ಗಂಡ ಹೆಂಡತಿ ಜೋಕ್ಸ್; ಮಾಲ್‌ನಲ್ಲಿ ಸುಂದರಿ ಜೊತೆ ಗುಂಡ
ಹಾಸ್ಯ ನಾನು ನೋಡೋ ಕಣ್ಣಲ್ಲಿ ಅಡಗಿರುತ್ತಂತೆ. ಹಾಸ್ಯ ನಮ್ಮ ಮನಸಿಗೆ ಮುದ ಕೊಡುತ್ತದೆ. ನಮ್ಮ ನಿತ್ಯ ಜೀವನದಲ್ಲಿ ಹಾಸ್ಯ ಹಾಸು ಹೊಕ್ಕಾಗಿರುತ್ತದೆ. ನಮಗೆ ಅದನ್ನು ನೋಡುವ ಕಣ್ಣಿರಬೇಕು ಅಷ್ಟೆ.
ಗಂಡ ಮತ್ತು ಹೆಂಡತಿ ಜೋಕ್‌ಗಳು ಬಹಳ ಜನಪ್ರಿಯ. ಕೆಲ ಜೋಕ್‌ಗಳನ್ನು ಆಯ್ದು ಇಲ್ಲಿ ಕೊಟ್ಟಿದ್ದೇವೆ. ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿರುವ ಜೋಕ್‌ಗಳನ್ನು ಜೋಕ್ ಆಗಿಯೇ ಸ್ವೀಕರಿಸತಕ್ಕದ್ದು. ಗಂಡ ಮತ್ತು ಹೆಂಡತಿ ನಿಜ ಜೀವನದಲ್ಲಿ ಹೀಗೇ ಇರುತ್ತಾರೆ ಎಂದು ಅರ್ಥ ಮಾಡಿಕೊಳ್ಳಬೇಡಿ.
ಲಿಪ್ ಸ್ಟಿಕ್ ಪ್ರಸಂಗ
ಸ್ನೇಹಿತರಿಬ್ಬರು ಮಾತನಾಡುತ್ತಾ, ಒಬ್ಬ ಹೇಳ್ತಾನೆ, "ನನ್ ಹೆಂಡತಿ ಯಾವಾಗ್ಲೂ ವಟ ವಟ ಮಾತಾಡ್ತಾನೆ ಇರ್ತಾಳೆ, ತಲೆ ಕೆಟ್ಟು ಗೊಬ್ರ ಆಗೋಗಿದೆ".
ಎರಡನೇ ಸ್ನೇಹಿತ, "ನನ್ ಹೆಂಡ್ತಿನೂ ಸಖತ್ ಮಾತಾಡ್ತಾಳಪ್ಪ. ಆದ್ರೆ ನಿನ್ನೆಯಿಂದ ಬಾಯಿ ಮುಚ್ಚಿಸಿದ್ದೀನಿ" ಅಂತ ಹೇಳ್ತಾನೆ.
ಮೊದಲನೇ ಸ್ನೇಹಿತನಿಗೆ ಆಶ್ಚರ್ಯ ಆಗುತ್ತೆ, "ಅಂಥದ್ದೇನು ಮಾಡಿದೆ?".
ಎರಡನೇ ಸ್ನೇಹಿತ: "ಹೆಂಡ್ತಿ ಮೇಕಪ್ ಮಾಡ್ಕೋಬೇಕಾದ್ರೆ ಲಿಪ್ ಸ್ಟಿಕ್ ಕೊಡೋಕೆ ಹೇಳಿದ್ಳು. ನಾನು ಫೆವಿಕಾಲ್ ಡಬ್ಬಿ ಕೊಟ್ಟೆ ಅಷ್ಟೇ. ಆಗಿನಿಂದ ಆಕೆ ಬಾಯಿ ತೆಗೀತಾನೆ ಇಲ್ಲ" ಅಂತಾನೆ.

ಸುಂದರ ಹುಡುಗಿ ಜೊತೆ ಗುಂಡ ಒಂದು ದೊಡ್ಡ ಮಾಲ್‌ನಲ್ಲಿ ಸುಂದರವಾದ ಮಹಿಳೆ ಶಾಪಿಂಗ್ ಮಾಡುತ್ತಿರುತ್ತಾಳೆ. ಆಗ ಗುಂಡ ಅವಳ ಬಳಿ ಹೋಗಿ ಮಾತನಾಡಿಸುತ್ತಾನೆ: "ಮೇಡಂ ನನ್ ಹೆಂಡ್ತಿ ಈ ಮಾಲ್‌ನಲ್ಲಿ ಕಾಣ್ತಿಲ್ಲ. ನೀವು ನನ್ ಜೊತೆ ಸ್ವಲ್ಪ ಹೊತ್ತು ಮಾತಾಡ್ತೀರಾ?". ಆ ಹುಡುಗಿ ಕಣ್ಣು ಹುಬ್ಬೇರಿಸಿ, "ನಿಮ್ ಹೆಂಡ್ತಿ ಕಾಣಿಸ್ತಿಲ್ಲ ಅಂದ್ರೆ ನನ್ ಹತ್ರ ಯಾಕೆ ಬಂದಿದ್ದೀರಿ?" ಎಂದು ಕೇಳುತ್ತಾಳೆ. ಅದಕ್ಕೆ ಗುಂಡ, "ಇಲ್ಲ ಮೇಡಂ, ನಾನು ಚೆನ್ನಾಗಿರೋ ಹುಡುಗಿ ಜೊತೆ ಎಲ್ಲಾದ್ರೂ ಮಾತಾಡಿದ್ರೆ ಸಾಕು ನನ್ ಹೆಂಡ್ತಿ ಅದೆಲ್ಲಿರ್ತಾಳೋ ಕೂಡಲೇ ಪ್ರತ್ಯಕ್ಷ ಆಗಿಬಿಡ್ತಾಳೆ" ಎನ್ನುತ್ತಾನೆ.ಒಂದು ದೊಡ್ಡ ಮಾಲ್‌ನಲ್ಲಿ ಸುಂದರವಾದ ಮಹಿಳೆ ಶಾಪಿಂಗ್ ಮಾಡುತ್ತಿರುತ್ತಾಳೆ. ಆಗ ಗುಂಡ ಅವಳ ಬಳಿ ಹೋಗಿ ಮಾತನಾಡಿಸುತ್ತಾನೆ: "ಮೇಡಂ ನನ್ ಹೆಂಡ್ತಿ ಈ ಮಾಲ್‌ನಲ್ಲಿ ಕಾಣ್ತಿಲ್ಲ. ನೀವು ನನ್ ಜೊತೆ ಸ್ವಲ್ಪ ಹೊತ್ತು ಮಾತಾಡ್ತೀರಾ?". ಆ ಹುಡುಗಿ ಕಣ್ಣು ಹುಬ್ಬೇರಿಸಿ, "ನಿಮ್ ಹೆಂಡ್ತಿ ಕಾಣಿಸ್ತಿಲ್ಲ ಅಂದ್ರೆ ನನ್ ಹತ್ರ ಯಾಕೆ ಬಂದಿದ್ದೀರಿ?" ಎಂದು ಕೇಳುತ್ತಾಳೆ. ಅದಕ್ಕೆ ಗುಂಡ, "ಇಲ್ಲ ಮೇಡಂ, ನಾನು ಚೆನ್ನಾಗಿರೋ ಹುಡುಗಿ ಜೊತೆ ಎಲ್ಲಾದ್ರೂ ಮಾತಾಡಿದ್ರೆ ಸಾಕು ನನ್ ಹೆಂಡ್ತಿ ಅದೆಲ್ಲಿರ್ತಾಳೋ ಕೂಡಲೇ ಪ್ರತ್ಯಕ್ಷ ಆಗಿಬಿಡ್ತಾಳೆ" ಎನ್ನುತ್ತಾನೆ.
ಒಂದು ದೊಡ್ಡ ಮಾಲ್‌ನಲ್ಲಿ ಸುಂದರವಾದ ಮಹಿಳೆ ಶಾಪಿಂಗ್ ಮಾಡುತ್ತಿರುತ್ತಾಳೆ. ಆಗ ಗುಂಡ ಅವಳ ಬಳಿ ಹೋಗಿ ಮಾತನಾಡಿಸುತ್ತಾನೆ: "ಮೇಡಂ ನನ್ ಹೆಂಡ್ತಿ ಈ ಮಾಲ್‌ನಲ್ಲಿ ಕಾಣ್ತಿಲ್ಲ. ನೀವು ನನ್ ಜೊತೆ ಸ್ವಲ್ಪ ಹೊತ್ತು ಮಾತಾಡ್ತೀರಾ?".
ಆ ಹುಡುಗಿ ಕಣ್ಣು ಹುಬ್ಬೇರಿಸಿ, "ನಿಮ್ ಹೆಂಡ್ತಿ ಕಾಣಿಸ್ತಿಲ್ಲ ಅಂದ್ರೆ ನನ್ ಹತ್ರ ಯಾಕೆ ಬಂದಿದ್ದೀರಿ?" ಎಂದು ಕೇಳುತ್ತಾಳೆ.
ಅದಕ್ಕೆ ಗುಂಡ, "ಇಲ್ಲ ಮೇಡಂ, ನಾನು ಚೆನ್ನಾಗಿರೋ ಹುಡುಗಿ ಜೊತೆ ಎಲ್ಲಾದ್ರೂ ಮಾತಾಡಿದ್ರೆ ಸಾಕು ನನ್ ಹೆಂಡ್ತಿ ಅದೆಲ್ಲಿರ್ತಾಳೋ ಕೂಡಲೇ ಪ್ರತ್ಯಕ್ಷ ಆಗಿಬಿಡ್ತಾಳೆ" ಎನ್ನುತ್ತಾನೆ.

ಅತ್ತೆಯನ್ನ ಎಸೆದ ಗಂಡ
ಹೆಂಡತಿ ಟ್ರಿಪ್ ಹೋಗಲು ಪ್ಲಾನ್ ಮಾಡ್ತಾಳೆ. "ರೀ ಮನೆಯಲ್ಲಿ ಕೆಲ್ಸ ಮಾಡಿ ಸಾಕಾಗಿ ಹೋಗಿದೆ. ಏನ್ ಮಾಡಿದ್ರೂ ನೆಮ್ಮದಿ ಇಲ್ಲ. ಎಲ್ಲಾದ್ರೂ ಬೀಚ್ ಕಡೆ ಹೋಗಿ ಬರೋಣ. ನಮ್ಮ ಕಷ್ಟಗಳನ್ನ ಸಮುದ್ರಕ್ಕೆ ಬಿಸಾಡಿ ಬರೋಣ" ಅಂತ ಗಂಡನನ್ನು ಪುಸಲಾಯಿಸ್ತಾಳೆ. ಗಂಡ ಅದಕ್ಕೆ ಒಪ್ಪುತ್ತಾನೆ.
"ಪಾಪ, ನನ್ನ ಅಮ್ಮನನ್ನೂ ಕರಕೊಂಡು ಹೋಗೋಣ" ಅಂತ ಗಂಡನಿಗೆ ಹೆಂಡತಿ ಹೇಳ್ತಾಳೆ. ಅದಕ್ಕೂ ಗಂಡ ಒಪ್ಪಿಕೊಳ್ಳುತ್ತಾನೆ.
ಹಡಗಿನಲ್ಲಿ ಹೋಗಬೇಕಾದ್ರೆ ತನ್ನ ಅತ್ತೆಯನ್ನ ಗಂಡ ಸಮುದ್ರಕ್ಕೆ ತಳ್ಳಿಬಿಡ್ತಾನೆ.
"ಏನ್ ಮಾಡಿದ್ರಿ, ಅಯ್ಯೋ" ಅಂತ ಕಿಟಾರನೆ ಕಿರುಚುತ್ತಾಳೆ.
"ನಮ್ಮ ಕಷ್ಟಗಳನ್ನು ಈ ಸಮುದ್ರದಲ್ಲಿ ಬಿಸಾಡೋಣ ಅಂತ ನೀನೇ ಅಲ್ವೇನೆ ಹೇಳಿದ್ದು..!" ಅಂತಾನೆ ಗಂಡ.

ಸತ್ತ ಮೇಲೆ..?
ಹೆಂಡತಿಯನ್ನು ಗಂಡ ಕೇಳ್ತಾನೆ: "ನಾನು ಸತ್ತ ಮೇಲೆ ನೀನು ಬೇರೆ ಮದುವೆ ಆಗ್ತೀಯಾ?.
ಅದಕ್ಕೆ ಹೆಂಡತಿ: "ಇಲ್ಲ, ನನ್ನ ತಂಗಿ ಜೊತೆ ಇರ್ತೇನೆ".
ನಂತರ ಹೆಂಡತಿ ವಾಸಸ್ ಗಂಡನನ್ನು ಕೇಳ್ತಾಳೆ: "ನಾನು ಸತ್ ಮೇಲೆ ನೀವು ಬೇರೆ ಮದುವೆ ಮಾಡಿಕೊಳ್ತೀರಾ?".
ಗಂಡ: "ಇಲ್ಲ, ನಾನೂ ಸಹ ನಿನ್ ತಂಗಿ ಜೊತೆನೇ ಇರ್ತೇನೆ" ಅಂತಾನೆ.

ಮಂಡಿಯೂರಿದ ಹೆಂಡತಿ
ಗಂಡ ಮತ್ತು ಹೆಂಡತಿ ಮಧ್ಯೆ ಜೋರು ಜಗಳ ಆಗುತ್ತೆ. ಆ ಘಟನೆಯನ್ನು ಗಂಡ ತನ್ನ ಸ್ನೇಹಿತನ ಬಳಿ ಹೇಳಿಕೊಳ್ತಾನೆ: "ರಾತ್ರಿ ಹೆಂಡ್ತಿ ಜೊತೆ ಜಗಳ ಆಯ್ತು ಕಣೋ. ಆದ್ರೆ ಲಾಸ್ಟಲ್ಲಿ ಮಂಡಿಯೂರಿ ಬಗ್ಗೆ ನನ್ನ ಕಾಲ ಬಳಿ ನಿಂತುಕೊಂಡ್ಳು".
"ಓಹ್, ಪರವಾಗಿಲ್ವೆ. ಕೊನೆಗೂ ಹೆಂಡ್ತಿಯನ್ನ ಬಗ್ಗಿಸಿಬಿಟ್ಟೆ. ಏನ್ ಹೇಳಿದ್ಳು ನಿನ್ ಹೆಂಡ್ತಿ" ಅಂತ ಆ ಸ್ನೇಹಿತ ಕೇಳುತ್ತಾನೆ.
ಗಂಡ: "ಎಷ್ಟು ನಾಚಿಕೆಗೆಟ್ಟಿದ್ದೀರಿ.. ಮಂಚದಿಂದ ಆಚೆ ಬನ್ರಿ ಅಂದ್ಳು"
(ಒನ್ಇಂಡಿಯಾ ಸುದ್ದಿ)
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ











Click it and Unblock the Notifications