ಯುಪಿಎಸ್ಸಿ ಗ್ರೂಪ್ ಎ 179 ಹುದ್ದೆಗಳಿವೆ, ಅರ್ಜಿ ಹಾಕಿ
ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ)ದ ಗ್ರೂಪ್ ಎ ವಿಭಾಗದಲ್ಲಿ 179 ಸಹಾಯಕ ಕಮಾಂಡೆಂಟ್ಸ್ ಹುದ್ದೆಗಳಿವೆ. ಅರ್ಹ ಅಭ್ಯರ್ಥಿಗಳು ಮೇ 05,2017ರೊಳಗೆ ಅರ್ಜಿ ಹಾಕಬಹುದು.
ನವದೆಹಲಿ, ಏಪ್ರಿಲ್ 16: ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ)ದ ಗ್ರೂಪ್ ಎ ವಿಭಾಗದಲ್ಲಿ 179 ಸಹಾಯಕ ಕಮಾಂಡೆಂಟ್ಸ್ ಹುದ್ದೆಗಳಿವೆ. ಅರ್ಹ ಅಭ್ಯರ್ಥಿಗಳು ಮೇ 05,2017ರೊಳಗೆ ಅರ್ಜಿ ಹಾಕಬಹುದು.
ಹುದ್ದೆಗಳು: ಸಹಾಯಕ ಕಮಾಂಡಂಡ್
ಎಲ್ಲಿ : ಭಾರತದೆಲ್ಲೆಡೆ
ಗ್ರೂಪ್ ಎ ಹುದ್ದೆ: 179 ಹುದ್ದೆಗಳು (BSF-28, CRPF-65, CISF-23 & SSB-63 posts)
ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಡೀಮ್ಡ್ ವಿಶ್ವವಿದ್ಯಾಲಯ ಮುಂತಾದವುಗಳಿಂದ ಪದವಿ ಪಡೆದಿದ್ದರೆ ಯುಜಿಸಿ ಕಾಯ್ದೆ 1956ರ ಅನ್ವಯ ಅರ್ಹತೆ ಪಡೆದಿರಬೇಕು.

ವಯೋಮಿತಿ: 20 to 25 ವರ್ಷ as on 01/08/2017 SC/ST ಅಭ್ಯರ್ಥಿಗಳಿಗೆ 5ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ಇದೆ.
ಆಯ್ಕೆ ಪ್ರಕ್ರಿಯೆ: ನೇಮಕಾತಿಯನ್ನು ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ನಗದು ಅಥವಾ ಆನ್ ಲೈನ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ಎಸ್ ಸಿ/ ಎಸ್ಟಿ/ ಮಹಿಳಾ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ವಿಧಿಸಿಲ್ಲ.
* ಇತರೆ ಅಭ್ಯರ್ಥಿಗಳಿಗೆ : 200 ರು
ಪ್ರಮುಖ ದಿನಾಂಕ : 12/04/2017 ರಿಂದ 05/05/2017ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ
(ಒನ್ಇಂಡಿಯಾ ಸುದ್ದಿ)












Click it and Unblock the Notifications