ಕೆಎಸ್ಆರ್‌ಟಿಸಿ ನೇಮಕಾತಿ : ಚಾಲಕ, ನಿರ್ವಾಹಕ ಸೇರಿ 1500 ಹುದ್ದೆ ಭರ್ತಿ

ಬೆಂಗಳೂರು, ಜೂನ್ 20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶೀಘ್ರದಲ್ಲಿಯೇ 1500 ಹುದ್ದೆಗಳನ್ನು ಭರ್ತಿ ಮಾಡಲಿದೆ. 2019ರ ನೇಮಕಾತಿ ಆದೇಶ ಶೀಘ್ರವೇ ಪ್ರಕಟವಾಗಲಿದ್ದು ಚಾಲಕ, ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಕೆಎಸ್ಆರ್‌ಟಿಸಿ ವೆಬ್‌ಸೈಟ್ ಮೂಲಕ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕ ತಕ್ಷಣ ನೇಮಕಾತಿ ಆದೇಶವನ್ನು ಹೊರಡಿಸಲಾಗುತ್ತದೆ.

ಚಾಲಕ ಮತ್ತು ನಿರ್ವಾಹಕ ಹುದ್ದೆಗೆ 11,640 ರಿಂದ 15, 700ರ ತನಕ ವೇತನ ಸಿಗುವ ನಿರೀಕ್ಷೆ ಇದೆ. 10ನೇ ತರಗತಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಬೃಹತ್ ವಾಹನ ಚಲಾಯಿಸುವ ಪರವಾನಗಿ ಪಡೆದಿರಬೇಕು.

 Ready to apply for Driver and Conductor post in KSRTC

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ವಿಧಾನಸೌಧದಲ್ಲಿ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರನ್ನು ಭೇಟಿಯಾಗಿ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಸಂಭವನೀಯ ಆಯ್ಕೆ ಪಟ್ಟಿ ಪ್ರಕಟ : ಕೆಎಸ್ಆರ್‌ಟಿಸಿ ದರ್ಜೆ - 3 ಮೇಲ್ವಿಚಾರಕೇತರ ಹುದ್ದೆಯಾದ ಕುಶಲಕರ್ಮಿ ಹುದ್ದೆಯ ವಿವಿಧ ವೃತ್ತಿಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಹಾಗೂ ಹುದ್ದೆವಾರು ಕಟ್-ಆಫ್ ಪಟ್ಟಿಯನ್ನು ನಿಗಮದ ಸೂಚನಾ ಫಲಕ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಆಕ್ಷೇಪಣೆಗಳಿದ್ದರೆ 26/6/2019ರೊಳಗೆ ಪೂರಕ ದಾಖಲಾತಿಗಳೊಂದಿಗೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (ನೇಮಕ), ಕರಾರಸಾ ನಿಗಮ, ಕೇಂದ್ರ ಕಚೇರಿ ಬೆಂಗಳೂರು ಇವರಿಗೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+