ವಿಜಯಪುರ ಹಾಲು ಉತ್ಪಾದಕರ ಸಂಘದಲ್ಲಿ ಕೆಲಸ ಖಾಲಿ ಇದೆ

Posted By:
Subscribe to Oneindia Kannada

ವಿಜಯಪುರ, ಮೇ 17 : ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವಿಜಯಪುರ ಹಲವಾರು ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಜೂನ್ 20, 2016.

ಕನ್ನಡ ಅಥವ ಆಂಗ್ಲ ಭಾಷೆಯಲ್ಲಿ ಅರ್ಜಿಯನ್ನು ಸ್ಪಷ್ಟವಾಗಿ ಬರೆದು ಅಥವ ಬೆರಳಚ್ಚು ಮಾಡಿಸಿ ಎಲ್ಲಾ ದಾಖಲಾತಿಗಳ ಜೊತೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ವಿಜಯಪುರ ಡೈರಿ ಆವರಣ ಭೂತನಾಳ, ವಿಜಯಪುರ 586103. [110 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ UPSC]

vijayapura

ಖಾಲಿ ಇರುವ ಹುದ್ದೆಗಳು : ಸಹಾಯಕ ವ್ಯವಸ್ಥಾಪಕರು (ಎ.ಎಚ್ ಮತ್ತು ಎ.ಐ) 1 ಹುದ್ದೆ, ಸಹಾಯಕ ವ್ಯವಸ್ಥಾಪಕರು (ವಿತ್ತ ) 1, ತಾಂತ್ರಿಕ ಅಧಿಕಾರಿ (ಡಿಟಿ ಟ್ಯೂಸಿ) 1, ತಾಂತ್ರಿಕ ಅಧಿಕಾರಿ (ಅಭಿಯಂತರ) ಮೆಕ್ಯಾನಿಕಲ್ 1, ವಿಸ್ತರಣಾಧಿಕಾರಿ ದರ್ಜೆ - 3 1, ಕಿರಿಯ ತಾಂತ್ರಿಕ (ರೆಫ್ರಿಜರೇಶನ್ ಮತ್ತು ಎಸಿ) 1, ತಾಂತ್ರಿಕ ಅಧಿಕಾರಿ (ಡಿಟಿ) 1. [ಅರ್ಜಿ ಮತ್ತು ವಿವರಗಳು ಇಲ್ಲಿವೆ]

ಅರ್ಜಿ ಶುಲ್ಕಗಳು : ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಪ.ಜಾ/ಪ.ಪಂ ಹಾಗೂ ಪ್ರವರ್ಗ- 1ರ ಅಭ್ಯರ್ಥಿಗಳಿಗೆ 150 ರೂ. ಅರ್ಜಿ ಶುಲ್ಕವನ್ನು Managing director Vijayapur & Bagalkot District Co-op Milk Union Ltd Vijayapur ಇವರ ಹೆಸರಿಗೆ ಪಡೆದು ಅರ್ಜಿಯ ಜೊತೆ ಲಗತ್ತಿಸಬೇಕು.

ಉದ್ಯೋಗವಕಾಶಗಳು

* ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವೃಂದ ಮತ್ತು ವೃಂದ ನೇಮಕಾತಿ ನಿಯಮಾವಳಿಗಳು 2005 ಮತ್ತು ತಿದ್ದುಪಡಿ 2007ರ ಅನ್ವಯ 'ಎ', 'ಬಿ' ಮತ್ತು 'ಸಿ' ದರ್ಜೆಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. [ವಿವರಗಳು ಇಲ್ಲಿವೆ ನೋಡಿ]

* ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದೇಶದೆಲ್ಲೆಡೆ ಪ್ರೊಬೇಷನರಿ ಆಫೀಸರ್ (ಪಿಒ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಸುಮಾರು 2,200 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಮೇ 04 ರಿಂದ 24ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. [ವಿವರ ಇಲ್ಲಿದೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vijayapur & Bagalkot District Co-operative Milk Producers' societies' union Ltd. invited applications for the various post. June 20,2016 last date for submit application.
Please Wait while comments are loading...