ಯುಪಿಎಸ್ ಸಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗ (Union Public Service Commission) ದಲ್ಲಿ 710 ಹುದ್ದೆಗಳು ಖಾಲಿಯಿದ್ದು, ನೇಮಕಾತಿಗಾಗಿ ಸಿಎಂಎಸ್ ಇ (CMSE) ಪರೀಕ್ಷೆಯನ್ನು ಆಯೋಜಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 19, 2017 ಸಂಜೆ 06:00 ಗಂಟೆಯ

ನವದೆಹಲಿ, ಏಪ್ರಿಲ್ 28 : ಕೇಂದ್ರ ಲೋಕ ಸೇವಾ ಆಯೋಗ (Union Public Service Commission) ದಲ್ಲಿ 710 ಹುದ್ದೆಗಳು ಖಾಲಿಯಿದ್ದು, ನೇಮಕಾತಿಗಾಗಿ ಸಿಎಂಎಸ್ ಇ (CMSE) ಪರೀಕ್ಷೆಯನ್ನು ಆಯೋಜಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 19, 2017 ಸಂಜೆ 06:00 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಒಟ್ಟು ಹುದ್ದೆ: 710

ಹುದ್ದೆಯ ವಿವರ: 1. ರೈಲ್ವೇಸ್ ನಲ್ಲಿ ಅಸಿಸ್ಟಂಟ್ ಡಿವಿಶನಲ್ ಮೆಡಿಕಲ್ ಆಫೀಸರ್ ಹುದ್ದೆ : 450
2. ಇಂಡಿಯನ್ ಆರ್ಡಿನನ್ಸ್ ಫ್ಯಾಂಕ್ಟರೀಸ್ ಹೆಲ್ತ್ ಸರ್ವಿಸ್ ನಲ್ಲಿ ಅಸಿಸ್ಟಂಟ್ ಮೆಡಿಕಲ್ ಆಫೀಸರ್ ಹುದ್ದೆ: 26
3. ಕೇಂದ್ರ ಆರೋಗ್ಯ ಸೇವೆಯಲ್ಲಿ ಜ್ಯೂನಿಯರ್ ಸ್ಕೇಲ್ ಹುದ್ದೆ: 216
4. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ನಲ್ಲಿ : 02
5. ಪೂರ್ವ, ಉತ್ತರ ಮತ್ತು ದಕ್ಷಿಣ ದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ ನಲ್ಲಿ ಜನರಲ್ ಡ್ಯುಟಿ ಮೆಡಿಕಲ್ ಆಫೀಸರ್ ಹುದ್ದೆ:16 [ಬಿಇಎಲ್ ನಲ್ಲಿ ಇಂಜಿನಿಯರ್ಸ್ ಹುದ್ದೆಗಳಿವೆ, ಮೇ 11ರೊಳಗೆ ಅರ್ಜಿ ಹಾಕಿ]

UPSC Recruitment 2017 Apply Online for 710 Posts

ಸ್ಥಳ: ಭಾರತದಾದ್ಯಂತ.

ವಯೋಮಿತಿ: ಅಭ್ಯರ್ಥಿಗಳು 01-08-2017 ದಿನಾಂಕಕ್ಕೆ ಅನ್ವಯವಾಗುವಂತೆ 32 ವರ್ಷ ಮೀರಿರಬಾರದು.[ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶಗಳು]

ವಿದ್ಯಾರ್ಹತೆ: ಅಭ್ಯರ್ಥಿಗಳು ಎಂಬಿಬಿಎಸ್ ಅಂತಿಮ ಪರೀಕ್ಷೆಯ ಲಿಖಿತ ಮತ್ತು ಪ್ರಾಯೋಗಿಕ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವ್ಯಕ್ತಿತ್ವ ಪರೀಕ್ಷೆ ಮೂಲಕ ಆರಿಸಲಾಗುತ್ತದೆ.

ಶುಲ್ಕ: ಅಭ್ಯರ್ಥಿಗಳು 200 ರೂ. ಶುಲ್ಕವನ್ನು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಸಲ್ಲಿಸಬಹುದು. ಎಸ್ ಬಿ ಐ ನ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸಬಹುದು. ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಪ್ರಮುಖ ದಿನಾಂಕ: ಅರ್ಜಿ ಸಲ್ಲಿಕೆ ಏಪ್ರಿಲ್ 26 ರಿಂದ ಆರಂಭವಾಗಿದ್ದು, ಮೇ 19, 2017 ಸಂಜೆ 6 ಗಂಟೆಯೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಜ್ಜಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+