ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 05: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದೇಶದೆಲ್ಲೆಡೆ ಕ್ಲರ್ಕ್ (ಗುಮಾಸ್ತ) ಹುದ್ದೆಗೆ ಮಂಗಳವಾರ(ಏಪ್ರಿಲ್ 05) ರಿಂದ ಅರ್ಜಿ ಆಹ್ವಾನಿಸಿದೆ. ಸುಮಾರು 17,140 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಏಪ್ರಿಲ್ 05 ರಿಂದ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇತ್ತೀಚೆಗೆ ಸುಮಾರು 152 ಸ್ಥಾನಗಳಿಗೆ ನೇಮಕಾತಿ ನಡೆಸಲಾಗಿತ್ತು. ಈಗ ಜ್ಯೂನಿಯರ್ ಅಸೋಸಿಯೇಟ್, ಜ್ಯೂನಿಯರ್ ಅಗ್ರಿಕಲ್ಚರ್ ಅಸೋಸಿಯೇಟ್ ಸೇರಿದಂತೆ ಕ್ಲಕ್ ಶ್ರೇಣಿಯ ಹುದ್ದೆಗಳಿಗೆ ನೋಟಿಫಿಕೇಷನ್ ನೀಡಲಾಗಿದೆ. ಒಂದು ರಾಜ್ಯದಲ್ಲಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.[ಈ ಸುದ್ದಿ ಬಗ್ಗೆ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ]

ಒಟ್ಟು ಹುದ್ದೆಗಳು: 17, 140ಹುದ್ದೆಗಳು
* ಜ್ಯೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಹಾಗೂ ಸೇಲ್ಸ್) : 10,726 ಹುದ್ದೆಗಳು
- ಬೆಂಗಳೂರು-ಕರ್ನಾಟಕದಲ್ಲಿ 133 ಹುದ್ದೆಗಳು

* ಜ್ಯೂನಿಯರ್ ಅಗ್ರಿಕಲ್ಚರ್ ಅಸೋಸಿಯೇಟ್ : 3,008 ಹುದ್ದೆಗಳು
- ಬೆಂಗಳೂರು-ಕರ್ನಾಟಕದಲ್ಲಿ 90 ಹುದ್ದೆಗಳು

* ಜ್ಯೂನಿಯರ್ ಅಸೋಸಿಯೇಟ್ ಬ್ಯಾಕ್ ಲಾಗ್: 3,218 ಹುದ್ದೆಗಳು
- ಬೆಂಗಳೂರು-ಕರ್ನಾಟಕದಲ್ಲಿ 128 ಹುದ್ದೆಗಳು

ಅಭ್ಯರ್ಥಿಗಳ ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವಿಳಾಸ ಮುಂತಾದ ವಿವರ ಮುಂದೆ ಓದಿ...

ಅಭ್ಯರ್ಥಿಗಳಿಗೆ ವಯೋಮಿತಿ

ಅಭ್ಯರ್ಥಿಗಳಿಗೆ ವಯೋಮಿತಿ

ವಯೋಮಿತಿ: 01/04/2016ರಂತೆ ಅಭ್ಯರ್ಥಿಯ ವಯಸ್ಸು 20 ರಿಂದ 28 ವರ್ಷ ವಯಸ್ಸಾಗಿರಬೇಕು. ಎಸ್/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ 3 ವರ್ಷ ವಿನಾಯಿತಿ ಇರುತ್ತದೆ.

ಅಭ್ಯರ್ಥಿಗಳಿಗೆ ವಿದ್ಯಾರ್ಹತೆ

ಅಭ್ಯರ್ಥಿಗಳಿಗೆ ವಿದ್ಯಾರ್ಹತೆ

ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಪಡೆದಿರಬೇಕು.
* ಅರ್ಹತೆ, ಅನುಭವ ಆಧಾರ ಮೇಲೆ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ ವಿವರ

ಅರ್ಜಿ ಶುಲ್ಕ ವಿವರ

ಅರ್ಜಿ ಶುಲ್ಕ ವಿವರ : ಸಾಮಾನ್ಯವರ್ಗದ ಅಭ್ಯರ್ಥಿಗಳು Rs. 600/- ಪಾವತಿಸಬೇಕು. (Rs. 100/- for SC/ ST/ PwD ಅಭ್ಯರ್ಥಿಗಳಿಗೆ) ಆನ್ ಲೈನ್ ಗೇಟ್ ವೇ ಮೂಲಕ ಡೆಬಿಟ್/ ಕ್ರೆಡಿಟ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?: ಆನ್ ಲೈನ್ ನಲ್ಲಿ www.statebankofindia.com or www.sbi.co.in ಗೆ ಲಾಗ್ ಇನ್ ಆಗಿ 05-04-2016 to 25-04-2016 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
* ಅರ್ಜಿ ಪ್ರಿಂಟ್ ಮಾಡಲು ಕೊನೆ ದಿನಾಂಕ 10/05/2016.
* ಪ್ರಿಲಿಮಿನರಿ ಪರೀಕ್ಷೆ ಕಾಲ್ ಲೆಟರ್ ಡೌನ್ ಲೋಡ್ ಮಾಡಲು ದಿನಾಂಕ11/05/2016
* ಪರೀಕ್ಷಾ ದಿನಾಂಕ ಮೇ/ ಜೂನ್ 2016ರಲ್ಲಿ ನಡೆಯುವ ಸಾಧ್ಯತೆಯಿದೆ.

ಖುದ್ದು ಅಥವಾ ಅಂಚೆ ಮೂಲಕ ಕಳಿಸುವವರು

ಖುದ್ದು ಅಥವಾ ಅಂಚೆ ಮೂಲಕ ಕಳಿಸುವವರು

State Bank of India, Central Recruitment & Promotion Department, Corporate Centre, 3rd Floor, Atlanta Building, Nariman Point, Mumbai-400021 o ವಿಳಾಸಕ್ಕೆ 25-04-2016 ರೊಳಗೆ ಕಳಿಸಬೇಕು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Bank of India (SBI) has released the official notification for SBI Clerk Recruitment 2016. Interested candidates can start applying from April 5, 2016. Last date for submission of application is April 25.
Please Wait while comments are loading...