ಯಾರು ಕೆಲಸ ಬಿಡಲು ಸಿದ್ಧರಿದ್ದಿರಿ ಕೈ ಎತ್ತಿ; ಉದ್ಯೋಗಿಗಳಿಗೆ ಐಬಿಎಂ ಮೆಸೇಜ್!
ಮುಂಬೈ, ಮಾರ್ಚ್ 05: ಯಾರು ಕೆಲಸ ಮಾಡುತ್ತೀರಿ..? ಈ ಕೆಲಸ ಯಾರಿಗೆ..? ಈ ಪ್ರಾಜೆಕ್ಟ್ ನೀವು ಮಾಡಿ ಹೀಗೆ ಕಂಪನಿಗಳು ಕೆಲಸ ಹೇಳಿ ಮಾಡಿಸುತ್ತವೆ. ಆದರೆ, ಇಲ್ಲೊಂದು ದೊಡ್ಡ ಟೆಕ್ ಕಂಪನಿ ಯಾರು ಕೆಲಸ ಬಿಡಲು ಸಿದ್ಧರಿದ್ದಿರಿ ಕೈ ಎತ್ತಿ ಎಂದು ತನ್ನ ಉದ್ಯೋಗಿಗಳಿಗೆ ಕೇಳಿದೆ.
ಹೌದು, ಆಶ್ಚರ್ಯ ಆದರೂ ಕೂಡ ಇದು ಸತ್ಯ. ಕಳೆದ ತಿಂಗಳು ತನ್ನ ಕೆಲಸಗಾರರನ್ನು ವಜಾ ಮಾಡಿದ್ದ ದೈತ್ಯ ಟೆಕ್ ಕಂಪನಿ ಐಬಿಎಂ, ಮತೆತ ಉದ್ಯೋಗಿಗಳನ್ನು ಕಡಿತ ಮಾಡಲು ಚಿಂತಿಸುತ್ತಿದೆ. ಜಾಗತಿಕವಾಗಿ ಆರ್ಥಿಕ ಸಮಸ್ಯೆ ಕಾರಣದಿಂದ ಮಾನವ ಸಂಪನ್ಮೂಲವನ್ನು ಕಡಿಮೆ ಮಾಡಿಕೊಳ್ಳಲು ಐಬಿಎಂ ಯೋಚಿಸುತ್ತಿದ್ದು, ಉದ್ಯೋಗಿಗಳು ತಾವಾಗಿಯೇ ಕೆಲಸ ಬಿಟ್ಟು ಹೋಗುವಂತೆ ಸೂಚಿಸುತ್ತಿದೆ.

ಮತ್ತೊಂದು ಸುತ್ತಿನ ಲೇಆಫ್‌ಗೆ ಮುಂದಾಗಿರುವ ಐಬಿಎಂ ಸ್ವಯಂಪ್ರೇರಿತ ಕೆಲಸ ಬಿಡಲು ಬಯಸುವ ತನ್ನ ಉದ್ಯೋಗಿಗಳನ್ನು ಮುಂದಕ್ಕೆ ಬರುವಂತೆ ಕೇಳುತ್ತಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು ಸಂಪನ್ಮೂಲ ಕ್ರಿಯೆ Q4 ಗಳಿಕೆಯ ವರದಿ ಬಳಿಕ ಐಬಿಎಂ ವಜಾಗೊಳಿಸುವ ನಿಯಮಗಳನ್ನು ಮತ್ತೊಮ್ಮೆ ಜಾರಿಗೆ ತಂದಿದೆ.
ದಿ ರಿಜಿಸ್ಟರ್‌ನಲ್ಲಿನ ವರದಿಯ ಪ್ರಕಾರ, ಐಬಿಎಂ ತೆಗೆದುಕೊಂಡ ಈ ನಿರ್ಧಾರ ಕೇವಲ ಹಣಕಾಸಿನ ಬದಲಿಗೆ "ಪರಿವರ್ತನೆ" ಎಂದು ನೋಡಲಾಗುತ್ತಿದೆ. ಕಳೆದ ತಿಂಗಳು, ಐಬಿಎಂ CFO ಜೇಮ್ಸ್ ಕವನಾಗ್ ಅವರು "2024 ರ ಅಂತ್ಯದ ವೇಳೆಗೆ ಉಳಿತಾಯದಲ್ಲಿ $3 ಬಿಲಿಯನ್ ವಾರ್ಷಿಕ ರನ್ ದರವನ್ನು ಸಾಧಿಸುವುದು ಕಂಪನಿಯ ಗುರಿಯಾಗಿದೆ" ಎಂದಿದ್ದಾರೆ. ಇದು ಮೂಲ ಗುರಿಗಿಂತ ಗಮನಾರ್ಹವಾಗಿ ಹೆಚ್ಚಳವಾಗಿದೆ.

80 ಪ್ರತಿಶತದಷ್ಟು ಕಡಿತಗಳನ್ನು ಎಂಟರ್‌ಪ್ರೈಸ್ ಕಾರ್ಯಾಚರಣೆಗಳು ಮತ್ತು ಇಒ ಮತ್ತು ಎಸ್ ಮತ್ತು ಕ್ಯೂ 2 ಸಿ ಮಿಷನ್‌ಗಳು ಮತ್ತು ಹಣಕಾಸು ಮತ್ತು ಕಾರ್ಯಾಚರಣೆಗಳ ಕಡೆಗೆ ನೋಡಲಾಗುತ್ತಿದೆ. ಐಬಿಎಂನ ಸುಮಾರು 50 ಪ್ರತಿಶತದಷ್ಟು ಕಡಿತ ಗುರಿಯು ಯುರೋಪಿನಾದ್ಯಂತ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಸ್ವಯಂಪ್ರೇರಿತವಾಗಿ ಕೆಲಸ ಬಿಡಲು ಸಿದ್ಧರಿರುವ ಉದ್ಯೋಗಿಗಳನ್ನು ವಜಾಗೊಳಿಸಲಿದೆ. ಕೆಲಸ ಬಿಡದೇ ಇರುವವರನ್ನು ಕೂಡ ಅನೈಚ್ಛಿಕವಾಗಿ ವಜಾಗೊಳಿಸಬೇಕು ಎಂದು ಕಂಒನಿಯ ನಿಯಮಗಳು ತಿಳಿಸಿವೆ. ಹೀಗಾಗಿಯೇ ತನ್ನ ಉದ್ಯೋಗಿಗಳಿಗೆ ತಾವಾಗಿಯೇ ಕೆಲಸ ಬಿಡುವಂತೆ, ಆ ಬಗ್ಗೆ ತಿಳಿಸುವಂತೆ ಸೂಚನೆ ನೀಡಿದೆ.












Click it and Unblock the Notifications