Home Guards Recruitment: ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದಿಂದ 140 ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Home Guards Recruitment: ಉದ್ಯೋಗಾವಕಶಗಳು ತೆರೆದುಕೊಳ್ಳುತ್ತಲೇ ಇವೆ. ಹಾಗೆಯೇ ಇದೀಗ ಉತ್ತರ ಕನ್ನಡ ಜಿಲ್ಲೆ ಗೃಹ ರಕ್ಷಕ ದಳವು ಖಾಲಿ ಇರುವ 140 ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳವು 140 ಹೋಂ ಗಾರ್ಡ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅವಕಾಶವಿದೆ. ಇದಕ್ಕೆ ಬೇಕಾದ ಅರ್ಜಿಗಳನ್ನು ಈಗಾಗಲೇ ನೀಡಲಾಗಿದ್ದು, ಆಸಕ್ತರು ಇಲ್ಲಿ ನೀಡಲಾದ ವಿಳಾಸಕ್ಕೆ ತೆರಳಿ ಅರ್ಜಿ ಪ್ರತಿಯನ್ನು ಉಚಿತವಾಗಿ ಪಡೆದುಕೊಂಡು ಭರ್ತಿ ಮಾಡಿದ ನಂತರ ಮತ್ತೆ ಇಲಾಖೆಗೆ ಸಲ್ಲಿಸಬೇಕು.

ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಮೆಡಿಕಲ್ ಫಿಟ್ನೆಸ್ ಪ್ರಮಾಣ ಪತ್ರದ ಜೊತೆ ಆಧಾರ್ ಕಾರ್ಡ್, ಎಸ್ಎಸ್ಎಲ್‌ಸಿ ಅಂಕ ಪಟ್ಟಿಯನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕೃತ ಮಾಡಿಕೊಂಡು ಅರ್ಜಿ ಜೊತೆಗೆ ಸಲ್ಲಿಕೆ ಮಾಡಬೇಕು. ಭರ್ತಿ ಮಾಡಿದ ಅರ್ಜಿ ನೀಡಲು ಕೊನೇ ದಿನಾಂಕ ಮಾರ್ಚ್ 7, 2025 ಆಗಿದೆ.
ಅರ್ಜಿ ಸಲ್ಲಿಸಬಯಸುವರು 10ನೇ ತರಗತಿ ಉತ್ತೀರ್ಣರಾಗಿರಬೇಕು. 19ರಿಂದ 50 ವರ್ಷದ ಒಳಗಿರಬೇಕು ಅರ್ಜಿ ಸಲ್ಲಸಬಹುದಾಗಿದೆ. ಪುರುಷರು 163 ಸೆಂಟಿ ಮೀಟರ್ ಎತ್ತರ, ಮಹಿಳೆಯರು 150 ಸೆಂಟಿ ಮೀಟರ್ ಎತ್ತರ ಇರಬೇಕು. ಇನ್ನು ಅಭ್ಯರ್ಥಿಗಳು ಯಾವುದೇ ಅಪರಾಧಿಕ/ರಾಜಕೀಯ ಹಿನ್ನೆಲೆ ಉಳ್ಳವರಾಗಿರಬಾರದು.
ಹೆವಿ ಡ್ರೈವಿಂಗ್ ಲೈಸೆನ್ಸ್, ಅಡುಗೆ ಭಟ್ಟರು, ಮೆಕಾನಿಕ್, ಪೈಂಟರ್, ಪ್ಲಂಬರ್, ಕಂಪ್ಯೂಟರ್ ಜ್ಞಾನ, ಎನ್ಸಿಸಿ ಹಾಗೂ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅರ್ಜಿ ನೀಡುವ ವಿಳಾಸ ಗೃಹ ರಕ್ಷಕ ದಳದ ಜಿಲ್ಲಾ ಕಚೇರಿ, ಸರ್ವೋದಯ ನಗರ, ದಿವಕರ್ ಕಾಮರ್ಸ್ ಕಾಲೇಜ್ ಎದುರು, ಕೊಡಿಭಾಗ, ಕಾರವಾರ. ಇಲ್ಲಿ ಅರ್ಜಿಯನ್ನು ಉಚಿತವಾಗಿ ಪಡೆಯಬಹುದು.
ಗೃಹರಕ್ಷಕ ದಳ ಸಂಸ್ಥೆ ಸ್ವಯಂ ಸೇವಕ ಸಂಸ್ಥೆ ಆಗಿದೆ. ಈ ಕೆಲಸವೂ ಖಾಯಂ ಸರ್ಕಾರಿ ನೌಕರಿ ಅಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ ಅಥವಾ ವಿಶೇಷ ಭತ್ಯೆ ನೀಡಲಾಗುವುದಿಲ್ಲ. ಸರ್ಕಾರ ನಿಗದಿ ಪಡಿಸಿದ ಗೌರವ ಧನವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 08382 -200137/ 226361 ಅಥವಾ 9480898775 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.












Click it and Unblock the Notifications