ಮತ್ತೆ ಇದೆಂಥಾ ವಿಚಿತ್ರ ಪ್ರಶ್ನೆರೀ ನಿಮ್ದು!

ಮೂರು ಬಾರಿ ಮದುವೆಯಾಗಿ, ಮೂರು ಬಾರಿ ಡೈವೋರ್ಸ್ ಆಗಿ, ನಾಲ್ಕನೇ ಬಾರಿಗೆ ಲಗ್ನವಾಗಿ ಮಧುಮಂಚವೇರಲು ಸಿದ್ಧಳಾಗಿದ್ದ ಲವೀನಾ ಮುಖದಲ್ಲಿ ಅಸಹನೀಯವಾದ ದುಗುಡವಿತ್ತು. ಅಂಗಾಂಗಗಳಲ್ಲಿ ಅಸಾಧ್ಯ ಸೌಂದರ್ಯವನ್ನು ತುಂಬಿಕೊಂಡಿದ್ದ ಲವೀನಾಳ ಕೇಸ್ ಹಿಸ್ಟರಿ ಬರೆದುಕೊಳ್ಳುತ್ತಿದ್ದ ಡಾ. ಡಿಬ್ಬಿ ಅಚ್ಚರಿಗೊಳ್ಳುವಂಥ ಪ್ರಶ್ನೆಯನ್ನು ಲವೀನಾ ಎಸೆದಿದ್ದಳು. ಅದೇನೆಂದರೆ...

"ಲೈಂಗಿಕ ಕ್ರಿಯೆ ನಡೆಸುವುದು ಹೇಗೆ?" ಲವೀನಾಳ ಈ ಪ್ರಶ್ನೆ ಕೇಳಿ ಒಂದಿಡೀ ಜಗ್ ನೀರನ್ನು ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಲೈಂಗಿಕ ತಜ್ಞ ಡಾ. ಡಿಬ್ಬಿ ಗಟಗಟನೆ ಕುಡಿದಿದ್ದ.

ಏದುಸಿರು ಬಿಡುತ್ತಿದ್ದ ಡಾ. ಡಿಬ್ಬಿ ಸುಧಾರಿಸಿಕೊಂಡು, "ಅಲ್ಲಾರೀ, ಮೂರು ಬಾರಿ ಮದುವೆ ಆಗಿದ್ದೀನಿ ಅಂತೀರಿ, ಮೂವರೊಂದಿಗೆ ಮೂರು ಮೂರು ವರ್ಷ ಕಳೆದಿದ್ದೀನಿ ಅಂತೀರಿ, ಮೂವರಿಗೂ ಡೈವೋರ್ಸ್ ಕೊಟ್ಟಿದ್ದೀನಿ ಅಂತೀರಿ, ಮತ್ತೆ ಇದೆಂಥಾ ವಿಚಿತ್ರ ಪ್ರಶ್ನೆರೀ ನಿಮ್ದು. ಅಲ್ಲಾರೀ, ತಮಾಷೆ ಮಾಡೋಕೂ ಒಂದು ಮಿತಿ ಬೇಡ್ವಾ?" ಎಂದು ತುಸು ಕೋಪದಿಂದಲೇ ಹೇಳಿದ.

ಡಿಬ್ಬಿಯ ಕಷ್ಟ ಏನೆಂದು ಅರ್ಥ ಮಾಡಿಕೊಂಡ ಲವೀನಾ, "ಇದು ತಮಾಷೆ ಅಲ್ಲ ಡಾಕ್ಟರ್. ನಿಜವಾಗ್ಲೂ ನನಗೆ ಪ್ರೇಮ ಸಲ್ಲಾಪದಲ್ಲಿ ತೊಡಗುವುದು ಹೇಗೆಂದು ಗೊತ್ತಿಲ್ಲ. ಗಾಡ್ ಪ್ರಾಮೀಸ್" ಎಂದು ಗಂಟಲು ಹಿಡಿದುಕೊಂಡಳು. ಸರಿ ನಿನ್ನ ಪ್ರಾಬ್ಲಂ ಏನೆಂದು ವಿವರಿಸು ಎಂದು ಡಾ. ಕಣ್ಸನ್ನೆ ಮಾಡಿದ.

"ನನ್ನ ಮೊದಲ ಗಂಡ ಪ್ರಸೂತಿತಜ್ಞನಾಗಿದ್ದ. ಆತನಿಗೆ ಪರೀಕ್ಷೆ ಮಾಡುವುದು ಮಾತ್ರ ತಿಳಿದಿತ್ತು. ಎರಡನೇ ಗಂಡ ಸೈಕಿಯಾಟ್ರಿಸ್ಟ್ ಆಗಿದ್ದ. ಆತ ಸಂಭೋಗದ ಬಗ್ಗೆ ಗಂಟೆಗಟ್ಟಲೆ ಲೆಕ್ಚರ್ ಕೊಡುತ್ತಿದ್ದ, ಆದರೆ... ಇರ್ಲಿ ಬಿಡಿ. ಮೂರನೇ ಗಂಡ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಕಟ್ಕೊಂಡಿದ್ದಕ್ಕೆ ಉದ್ಧಾರವಾದೆ. ಆತ ಹುಡುಕಾಟದಲ್ಲೇ ಮೂರು ವರ್ಷ ಕಳೆದ" ಎಂದು ತನ್ನ ಕಥೆಯನ್ನು ಡಿಬ್ಬಿ ಮುಂದೆ ಬಿಡಿಸಿಟ್ಟಳು.

ಡಾ. ಡಿಬ್ಬಿಗೆ ಲವೀನಾಳ ಪರಿಸ್ಥಿತಿ ಮತ್ತು ಸೂಕ್ಷ್ಮತೆ ಅರ್ಥವಾಗಿತ್ತು. "ನಾಲ್ಕನೆಯವನು ಯಾರು? ನಿನ್ನ ದುಗುಡಕ್ಕೆ ನಿಜವಾದ ಕಾರಣವಾದರೂ ಏನು?" ಎಂದು ಕೇಳಿದ.

ಅದಕ್ಕೆ ಲವೀನಾ, "ನಾನು ವಕೀಲನನ್ನು ಮದುವೆಯಾಗುತ್ತಿದ್ದೇನೆ. ಅದಕ್ಕೆ, ಮುಂಚೇನೆ ಎಲ್ಲ ತಿಳಿದುಕೊಂಡು ಹುಷಾರಾಗಿರೋದು ಒಳ್ಳೇದು ಅಂತ ನಿಮ್ಮ ಬಳಿ ಬಂದಿದ್ದೇನೆ" ಎಂದಳು ಲವೀನಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+