Wipro Layoff: ಉದ್ಯೋಗಿಗಳ ಕಡಿತಕ್ಕೆ 'ವಿಪ್ರೋ' ನಿರ್ಧಾರ, ಯಾಕೆ? ಕಾರಣವೇನು?
ಬೆಂಗಳೂರು, ಜನವರಿ 31: ಕೊರೊನಾ ನಂತರವು ಬೃಹತ್ ಐಟಿ ಕಂಪನಿಗಳು ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆಸಿವೆ. ಈ ಸಾಲಿಗೆ ಇದೀಗ ಪ್ರತಿಷ್ಠಿತ ವಿಪ್ರೋ ಸಂಸ್ಥೆ (Wipro) ಸಹ ಸೇರಿಕೊಂಡಿದೆ.
ಹೌದು, 2024 ವರ್ಷದ ಆರಂಭದಿಂದ ಟೆಕ್ ಉದ್ಯಮದಲ್ಲಿ ವಿಶ್ವದಾದ್ಯಂತ ವಜಾಗೊಳಿಸುವ ಹೊಸ ಅಲೆಯನ್ನು ಕಾಣುತ್ತಿದ್ದೇವೆ. ಎಕನಾಮಿಕ್ ಟೈಮ್ಸ್ ಮಾಡಿರುವ ವರದಿ ಪ್ರಕಾರ ನೋಡುವುದಾದರೆ ವಿಪ್ರೋ ಕಂಪನಿಯು ನೂರಾರು ಉದ್ಯೋಗಗಳನ್ನು ಕಡಿತಗೊಳಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ.

ವಿಪ್ರೋ ಕಂಪನಿಯು ಕಡಿಮೆ ಲಾಭಾಂಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ವಿಪ್ರೋ ಮಧ್ಯಮ ಮಟ್ಟದಲ್ಲಿ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ದರಿಸಿದೆ. ವಾರ್ಷಿಕ ವಹೀವಾಟು ಸುಧಾರಿಸಲು ಮತ್ತು ವೆಚ್ಚವನ್ನು ಉಳಿಸಲು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದು ಸಾಮಾನ್ಯ ಪ್ರವೃತ್ತಿಯಾಗಿದೆ.
ಕಂಪನಿಗಳಿಗೆ ಲಾಭಾಂಶದ ಸವಾಲು ಎದುರಾಗಿದೆ?
ಗೂಗಲ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನಂತಹ ಕಂಪನಿಗಳು ಇತ್ತೀಚೆಗೆ ವೆಚ್ಚವನ್ನು ಉಳಿಸುವ ಹೆಸರಿನಲ್ಲಿ ಸಾವಿರಾರು ಜನರನ್ನು ವಜಾಗೊಳಿಸಿವೆ. ವಿಪ್ರೋ ಪ್ರಸ್ತುತ ಭಾರತದಲ್ಲಿ ಪಟ್ಟಿ ಮಾಡಲಾದ ನಾಲ್ಕು ದೊಡ್ಡ ಐಟಿ ಸೇವೆಗಳ ಕಂಪನಿಗಳಲ್ಲಿ ಕಡಿಮೆ ಲಾಭಾಂಶವನ್ನು ಹೊಂದುವ ಸವಾಲನ್ನು ಎದುರಿಸುತ್ತಿದೆ.

ಇನ್ನೂ ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ, ಅದರ ಅಂಚು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (25 ಪ್ರತಿಶತ), ಇನ್ಫೋಸಿಸ್ (20.5 ಪ್ರತಿಶತ), ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ (19.8 ಪ್ರತಿಶತ) ಗಿಂತ ಗಮನಾರ್ಹವಾಗಿ ಶೇಕಡಾ 16 ರಷ್ಟು ಕಡಿಮೆ ಲಾಭಾಂಶ ಕಂಡಿವೆ ಎನ್ನಲಾಗಿದೆ. ಹೀಗಾಗಿ ಉದ್ಯೋಗ ಕಡಿತಕ್ಕೆ ನಿರ್ಧರಿಸಲಾಗಿದೆ ಎಂದು 'ಇಟಿ' ವರದಿ ಮಾಡಿದೆ.
ವ್ಯವಹಾರಿಕ ಭಾಗವಾಗಿ ವಜಾ ಕ್ರಮ
ವಿಪ್ರೋ ಉದ್ಯೋಗಿಗಳ ವಜಾ ಕ್ರಮ ಪ್ರಾಥಮಿಕವಾಗಿ ಮಧ್ಯಮ ಮಟ್ಟದ ಕಾರ್ಯನಿರ್ವಾಹಕರನ್ನು ಗುರಿಯಾಗಿಸಿ ಮಾಡುವ ಉದ್ದೇಶ ಹೊಂದಿದೆ. ಆದಾಗ್ಯೂ, ಕೋವಿಡ್ ನಂತರದ ಆರ್ಥಿಕ ಕುಸಿತ ಮತ್ತು ಗ್ರಾಹಕರ ಖರ್ಚು ಕಡಿಮೆ ಮಾಡುವಿಕೆ ಮತ್ತು ವ್ಯವಹಾರಿಕ ಭಾಗದ ಕ್ರಮವಾಗಿ ವೆಚ್ಚ ಕಡಿತಗೊಳಿಸಲು ವಜಾ ಪ್ರಕ್ರಿಯೆ ಆರಂಭಗೊಂಡವು.
ವಿಪ್ರೊದ ಮುಖ್ಯ ಹಣಕಾಸು ಅಧಿಕಾರಿ ಅಪರ್ಣಾ ಅಯ್ಯರ್ ಅವರು ಪ್ರಸಕ್ತ ತ್ರೈಮಾಸಿಕದಲ್ಲಿ ಕಂಪನಿಯ ಲಾಭಾಂಶವನ್ನು ಸುಧಾರಿಸುವ ನಿಟ್ಟಿನಲ್ಲಿ ವಜಾ ಕಾರ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ಲೆವೆಲ್ 3 ನೌಕರನ ಕೆಲಸವನ್ನು ಹಂತ 2 ಉದ್ಯೋಗಿಗೆ ವರ್ಗಾಯಿಸಲಾಗುತ್ತದೆ, ಅವರಿಗೆ ಸೂಕ್ತವಾದ ಪರಿಕರಗಳನ್ನು ನೀಡುವ ಉದ್ದೇಶವನ್ನು ವಿಪ್ರೋ ಹೊಂದಿದೆ.
ಕಡಿಮೆ ಲಾಭಾಂಶ ಸೇರಿದಂತೆ ಹಲವು ಕ್ರಮಗಳಿಂದ ದೈತ್ಯ ಐಟಿ ಕಂಪನಿಗಳು ನೌಕರರ ವಜಾ ಇದೇ ಮೊದಲೇನಲ್ಲ. ಕೋವಿಡ್ ನಂತರವು ಇಂತಹ ಬೆಳವಣಿಗೆಗಳು ನಡೆದಿದ್ದು, ಅದಕ್ಕೆ ಇದೀಗ ವಿಪ್ರೋ ಕಂಪನಿ ಸೇರಿದೆ.












Click it and Unblock the Notifications