ಗುಂಡನನ್ನು ತರಾಟೆಗೆ ತೆಗೆದುಕೊಂಡ ನರ್ಸ್ ಮೀನಾ!
ಅತಿಯಾದ ಮದ್ಯಪಾನ ವ್ಯಸನದಿಂದ ಗುಂಡ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆತನ ದೇಖರೇಖಿ ನೊಡಿಕೊಳ್ಳುತ್ತಿದ್ದ ನರ್ಸ್ ಮೀನಾ ಬಾಯಿಗೆ ಬಂದಂತೆ ಗುಂಡನಿಗೆ ಬೈದಳು.
ಮದ್ಯಪಾನದ ಕೆಡುಕಿನ ಬಗ್ಗೆ ಉಪದೇಶಿಸಿದಳು. ಆರೋಗ್ಯಕ್ಕಾಗುವ ಹಾನಿಯ ಕುರಿತಾಗಿ ಕೊರೆದಳು. ಕುಡಿಯುವುದರಿಂದ ನಿನಗೆ ಏನು ಸಿಗುತ್ತದೆ, ಅದರ ಲಾಭವಾದರೂ ಏನು? ಅಂತ ನೂರೆಂಟು ಬಾರಿ ಪ್ರಶ್ನಿಸಿದಳು.
ನರ್ಸ್ ಮೀನಾ ತನ್ನ ಮೇಲೆ ತೋರುತ್ತಿರುವ ಕನಿಕರದ ಬಗ್ಗೆ ನಗುತ್ತಾ ಗುಂಡ ಕೇಳಿದ: ನೀವು ಯಾವತ್ತೂ ಕುಡಿದಿಲ್ಲ ಅಲ್ವಾ ಸಿಸ್ಟರ್ ? ಅದಕ್ಕೆ ಅದರ ಸೆಳೆತದ ಬಗ್ಗೆ ನಿಮಗೆ ಗೊತ್ತಿಲ್ಲ.
ಗುಂಡನಿಗೆ ಪ್ರಶ್ನೆಗೆ ರೇಗಿಹೋದ ನರ್ಸ್ : ಅಂತದ್ದೇನಿದೆ ಅದರಲ್ಲಿ. ತಗೊಂಡು ಬಾ ನಾನೂ ನೋಡೇ ಬಿಡುವೆ. ಆದರೆ ನಾನು ನಿನ್ನಂತೆ ವ್ಯಸನಿಯಾಗಲಾರೆ, ಅಂತ ಸವಾಲು ಹಾಕಿದಳು. ಗುಂಡ ಈ ಸವಾಲಿಗೆ ಒಪ್ಪಿದ.
ಆಗ ನರ್ಸ್ ಮೀನಾ : ನೋಡು ಗುಂಡ, ನಾನು ಈ ಆಸ್ಪತ್ರೆಯ ಉದ್ಯೋಗಿಯಾಗಿರುವುದರಿಂದ ಬಹಿರಂಗವಾಗಿ ಕುಡಿಯಲು ಸಾಧ್ಯವಿಲ್ಲ. ಎಳನೀರಿನ ಬುರುಡೆಯೊಂದನ್ನು ಖಾಲಿ ಮಾಡಿ ಅದರಲ್ಲಿ ಮದ್ಯ ಬೆರಸಿ ತಾ..
ಗುಂಡ ಪಕ್ಕದಲ್ಲಿದ್ದ ಮದ್ಯದಂಗಡಿಯಲ್ಲಿ ಮದ್ಯ ಖರೀದಿಸಿ ಮದ್ಯವನ್ನು ಎಳನೀರಿನಲ್ಲಿ ಮಿಕ್ಸ್ ಮಾಡಿಕೊಡಲು ಎಳನೀರಿನವನ ಬಳಿ ಕೇಳಿಕೊಂಡ. ಸಂಶಯಾಸ್ಪದ ನೋಟ ಬೀರಿದ ಎಳನೀರಿನವನು, ಯಾರಿಗೆ ಸರ್ ಇದು...ಆ ನರ್ಸ್ ಮೀನಾಗಾ ಎಂದು ಪ್ರಶ್ನಿಸಿದ.
ಆಶ್ಚರ್ಯಚಕಿತಗೊಂಡ ಗುಂಡ ಕೇಳಿದ: ಹೌದು, ನಿನಗೆ ಹೇಗೆ ಗೊತ್ತಾಯಿತು?
ಎಳನೀರು ಅಂಗಡಿಯವ: ಕುಹಕದ ನಗೆ ಬೀರುತ್ತಾ.... ಬೆಳಗ್ಗೆಯಿಂದಾ ಇದು ಎಂಟನೇ ಎಳನೀರು ಎಂದಾಗ ಗುಂಡ ಸುಸ್ತೋ..ಸುಸ್ತು.. (ವಾಟ್ಸಾಪ್ ನಲ್ಲಿ ಬಂದಿದ್ದು)












Click it and Unblock the Notifications