ಅಂತರ್ಜಾಲ ಪರಿಜ್ಞಾನವುಳ್ಳ ನುರಿತ ಪತ್ರಕರ್ತರು ಬೇಕಾಗಿದ್ದಾರೆ

Posted By:
Subscribe to Oneindia Kannada

ಕಳೆದ ಹದಿನಾರುವರೆ ವರ್ಷಗಳಿಂದ ಅಂತರ್ಜಾಲದಲ್ಲಿ ಅಗ್ರಸ್ಥಾನ ಕಾಪಾಡಿಕೊಂಡು ಬಂದಿರುವ ವಿಶ್ವ ಕನ್ನಡಿಗರ ನೆಚ್ಚಿನ ಪೋರ್ಟಲ್ ಒನ್ಇಂಡಿಯಾ ಕನ್ನಡ ತಂಡವನ್ನು ಸೇರಿಕೊಳ್ಳಲು, ಇಂಟರ್ನೆಟ್ಟಿನಲ್ಲಿ ಅಭಿರುಚಿಯುಳ್ಳ ಯುವ ಪತ್ರಕರ್ತರಿಗೆ ಸುವರ್ಣ ಅವಕಾಶ ಇಲ್ಲಿದೆ.

ಅಂತರ್ಜಾಲದ ಬಗ್ಗೆ ಜ್ಞಾನವಿದ್ದು, ಇನ್ನಷ್ಟು ನೈಪುಣ್ಯತೆಗಳನ್ನು ಕಲಿಯುವ ಇಚ್ಛೆಯುಳ್ಳವರು ಕೆಳಗೆ ನಮೂದಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇಂಟರ್ನೆಟ್ ಬಗೆಗಿರುವ ಆಸಕ್ತಿ, ಮಾಹಿತಿ, ಪತ್ರಿಕೋದ್ಯಮದಲ್ಲಿರುವ ಅನುಭವ ಕುರಿತು ಬಯೋಡೇಟಾದಲ್ಲಿ ನಮೂದಿಸಿದವರಿಗೆ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಸುದ್ದಿತಾಣವಾದ ಒನ್ಇಂಡಿಯಾ ಕನ್ನಡ ಮತ್ತು ಮನರಂಜನಾ ತಾಣವಾಗಿರುವ ಫಿಲ್ಮಿಬೀಟ್ ಕನ್ನಡದಲ್ಲಿ, ಇಂಟರ್ನೆಟ್ ಪರಿಜ್ಞಾನವುಳ್ಳ ನುರಿತ ಪತ್ರಕರ್ತರ ಅಗತ್ಯವಿದ್ದು, ಕೂಡಲೆ ಅರ್ಜಿ ಸಲ್ಲಿಸಬೇಕಾಗಿ ಕೋರಿಕೆ. ಹೊಸತನ್ನು ಬಯಸುವ, ಕಲಿಯಲು ಅಗಾಧ ಆಸಕ್ತಿಯುಳ್ಳವರಿಗೆ ಒನ್ಇಂಡಿಯಾ ಅತ್ಯುತ್ತಮ ವೇದಿಕೆ.

Vacancies for digital journalists in Oneindia Kannada and Filmibeat

ಹುದ್ದೆಗಳು

ಒನ್ಇಂಡಿಯಾ ಕನ್ನಡ

ಹುದ್ದೆ : ರಿಪೋರ್ಟರ್
ಅನುಭವ : 2ರಿಂದ 3 ವರ್ಷ
ಸ್ಥಳ : ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ

ಹುದ್ದೆ : ಸೀನಿಯರ್ ಸಬ್ ಎಡಿಟರ್
ಅನುಭವ :5ರಿಂದ 7 ವರ್ಷ
ಸ್ಥಳ : ಬೆಂಗಳೂರು

ಹುದ್ದೆ : ಸಬ್ ಎಡಿಟರ್
ಅನುಭವ : ಫ್ರೆಶ್ ಅಭ್ಯರ್ಥಿ
ಸ್ಥಳ : ಬೆಂಗಳೂರು

ಬಯೋಡೇಟಾ ಕಳುಹಿಸಬೇಕಾದ ವಿಳಾಸ : careers@oneindia.co.in. ಈ ಮೇಲ್ ವಿಷಯದಲ್ಲಿ 'ಹುದ್ದೆ' ಮತ್ತು ವೆಬ್ ತಾಣವನ್ನು ಸ್ಪಷ್ಟವಾಗಿ ನಮೂದಿಸಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vacancies are open for digital journalists in Oneindia Kannada and Filmibeat Kannada, No.1 portals in News and Entertainment. One who has interest in internet, learn skills and want to grow with it can apply for the jobs.
Please Wait while comments are loading...