ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ರೂಮ್ ನಂ. 143ರಲ್ಲಿ ಇದ್ದೇನೆ!

|
Google Oneindia Kannada News

ಒಬ್ಬ ವ್ಯಕ್ತಿ ಫೈವ್ ಸ್ಟಾರ್ ಹೋಟೆಲಿನ ರಿಸೆಪ್ಶನ್‌ನಲ್ಲಿ ವಿಚಾರಣೆ ಮಾಡುವುದರಲ್ಲಿ ತಲ್ಲೀನನಾಗಿದ್ದ. ಆ ಸಮಯದಲ್ಲಿ ರಿಸೆಪ್ಶನ್ ಬಳಿಗೆ ಹದಿಹರೆಯದ ಯುವತಿಯೊಬ್ಬಳು ಬಂದಳು. ಆ ವ್ಯಕ್ತಿ ಕೈಯಿಂದ ಏನೋ ಆಕ್ಷನ್ ಮಾಡಲು ಹೋಗಿ ಆತನ ಮೊಣಕೈ ಯುವತಿಯ ಎದೆಯನ್ನು ಗುದ್ದಿಬಿಟ್ಟಿತು.

ಇಬ್ಬರೂ ಒಮ್ಮೆಯೇ ಅವಾಕ್ಕಾಗಿಬಿಟ್ಟರು. ಏನೆಂದು ಪ್ರತಿಕ್ರಿಯೆ ನೀಡಬೇಕೆಂದೇ ಗೊತ್ತಾಗಲಿಲ್ಲ. ಇಬ್ಬರಿಗೂ ಗೊತ್ತಿತ್ತು ಇದು ತಿಳಿಯದೆ ನಡೆದ ತಪ್ಪೆಂದು. ಯುವತಿ ಮಾತ್ರ ನೋವಿನಿಂದ ಹತ್ತಿರದಲ್ಲಿದ್ದ ಸೋಫಾದ ಮೇಲೆ ಹೋಗಿ ಕುಳಿತಳು. ಆಕೆಯನ್ನು ಸಮಾಧಾನಪಡಿಸಲೆಂದು ವ್ಯಕ್ತಿ ಆಕೆಯ ಪಕ್ಕ ಹೋಗಿ ಕುಳಿತ.

ನೋವು ಸ್ವಲ್ಪ ತಹಬದಿಗೆ ಬಂದಮೇಲೆ ಆಕೆ ಆತನತ್ತ ನೋಡಿದಳು. ನೋಡಲು ಸಾಕಷ್ಟು ಬಲಿಷ್ಠನಾಗಿದ್ದ ವ್ಯಕ್ತಿ ಸುಂದರವಾಗೇ ಇದ್ದ. ಆದರೆ ನೋವು ನೋವೇ ಅಲ್ಲವಾ? ಮುಖ ಗಂಟು ಹಾಕಿಕೊಂಡು 'ಸ್ವಲ್ಪ ಅತ್ತಿತ್ತ ನೋಡಿ ಕೈಯಾಡಿಸಬಾರದಾ?' ಎಂದು ಮತ್ತೆ ಕೇಳಿದಳು.

'ಸಾರಿ ಮಿಸ್... ಆರ್ ಮಿಸೆಸ್?'

'ಮಿಸ್'

'ಸಾರಿ ಮಿಸ್. ದಯವಿಟ್ಟು ಕ್ಷಮಿಸಿ. ನನಗೊತ್ತು ನಿಮ್ಮ ಎದೆ ನಿಮ್ಮ ಹೃದಯದಷ್ಟೇ ಸಾಫ್ಟಾಗಿದೆಯೆಂದು. ನೀವು ನನ್ನನ್ನು ಖಂಡಿತ ಕ್ಷಮಿಸುತ್ತೀರೆಂದು ಆಶಿಸಿದ್ದೇನೆ' ಎಂದು ಬೇಡುವವನಂತೆ ಹೇಳಿದ.

'ರೀ, ನಿಮ್ಮ ಬಳಿಯಿರುವ ಅಸ್ತ್ರ ನಿಮ್ಮ ಮೊಣಕೈಯಷ್ಟೇ ಗಡುಸಾಗಿದ್ದರೆ ನಾನು ರೂಮ್ ನಂ. 143ರಲ್ಲಿ ಇದ್ದೇನೆ' ಎಂದು ಧಡಧಡನೆ ಹೊರಟೇಬಿಟ್ಟಳು. ಸುರಸುಂದರಾಂಗ ಸ್ಟನ್! [ವಯಸ್ಕರ ಜೋಕ್ಸ್]

English summary
Adult Kannada jokes. A person accidentally hits on the breast of a beautiful girl in a five star hotel. He apologizes. But, girl stuns him with a sharp response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X