ರೈಲ್ವೆ ನೇಮಕಾತಿ; ಲಿಖಿತ ಪರೀಕ್ಷೆ ಡಿಸೆಂಬರ್ 15ರಿಂದ

ನವದೆಹಲಿ, ಸೆಪ್ಟೆಂಬರ್ 06: ಭಾರತೀಯ ರೈಲ್ವೆ 1,40,640 ಹುದ್ದೆಗಳಿಗೆ ನೇಮಕಾತಿ ಮಾಡಲಿದೆ. ಡಿಸೆಂಬರ್ 15ರಿಂದ ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳನ್ನು ಆರಂಭಿಸಲಾಗುತ್ತದೆ.

Recommended Video

      ಜಮೀರ್ ಅಹಮದ್ ಮತ್ತು ಸಂಜನಾ ಇಬ್ಬರೇ ಕೊಲಂಬೊ ಹೋಗಿದ್ರು | Oneindia Kannad

      ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಕೋವಿಡ್ ಸೋಂಕಿನ ಭೀತಿ ಆರಂಭವಾಗುವ ಮೊದಲು ಅರ್ಜಿಗಳನ್ನು ಕರೆಯಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ.

      ರಾಷ್ಟ್ರೀಯ ಸಾರಿಗೆ ಮಂಡಳಿ ಅಧ್ಯಕ್ಷ ವಿ. ಕೆ. ಯಾದವ್ ಈ ಕುರಿತು ಮಾಹಿತಿ ನೀಡಿದ್ದಾರೆ. "2.42 ಕೋಟಿ ಅರ್ಜಿಗಳು ಬಂದಿವೆ. ಮುಂದಿನ ಹಂತಕ್ಕಾಗಿ ಅರ್ಜಿಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಕೋವಿಡ್ ಕಾರಣ ಲಿಖಿತ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ" ಎಂದು ಹೇಳಿದ್ದಾರೆ.

      Railway Recruitment Board To Conduct Computer Based Tests From December 15

      ತಾಂತ್ರಿಕೇತರ ಹುದ್ದೆಗಳ ಭರ್ತಿಗಾಗಿ ಕಂಪ್ಯೂಟರ್ ಪರೀಕ್ಷೆಗಳು ನಡೆಯಲಿವೆ. ಗಾರ್ಡ್‌, ಕ್ಲರ್ಕ್, ಟ್ರ್ಯಾಕ್ ನಿರ್ವಾಹಕ, ಪಾಯಿಂಟ್ಸ್‌ಮೆನ್ ಹುದ್ದೆಗಳಿಗೆ ಡಿಸೆಂಬರ್ 15ರಿಂದ ಪರೀಕ್ಷೆಗಳು ನಡೆಯಲಿವೆ.

      ಒಟ್ಟು ಮೂರು ಹಂತದಲ್ಲಿ ತಾಂತ್ರಿಕೇತರ ಪಾಲ್ಯುಲರ್ ಕ್ಯಾಟಗರಿ, ಐಸೋಲೇಟೆಡ್ & ಮಿನಿಸ್ಟಿರಿಯಲ್, ಲೆವೆಲ್ 1 (ಟ್ರಾಕ್ ಮೈಂಟೇನರ್ಸ್, ಪಾಯಿಂಟ್ಸ್ ಮೆನ್) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

      2019ರ ಫೆಬ್ರವರಿ 23ರಂದು ಅರ್ಜಿಗಳನ್ನು ಕರೆಯಲಾಗಿತ್ತು. ಒಟ್ಟು 1.4 ಲಕ್ಷ ಹುದ್ದೆಗಳ ಪೈಕಿ 35,277 ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿದಂತೆ ಎನ್‌ಡಿಪಿಸಿ ಹುದ್ದೆಗಳಿವೆ. ಜೂನ್‌ನಿಂದ ಸೆಪ್ಟೆಂಬರ್ ತನಕ ಪರೀಕ್ಷೆ ನಡೆಯಬೇಕಿತ್ತು.

      ಕೋವಿಡ್ ಪರಿಸ್ಥಿತಿಯ ಕಾರಣ ಕಂಪ್ಯೂಟರ್ ಮೂಲಕ ನಡೆಸಬೇಕಿದ್ದ ಲಿಖಿತ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈಗ ಡಿಸೆಂಬರ್ 15ರಿಂದ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿಯೇ ವಿವರಗಳನ್ನು ಪ್ರಕಟಿಸುವುದಾಗಿ ರೈಲ್ವೆ ಸಚಿವರು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+