ಕಲಬುರಗಿಯಲ್ಲಿ ಮಾರ್ಚ್ 31ರಂದು ನೇರ ಸಂದರ್ಶನ
ಕಲಬುರಗಿ, ಮಾರ್ಚ್ 29; ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಾರ್ಚ್ 31ರಂದು ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡುವುದಿಲ್ಲ.
ಕಲಬುರಗಿಯ ಎಂ. ಎಸ್. ಕೆ. ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 31ರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ತನಕ ನೇರ ಸಂದರ್ಶನ ನಡೆಯಲಿದೆ.
ಆಸಕ್ತ ನಿರುದ್ಯೋಗಿ ಯುವಕ, ಯುವತಿಯರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿಯ ಪ್ರತಿಷ್ಠಿತ ಟಾಟಾ ಪ್ಲೆ ಡಿಟಿಹೆಚ್ ಕಂಪನಿಯು ನೇರ ಸಂದರ್ಶನ ನಡೆಸಲಿದೆ. ಸಂದರ್ಶನದಲ್ಲಿ ಐ.ಟಿ.ಐ., ಎಲೆಕ್ಟ್ರಿಷಿಯನ್/ ಎಲೆಕ್ಟ್ರಾನಿಕ್ಸ್ ಮತ್ತು ಡಿಪ್ಲೋಮಾ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ ಕಮ್ಯೂನಿಕೆಷನ್ ವಿದ್ಯಾರ್ಹತೆ ಹೊಂದಿರುವ ಮತ್ತು ಬೈಕ್ ಹಾಗೂ ಸ್ಮಾರ್ಟ್ ಪೋನ್ ಹೊಂದಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬೇಕು.

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 25 ವರ್ಷಗಳು. ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಕಚೇರಿ ದೂರವಾಣಿ ಸಂಖ್ಯೆ 08472-274846.
ತರಬೇತಿಗೆ ಅರ್ಜಿ ಆಹ್ವಾನ; ಕಲಬುರಗಿ ನಗರದ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ 30 ದಿನಗಳ ಕಾಲ ವಿದ್ಯುತ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‍ಸೆಟ್ ದುರಸ್ತಿ ತರಬೇತಿ ಆಯೋಜಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಏಪ್ರಿಲ್ 11 ರಿಂದ ಮೇ 10 ರವರೆಗೆ 30 ದಿನಗಳ ಕಾಲ ಉಚಿತ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ತರಬೇತಿ ನೀಡಲಾಗುತ್ತದೆ. ಜಿಲ್ಲೆಯ ಗ್ರಾಮೀಣ ಭಾಗದ 18 ರಿಂದ 45 ವರ್ಷದೊಳಗಿನ ಬಿಪಿಎಲ್, ಅಂತ್ಯೋದಯ ರೇಷನ್ ಹಾಗೂ ಎಮ್‍ಜಿಎನ್‍ಆರ್‍ಇಜಿಎ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಏಪ್ರಿಲ್ 9 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿ ಏ. 9 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ. ಮೊಬೈಲ್ ಸಂಖ್ಯೆ 9243602888, 9886781239, 9900135705.
ಉಚಿತ ತರಬೇತಿಗೆ ಅರ್ಜಿ ಹಾಕಿ; ಕೆನಾರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ (ಆರ್) ಹಳಿಯಾಳ ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಉಚಿತ ಜೆಸಿಬಿ ಆಪರೇಟರ್ ತರಬೇತಿಯನ್ನು ನೀಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರಿಗೆ 18 ರಿಂದ 45 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ. ಆಸಕ್ತ ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ, ಇತ್ಯಾದಿ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಏಪ್ರಿಲ್ 5 ರೊಳಗೆ ಸಲ್ಲಿಸಬೇಕು.
ಅರ್ಜಿಗಳನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ (ಆರ್) ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325 ವಿಳಾಸಕ್ಕೆ ಕಳುಹಿಸಬಹುದು. ಅಥವಾ ವಾಟ್ಸಪ್ ಸಂಖ್ಯೆ 9449782425, 8050741744, 6363429889ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 08284-298547 ಸಂಖ್ಯೆಗೆ ಕರೆ ಮಾಡಿ.












Click it and Unblock the Notifications