬೇಕು ಅಷ್ಟರಲ್ಲಿ ಯತೀಶ ಮೆತ್ತಗೆ ಕೈ ಎತ್ತಿದ್ದ.
ತಲೆ ಮೇಲಿದ್ದ ಪ್ರಾಧ್ಯಾಪಕರ ಕನ್ನಡಕ ಮೂಗಿನ ಮೇಲೆ ಬಿದ್ದಿತ್ತು. ಎಲ್ಲರೂ ಆ ವ್ಯಕ್ತಿಯತ್ತ ಅಚ್ಚರಿ ಮತ್ತು ಆಘಾತದ ದೃಷ್ಟಿ ಬೀರಿದ್ದರು. ಪ್ರಾಧ್ಯಾಪಕರು "ಬಾ ಇಲ್ಲಿ, ಬಾ ಇಲ್ಲಿ" ಎಂದು ಯತೀಶನನ್ನು ತಮ್ಮ ಬಳಿ ಕರೆಯಿಸಿಕೊಂಡರು. ಆತನ ಹೆಗಲ ಮೇಲೆ ಕೈಹಾಕಿ...
"ಇಷ್ಟು ವರ್ಷಗಳಿಂದ ಉಪನ್ಯಾಸ ನೀಡುತ್ತಿದ್ದೇನೆ. ಆದರೆ ನಿನ್ನಂಥ ವ್ಯಕ್ತಿಯನ್ನು ನಾನೆಲ್ಲೂ ಕಂಡಿಲ್ಲ. ನೀನು ಪಡೆದ ಆ ಅನಿರ್ವಚನೀಯ ಅನುಭವವನ್ನು ಇಲ್ಲಿ ಸಭೆಕರೆದಿರುವ ವರ್ಣಿಸು. ಕಮಾನ್, ಟೆಲ್ ಅಸ್, ಘೋಸ್ಟ್ ಜೊತೆ ಅದ್ಹೇಗೆ ಲೈಂಗಿಕ ಕ್ರಿಯೆ ನಡೆಸಿದೆ" ಎಂದು ಕೇಳಿದಾಗ ಕಕ್ಕಾಬಿಕ್ಕಿಯಾಗುವ ಸರದಿ ಯತೀಶನದಾಗಿತ್ತು.
"ಥತ್ ಯಾವ ಸೀಮೆ ಮನುಷ್ಯರ್ರೀ ನೀವು. ಯಪ್ಪೋ ನೀವು ಹೇಳಿದ್ದು ಘೋಸ್ಟಾ. ನಾನೆಲ್ಲೋ ಗೋಟ್ಸ್ ಅಂತ ಅಂದುಕೊಂಡಿದ್ದೆ" ಅಂತ ಯತೀಶ್ ಅನ್ನುತ್ತಲೇ ಪ್ರಾಧ್ಯಾಪಕರಿಗೆ ಇಡೀ ಜಗತ್ತೇ ಗಿರಿಗಿರಿ ಸುತ್ತುತ್ತಿದೆ ಅನ್ನಿಸಲು ಆರಂಭವಾಗಿತ್ತು.












Click it and Unblock the Notifications