ಸುಮ್ಮನೆ ನಕ್ಕು ಬಿಡಿ : ಟೀಚರ್ -ವಿದ್ಯಾರ್ಥಿ ಜೋಕುಗಳು

ರಂಗ ಪರೀಕ್ಷೇಲಿ ಡ್ರಾಯಿಂಗ್ ಮಾಡ್ತಾ ಇದ್ದ. ಬಕೆಟ್ ನ ಚಿತ್ರ ಬಿಡಿಸಿ 10 ಅಂಕಗಳು. ಚೊಂಬಿನ ಚಿತ್ರ ಬಿಡಿಸಿ 5 ಅಂಕಗಳು ಎಂದಿತ್ತು ಪ್ರಶ್ನೆ. ರಂಗ ಕಷ್ಟಪಟ್ಟು ಹೆಂಗೋ ಮಾಡಿ ಬಕೆಟ್ ಚಿತ್ರ ಬರೆದ. ಆದ್ರೇ ತಿಪ್ಪರಲಾಗ ಹಾಕಿದ್ರು ಚೊಂಬು ಬಿಡಿಸೋಕೆ ಬರ್ಲಿಲ್ಲ. ಅನ್ಯಾಯವಾಗಿ 5 ಮಾರ್ಕ್ಸ್ ಹೋಗುತ್ತೆ ಅಂತಾ ಹಿಂಗೆ ಬರೆದ.

"ಬಕೆಟ್ ಬರೆಯಲಾಗಿದೆ. ಚೊಂಬನ್ನು ಬರೆದು ಬಕೆಟ್ ಒಳಗೆ ಹಾಕಲಾಗಿದೆ."!!
ಉತ್ತರ ಪತ್ರಿಕೆ ಮೇಷ್ಟ್ರು ಹತ್ರ ಹೋಯ್ತು. ರಂಗ ಉತ್ತರ ಪತ್ರಿಕೆಯಲ್ಲಿ ಚಿತ್ರ ಬರೆದದ್ದನ್ನು ನೋಡಿ ಮೇಷ್ಟ್ರು ಹೀಗೆ ಬರೆದರು.
"5 ಮಾರ್ಕ್ಸನ್ನು ಚೊಂಬಿನೊಳಗೆ ಹಾಕಲಾಗಿದೆ."
😂😂😂😂😂😂😂😂😂😂😂😂😂😂😂😂😂
****

ಒಂದು ಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಎಲ್ಲಾ ಮಕ್ಕಳು ತಮ್ಮ ತಮ್ಮ ಭಾವನೆಗಳಿಗನುಸಾರವಾಗಿ , ತಮ್ಮ ಪ್ರತಿಭೆಯನ್ನು ಪ್ರದರ್ಶಿದರು. ಹಾಗೇ ಪ್ರತಿಯೊಬ್ಬರ ಬಿಳಿ ಹಾಳೆಯಲ್ಲಿ ಒಂದೊಂದು ಚಿತ್ರಗಳು ಹುಟ್ಟಿಕೊಂಡಿತು. ಆದರೆ ಎಲ್ಲರ ಗಮನ ಸೆಳೆದದ್ದು- ವಿದ್ಯಾರ್ಥಿಯೊಬ್ಬ ಬಿಡಿಸಿದ - ಆದಿವಾಸಿ ಬಾಲಕನೊಬ್ಬ ಕಬ್ಬು ತಿನ್ನುತ್ತಿರುವ ಚಿತ್ರವಾಗಿತ್ತು.

ಹಸಿವಿನಿಂದ ಬೇರೇನನ್ನೂ ತಿನ್ನಲು ಸಿಗದೆ, ಕಬ್ಬು ತಿಂದು ಹಸಿವು ನೀಗಿಸುವ ಮನಕಲಕುವ ದೃಶ್ಯ. ಮಕ್ಕಳು ಹಸಿವಿನಿಂದ ವಂಚಿತರಾಗುತ್ತಿರುವ ಬಾಲ್ಯಜೀವನದ ದೃಶ್ಯವನ್ನು ಚಿತ್ರಿಸಿದ ಆ ವಿದ್ಯಾರ್ಥಿಗೆ ಪ್ರಶಂಸೆಯ ಸುರಿಮಳೆಯೇ ಬಂದವು.

ತುಂಬಾ ಚರ್ಚೆಗಳ ಬಳಿಕ, ಎಲ್ಲಾ ಚಿತ್ರಗಳನ್ನು ಹಿಮ್ಮೆಟ್ಟಿ ಆ ಚಿತ್ರವು ಮೊದಲ ಸ್ಥಾನ ಪಡೆಯಿತು ಬಹುಮಾನ ವಿತರಣಾ ಸಮಾರಂಭದಲ್ಲಿ ಆ ಮಗುವಿನ ಚಿಂತನೆಯನ್ನು ಎಲ್ಲರೂ ಹೊಗಳಿ ಕೊಂಡಾಡಿದರು. ಕೊನೆಗೆ ಮುಖ್ಯೋಪಾಧ್ಯಾಯರು ಆ ವಿದ್ಯಾರ್ಥಿಯತ್ರ ಈ ಚಿತ್ರವನ್ನು ಬರೆಯಲು ಕಾರಣವಾದ ಅಂಶವನ್ನು ವಿವರಿಸು ಅಂತ ಕೇಳಿದರು.

ಅದಕ್ಕೆ ಆ ವಿದ್ಯಾರ್ಥಿ ನಿಷ್ಕಳಂಕನಾಗಿ ಹೇಳುತ್ತಾನೆ -

"ದಯವಿಟ್ಟು ತಾವೆಲ್ಲರೂ ನನ್ನನ್ನು ಇಷ್ಟೊಂದು ಹೊಗಳದಿರಿ. ನಾನು ಬರೆದಿರೋದು ಶ್ರೀ ಕೃಷ್ಣ ಕೊಳಲನ್ನು ಊದುವ ಚಿತ್ರವಾಗಿದೆ .
***
ಮೇಸ್ಟ್ರು ::ಲೇ ಸಿದ್ದ ಹೇಳೊ ಲಿಂಗದಲ್ಲಿ ಎಷ್ಟು ವಿಧ ?

ಸಿದ್ದ :: ಮೇಸ್ಟ್ರೆ ಆರು ವಿಧ .

ಮೇಸ್ಟ್ರು : ಅದ್ಯಾವದೊ ಆರು ವಿಧ !

ಸಿದ್ದ : ಪುಲ್ಲಿoಗ,

ಸ್ತ್ರೀಲಿಂಗ,

ನಪುಂಸಕಲಿಂಗ,

ನಾನ್ ಸಿದ್ದಲಿಂಗ,
ನೀವ್ ಗುರುಲಿಂಗ,

ಮತ್ತೆ
ಶ್ರೀಲಂಕಾದ ಬೋಲರ್ ಮಲಿಂಗ

😂😂😂😂😂😂

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+