ಫ್ಯಾಮಿಲಿಯಲ್ಲಿ ಹೆಣ್ಣು ಇಷ್ಟಪಡೋರು ಯಾರೂ ಇಲ್ವಾ?
ಬೀಬರ್ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಂಡಿದ್ದಾನೆಂದು ಆತನ ಮುಖ ನೋಡಿದವರು ಯಾರಾದರೂ ಹೇಳಬಹುದಿತ್ತು. ಯಾಕೆ, ಏನಾಯ್ತೆಂದು ಕಂಡವರೆಲ್ಲ ಕೇಳಿದರೂ ಯಾರಿಗೂ ಉತ್ತರ ಕೊಡದೆ ನೇರವಾಗಿ ಮನೆಯ ಹತ್ತಿರದ ಬಾರೊಂದನ್ನು ಹೊಕ್ಕು ವೇಟರನ್ನು ಕರೆಯುತ್ತಾನೆ.
ಬೀಬರ್ ಅಲ್ಲಿ ರೆಗ್ಯೂಲರ್ ಗಿರಾಕಿ ಆದ್ದರಿಂದ ಮಾಣಿಗೂ ಪರಿಚಯವಿರುತ್ತಾನೆ. ಮಾಣಿಯೇ ಬಂದು ಏನಾಯ್ತು ಸಾರ್, ಎನಿ ಪ್ರಾಬ್ಲಂ? ಅಂತ ವಿಚಾರಿಸುತ್ತಾನೆ. ಆತನಿಗೆ ಎರಡು ಪೆಗ್ ವಿಸ್ಕಿ ತಗೊಂಡು ಬಾ ಎಂದು ಹೇಳುತ್ತ...
"ಏನು ಕೇಳ್ತೀಯಾ, ನನ್ನ ಸಹೋದರ ಸಲಿಂಗಕಾಮಿ ಅಂತ ಗೊತ್ತೇ ಇರಲಿಲ್ಲ. ನೋಡ್ತೀನಿ, ನಿನ್ನೆ ಹೇಳದೆ ಕೇಳದೆ ಮದುವೆಯಾಗಿಬಿಟ್ಟಿದ್ದಾನೆ. ಯಾರನ್ನು ಅಂತೀಯಾ ನನ್ನ ಕ್ಲೋಸ್ ಸ್ನೇಹಿತನನ್ನ" ಅಂತ ಪೆಚ್ಚು ಮೋರೆ ಹಾಕಿ ಕುಳಿತುಕೊಳ್ಳುತ್ತಾನೆ. [ಸಲಿಂಗಕಾಮಕ್ಕೆ ಫುಲ್ ಸ್ಟಾಪ್]
ಮಾಣಿ ತಂದ ಎರಡು ಪೆಗ್ಗನ್ನು ಎರಡೇ ಏಟಿಗೆ ಗಂಟಲಿಗೆ ಸುರುವಿಕೊಂಡು ಹಣ ಇಕ್ಕಿ ಹೊರಟುಹೋಗುತ್ತಾನೆ. ಮರುದಿನ ಅದೇ ಸಮಯಕ್ಕೆ ಬೀಬರ್ ಮತ್ತೆ ಹಾಜರ್! ಈ ಬಾರಿ ಮೂರು ಪೆಗ್ಗನ್ನು ಆರ್ಡರ್ ಮಾಡುತ್ತಾನೆ, ಅದೇ ಮಾಣಿಗೆ ಬೀಬರ್. ಮೌನದಲ್ಲೇ ಕೈಸನ್ನೆಯಿಂದ ಏನಾಯ್ತೆಂದು ಕೇಳುತ್ತಾನೆ ಮಾಣಿ.
"ಏನು ಕೇಳ್ತೀಯಾ, ಇದೀಗ ತಾನೆ ನನಗೆ ತಿಳಿದುಬಂತು, ನನ್ನ ಮಗ ಕೂಡ ಸಲಿಂಗಕಾಮಿ. ಇದನ್ನೆಲ್ಲಾ ನಾನು ನೋಡಬೇಕಾಗಿತ್ತಾ" ಅಂದವನ ಮುಂದೆ ಮೂರು ಪೆಗ್. ಮೂರೇ ಏಟಿಗೆ ಗುಳಂ. ಹಗಲು ಮುಗಿದ ಮೇಲೆ ಮತ್ತೆ ರಾತ್ರಿ ಆಗಲೇಬೇಕಲ್ಲ. ಮತ್ತೆ ಬಂದು ಕುಳಿತ ಬೀಬರ್ ಎದಿರು ನಾಲ್ಕರ ಬದಲು ಐದು ಪೆಗ್ ವಿಸ್ಕಿ ತಂದಿಟ್ಟು "ಏನಾಯ್ತು ಸಾರ್, ಮತ್ತೆ? ನಿಮ್ಮ ಕುಟುಂಬದಲ್ಲಿ ಯಾರಾದ್ರೂ ಹೆಣ್ಣನ್ನು ಇಷ್ಟಪಡುವವರು ಇಲ್ವಾ?"
"ಯಾಕಿಲ್ಲ, ನನ್ನ ಹೆಂಡತಿನೇ ಇದ್ದಾಳೆ" ಅಂತ ವೇಟರ್ ಮಾತಿಗೂ, ರಿಯಾಕ್ಷನ್ನಿಗೂ ಕಾಯದೆ ತನ್ನ ಕೆಲಸ ಮುಂದುವರಿಸುತ್ತಾನೆ.












Click it and Unblock the Notifications