ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ ನೇಮಕಾತಿ; 65 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ನವೆಂಬರ್ 25; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 65 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು 12 ಡಿಸೆಂಬರ್ ಕೊನೆಯ ದಿನವಾಗಿದೆ.

ಸರ್ಕಲ್ ಅಡ್ವೈಸರ್, ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಒಟ್ಟು 65 ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ಬ್ಯಾಂಕ್ ಆಫ್ ಬರೋಡಾ 2022: 60 ವಿವಿಧ ಐಟಿ ಅಧಿಕಾರಿ ಹುದ್ದೆಗಳಿವೆಬ್ಯಾಂಕ್ ಆಫ್ ಬರೋಡಾ 2022: 60 ವಿವಿಧ ಐಟಿ ಅಧಿಕಾರಿ ಹುದ್ದೆಗಳಿವೆ

ಸರ್ಕಲ್ ಅಡ್ವೈಸರ್ 1, ಮ್ಯಾನೇಜರ್ (ಕೆಡ್ರಿಟ್ ಅನಾಲಿಸ್ಟ್) 55, ಮ್ಯಾನೇಜರ್ (ಪ್ರಾಜೆಕ್ಟ್ ಡಿಜಿಟಲ್ ಪೇಮೆಂಟ್) 5, ಮ್ಯಾನೇಜರ್ ( ಪ್ರಾಡಕ್ಟ್ ಡಿಜಿಟಲ್ ಪೇಮೆಂಟ್/ ಕಾರ್ಡ್‌) 2, ಮ್ಯಾನೇಜರ್ (ಪ್ರಾಡಕ್ಟ್ ಡಿಜಿಟಲ್ ಪ್ಲಾಟ್‌ಫಾರ್ಮ್) 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕೆಎಸ್‌ಆರ್‌ಟಿಸಿಯ ಈ ನೇಮಕಾತಿ ಆದೇಶ ನಕಲಿ, ಎಚ್ಚರ ಕೆಎಸ್‌ಆರ್‌ಟಿಸಿಯ ಈ ನೇಮಕಾತಿ ಆದೇಶ ನಕಲಿ, ಎಚ್ಚರ

SBI Recruitment 2022 Circle Advisor And Manager Posts

ಆಯ್ಕೆಯಾದ ಅಭ್ಯರ್ಥಿಗಳಿಗೆ 63,840 ರಿಂದ 78,230 ರೂ. ವೇತನ ನಿಗದಿ ಮಾಡಲಾಗಿದೆ. ಈ ಹುದ್ದೆಗಳಿಗೆ ಎಸ್‌ಬಿಐ ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ನಿಗದಿ ಮಾಡಲಾಗಿದೆ. ವಯೋಮಿತಿ ಸಡಿಲಿಕೆ ಸಹ ಇರುತ್ತದೆ ಎಂದು ತಿಳಿಸಲಾಗಿದೆ.

ಟೀಚರ್ಸ್‌ ಕೋ-ಆಪರೇಟಿವ್ ಬ್ಯಾಂಕ್‌ ನೇಮಕಾತಿ, ಅರ್ಜಿ ಹಾಕಿ ಟೀಚರ್ಸ್‌ ಕೋ-ಆಪರೇಟಿವ್ ಬ್ಯಾಂಕ್‌ ನೇಮಕಾತಿ, ಅರ್ಜಿ ಹಾಕಿ

ಅರ್ಜಿಗಳನ್ನು ಸಲ್ಲಿಕೆ ಮಾಡುವ ಎಸ್‌ಸಿ/ ಎಸ್‌ಟಿ/ ಅಂಗವಿಕಲ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಆದರೆ ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು 750 ರೂ. ಶುಲ್ಕವನ್ನು ಪಾವತಿ ಮಾಡಬೇಕಿದೆ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.

SBI Recruitment 2022 Circle Advisor And Manager Posts

ಶಾರ್ಟ್‌ಲಿಸ್ಟ್, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನಮೂದಿಸುವಂತೆ ಸೂಚನೆ ನೀಡಲಾಗಿದೆ.

ಆಸಕ್ತ ಮತ್ತು ಅರ್ಹರು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ sbi.co.in

ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ; ರೆಗ್ಯೂಲರ್ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಪ್ರವೇಶ ಪ್ರಾರಂಭವಾಗಿದ್ದು, 6 ತಿಂಗಳು ಪ್ರವೇಶ ಪಡೆದ ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರತಿ ಮಾಸಿಕ ರೂ. 500 ಶಿಷ್ಯವೇತನ ನೀಡಲಾಗುವುದು. ಎಸ್‍ಸಿ/ ಎಸ್‍ಟಿ ಅಭ್ಯರ್ಥಿಗಳಿಗೆ ಪ್ರತಿ ಮಾಸಿಕ ರೂ. 600 ಶಿಷ್ಯವೇತನ ನೀಡಲಾಗುವುದು.

ಪ್ರತ್ಯೇಕ ತರಗತಿ ಹಾಗೂ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ, ಉಚಿತ ವಸತಿ ನಿಲಯದ ವ್ಯವಸ್ಥೆ, ತರಬೇತಿ ಪಡೆದವರಿಗೆ ವಿವಿಧ ರೀತಿಯ ಸಹಕಾರ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ. ಸಹಕಾರ ಬ್ಯಾಂಕುಗಳಲ್ಲಿ ಹಾಗೂ ಇತರೆ ಸಹಕಾರ ಸಂಸ್ಥೆಗಳ ನೇಮಕಾತಿಯಲ್ಲಿ ಆದ್ಯತೆ ಸಿಗುತ್ತದೆ.

ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರ 16 ವರ್ಷ ಮೇಲ್ಪಟ್ಟ ಎಲ್ಲಾ ಆಸಕ್ತ ಅಭ್ಯರ್ಥಿಗಳಿಗೆ ಪ್ರವೇಶ ಉಚಿತ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ತರಬೇತಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 26 ಕಡೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9845318364, 8762110952, 8762925862, 9449245024.

English summary
State Bank of India (SBI) invited applications for circle advisor and manager posts. Candidates can apply till December 12 though online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X