
ಯಾವಾಗ್ಲೂ ವಯಸ್ಕರ ಚಿತ್ರ ನೋಡ್ತೀರಾ, ಅದ್ರಲ್ಲಿ ಬರೋದು ಒಂದಾದ್ರೂ ಗೊತ್ತಾ?
ಗಂಡ, ಹೆಂಡತಿ ನಡುವೆ ಏನಾದರೂ ಕಾರಣಕ್ಕೆ ಜಗಳವಾಗುತ್ತಲೇ ಇರುತ್ತಿತ್ತು..
ಗಂಡ: ಅಲ್ವೇ.. ಯಾವಾಗ ನೋಡಿದ್ರೂ ' ಅಡುಗೆ ಪಾಕ' ದ ಟಿವಿ ಶೋ ನೋಡ್ತಾ ಇರ್ತೀಯಲ್ವಾ,.. ಅದರಲ್ಲಿ ಬರೋ ಒಂದಾದ್ರೂ ಅಡುಗೆ ಮಾಡೋಕೆ ಬರುತ್ತಾ ನಿನಗೆ? ಯಾವಾಗ ನೋಡಿದ್ರೂ ತಿಳಿಸಾರೇ ಗತಿ!
ಹೆಂಡ್ತಿ: ನಂಗೆ ಹೇಳ್ತೀರಲ್ವಾ, ನೀವು ಯಾವಾಗ ನೋಡಿದ್ರೂ ' ವಯಸ್ಕರ ಚಿತ್ರ' ನೋಡ್ತಾ ಇರ್ತೀರಾ..
ಗಂಡ: ಅದಕ್ಕೆ?
ಹೆಂಡ್ತ್: ಅದರಲ್ಲಿ ಬರೋದು ಒಂದಾದರೂ ನಿಮ್ಗೆ ಗೊತ್ತಾ?
ಗಂಡ: ಆಯ್ತು.. ಬಿಡೇ ಮಲ್ಕೋ...
----
ಬ್ಯಾಂಕ್ ಮ್ಯಾನೇಜರ್ ಒಬ್ಬರು ಸೌತ್ ಇಂಡಿಯನ್ ಹೋಟೆಲಿಗೆ ಹೋಗಿ ವೈಟರ್ ಅನ್ನು ಕರೆಯುತ್ತಾರೆ..
ಮ್ಯಾನೇಜರ್: ವೈಟರ್ ಬಾಪ್ಪಾ..
ವೈಟರ್: ಏನ್ ಕೊಡ್ಲಿ ಸಾರ್..
ಮ್ಯಾನೇಜರ್: ಏನಿದೆ?
ವೈಟರ್: ಇಡ್ಲಿ, ವಡೆ, ಉಪ್ಪಿಟ್ಟು, ಪೊಂಗಲ್, ದೋಸಾ, ಪೂರಿ, ರೈಸ್ ಬಾತ್.. ಏನ್ ಆರ್ಡರ್ ಮಾಡ್ಲಿ.. ಸರ್
ಮ್ಯಾನೇಜರ್: ಸರಿ.. ಒಂದು ಪ್ಲೇಟ್ ಇಡ್ಲಿವಡ ಕೊಡು.. ಒಂದು ಪ್ಲೇಟ್ ರೈಸ್ ಬಾತ್ ಪಾರ್ಸೆಲ್ ಮಾಡು..
ವೈಟರ್: ಸರ್.. ಅದು ಯಾವುದೂ ಇಲ್ಲಾ.. ಎಲ್ಲಾ ಖಾಲಿಯಾಗಿದೆ..
ಮ್ಯಾನೇಜರ್: ಏ.. ಇನ್ನೇನು ಸಾಯೋಕಾ ಅದೆಲ್ಲಾ ಹೇಳ್ದೆ..
ವೈಟರ್: ಸರ್..ನಾನು ನಿಮ್ಮ ಬ್ಯಾಂಕಿನ ಎಟಿಎಂಗೆ ಹೋಗ್ತೇನೆ.. ಅದು ಮೊದಲು ಪಿನ್ ನಂಬರ್ ಕೇಳುತ್ತೆ, ಆ ನಂತರ ಎಸ್ಬಿನಾ, ಕರೆಂಟ್ ಅಕೌಂಟಾ ಅಂತ ಕೇಳುತ್ತೆ..ದುಡ್ಡು ಎಷ್ಟು ಬೇಕು ಕೇಳುತ್ತೆ, ರಿಸಿಟ್ ಪ್ರಿಂಟ್ ಬೇಕಾ ಕೇಳುತ್ತೆ.. ಕೊನೆಗೇ ನೋ ಕ್ಯಾಷ್ ಅನ್ನುತ್ತೆ... ನಾವು ಮಾಡಿದ್ರೆ ಸಿಟ್ಟು ಬರುತ್ತಲ್ಲಾ...
ಬ್ಯಾಂಕ್ ಮ್ಯಾನೇಜರ್ ಏನು ಮಾತಾಡದೇ ಎದ್ದು ಹೋದ್ರು..