ಉಡುಪಿ ಜಿಲ್ಲಾ ಕೋರ್ಟಿನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿಹಾಕಿ

Posted By:
Subscribe to Oneindia Kannada

ಉಡುಪಿ, ಮಾರ್ಚ್ 20: ಉಡುಪಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ಜವಾನರ ಹುದ್ದೆಗಳ ನೇಮಕಾತಿ ಬಗ್ಗೆ ಪ್ರಕಟಿಸಲಾಗಿದ್ದು, ಸೂಕ್ತ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಂಡು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹೊಸದಾಗಿ ರೂಪುಗೊಂಡಿರುವ ನ್ಯಾಯಾಲಯಗಳಿಗೆ ಮಂಜೂರಾಗಿರುವ ಶೀಘ್ರಲಿಪಿಗಾರ, ಬೆರಳಚ್ಚುಗಾರ ಮತ್ತು ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಉಡುಪಿ ಜಿಲ್ಲಾ ಕೋರ್ಟ್ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದು[ಲಿಂಕ್ ಕೊನೆಯಲ್ಲಿ ನೀಡಲಾಗಿದೆ]

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆ ದಿನಾಂಕ : 22/04/2017, ಸಂಜೆ 5 ಗಂಟೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,
ಉಡುಪಿ ಜಿಲ್ಲೆ, ಉಡುಪಿ.

ಹುದ್ದೆಗಳು:
1. ಶೀಘ್ರಲಿಪಿಗಾರ
ಒಟ್ಟು ಹುದ್ದೆಗಳು: 4
ವೇತನ ಶ್ರೇಣಿ: 14550 ರಿಂದ 26700
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ.

Udupi District Court for the post of Stenographer,Typist and Peon Details

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆ ಸುವ ಹಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರ ಬೇಕು.
ಅಥವಾ

ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆ ಸುವ ಸೆಕ್ರೆಟೆರಿಯ ಲ್ ಪ್ರ್ಯಾಕ್ಟೀ ಸ್ ಪಠ್ಯಕ್ರಮದ ಡಿಪ್ಲೊಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳನ್ನು ಐಚ್ಛಿಕವಾಗಿ ಹೊಂದಿರಬೇಕು.

* ಪ್ರತಿ ನಿಮಿಷಕ್ಕೆ 120 ಪದಗಳ ವೇಗದಲ್ಲಿ 5 ನಿಮಿಷಗಳ ಉಕ್ತಲೇಖನ ತೆಗೆದುಕೊಂಡು 45 ನಿಮಿಷಗಳಲ್ಲಿ ಅನುಲಿಪಿ ಮಾಡುವ ಅರ್ಹತಾ ಪರೀಕ್ಶೆಗಳಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ

2. ಬೆರಳಚ್ಚುಗಾರ
ಹುದ್ದೆ: 04
ಸಂಬಳ : 11600 ರಿಂದ 21000

ವಿದ್ಯಾರ್ಹತೆ: ಸ್ಟೆನೋಗ್ರಾಫರ್ ಗೆ ಅನ್ವಯವಾಗುವ ಅರ್ಹತೆ ಇದಕ್ಕೂ ಅನ್ವಯ

3. ಜವಾನ
ಹುದ್ದೆ: 8
ವೇತನ: 9600 ರಿಂದ 14550
ವಿದ್ಯಾರ್ಹತೆ: ಏಳನೇ ತರಗತಿ ಪಾಸ್, ಕನ್ನಡ ಓದಲು ಬರಬೇಕು.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Udupi District Court has issued a notice for the post of Stenographer,Typist and Peon. Here the details about how to apply for the job openings. Last date for submitting the application is 22/04/2017.
Please Wait while comments are loading...