ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ; ವೇತನದ ವಿವರ
ಶಿವಮೊಗ್ಗ, ಜನವರಿ 08: ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಕೆಎಸ್‌ಐಐಡಿಸಿ ನೋಡಿಕೊಳ್ಳುತ್ತದೆ. ಗುತ್ತಿಗೆ ಆಧಾರದ ಮೇಲೆ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಅರ್ಜಿಗಳನ್ನು ಕರೆಯಲಾಗಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಶಿವಮೊಗ್ಗ ವಿಮಾನ ನಿಲ್ದಾಣದ ತಾಂತ್ರಿಕ ಸಿಬ್ಬಂದಿ ನೇಮಕಾತಿ (ಗುತ್ತಿಗೆ ಆಧಾರದ ಮೇಲೆ) ಪ್ರಕಟಣೆ ಹೊರಡಿಸಿದೆ. ಅರ್ಜಿಗಳನ್ನು 10/1/2024 ಅಥವ ಅದಕ್ಕೂ ಮೊದಲು ಸಲ್ಲಿಕೆ ಮಾಡಬಹುದು.

ಕೆಎಸ್‌ಐಐಡಿಸಿ ಕಂಪನಿಯು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ಕ್ರೋಡೀಕೃತ ವೇತನದ ಮೇಲೆ ನೇಮಕ ಮಾಡಲು ಉದ್ದೇಶಿಸಿದೆ. ಸೇವೆಯು ತೃಪ್ತಿಕರವಾಗಿರುವುದಕ್ಕೆ ಒಳಪಟ್ಟು, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಗುತ್ತಿಗೆಯನ್ನು ಪರಸ್ಪರ ಒಪ್ಪಿತವಾದ ನಿಯಮಗಳು ಮತ್ತು ನಿಬಂಧನೆಗಳ ಮೇಲೆ ಮತ್ತೊಂದು ವರ್ಷದ ಅವಧಿಗೆ ವಿಸ್ತರಣೆ ಮಾಡಬಹುದಾಗಿದೆ.
ಹುದ್ದೆಯ ವಿವರ; ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರು (ಒಂದು ಹುದ್ದೆ) ಭರ್ತಿ ಮಾಡಲಾಗುತ್ತಿದೆ. ಕ್ರೋಡೀಕೃತ ಮಾಸಿಕ ವೇತನ 1,25,000 ರೂ.ಗಳು. ವಯೋಮಿತಿ ಕನಿಷ್ಠ 35 ವರ್ಷಗಳು, ಗರಿಷ್ಠ 59 ವರ್ಷಗಳು.
ಅಭ್ಯರ್ಥಿಗಳು ಬಿಜಿನೆಸ್, ಏವಿಯೇಷನ್ ಆಡ್ಮಿನಿಸ್ಟೇಷನ್/ ಬ್ಯಾಚುಲರ್ಸ್ ಆಫ್ ಇಂಜಿನಿಯರಿಂಗ್‌ನಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರದಲ್ಲಿ ಬ್ಯಾಚುಲರ್ಸ್ ಪದವಿ ಪಡೆದಿರಬೇಕು. ಕಾರ್ಯನಿರ್ವಾಹಕರಾಗಿ ವೃತ್ತಿ ಮಟ್ಟದ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು. ಅಭ್ಯರ್ಥಿ ಅಂಗೀಕರಿಸಬಹುದಾದ ಚಾಲನಾ ದಾಖಲೆಯೊಡನೆ ರಾಜ್ಯ ಚಾಲಕರ ಪರವಾನಗಿ ಹೊಂದಿರಬೇಕು. ಪೈಲೆಟ್ ಪರವಾನಗಿಯನ್ನು ಹೊಂದಿದ್ದರೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳು ಈ ವಿಷಯಗಳ ಪರಿಶೀಲನೆಯಲ್ಲಿ ಪರಿಣಿತರಾಗಿರಬೇಕು. ಡಿಜಿಸಿಎ ಅನುಸಾರ ಫ್ಲೈಟ್ ಸೇಫ್ಟಿ ಡಾಕ್ಯುಮೆಂಟೇಶನ್ ಸಿಸ್ಟಂನ ಅನುಷ್ಠಾನ ಮತ್ತು ನಿರ್ವಹಣೆ. ಏರ್ ಸೈಡ್ ಇನ್‌ಫ್ರಾಸ್ಟ್ರಕ್ಚರ್, ಟರ್ಮಿನಲ್ ಸಿಸ್ಟಮ್ಸ್, ಲ್ಯಾಂಡ್ ಸೈಡ್ ಫೆಸಿಲಿಟೀಸ್‌ನ ಪರಿಕಲ್ಪನೆ ವಿನ್ಯಾಸದಲ್ಲಿ ಪರಿಜ್ಞಾನ ಹೊಂದಿರಬೇಕು.
ಗ್ರೌಂಡ್, ಟಾನ್ಸ್ ಪೋರ್ಟೆಷನ್ ಟರ್ಮಿನಲ್ ಮತ್ತು ಏರ್‌ಸೈಡ್ ಆಪರೇಷನ್‌ಗಳ ಸಂಯೋಜನೆ. ಏರೋಸ್ಪೇಸ್ ಡೊಮಿನಿಯನ್‌ನಲ್ಲಿ ಸಿಸ್ಟಮ್ಸ್ ಸುರಕ್ಷತೆ ಅಗತ್ಯತೆಗಳ ಅಭಿವೃದ್ಧಿ ಮತ್ತು ಪರಿಶೀಲನೆ. ಏರ್ ಟ್ರಾಫಿಕ್ ಕಂಟ್ರೋಲ್ ಕಮಾವಳಿಗಳ ಕಾರ್ಯಾಚರಣೆ. ವಿಮಾನ ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆ ಕೈಪಿಡಿಗಳು, ಡಿಜಿಸಿ ಅನುಮೋದನೆ ಪಡೆದ ನಂತರ ಪರಿಷ್ಕರಣೆಗಳು ಮತ್ತು ತಿದ್ದುಪಡಿಗಳ ಸೇರ್ಪಡೆ ಮಾಡುವುದು.
ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ವಿವರಗಳೊಂದಿಗೆ ತಮ್ಮ ಸ್ವವಿವರಗಳನ್ನು ಸ್ಪೀಡ್ ಪೋಸ್ಟ್ ಮೂಲಕ ದಿನಾಂಕ 10/01/2024ರಂದು ಅಥವಾ ಅದಕ್ಕೂ ಮುಂಚಿತವಾಗಿ ಕಳುಹಿಸಬಹುದು. ಆಯ್ಕೆಯಾದ ಸಿಬ್ಬಂದಿಯನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಿಯೋಜಿಸಲಾಗುವುದು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ, ಯಾವುದೇ ಸ್ಪಷ್ಟನೆಗಳಿಗಾಗಿ ಮೊಬೈಲ್ ಸಂಖ್ಯೆ 9845833566 ಸಂಖ್ಯೆಗೆ ಕರೆ ಮಾಡಬಹುದು.
ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ), ಖನಿಜ ಭವನ, 4ನೇ ಮಹಡಿ, ಪೂರ್ವ ಭಾಗ, ನಂ. 49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-1.












Click it and Unblock the Notifications